ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಗಾಧಿ ಚುನಾವಣೆ:ಸಿಎಂ ಯಡಿಯೂರಪ್ಪ ಬಣಕ್ಕೆ ಹಿನ್ನಡೆ-ಈಶ್ವರಪ್ಪ ಅಭ್ಯರ್ಥಿಯೇ ಮೇಯರ್!

0

ಶಿವಮೊಗ್ಗ :ಮಹಾನಗರ ಪಾಲಿಕೆ ಮೇಯರ್ ಗಾದಿಗೆ ನಡೆಯಲಿರುವ ಚುನಾವಣೆಯಲ್ಲಿ ಸಿಎಂ ಯಡಿಯೂರಪ್ಪಗೆ ತೀವ್ರ ಮುಖಭಂಗ ವಾಗುವುದು ಬಹುತೇಕ ಖಚಿತ.ಅರರೆ..ಇದೇನಪ್ಪಾ..ಸಿಎಂ ತವರು ಜಿಲ್ಲೆಯಲ್ಲಿ ಅವರಿಗೆ ಮುಖಭಂಗನಾ..ಅಧಿಕಾರದಲ್ಲಿರುವ ಜಿಲ್ಲೆಯಲ್ಲೇ ಸಿಎಂಗೆ ಹಿನ್ನಡೆ ಆಗೋದೆಂದ್ರೆ ಅರ್ಥವೇನು ಎನ್ನುವ ಪ್ರಶ್ನೆ ಕಾಡೋದು ಸತ್ಯ.ಹೌದು..ಬಿಜೆಪಿ ಕಾರ್ಪೊರೇಟರ್ಸ್ ಗಳಲ್ಲಿರುವ ಬಣ ರಾಜಕಾರಣ ಹಾಗೂ ಅವರ ಬಲಾಬಲವನ್ನು ತಾಳೆ ಹಾಕಿ ನೋಡಿದಾಗ ಯೆಡಿಯೂರಪ್ಪಬಣದಿಂದ ಮೇಯರ್ ಸ್ಥಾನ ತಪ್ಪೋಗುವ ಸಾಧ್ಯತೆಗಳೇ ದಟ್ಟವಾಗಿವೆ.ಅದ್ಹೇಗೆ ಅಂತೀರಾ ಇಲ್ಲಿದೆ ನೋಡಿ ಕನ್ನಡ ಫ್ಲ್ಯಾಶ್ ನ್ಯೂಸ್ ನ ಅನಾಲಿಟಿಕಲ್ ಸ್ಟೋರಿ.

ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ ಪ್ರಾಬಲ್ಯ ಅಧಿಕಾರದ ಚುಕ್ಕಾಣಿ ಹಿಡಿದಿರುವುದು ಕೂಡ ಬಿಜೆಪಿ.ಆದ್ರೆ ಪಕ್ಷ ಒಂದೇ ಆಗಿದ್ದರೂ ಬಣ ರಾಜಕಾರಣದಿಂದ ಪಕ್ಷ ಮುಕ್ತವಾಗಿಲ್ಲ ಎನ್ನೋದು ಕೂಡ ಅಷ್ಟೇ ಸತ್ಯ.

35  ಸದಸ್ಯ ಬಲದ ಕಾರ್ಪೊರೇಷನ್ ನಲ್ಲಿ 23 ಸದಸ್ಯರು ಬಿಜೆಪಿಯವ್ರು.ಈ 23 ರಲ್ಲಿ ಬಹುತೇಕ  ಪ್ರಾಬಲ್ಯ ಸ್ಥಾಪಿಸಿರುವುದು ಕ್ಷೇತ್ರ ಶಾಸಕ ಹಾಗೂ ಸಚಿವ ಕೆ.ಎಸ್.ಈಶ್ವರಪ್ಪ.ಸಿಎಂ ಯಡಿಯೂರಪ್ಪ ಜಿಲ್ಲೆಯ ಮೇಲೆ ಹಿಡಿತ ಸಾಧಿಸಿದ್ದರೂ ಕಾರ್ಪೊರೇಷನ್ ಮಟ್ಟದಲ್ಲಿ ತಮ್ಮ  ಪ್ರಭಾವ ಹಿಡಿದಿಟ್ಟುಕೊಳ್ಳುವುದು ಅವರಿಗೆ ಸಾಧ್ಯವಾಗಿಲ್ಲ.ಸಾಧ್ಯವಾಗಿಲ್ಲನ್ನುವುದಕ್ಕಿಂತ ಅದಕ್ಕೆ ಕೆ.ಎಸ್.ಈಶ್ವರಪ್ಪ  ಅವಕಾಶ ಮಾಡಿಕೊಟ್ಟಿಲ್ಲ ಎನ್ನುವುದು ಸೂಕ್ತವಾದೀತು.

