ಮಾಜಿ ಡಾನ್ ಮುತ್ತಪ್ಪ ರೈಗೆ ಕ್ಯಾನ್ಸರ್.. ಹೊರಜಗತ್ತಿಗೆ ಕೊನೆಗೂ ಬಹಿರಂಗವಾಯ್ತು ಸತ್ಯ..

0
ಹೇಗಿದ್ದರು ಸ್ಪುರದ್ರೂಪಿ ರೈ.
ಹೇಗಿದ್ದರು ಸ್ಪುರದ್ರೂಪಿ ರೈ.
ಕ್ಯಾನ್ಸರ್ ನಿಂದ ಹೇಗಾಗಿಬಿಟ್ರು.
ಕ್ಯಾನ್ಸರ್ ನಿಂದ ಹೇಗಾಗಿಬಿಟ್ರು.
ಅಪರಾಧದ ಹಿನ್ನಲೆಯಲ್ಲಿ ಪೊಲೀಸ್ ಬಂಧನದೊಳಗೆ
ಅಪರಾಧ ಹಿನ್ನಲೆಯಲ್ಲಿ ಪೊಲೀಸ್ ಬಂಧನದೊಳಗೆ

ಬೆಂಗಳೂರು:ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಹಾಗೂ ಮಾಜಿ ಅಂಡರ್ ವರ್ಲ್ಡ್ ಡಾನ್ ಮುತ್ತಪ್ಪ ರೈ ದಿಢೀರ್ ಕಣ್ಮರೆಗೆ ಕಾರಣ ಸಿಕ್ಕಿದೆ.ಇದ್ದಕ್ಕಿದ್ದಂತೆ ಮುತ್ತಪ್ಪ ರೈ ನೇಪಥ್ಯಕ್ಕೆ ಸರಿಯೊಕ್ಕೆ ಕಾರಣ ಅವರನ್ನು ಕಾಡ್ತಿರುವ ಮಾರಣಾಂತಿಕ ಕಾಯಿಲೆ ಕ್ಯಾನ್ಸರ್.ಈ ಕಾರಣಕ್ಕೆ ಧೀರ್ಘ ಮಟ್ಟದ ಚಿಕಿತ್ಸೆಯಲ್ಲಿದ್ದ ಅವರು ದಿಢೀರ್ ಪ್ರತ್ಯಕ್ಷರಾಗಿ ಐ ಆಮ್ ಆಲ್ ರೈಟ್..ನೋ ರೀಸನ್ ಫಾರ್ ಫಿಯರ್ ಎಂದಿರೋದು ಅವರ ಹಿಂಬಾಲಕರು ಹಾಗೂ ಅಭಿಮಾನಿಗಳಲ್ಲಿ ತೀವ್ರ ಸಂತಸ ತಂದಿದೆ.

ಭೂಗತ ಜಗತ್ತು ಕಂಡ  ಸ್ಪುರದ್ರೂಪಿ ಡಾನ್ ಗಳ ಪೈಕಿ ಮುತ್ತಪ್ಪ ರೈ ಮಂಚೂಣಿಯಲ್ಲಿ ನಿಲ್ತಾರೆ.ಎಲ್ಲಾ ಚಟುವಟಿಕೆಗಳಿಗೆ ಶರಣು ಹೇಳಿ ಸಮಾಜ ಸೇವೆ ಆರಂಭಿಸಿ ಅದಕ್ಕೊಂದು ವೇದಿಕೆಯನ್ನು ಜಯಕರ್ನಾಟಕ ಎನ್ನುವ ಸಂಘಟನೆ ಕಟ್ಟಿ ಬೆಳೆಸುವ ಮೂಲಕ ಕಲ್ಪಿಸಿದ ಮುತ್ತಪ್ಪ ರೈ ತಾವು ಏನ್ ಮಾಡ್ಬೇಕೆಂದುಕೊಂಡಿದ್ದರೋ ಅದನ್ನೆಲ್ಲಾ ಆ ವೇದಿಕೆಯ ಕಾರ್ಯಕ್ರಮಗಳ ಮೂಲಕ ಮಾಡಿ ತೋರಿಸಿ ತಮ್ಮ ಮಾನವೀಯ ಹಾಗೂ ಸಮಾಜಮುಖಿ ಕಾಳಜಿಯನ್ನು ಅನಾವರಣಗೊಳಿಸಿದರು.ಇಷ್ಟಿದ್ದರೂ ಅವರ ಮೇಲೆ ಕಾನೂನು ಬಾಹೀರ ಚಟುವಟಿಕೆಗಳನ್ನು ಸೈಲೆಂಟಾಗಿದ್ದುಕೊಂಡೇ ಮಾಡ್ತಿದ್ದಾರೆನ್ನುವ ಆರೋಪ ಕೇಳಿಬಂದಿದ್ದು ಸುಳ್ಳಲ್ಲ.

