ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸುಧೀಂದ್ರರಾವ್ ಗೆ ಮತ್ತೆ ಸಂಕಷ್ಟ ! ಅಧಿಕಾರ ಕಳಕೊಳ್ಳುವ ಭೀತಿ !

0
ಸುಧೀಂದ್ರರಾವ್
ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸುಧೀಂದ್ರರಾವ್
ಪಿಸಿಬಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಈ ಸಂಭ್ರಮ ಕೊನೆವರೆಗೂ ಉಳಿಯಲಿದೆಯೇ?
ಪಿಸಿಬಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಈ ಸಂಭ್ರಮ ಕೊನೆವರೆಗೂ ಉಳಿಯಲಿದೆಯೇ?

ಬೆಂಗಳೂರು:ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ(ಪಿಸಿಬಿ) ಅಧ್ಯಕ್ಷ ಸುಧೀಂದ್ರರಾವ್ ಅವರಿಗೆ ಸಂಕಷ್ಟ ಎದುರಾಗಿದೆ.ಪರಿಸರಕ್ಕೆ ಸಂಬಂಧಿಸಿದ ಪರಿಣಿತಿಯನ್ನು ಪಡೆಯದಿರುವುದಕ್ಕೆ ಪೂರಕವಾದ ಸಾಕ್ಷ್ಯಗಳನ್ನು ಅವರ ವಿರುದ್ದ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಿರುವ ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ಆರ್ ಟಿಐ ಮೂಲಕ ಹೊರ ತೆಗೆದಿದ್ದಾರೆ.ಸಿವಿಲ್ ಎಂಜಿನಿಯರಿಂಗ್ ವಿಷಯದಲ್ಲಿ ಪದವಿ ಪಡೆದಿರುವುದನ್ನು ಬಿಟ್ಟರೆ ಮಂಡಳಿ ಅಧ್ಯಕ್ಷಗಾಧಿಗೆ ಅರ್ಹವಾದ ಯಾವುದೇ   ಕ್ವಾಲಿಫಿಕೇಷನ್ ಅಥವಾ ಅನುಭವವನ್ನು ಸುಧೀಂದ್ರರಾವ್  ಪಡೆದಿಲ್ಲ ಎನ್ನುವುದು ನರಸಿಂಹ ಮೂರ್ತಿ ವಾದ.

ಕನ್ನಡ ಪ್ಲ್ಯಾಶ್ ನ್ಯೂಸ್ ಗೆ EXCLUSIVE ಆಗಿ ನರಸಿಂಹ ಮೂರ್ತಿ ಒದಗಿಸಿರುವ ದಾಖಲಾತಿಗಳನ್ನು ಗಮನಿಸಿದಾಗ ಮೇಲ್ನೋಟಕ್ಕೆ ಸುಧೀಂದ್ರರಾವ್ ಅವರ ಆಯ್ಕೆ ಮಾನದಂಡಗಳಿಗೆ ವ್ಯತಿರಿಕ್ಯವಾಗಿ ನಡೆದಿರುವುದು ಗೊತ್ತಾಗುತ್ತೆ.ಏಕೆಂದ್ರೆ ಪರಿಸರಕ್ಕೆ ಸಂಬಂಧಿಸಿದಂಥ ಪರಿಣಿತಿ,ಅನುಭವ ಹಾಗೆಯೇ ವಿಷಯ ತಜ್ನತೆಯನ್ನು ಪಡೆಯಬೇಕೆನ್ನುವುದು ನಿಯಮ.ಇದೇ ಮಾನದಂಡ ಅಧ್ಯಕ್ಷರ ಆಯ್ಕೆ ವಿಷಯದಲ್ಲಿ ಅನ್ವಯವಾಗುತ್ತಾ ಬಂದಿದೆ.ಈ ಹಿಂದೆ ಡಾ.ಕೆ ಸುಧಾಕರ್ ಅಧ್ಯಕ್ಷಗಾಧಿಯಿಂದ ಕೆಳಕ್ಕಿಳಿಯೊಕ್ಕೆ ಕಾರಣವೂ ಇದೇ ಮಾನದಂಡ.ಆದ್ರೆ ನರಸಿಂಹ ಮೂರ್ತಿ ಅವರ ಆರೋಪ ಹಾಗೂ ಅದಕ್ಕೆ ಪೂರಕವಾಗಿ ಒದಗಿಸಿರುವ ದಾಖಲಾತಿಗಳು ಮೇಲ್ನೋಟಕ್ಕೆ ಸುಧೀಂದ್ರರಾವ್ ಅವರ ನೇಮಕಾತಿ ಕೂಡ ಮಾನದಂಡಗಳ ಉಲ್ಲಂಘನೆ ಎನ್ನುವುದನ್ನು ಸಾರಿ ಹೇಳುತ್ತೆ.