ಇದಕ್ಕೆ ರಾಜಕೀಯ ಕಾರಣಗಳೂ ಇದ್ದಿರಬಹುದು.ಯಡಿಯೂರಪ್ಪ ಅವರ ಬೆಳವಣಿಗೆಗೆ ಅವಕಾಶ ಹೆಚ್ಚು ಮಾಡಿಕೊಟ್ಟಷ್ಟು ಅದು ತನ್ನ ಸಮಾಧಿಗೆ ತಾನೇ ಇಟ್ಟಿಗೆಗಳನ್ನು ಇಟ್ಟುಕೊಂಡಂತೆ ಎನ್ನುವ ಸತ್ಯ ಈಶ್ವರಪ್ಪರಿಗೂ ಗೊತ್ತಾದಂತಿದೆ.ಹಾಗಾಗಿಯೇ ಮೇಲ್ನೋಟಕ್ಕೆ ಯೆಡ್ಡಿ ಜತೆ ನಗುತ್ತಲೇ ತಮ್ಮ ರಾಜಕೀಯ  ಅಸ್ಥಿತ್ವವನ್ನು ಭದ್ರ ಮಾಡಿಕೊಳ್ಳುತ್ತಾ ಬಂದಿದ್ದಾರೆ ಈಶ್ವರಪ್ಪ.

ಹಾಗಾಗಿನೇ ಮಹಾನಗರ ಪಾಲಿಕೆಯಲ್ಲಿಅಧಿಕಾರ ಬಿಜೆಪಿಯದಿದ್ದರೂ ಅದಕ್ಕೆ ಈಶ್ವರಪ್ಪ, ಯಡಿಯೂರಪ್ಪ ಕಾರಣವಾಗಿದ್ದರೂ ಪ್ರಾಬಲ್ಯದ ವಿಷಯಕ್ಕೆ ಬಂದ್ರೆ ಯಡಿಯೂರಪ್ಪರಿಗಿಂತ ಈಶ್ವರಪ್ಪ ಒಂದ್ ಕೈ ಮೇಲಿರುವುದನ್ನಂತೂ ಒಪ್ಪಲೇಬೇಕು.

ಅನಿತಾ ರವಿಶಂಕರ್ (7ನೇ ವಾರ್ಡ್ ಕಲ್ಲಹಳ್ಳಿ ಕೆ.ಎಚ್ ಬಿ ವಾರ್ಡ್ )
ಅನಿತಾ ರವಿಶಂಕರ್ (7ನೇ ವಾರ್ಡ್ ಕಲ್ಲಹಳ್ಳಿ ಕೆ.ಎಚ್ ಬಿ ವಾರ್ಡ್ )
ಸುವರ್ಣ ಶಂಕರ್ ,ವಾರ್ಡ್ ನಂಬರ್ 19 (ಶರಾವತಿ ನಗರ)
ಸುವರ್ಣ ಶಂಕರ್ ,ವಾರ್ಡ್ ನಂಬರ್ 19 (ಶರಾವತಿ ನಗರ)

ಈ ಬಾರಿಯ ಮೇಯರ್ ಆಯ್ಕೆ ವಿಷಯಕ್ಕೇ ಬರೋದಾದ್ರೆ 23 ಸದಸ್ಯರ ಬಿಜೆಪಿಯೊಳಗೆ ಯೆಡ್ಡಿ ಹಾಗೂ ಈಶ್ವರಪ್ಪ ಬಣಗಳಿದ್ದು ಅದರಲ್ಲಿ ಬಹುತೇಕ ಕಾರ್ಪೊರೇಟರ್ಸ್ ಅಂದ್ರೆ 18 ರಿಂದ 20  ಕಾರ್ಪೊರೇಟರ್ಸ್ ಈಶ್ವರಪ್ಪ ಬಣವನ್ನು ಪ್ರತಿನಿಧಿಸ್ತಾರೆ.ಇನ್ನುಳಿದ ಮೂರ್ನಾಲ್ಕು ಕಾರ್ಪೊರೇಟರ್ಸ್ ಮಾತ್ರ ಯಡಿಯೂರಪ್ಪ ಬೆಂಬಲಿತ ಬಣದಲ್ಲುಳಿದಿದ್ದಾರೆ.

