ಮಲ್ಟಿಪ್ಲೆಕ್ಸ್’ಗಳಲ್ಲಿ ಹೆಚ್ಚಾಯ್ತು ಗುಂಡನ ಶೋ..

0

ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜು ಕೆ.ಆರ್.ಪೇಟೆ ಅಭಿನಯದ ನಾನು ಮತ್ತು ಗುಂಡ ಚಿತ್ರಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯ ವ್ಯಕ್ತವಾದ ಹಿನ್ನೆಲೆ ಥಿಯೇಟರ್​ ಅನ್ನ ಹೆಚ್ಚಿಸಿಕೊಂಡಿದೆ. ಇದೇ ಶುಕ್ರವಾರದಿಂದ ಬೆಂಗಳೂರಿನ ಕೆ.ಜಿ.ರೋಡಿನ ಅನುಪಮ ಥಿಯೇಟರ್​ನಲ್ಲಿ ನಾನು ಮತ್ತು ಗುಂಡ ಚಿತ್ರ ಪ್ರದರ್ಶನಗೊಳ್ಳಲಿದೆ. ಜೊತೆಗೆ ರಾಜ್ಯಾಂದ್ಯಂತ ಥಿಯೇಟರ್ ಹೆಚ್ಚಿಸಿಕೊಂಡಿದ್ದಾನೆ ಗುಂಡ. ಮಲ್ಟಿಫೆಕ್ಸ್’ನಲ್ಲೂ ಶೋ ಡಬ್ಬಲ್ ಆಗಿದೆ. ವಿಮರ್ಶಕರು ಹಾಗೂ ಪ್ರೇಕ್ಷಕರಿಂದ ವ್ಯಕ್ತವಾಗಿರೋ ಅಭೂತಪೂರ್ವ ಪ್ರತಿಕ್ರಿಯೆ ಕಂಡು ಚಿತ್ರಮಂದಿರ ಮಾಲೀಕರು ಹಾಗೂ ಚಿತ್ರ ಪ್ರದರ್ಶಕರು ಖುದ್ದಾಗಿ ಮುಂದೆ ಬಂದು ನಾನು ಮತ್ತು ಗುಂಡ ಚಿತ್ರ ಪ್ರದರ್ಶಿಸಲು ಮುಂದಾಗಿದ್ದಾರೆ. ಹೆಚ್ಚಿನ ಪ್ರಚಾರದ ಹಂಗಿಲ್ಲದೇ ಮೌತ್ ಟಾಕ್ ಮೂಲಕವೇ ಮನೆ ಮಾತಾಗುತ್ತಿರುವ ನಾನು ಮತ್ತು ಗುಂಡನನ್ನು ಕನ್ನಡಿಗರು ಬಾಚಿ ತಬ್ಬಿಕೊಳ್ಳುತ್ತಿದ್ದಾರೆ. ಒಳ್ಳೆಯ ‌ಸಿನಿಮಾಗಳನ್ನ‌ ಕನ್ನಡಿಗರು‌ ಎಂದೂ ಕೈಬಿಡೋದಿಲ್ಲ… ಎಂಬುದಕ್ಕೆ ಬೆಸ್ಟ್ ಎಕ್ಸಾಂಪಲ್ ನಾನು‌ ಮತ್ತು ಗುಂಡ ಆಗಿದೆ. ನಾನು ಮತ್ತು ಗುಂಡ ಚಿತ್ರವನ್ನ ರಾಜ್ಯದಾದ್ಯಂತ ರಿಲೀಸ್ ಮಾಡಿರೋ‌ ಮೈಸೂರು ಟಾಕೀಸ್ ನ ಜಾಕ್ ಮಂಜು‌ ಈ ವಿಚಾರವನ್ನ ಸ್ಪಷ್ಟ ಪಡಿಸಿದ್ದಾರೆ.

Spread the love
Leave A Reply

Your email address will not be published.

Flash News