ಚರ್ಚ್ ಮೇಲಿನ ದಾಳಿ:ವಿದ್ವಂಸಕ ಕೃತ್ಯ ಖಂಡಿಸಿ ಜನವರಿ 24ಕ್ಕೆ ಮೌನ ಪ್ರತಿಭಟನೆ

0

ಬೆಂಗಳೂರು: ಚರ್ಚ್ ನ ಮೇಲೆ ದಾಳಿ ನಡೆಸಿ ಧಾರ್ಮಿಕ ವಸ್ತುಗಳನ್ನು ದ್ವಂಸಗೊಳಿಸಿದ ಕಿಡಿಗೇಡಿಗಳ ದುಷ್ಕ್ರತ್ಯಕ್ಕೆ ಕ್ರೈಸ್ತ ಧರ್ಮಾಧ್ಯಕ್ಷ  ಪೀಟರ್ ಮಚಾದೋ ವ್ಯಾಪಕ ಖಂಡನೆ ವ್ಯಕ್ತಪಡಿಸಿದ್ದಾರೆ.ಕೆಂಗೇರಿ ಸ್ಯಾಟಲೈಟ್ ನ ವ್ಯಾಪ್ತಿಯಲ್ಲಿರುವ ಸಂತ ಫ್ರಾನ್ಸಿಸ್ ಅಸೀಸಿ ಚರ್ಚ್ ಗೆ ರಾತ್ರಿ ವೇಳೆ ಏಕಾಏಕಿ ನುಗ್ಗಿದ ದುಷ್ಕರ್ಮಿಗಳು ದಾಂಧಲೆ ನಡೆಸಿ ಚರ್ಚ್ ನ ಒಳಗೆ ಇದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿಗೊಳಿಸಿದ್ದಾರೆ.

ಇಷ್ಟು ವರ್ಷ ಯಾವುದೇ ಸಮಸ್ಯೆಯಿಲ್ಲದೆ ಅನ್ಯೋನ್ಯವಾಗಿದ್ದ ಈ ಭಾಗದ ಜನರನ್ನು ಎತ್ತಿ ಕಟ್ಟಿ ಅವರ ನಡುವೆ ಕೋಮುಸಾಮರಸ್ಯ ಕದಡುವ ದುಸ್ಸಾಹಸದ ಭಾಗವಾಗಿ ಈ ಕೃತ್ಯ ನಡೆದಿರಬಹುದೆಂದು ಶಂಕಿಸಲಾಗಿದೆ.ಪ್ರಕರಣದ ಸತ್ಯಾಸತ್ಯತೆ ಹೊರಬರಲೇಬೇಕಿದೆ.ಶಾಂತಿಪ್ರಿಯರೆಂದೇ ಹೆಸರಾಗಿರುವ ಕ್ರೈಸ್ತರನ್ನು ಟಾರ್ಗೆಟ್ ಮಾಡುವ  ಕೆಲಸ ನಡೆಯುತ್ತಿದೆಯೇ ಎನ್ನುವ ಅನುಮಾನ ಕಾಡುತ್ತಿದೆ.ಮೇಲ್ಕಂಡ ಘಟನೆಗೆ ಕಾರಣ ಯಾರು ಎನ್ನುವುದು ಬಹಿರಂಗವಾಗಲೇ ಬೇಕಿದೆ.ಅದಾಗದ ಹೊರತು, ಶಾಂತಿ-ನೆಮ್ಮದಿ ಕಳಕೊಂಡಿರುವ ಕ್ರೈಸ್ತ ಸಮುಯದಾಯಕ್ಕೆ ಅಭದ್ರತೆಯ ಭಯ ಕಾಡುತ್ತಲೇ ಇರುತ್ತೆ ಎಂದು ಪೀಟರ್ ಮಚಾದೋ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಚರ್ಚ್  ದಾಳಿ ಖಂಡಿಸಿ ಇದೇ 24 ಕ್ಕೆ ಹಮ್ಮಿಕೊಂಡಿರುವ ಮೌನ ಪ್ರತಿಭಟನೆ ಬಗ್ಗೆ ಅರ್ಚ್ ಬಿಷಪ್ ಪೀಟರ್ ಮಚಾದೋ ಹೊರಡಿಸಿರುವ ಪತ್ರಿಕಾ ಹೇಳಿಕೆ
ಚರ್ಚ್  ದಾಳಿ ಖಂಡಿಸಿ ಇದೇ 24 ಕ್ಕೆ ಹಮ್ಮಿಕೊಂಡಿರುವ ಮೌನ ಪ್ರತಿಭಟನೆ ಬಗ್ಗೆ ಅರ್ಚ್ ಬಿಷಪ್ ಪೀಟರ್ ಮಚಾದೋ ಹೊರಡಿಸಿರುವ ಪತ್ರಿಕಾ ಹೇಳಿಕೆ