ಈಶ್ವರಪ್ಪ ಬಣದ ಸುವರ್ಣ ಶಂಕರ್ (ವಾರ್ಡ್ ನಂಬರ್ 19 -ಶರಾವತಿ ನಗರ) ಬಹುತೇಕ ಮೇಯರ್ ಆಗುವುದು ಖಚಿತಪಟ್ಟಿದ್ದರೂ ಅವರು ಒಮ್ಮತದ ಅಭ್ಯರ್ಥಿಯಂತೂ ಅಲ್ಲ.ಏಕೆಂದ್ರೆ  ಯಡಿಯೂರಪ್ಪ ಬಣದ ಅನಿತಾ ರವಿಶಂಕರ್ (7ನೇ ವಾರ್ಡ್ ಕಲ್ಲಹಳ್ಳಿ ಕೆ.ಎಚ್ ಬಿ ) ಕೂಡ ಮೇಯರ್ ಸ್ಥಾನಾಕಾಂಕ್ಷಿಯಾಗಿದ್ದಾರೆ. ಇವರಿಬ್ಬರನ್ನು ಒಂದೆಡೆ ಕುಳ್ಳರಿಸಿ ಪರಸ್ಪರರನ್ನು ಸಮಾಧಾನಪಡಿಸುವ ಕೆಲಸವೇ ಪಕ್ಷದ ಮುಖಂಡರಿಂದ ನಡೆದಿಲ್ಲ.ಇದರಿಂದಾಗಿ ಮೇಯರ್ ಬಿಜೆಪಿ ಪಕ್ಷದ ಅಭ್ಯರ್ಥಿನೇ ಎನ್ನೋದು ಕನ್ಫರ್ಮ್ ಆದ್ರೂ ಬಣಗಳ ನಡುವಿನ ಸಮಾಧಾನವಂತೂ ದೂರವಾಗಿಲ್ಲ.

ಸುವರ್ಣ ರವಿಶಂಕರ್ ಅವರನ್ನು ಮೇಯರ್ ಮಾಡುವ ಆತುರಕ್ಕೆ ಬಿದ್ದಂತಿರುವ ಪಕ್ಷದ ಮುಖಂಡರು ಅದೇ ಸಮಯಕ್ಕೆ ಮೇಯರ್ ಸ್ಥಾನದ ಅವಕಾಶವನ್ನು ಕಳಕೊಳ್ಳಲಿರುವ ಅನಿತಾ ರವಿಶಂಕರ್ ನ್ನು ಸಮಾಧಾನ ಪಡಿಸಿಯೋ,ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಯೋ ಆಯ್ಕೆ ಪ್ರಕ್ರಿಯೆ ಅನಾಯಾಸವಾಗಿ ನಡೆಯುವಂತೆ ಮಾಡುವ ಯಾವುದೇ ಪ್ರಯತ್ನಕ್ಕೂ ಕೈ ಹಾಕಿಲ್ಲ.ಹಾಗಾಗಿ ಬಹಿರಂಗವಾಗಿಯಲ್ಲವಾದ್ರೂ ಆಂತರಿಕವಾಗಿ ಭಿನ್ನಮತ-ಅಸಮಾಧಾನವಂತೂ ಇದ್ದೇ ಇದೆ.

ಯಮುನಾ ರಂಗೇಗೌಡ 14ನೇ ವಾರ್ಡ್-ವಿದ್ಯಾನಗರ
ಯಮುನಾ ರಂಗೇಗೌಡ 14ನೇ ವಾರ್ಡ್-ವಿದ್ಯಾನಗರ (ಕಾಂಗ್ರೆಸ್)
ಕೆಎಸ್.ಈಶ್ವರಪ್ಪ ಎದುರು ಯಡಿಯೂರಪ್ಪಗೆ ಮುಖಭಂಗ!
ಕೆಎಸ್.ಈಶ್ವರಪ್ಪ ಎದುರು ಯಡಿಯೂರಪ್ಪಗೆ ಮುಖಭಂಗ!