ಸುಧೀಂದ್ರರಾವ್ ನೇಮಕ ಪ್ರಶ್ನಿಸಿ PIL ಹಾಕಿರುವ ಸಾಮಾಜಿಕ ಕಾರ್ಯಕರ್ತ ನರಸಿಂಹ ಮೂರ್ತಿ
ಸುಧೀಂದ್ರರಾವ್ ನೇಮಕ ಪ್ರಶ್ನಿಸಿ PIL ಹಾಕಿರುವ ಸಾಮಾಜಿಕ ಕಾರ್ಯಕರ್ತ ನರಸಿಂಹ ಮೂರ್ತಿ
ಸುಧೀಂದ್ರ ರಾವ್ ಅವರ ಪದವಿ ಪ್ರಮಾಣ ಪತ್ರ
ಸುಧೀಂದ್ರ ರಾವ್ ಅವರ ಪದವಿ ಪ್ರಮಾಣ ಪತ್ರ

ಸುಧೀಂದ್ರರಾವ್ ಬಿಇ ಸಿವಿಲ್ ಡಿಗ್ರಿ ಪಡೆದಿರುವುದು ಎಷ್ಟು ಸತ್ಯವೋ,ಪಿಸಿಬಿ ಅಧ್ಯಕ್ಷರಾಗಿ ನಿಯೋಜನೆಗೊಳ್ಳುವುದಕ್ಕೆ ಬೇಕಾದ ಕ್ವಾಲಿಫಿಕೇಷನ್ ಪಡೆದಿಲ್ಲ ಎನ್ನುವುದು ಕೂಡ ಸತ್ಯ.ಕೊಲ್ಕತ್ತಾದ ಇಂಡಿಯನ್ ಇನ್ಸಿಟ್ಯೂಟ್ ಆಫ್ ಓರಿಯೆಂಟಲ್ ಹೆರಿಟೇಜ್ ಎನ್ನುವ ವಿವಿಯಿಂದ ಗೌರವ ಡಾಕ್ಟರೇಟ್ ಪಡೆದಿದ್ದರೂ ಅದು ಅಂಗೀಕೃತ ವಿವಿಯದಲ್ಲ.ಹಾಗೆಯೇ ರೆಗ್ಯೂಲರ್ ಡಾಕ್ಟರೇಟ್ ಅಲ್ಲ.ಹಾಗಾಗಿ ಇದನ್ನು ನೇಮಕಕ್ಕೆ ಪೂರಕವಾದ ಕ್ವಾಲಿಫಿಕೇಷನ್ ಎಂದು ಒಪ್ಪಲಿಕ್ಕಾಗೊಲ್ಲ ಎನ್ನುವುದು ಪಿಐಎಲ್ ಸಲ್ಲಿಸಿರುವ ನರಸಿಂಹ ಮೂರ್ತಿ ವಾದ.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗುವಂಥವರು ಇಂತದ್ದೇ ವಿದ್ಯಾರ್ಹತೆ ಪಡೆದಿರಬೇಕು.ಅನುಭವ ಹೊಂದಿರ್ಬೇಕು,ಮಾನದಂಡ ಅಲ್ಪ ಪ್ರಮಾಣದಲ್ಲಿಯೂ ಉಲ್ಲಂಘನೆಯಾಗಿದ್ದಲ್ಲಿ ಅವರನ್ನು ಅಧ್ಯಕ್ಷಗಾದಿಯಿಂದ ಕೆಳಗಿಳಿಸ್ಬೋದು ಎನ್ನುತ್ತೆ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ.ಈ ಎಲ್ಲಾ ಅರ್ಹತೆ ಇದ್ದಾಗ ಮಾತ್ರ ಅದಕ್ಕೆ  ನಿಯುಕ್ತಿಯಾಗುವಂಥವರು  ಆ ಹುದ್ದೆಗೆ  ಸರಿಯಾದ ನ್ಯಾಯ ಸಲ್ಲಿಸ್ಬೋದು ಎನ್ನುವುದು ನೇಮಕಾತಿ ಹಿಂದಿನ ಮಾನದಂಡದ ಉದ್ದೇಶವಾಗಿರುತ್ತೆ.ಆದ್ರೆ ಸುದೀಂದ್ರರಾವ್ ಅವರ ನೇಮಕಾತಿ ವಿಷಯದಲ್ಲಿ ಇದೆಲ್ಲವನ್ನೂ ಉಲ್ಲಂಘಿಸಲಾಗಿದೆ ಎನ್ನುವುದು ನರಸಿಂಹ ಮೂರ್ತಿ ಆರೋಪ.