ಮುತ್ತಪ್ಪ ರೈ ಹವಾ ಮೆಂಟೇನ್ ಮಾಡ್ತಿದ್ದ ಕಾಲವದು.
ಮುತ್ತಪ್ಪ ರೈ ಹವಾ ಮೆಂಟೇನ್ ಮಾಡ್ತಿದ್ದ ಕಾಲವದು.

ತನ್ನ ಪತ್ನಿ ತೀರಿ ಹೋದ ಮೇಲೆ ತನ್ನನ್ನು ಹಲವಾರು ವರ್ಷಗಳಿಂದ ಚೆನ್ನಾಗಿ ಬಲ್ಲಂಥ ಹೆಣ್ಮಗಳನ್ನು ಮದುವೆಯಾಗಿ ಸುಖ ಸಂಸಾರವನ್ನು ಸಾಗಿಸಲು ಯತ್ನಿಸುತ್ತಿರುವಾಗ್ಲೇ ಮುತ್ತಪ್ಪ ರೈಗೆ ಕ್ಯಾನ್ಸರ್ ಮಹಾಮಾರಿ ಆವರಿಸಿಬಿಟ್ಟಿತು.ಇದನ್ನು ಮರೆ ಮಾಚೊಕ್ಕೆ ನಾನಾ ಸಾಹಸ ಮಾಡಿದ ರೈ ಅದಾಗದಿದ್ದಾಗ ಹತ್ತಿರತ್ತಿರ ಒಂದು ವರ್ಷ ಭೂಗತರಾಗಿಯೇ ಉಳಿದುಬಿಟ್ಟರು.ಅವರಿಗೆ ಕ್ಯಾನ್ಸರ್ ಇದೆ ಎನ್ನುವ ಸಂಗತಿಯನ್ನು ಅವರ ಆಪ್ತರಿಗೆ ಬಿಟ್ಟರೆ ಹೊರ ಜಗತ್ತಿಗೆ ತಿಳಿಯದಂತೆ ಗೌಪ್ಯಗೊಳಿಸಿದ್ರು.ಆದ್ರೆ ಸತ್ಯವನ್ನು ಎಷ್ಟು ದಿನ ಮರೆಮಾಚ್ಲಿಕ್ಕೆ ಆಗುತ್ತೆ ಹೇಳಿ ಎನ್ನುವಂತೆ ಕೊನೆಗೂ ಅದು ಜಗಜ್ಜಾಹೀರಾದಾಗ ಮುತ್ತಪ್ಪ ರೈ ಅನಿವಾರ್ಯವಾಗಿ ಹೊರ ಜಗತ್ತಿಗೆ ಬಂದು ಸತ್ಯವನ್ನು ನುಡಿಯುವಂತಾಯ್ತು.

