ಮನೀಷ್ ಮೌದ್ಗಿಲ್ ಗೆ “ಅವಾರ್ಡ್ ಆಫ್ ಎಕ್ಸಲೆನ್ಸ್” ಗೌರವ

0

ಬೆಂಗಳೂರು:ರಾಜ್ಯ ಕಂಡ ಅತ್ಯಂತ ದಕ್ಷ-ಪ್ರಾಮಾಣಿಕ ಎಲ್ಲಕ್ಕಿಂತ ಖಡಕ್ ಅಧಿಕಾರಿ ಎಂದೇ ಕರೆಯಿಸಿಕೊಳ್ಳುವ ಮನೀಷ್ ಮೌದ್ಗಿಲ್ ಗೆ ಪ್ರತಿಷ್ಟಿತ ಗೌರವ ಅರಸಿ ಬಂದಿದೆ.ಚುನಾವಣೆ ವೇಳೆ ಅವರು ತೋರಿದ ಕಾರ್ಯದಕ್ಷತೆ ಹಾಗೂ ನಿರ್ವಹಿಸಿದ ನಿರ್ಣಾಯಕ ಪಾತ್ರಕ್ಕೆ ಅವಾರ್ಡ್ ಆಫ್ ಎಕ್ಸಲೆನ್ಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

2019 ಲೋಕಸಭೆ ಮತ್ತು ಡಿಸೆಂಬರ್ ನಲ್ಲಿ ರಾಜ್ಯದಲ್ಲಿ ನಡೆದ ಉಪಚುನಾವಣೆ ನಿಜಕ್ಕೂ ಸವಾಲಿನ ಸಂಗತಿಯಾಗಿತ್ತು.ಇಡೀ ದೇಶದ ಗಮನ ಲೋಕಸಭೆ ಹಾಗೂ ವಿಧಾನಸಭಾ ಉಪ ಚುನಾವಣೆ ಮೇಲಿತ್ತು.

ಇಂಥ ವೇಳೆ ಸವಾಲನ್ನು ಸ್ವೀಕರಿಸಿದ ಮನೀಷ್ ಮೌದ್ಗಿಲ್ ಸ್ವಲ್ಪವೂ ಲೋಪ ಬಾರದಂತೆ ಈ ಟಾಸ್ಕನ್ನು ಯಶಸ್ವಿಯಾಗಿ ಮುಗಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ರು.ಟೀಕಾಕಾರರ ಬಾಯಿ ಮುಚ್ಚಿಸಿದ್ರು.ಇದನ್ನು ಗಂಭೀರವಾಗಿ ಪರಿಗಣಿಸಿದ ಚುನಾವಣಾ ಆಯೋಗ ಅತ್ಯುತ್ತಮ ಕಾರ್ಯ ನಿರ್ವಹಣೆಗೆ ಅವಾರ್ಡ್ ಆಫ್ ಎಕ್ಸಲೆನ್ಸ್ ಪ್ರಶಸ್ತಿ ಲಭಿಸಿದೆ. ‌

ಲೋಕಸಭೆ ಮತ್ತು ಉಪಚುನಾವಣೆಯಲ್ಲಿ MCC ಸ್ಕ್ವಾಡ್ ವಿಶೇಷ ಅಧಿಕಾರಿಯಾಗಿದ್ದ ಮೌನೀಶ್ ಮೌದ್ಗಿಲ್ ಅವರಿಗೆ ಚುನಾವಣಾ ಆಯೋಗ ನೀಡಲ್ಪಡುವ ಈ ಪ್ರಶಸ್ತಿ ಲಭಿಸಿದೆ.ಚುನಾವಣೆ ವೇಳೆ ಲೋಪ ದೋಷವಾಗದಂತೆ ದಕ್ಷತೆಯಿಂದ ಕಾರ್ಯ‌ನಿರ್ವಹಣೆ ಮಾಡಿದ್ದನ್ನು ಗಮನಿಸಿ ಈ ಪ್ರಶಸ್ತಿ ನೀಡಲಾಗಿದೆ.

ಪ್ರಶಸ್ತಿಯನ್ನು ರಾಜ್ಯಪಾಲ ವಿಆರ್ ವಾಲಾ ಪ್ರಧಾನ ಮಾಡಲಿದ್ದಾರೆ.ಮನೀಷ್ ಮೌದ್ಗಿಲ್ ಅವರಿಗೆ ಸಿಕ್ಕಿರುವ ಈ ಪ್ರಶಸ್ತಿಯಿಂದ ರಾಜ್ಯದ ಬಗ್ಗೆ ಕೇಂದ್ರ ಚುನಾವಣಾ ಆಯೋಗದ ಮೇಲಿರುವ ನಂಬಿಕೆ ಹೆಚ್ಚಾಗಿದೆ.ಹಾಗೆಯೇ ಇಲ್ಲಿನ ಚುನಾವಣಾಧಿಕಾರಿಗಳು ನಿರ್ವಹಿಸುವ ಮಹತ್ವ ಹಾಗೂ ನಿರ್ಣಾಯಕ ಪಾತ್ರದ ಬಗ್ಗೆಯೂ ವಿಶ್ವಾಸ ದೃಢಪಟ್ಟಿದೆ.

Spread the love
Leave A Reply

Your email address will not be published.

Flash News