ಕೊಲ್ಕತ್ತಾ ವಿವಿಯಿಂದ ಗೌರವ ಡಾಕ್ಟರೇಟ್ ಪಡೆದಿರುವ ಸಾಕ್ಷ್ಯ
ಕೊಲ್ಕತ್ತಾ ವಿವಿಯಿಂದ ಗೌರವ ಡಾಕ್ಟರೇಟ್ ಪಡೆದಿರುವ ಸಾಕ್ಷ್ಯ

ಆದ್ರೆ ನರಸಿಂಹ ಮೂರ್ತಿ ಅವರ ಆರೋಪವನ್ನು ಪಿಸಿಬಿ ಮೂಲಗಳು ತಳ್ಳಿ ಹಾಕ್ತವೆ.ಏಕಂದ್ರೆ ಬಿಇ ಸಿವಿಲ್ ಡಿಗ್ರಿ ಜತೆಗೆ ಪರಿಸರದ ಪರಿಣಿತಿಗೆ ಪೂರಕವಾದ ವಿಷಯ ತಜ್ನತೆಯನ್ನು ಹೊಂದಿದ್ದಾರೆ ಎನ್ನಲಾಗಿದೆ.ಈ ಒಂದು ಅರ್ಹತೆಯೇ ಸಾಕು,ಮಾನದಂಡಕ್ಕೆ ಅನ್ವರ್ಥವಾಗುವಂತೆಯೇ ಸುಧೀಂದ್ರರಾವ್ ಅವರ ನೇಮಕಾತಿ ನಡೆದಿದೆ ಎಂದು ಸಾಬೀತುಪಡಿಸಲು ಎನ್ನಲಾಗ್ತಿದೆ.ಹಾಗಾಗಿ ಅವರ ನೇಮಕಾತಿ ಕಾನೂನು ಬದ್ಧವಾಗಿ ಮಾನದಂಡವನ್ನು ಅನ್ವಯವಾಗಿಸಿಕೊಂಡೇ ನಡೆದಿದೆ ಎನ್ನುವುದು ಮಂಡಳಿಯ ಮೂಲಗಳ ಹೇಳಿಕೆ.

ಸುಧೀಂದ್ರ ರಾವ್ ಅವರ ಬಯೋಡೆಟಾ..ಇಲ್ಲೆಲ್ಲೂ ಪರಿಸರ ಪರಿಣಿತಯ ಉಲ್ಲೇಖವೇ ಇಲ್ಲ?
ಸುಧೀಂದ್ರ ರಾವ್ ಅವರ ಬಯೋಡೆಟಾ..ಇಲ್ಲೆಲ್ಲೂ ಪರಿಸರ ಪರಿಣಿತಯ ಉಲ್ಲೇಖವೇ ಇಲ್ಲ?