ಪಕ್ಷ  ಒಂದೇ ಎನ್ನುವ ಕಾರಣಕ್ಕೆ ಕೆ.ಎಸ್.ಈಶ್ವರಪ್ಪ ಹಾಗೂ ಯಡಿಯೂರಪ್ಪ ಅಸಮಾಧಾನವಿದ್ದಾಗ್ಯೂ ಸುಮ್ಮನಿದ್ದಾರೆ.ಆದ್ರೆ ಆಂತರಿಕವಾಗಿ ಇಬ್ಬರ ನಡುವೆಯೂ ಹೇಳಿಕೊಳ್ಳುವಂಥ ಸಮನ್ವಯವೇ ಇಲ್ಲ.ಮೇಯರ್ ಆಯ್ಕೆ ಪ್ರಕ್ರಿಯೆಗೆ ಪೂರಕವಾಗಿ ಸಾಕಷ್ಟು ಸಿದ್ಧತೆ ನಡೆಯುತ್ತಿದ್ದರೂ ಏನಾಗ್ತಿದೆ ಎಂದು ವಿಚಾರಿಸುವ ಗೋಜಿಗಾಗ್ಲಿ,ಅದರ ಬಗ್ಗೆ ಪರಸ್ಪರ ಇಬ್ಬರು ಚರ್ಚಿಸುವ ಪ್ರಯತ್ನವನ್ನು ಯೆಡ್ಡಿ-ಈಶ್ವರಪ್ಪ ಮಾಡಿಲ್ಲ ಎಂದ್ರೆ ಅವರಿಬ್ಬರ ನಡುವೆ ಇರಬಹುದಾದ ಹೊಂದಾಣಿಕೆಯ ಕೊರತೆ ಏನನ್ನೋದನ್ನು ಅಂದಾಜಿಸ್ಬೋದು.

ಮೇಯರ್ ಗಾದಿ ಅಂತಿಮವಾಗಿ ಈಶ್ವರಪ್ಪ ಬೆಂಬಲಿತ ಅಭ್ಯರ್ಥಿಗೆ ಸಿಗೋದು ನೂರಕ್ಕೆ ನೂರರಷ್ಟು ಸತ್ಯವಾದ್ರೂ ಇದು ಯಡಿಯೂರಪ್ಪ ಅವರಿಗೆ  ನಿಜಕ್ಕೂ ಸಮಾಧಾನ ತಂದಿಲ್ಲ.ಮೇಯರ್ ಆಯ್ಕೆ ವಿಚಾರದಲ್ಲಿ ತನ್ನ ಬಣದ ಅಭ್ಯರ್ಥಿಗೆ ಅವಕಾಶ ಮಾಡಿಕೊಡುವ ಸಾಧ್ಯುತೆಗಳಿದ್ದರೂ ಸೌಜನ್ಯಕ್ಕೂ ಅದರ ಬಗ್ಗೆ ವಿಚಾರಿಸದಿರುವ ಈಶ್ವರಪ್ಪ ಅವರ ನಡೆಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರಂತೆ ಯಡಿಯೂರಪ್ಪ.ಇದು ಭವಿಷ್ಯದಲ್ಲಿ ನಾನಾ ತಿರುವುಗಳಿಗೆ ಎಡೆಮಾಡಿಕೊಟ್ಟರೂ ಆಶ್ಚರ್ಯಪಡಬೇಕಿಲ್ಲ.

ಇನ್ನು  ಸುರೇಖಾ ಮುರುಳೀಧರ್ ಉಪಮೇಯರ್ ಆಗಿ ಆಯ್ಕೆ ಆಗುವುದು ಬಹುತೇಕ ಖಚಿತ.ಈ ನಡುವೆ ಕೇವಲ 8 ಸದಸ್ಯ ಬಲದ ಕಾಂಗ್ರೆಸ್ ಗೆ ಅಧಿಕಾರ ಸಿಗೊಲ್ಲ ಎನ್ನುವ ಸತ್ಯ ಗೊತ್ತಾದ ಹೊರತಾಗ್ಯೂ ರಾಷ್ಟ್ರೀಯ ಪಕ್ಷವಾಗಿ ಸ್ಪರ್ಧೆ ಇರಲಿ ಎನ್ನುವ ಕಾರಣಕ್ಕೆ ಯಮುನಾ ರಂಗೇಗೌಡ (14ನೇ ವಾರ್ಡ್-ವಿದ್ಯಾನಗರ)ಅವರನ್ನು  ಕಣಕ್ಕಿಳಿಸಿದೆ.

ಒಟ್ಟಿನಲ್ಲಿ ಮಹಾನಗರ ಪಾಲಿಕೆ ಮೇಯರ್ ಗಾದಿ ಬಿಜೆಪಿಗೆ ಒಲಿದ್ರೂ ಯಡಿಯೂರಪ್ಪ ಹಾಗೂ ಈಶ್ವರಪ್ಪ ಬಣಗಳ ನಡುವೆ ಹಾವು ಏಣಿಯಾಟದ ಬೆಳವಣಿಗೆಗಳು ಇದ್ದೇ ಇರುತ್ವೆ ಎನ್ನುವುದು ಕೂಡ ಅಷ್ಟೇ ಸತ್ಯ. 

Spread the love
Leave A Reply

Your email address will not be published.

Flash News