ತನಗೆ ಕ್ಯಾನ್ಸರ್ ಇದೆ ಎನ್ನೋದನ್ನು ಸಾರ್ವಜನಿಕಗೊಳಿಸಿದ್ದಾರೆ.ಆದ್ರೆ ಅವರನ್ನು ಮೊದಲಿದ್ದ ರೀತಿಯಲ್ಲಿ ನೋಡಿದವರಿಗೆ ಈಗಿನ ಸ್ವರೂಪವನ್ನು ನೋಡಿ ಅರಗಿಸಿಕೊಳ್ಳೊಕ್ಕೆ ಸ್ವಲ್ಪ ಕಷ್ಟವಾಗುತ್ತೆ.ಅವರ ಸೌಂದರ್ಯವನ್ನಷ್ಟೇ ಅಲ್ಲ,ಮೈಯೊಳಗಿನ ಕಸವು,ಆರೋಗ್ಯ,ಶಕ್ತಿ,ಉತ್ಸಾಹ-ಚೈತನ್ಯವನ್ನು ಹಿಡಿಹಿಡಿಯಾಗಿ ಕ್ಯಾನ್ಸರ್ ತಿಂದಾಕಿದೆ.ತಲೆ ತುಂಬ ಕೂದಲಿದ್ದ ತಲೆಯೀಗ ಬೋಳಾಗಿದೆ.ದಪ್ಪಗಿದ್ದ ದೇಹ ಕೃಷವಾಗಿದೆ.ಧ್ವನಿಯಲ್ಲಿನ ದೃಢತೆ-ಮೈ ಕಟ್ಟಿನಲ್ಲಿನ ಆರೋಗ್ಯವನ್ನು ಕ್ಯಾನ್ಸರ್ ಹಾಳುಮಾಡಿದೆ.ಕ್ಯಾನ್ಸರ್ ನಿಂದ ಬಳಲುತ್ತಿರುವ ತಮಗಾಗುತ್ತಿರುವ ನೋವು-ಆಯಾಸವನ್ನು ಮರೆ ಮಾಚಿಕೊಳ್ಳುವ ವಿಫಲ ಯತ್ನವೂ ಎದ್ದು ಕಾಣ್ತಿತ್ತು.

ಮುತ್ತಪ್ಪ ರೈ ಅವರಿಗೆ ತನಗೆ ಕ್ಯಾನ್ಸರ್ ಇರುವ ಸಂಗತಿಯನ್ನು ಇನ್ನು ಮರೆ ಮಾಚಿ ಪ್ರಯೋಜನವಿಲ್ಲ ಎಂದೆನಿಸಿಯೇ ಅದನ್ನು ಹೊರಜಗತ್ತಿಗೆ ಬಹಿರಂಗಗೊಳಿಸಿದ್ದಾರೆ.ತಾನು ಆರೋಗ್ಯವಾಗಿದ್ದೇನೆ..ಶೀಘ್ರ ಗುಣಮುಖವಾಗಲಿದ್ದೇನೆ.ಯಾರೂ ಭಯ ಪಡುವ ಅಗತ್ಯವಿಲ್ಲ ಎಂದು ಅಭಿಮಾನಿಗಳು ಹಾಗೂ ಹಿಂಬಾಲಕರಿಗೆ ಧೈರ್ಯ ಹೇಳಿದ್ದಾರೆ.ಸಮಾಧಾನದ ವಿಚಾರ ಎಂದ್ರೆ ಕ್ಯಾನ್ಸರ್ ಮಹಾಮಾರಿಗೆ ತುತ್ತಾಗಿ ನವಚೈತನ್ಯ ಪಡೆದ ಕ್ರಿಕೆಟಿಗ ಯುವರಾಜ್ ಸಿಂಗ್ ಗೆ ಚಿಕಿತ್ಸೆ ಕೊಡ್ತಿದ್ದ ವೈದ್ಯರೇ ಮುತ್ತಪ್ಪ ರೈ ಅವರಿಗೂ ಚಿಕಿತ್ಸೆ ಕೊಡ್ತಿದ್ದು,ಅವರ ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆಯಾಗಿದೆ ಎಂದು ವೈದ್ಯರೇ ತಿಳಿಸಿದ್ದಾರೆ.ಮುತ್ತಪ್ಪ ರೈ ಬೇಗ ಗುಣಮುಖವಾಗಿ ಮತ್ತೆ ಸಮಾಜಸೇವೆಯಲ್ಲಿ ತೊಡಗಿಕೊಳ್ಳುವಂತಾಗಲಿ ಎನ್ನೋದೇ ಕನ್ನಡ ಫ್ಲ್ಯಾಶ್ ನ್ಯೂಸ್ ನ ಹಾರೈಕೆ ಕೂಡ. 

Spread the love
Leave A Reply

Your email address will not be published.

Flash News