ಸುಧೀಂದ್ರರಾವ್ ಅವರ ಆಯ್ಕೆನೇ ಏಕೆ?..ಇದಕ್ಕೆ ಇರುವ ಅನೇಕ ಕಾರಣಗಳಲ್ಲಿ ಪ್ರಮುಖವಾದದ್ದು ಸುಧೀಂದ್ರರಾವ್ ಆರ್ ಎಸ್ ಎಸ್ ಮೂಲದವರೆನ್ನೋದು.ಆರ್ ಎಸ್ ಎಸ್ ಜತೆಗೆ ಒಡನಾಟ ಹೊಂದಿರುವ ಸುಧೀಂದ್ರರಾವ್ ನೇಮಕಾತಿ ಹಿಂದೆ ಅನೇಕ ಆರ್ ಎಸ್ ಎಸ್ ಲೀಡರ್ಸ್ ಗಳ  ಕೈವಾಡ ಇದೆ ಎಂದೂ ಶಂಕಿಸಲಾಗ್ತಿದೆ.ಅವರಿಗೆ ಪಿಸಿಬಿ ಅಧ್ಯಕ್ಷರಾಗ್ಲಿಕ್ಕೆ ಯಾವುದೇ ಅರ್ಹತೆ ಇಲ್ಲದ ಹೊರತಾಗ್ಯೂ ಕಾನೂನಿನ ಭಯವಿಲ್ಲದೆ ಅವರ ನೇಮಕಾತಿ ನಡೆಯುತ್ತೆ ಎಂದ್ರೆ ಅದರ ಹಿಂದೆ ನಡೆದಿರುವ ಆರ್ ಎಸ್ ಎಸ್ ನ ಪ್ರಬಲ ಲಾಭಿ ಎಂತದ್ದೆನ್ನೋದನ್ನು ಅರ್ಥ ಮಾಡಿಕೊಳ್ಳಬಹುದು.

ಅದೇನೇ ಇರಲಿ,ಸುಧೀಂದ್ರರಾವ್ ಅವರ ನೇಮಕವನ್ನು ಪ್ರಶ್ನಿಸಿ ಈಗಾಗ್ಲೇ ನರಸಿಂಹ ಮೂರ್ತಿ PIL  ಸಲ್ಲಿಸಿದ್ದಾರೆ.ಈ ನಿಟ್ಟಿನಲ್ಲಿ ತಮ್ಮ  ಕಾನೂನಾತ್ಮಕ ಹೋರಾಟ ಮುಂದುವರೆ ಯಲಿದೆ.ಅರ್ಹರನ್ನು ನೇಮಕ ಮಾಡದೆ ಆರ್ ಎಸ್ ಎಸ್ ಮೂಲದ ವ್ಯಕ್ತಿ ಎನ್ನುವ ಒಂದೇ ಅಂಶವನ್ನು ಮಾನದಂಡವಾಗಿಟ್ಟುಕೊಂಡು ಸರ್ಕಾರ ಅವರ ನೇಮಕಾತಿ ಮಾಡಿರುವುದು ಅಕ್ಷಮ್ಯ ಎನ್ನುವುದು ನರಸಿಂಹಮೂರ್ತಿ ಆರೋಪ.ಇದಕ್ಕೆ ಕೌಂಟರ್ ನೀಡಲು  ಸುಧೀಂದ್ರರಾವ್ ಕೂಡ ಕೋರ್ಟ್ ಗೆ ಮನವರಿಕೆ ಮಾಡಿಕೊಡಲು ಸಿದ್ಧತೆ ಮಾಡಿಕೊಂಡಿದ್ದಾರೆ.

 

 

Spread the love
Leave A Reply

Your email address will not be published.

Flash News