ಕ್ರೈಸ್ತರನ್ನು ಕೇವಲ ಮತ ಬ್ಯಾಂಕನ್ನಾಗಿ ಎಲ್ಲಾ ಪಕ್ಷಗಳು ಬಳಸಿಕೊಳ್ತಿವೆ.ಕ್ರೈಸ್ತರು ಹಾಗೂ ಧಾರ್ಮಿಕ ಮಂದಿರಗಳ ಮೇಲೆ ಆಗುತ್ತಿರುವ ನಿರಂತರ ದೌರ್ಜನ್ಯದ ವಿರುದ್ಧ ಕ್ರಮ ಕೈಗೊಳ್ಳುವ ಕೆಲಸವನ್ನೇ ಸರ್ಕಾರಗಳು ಮಾಡ್ತಿಲ್ಲ.ಯಾರೋ ಕಿಡಿಗೇಡಿಗಳು ಮತಾಂತರ ಮಾಡುತ್ತಿದ್ದರೆ ಅದನ್ನು ಕ್ರೈಸ್ತ ಸಮುದಾಯದೊಂದಿಗೆ ಸಾರ್ವತ್ರಿಕಗೊಳಿಸುವ ಕೆಲಸ ನಡೆಯುತ್ತಿದೆ.ಈ ಮನಸ್ಥಿತಿ ದೂರವಾಗ್ಬೇಕು.ಕ್ರೈಸ್ತರನ್ನು ಮನುಷ್ಯರಂತೆನೋಡುವ ಮನಸ್ಥಿತಿ ಬೆಳೆಸಿಕೊಳ್ಳುವಂತೆ ಮಚಾದೋ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ. ………….

ಬೆಳ್ಳಂಬೆಳಗ್ಗೆ ಚರ್ಚ್ ಗೆ ಆಗಮಿಸಿದ ಕಿಡಿಗೇಡಿಗಳ ಗುಂಪು ಏಕಾಏಕಿ ಘೋಷಣೆ ಕೂಗ್ತಾ ಚರ್ಚ್ ನಲ್ಲಿದ್ದ ಕೈಗೆ ಸಿಕ್ಕ ಧಾರ್ಮಿಕ ವಸ್ತುಗಳನ್ನು ಮನಸೋಇಚ್ಛೆ ಹೊಡದು ಹಾಕಿದೆ.ಮಾಹಿತಿ ತಿಳಿಯುತ್ತಿದ್ದಂತೆ ಪಕ್ಕದಲ್ಲೇ ಇದ್ದ ಚರ್ಚ್ ನ ವಿಚಾರಣಾ ಗುರು ಫಾದರ್ ಸತೀಶ್ ಕಿಡಿಗೇಡಿಗಳ ಕೃತ್ಯಕ್ಕೆ ಖಂಡನೆ ವ್ಯಕ್ತಪಡಿಸುತ್ತಿದ್ದಂತೆ ಅವರ ಮೇಲೂ ಹಲ್ಲೆಗೆ ಮುಂದಾಗಿದ್ದಾರೆ.ಕಂಪ್ಲೀಟ್ ಸುದ್ದಿಗಾಗಿ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ..http://kannadaflashnews.com/kannadaflashnews-kannadanews-bengaluru-attack-church-stfrancisassisi-kengeri-satelitetown-parishpriest-frsathish-miscreants-archbishop-petermachado/

ಸಂತ ಫ್ರಾನ್ಸಿಸ್ ಅಸ್ಸೀಸಿ ಚರ್ಚ್ ನ ಮೇಲೆ ಆಗಿರುವ ಘಟನೆಯನ್ನು ಸಮುದಾಯ  ಅಷ್ಟು ಸಲೀಸಾಗಿ ಮರೆಯುವ ಪ್ರಶ್ನೆಯೇ ಇಲ್ಲ.ತಪ್ಪಿತಸ್ಥರು ಯಾರೆನ್ನುವುದು ಬಹಿರಂಗವಾಗಲೇ ಬೇಕು.ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಬೇಕಾಗ್ತದೆ ಎಂದು ಎಚ್ಚರಿಸಿದ್ದಾರೆ.ಇದರ ಭಾಗವಾಗಿ ಇದೇ 24 ರಂದು ಘಟನೆ ಖಂಡಿಸಿ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿರುವ ಮಚಾದೋ,ಕ್ರೈಸ್ತರು ತಮ್ಮ ಐಕ್ಯತೆ ಹಾಗೂ ಒಗ್ಗಟ್ಟನ್ನು ಪ್ರದರ್ಶಿಸಲು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಸಲಹೆ ನೀಡಿದ್ದಾರೆ..

ಏಸು ಪ್ರತಿಮೆ ವಿವಾದದ ಪರಿಣಾಮವೇ ವಿದ್ವಂಸಕ ಕೃತ್ಯನಾ?:ಇಂತದ್ದೊಂದು ಅನುಮಾನವೂ ಕಾಡುತ್ತಿದೆ.ಕನಕಪುರ ಕ್ಷೇತ್ರದಲ್ಲಿ ಏಸುಕ್ರಿಸ್ತನ ಪ್ರತಿಮೆ ನಿರ್ಮಾಣ ವಿವಾದದ ಭಾಗವಾಗಿ ಇಂತದ್ದೊಂದು ಕೃತ್ಯ ನಡೆಯಿತಾ ಎನ್ನುವ ಅನುಮಾನವೂ ಕಾಡುತ್ತಿದೆ.ಆ ಕೃತ್ಯದಿಂದ ತಾಳ್ಮೆ ಕಳಕೊಂಡ ಕಿಡಿಗೇಡಿಗಳು ತಮ್ಮ ಆಕ್ರೋಶವನ್ನು ಮೇಲ್ಕಂಡ ವಿದ್ವಂಸಕ ಕೃತ್ಯದ ಮೂಲಕ ಪ್ರದರ್ಶಿಸಿದ್ರಾ ಎನ್ನುವ ಪ್ರಶ್ನೆ ಕೂಡ ಕಾಡ್ತಿದೆ.ಆದ್ರೆ ಎಲ್ಲಕ್ಕೂ ಪೊಲೀಸ್ ತನಿಖೆ ಮಾತ್ರ ಸಮರ್ಪಕವಾಗಿ ಉತ್ತರಿಸಬಲ್ಲದು ಅಷ್ಟೇ.. .

 

Spread the love
Leave A Reply

Your email address will not be published.

Flash News