ಕಿಚ್ಚ ಮೆಚ್ಚಿದ ‘ನಾನು ಮತ್ತು ಗುಂಡ’

0

http://

ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜು ಕೆ.ಆರ್.ಪೇಟೆ ನಾಯಕ ನಟನಾಗಿ ಅಬಿನಯಿಸಿರುವ ನಾನು ಮತ್ತು ಗುಂಡ ಚಿತ್ರ ತಂಡಕ್ಕೆ ಸೌತ್​ ಸೂಪರ್​ ಸ್ಟಾರ್​ ಕಿಚ್ಚ ಸುದೀಪ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರದ ಪೊಸ್ಟರ್​ ವೊಂದನ್ನ ತಮ್ಮ ಟ್ವೀಟ್​ ಖಾತೆಯಲ್ಲಿ ಪೋಸ್ಟ್​ ಮಾಡಿ. ಈ ಚಿತ್ರದ ಬಗ್ಗೆ ಉತ್ತಮ ವಿಮರ್ಶೆಗಳನ್ನು ಕೇಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇನ್ನ, ಉತ್ತಮ ಚಿತ್ರ ನೀಡಿದರ ಬಗ್ಗೆ ನಾನು ಮತ್ತು ಗುಂಡ ಚಿತ್ರ ತಂಡಕ್ಕೆ ಅಭಿನಯ ಚಕ್ರವರ್ತಿ ಸುದೀಪ್​ ಚಿತ್ರ ಯಶಸ್ವಿ ಪ್ರದರ್ಶನ ಕಾಣಲಿ ಎಂದು ಹಾರೈಸಿ ಶುಭಕೊರಿದ್ದಾರೆ.
ಚಿತ್ರದ ಬಿಡುಗಡೆಗೂ ಮುನ್ನಾ ಏರ್ಪಡಿಸಲಾಗಿದ್ದ ಸೆಲೆಬ್ರಟಿ ಶೋನಲ್ಲಿ ಚಿತ್ರವನ್ನ ನೋಡಿ ಬಂದ ಸ್ಯಾಂಡಲ್​ ವುಡ್​ ತಾರೆಯರು ಚಿತ್ರಕ್ಕೆ ಉತ್ತಮ ಪ್ರಶಂಸೆಯನ್ನ ವ್ಯಕ್ತಪಡಿಸಿದ್ದಾರೆ. ಹಾಸ್ಯ ನಟನಾಗಿ ಈಗಾಗಲೇ ಬೆಳ್ಳಿತೆರೆ ಮೇಲೆ ಪ್ರೇಕ್ಷಕರ ಮನಗೆದ್ದಿರುವ ಶಿವರಾಜು ಕೆ.ಆರ್.ಪೇಟೆ ಇದೀಗಾ ನಾನು ಮತ್ತು ಗುಂಡ ಚಿತ್ರದ ಮೂಲಕ ಪೂರ್ಣ ಪ್ರಮಾಣದಲ್ಲಿ ನಾಯಕನಟನಾಗಿ ಹೊರಹೊಮ್ಮಿದ್ದು ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ನ, ಇದೀಗಾ ಕಿಚ್ಚ ಸುದೀಪ್​ ಕೂಡ ಚಿತ್ರತಂಡಕ್ಕೆ ಶುಭಕೋರಿರುವುದು ಚಿತ್ರದ ಗೆಲುವಿಗೆ ಮತ್ತಷ್ಟು ರೆಕ್ಕೆಬಂದಂತಾಗಿದೆ.
ಸಿನಿಮಾ ರಾಜ್ಯಾದ್ಯಂತ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಗೊಂಡ ಎಲ್ಲಾ ಕೇಂದ್ರಗಳಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿದ್ದು ದಿನದಿನಕ್ಕೆ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ನಾನು ಮತ್ತು ಗುಂಡ ಯಶಸ್ವಿಯಾಗಿದೆ. ಚಿತ್ರದಲ್ಲಿ ನಾಯಕ ಹಾಗೂ ನಾಯಿಯ ನಡುವಿನ ಬಾಂಧ್ಯವವನ್ನ ಕಟ್ಟಿಕೊಡುವಲ್ಲಿ ನಿರ್ದೇಶಕರಾದ ಶ್ರೀನಿವಾಸ್​ ತಿಮ್ಮಯ್ಯ ಯಶಸ್ವಿಯಾಗಿದ್ದಾರೆ. ಚಿತ್ರದದಲ್ಲಿ ಶರತ್​ ಚಂದ್ರ ಅವರ ಸಂಭಾಷಣೆ ಹಾಗೂ ಕಾರ್ತಿಕ್​ ಶರ್ಮ ಅವರ ಛಾಯಗ್ರಹಣ ಅದ್ಭುತವಾಗಿ ಮೂಡಿಬಂದಿದೆ.

Spread the love
Leave A Reply

Your email address will not be published.

Flash News