ತೆರಿಗೆ ವಸೂಲಿಗೆ ಕಟ್ಟಡದ ಮುಂದೆನೇ ಪ್ರತಿಭಟನೆಗೆ ಕೂತ ಡಿಫರೆಂಟ್ ಅಧಿಕಾರಿ

0
ವಿಭಿನ್ನ ರೂಪದಲ್ಲಿ ತೆರಿಗೆ ಬಾಕಿ ಸಂಗ್ರಹಕ್ಕೆ ಮುಂದಾದ ಉಪ ಆಯುಕ್ತ ಶಿವೇಗೌಡ
ವಿಭಿನ್ನ ರೂಪದಲ್ಲಿ ತೆರಿಗೆ ಬಾಕಿ ಸಂಗ್ರಹಕ್ಕೆ ಮುಂದಾದ ಬಿಬಿಎಂಪಿ ಉಪ ಆಯುಕ್ತ ಶಿವೇಗೌಡ
22 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಪ್ಲಾಟಿನಂ ಸಿಟಿ ಅಪಾರ್ಟ್ ಮೆಂಟ್.
22 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಪ್ಲಾಟಿನಂ ಸಿಟಿ ಅಪಾರ್ಟ್ ಮೆಂಟ್.
ಬಿಬಿಎಂಪಿಗೆ ಬರಬೇಕಾಗಿರುವ 22 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡ ಪ್ಲಾಟಿನಂ ಸಿಟಿ ಅಪಾರ್ಟ್ಮೆಂಟ್ ಮುಂದೆ ಪ್ರತಿಭಟನೆಗೆ ಕೂತ ಶಿವೇಗೌಡ,ಸಾಥ್ ಕೊಟ್ಟಿರುವ ಸಿಬ್ಬಂದಿ
ಬಿಬಿಎಂಪಿಗೆ ಬರಬೇಕಾಗಿರುವ 22 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡ ಪ್ಲಾಟಿನಂ ಸಿಟಿ ಅಪಾರ್ಟ್ಮೆಂಟ್ ಮುಂದೆ ಪ್ರತಿಭಟನೆಗೆ ಕೂತ ಶಿವೇಗೌಡ,ಸಾಥ್ ಕೊಟ್ಟಿರುವ ಸಿಬ್ಬಂದಿ

ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯಲ್ಲಿ ಕೆಲಸ ಮಾಡುವ ಅಧಿಕಾರಿ ಸಿಬ್ಬಂದಿ ಹೇಗ್ ಆಗೋಗಿದ್ದಾರೆಂದ್ರೆ,ಕಿಕ್ ಬ್ಯಾಕ್..ಲಂಚಕ್ಕಾಗಿ ಏನ್ ಬೇಕಾದ್ರೂ ಮಾಡ್ತಾರೆ.ಕಾನೂನು-ನಿಯಮಾವಳಿಗಳನ್ನೇ ಬುಡಮೇಲು ಮಾಡ್ತಾರೆ.ಅದ್ರಲ್ಲೂ ತೆರಿಗೆ ವಿಷಯಕ್ಕೆ ಬಂದ್ರೆ ಕರೆಕ್ಟಾಗಿ ತಮ್ಮ ಕರ್ತವ್ಯ ನಿಭಾಯಿಸಿದ್ದರೆ ಇವತ್ತು ಬಿಬಿಎಂಪಿ ಖಜಾನೆ ಭರ್ತಿಯಾಗಿ ಸರ್ಕಾರಕ್ಕೇನೆ ಸಾಲ ಕೊಡೋ ಸ್ಥಿತಿಯಲ್ಲಿರುತ್ತಿತ್ತೇ ಹೊರತು, ಬರ್ಬಾದ್ ಆಗೋ ಸ್ಥಿತಿಗೆ ಬರ್ತಿರಲಿಲ್ಲ.
ನೀವು ನಂಬಲಿಕ್ಕಿಲ್ಲ ಇವತ್ತು ಬಿಬಿಎಂಪಿಗೆ ತೆರಿಗೆ ರೂಪದಲ್ಲಿ ಬರಬೇಕಿರುವ ಬಾಕಿಯೇ ಅದೆಷ್ಟೋ ಸಾವಿರ ಕೋಟಿಗಳು.ತಿನ್ನೋ ಅನ್ನಕ್ಕೆ ನೀಯತ್ತಾಗಿ ಅಧಿಕಾರಿಗಳು ಕೆಲಸ ಮಾಡಿದ್ದೇ ಆಗಿದ್ರೆ ಇವತ್ತು ಪಾಲಿಕೆ ಮಾಲಾಮಾಲ್ ಆಗಿರ್ತಿತ್ತು.ಆದ್ರೆ ಬಹುತೇಕ ಮೈಗಳ್ಳರು,ಭ್ರಷ್ಟರೇ ತುಂಬೋ ಗಿರುವ ಬಿಬಿಎಂಪಿಯಲ್ಲಿ ವರ್ಷದಿಂದ ವರ್ಷಕ್ಕೆ ತೆರಿಗೆ ಸಂಗ್ರಹ ಕಡ್ಮೆ ಆಗ್ತಿದೆಯೇ ಹೊರತು, ವೃದ್ಧಿಯಾಗಿಲ್ಲ.ಇಲ್ಲಿ ಉದ್ದಾರವಾಗ್ತಿರೋದು ಬಿಬಿಎಂಪಿ ಅಧಿಕಾರಿಗಳು ಹಾಗೂ ಆಸ್ತಿ ಮಾಲೀಕ.
ಈ ಬೇಸರ-ಆಕ್ರೋಶದ ನಡುವೆ ಇಲ್ಲೋರ್ವ ಅಧಿಕಾರಿಯ ಕಾರ್ಯವೈಖರಿ ನಿಜಕ್ಕೂ ಗಮನ ಸೆಳೆಯುತ್ತೆ.ಹೆಮ್ಮೆ ಮೂಡಿಸುತ್ತೆ.ಆಸ್ತಿ ತೆರಿಗೆ ಪಾವತಿಸದ ಆಸ್ತಿ ಮಾಲೀಕನ ಕಟ್ಟಡದ ಎದುರೇ ಸಣ್ಣ ಮಕ್ಕಳಂತೆ ರಚ್ಚೆ ಹಿಡಿದು ಸಂಜೆವರೆಗೂ ಕುಳಿತಲ್ಲೇ ಕುಳಿತು ಮೇಲಾಧಿಕಾರಿಗಳ ಅಣತಿ ಮೇರೆಗೆ ಪ್ರತಿಭಟನೆ ವಾಪಸ್ ಪಡೆದಿದ್ದಾರೆ.ಅಂದ್ಗಾಗೆ ಆ ಅಧಿಕಾರಿಯೇ ಆರ್ ಆರ್ ನಗರ ವಲಯದ ಉಪ ಆಯುಕ್ತ ಶಿವೇಗೌಡ.
ಆರ್ ಆರ್ ನಗರ ವಲಯದ ಎಚ್ ಎಂ ಟಿ ರಸ್ತೆ ವ್ಯಾಪ್ತಿಯಲ್ಲಿರುವ ಪ್ಲಾಟಿನಂ ಸಿಟಿ ಅಪಾರ್ಟ್ಮೆಂಟ್ ಮಾಲೀಕ ಎನಿಸಿಕೊಂಡಾತ 2009 ರಿಂದಲೂ ತೆರಿಗೆ ಪಾವತಿಸದೆ ಸುಸ್ತಿದಾರನಾಗಿದ್ದ.

ಅಂದ್ಹಾಗೆ ಈವರೆಗೆ ಪಾವತಿಸ್ಬೇಕಿದ್ದ ಮೊತ್ತ ಎಷ್ಟು ಗೊತ್ತಾ ಬರೋಬ್ಬರಿ 22 ಕೋಟಿ.ಅನೇಕ ಬಾರಿ ನೊಟೀಸ್ ಕೊಟ್ರೂ ಅದಕ್ಕೆ ಕ್ಯಾರೆ ಎಂದಿರಲಿಲ್ಲ.ಅವರಿವರ ಬಳಿ ಹೇಳಿಸಿ ಬಿಬಿಎಂಪಿ ಅಧಿಕಾರಿಗಳ ಬಾಯಿ ಮುಚ್ಚಿಸಿದ್ದ.ಬಿಬಿಎಂಪಿ ಕೂಡ ಈ ವಿಷಯಕ್ಕೆ ತಲೆ ಹಾಕದೆ ಸುಮ್ಮನಿತ್ತು.
ಆದ್ರೆ ಶಿವೇಗೌಡ ತೆರಿಗೆ ಬಾಕಿದಾರರ ಮಾಹಿತಿ ಪಡೆದು ಎಲ್ಲರಿಗೂ ಸಾಮಾನ್ಯವಾಗಿ ಹೇಳುವಂತೆ ಆಸ್ತಿ ತೆರಿಗೆ ಪಾವತಿಸುವಂತೆ ಹೇಳಿದ್ರು.ಆದ್ರೆ ಈ ಪ್ಲಾಟಿನಂ ಸಿಟಿಯ ಮಾಲೀಕ ದುರಂಹಕಾರದಿಂದ ಇದಕ್ಕೆ ಸೊಪ್ಪಾಕದೆ ಸುಮ್ಮನಿದ್ದ.ನೋಡುವವರೆಗೆ ನೋಡಿದ ಶಿವೇಗೌಡ ನಿನ್ನೆ ಈವರೆಗೆ ಪಾಲಿಕೆ ಇತಿಹಾಸದಲ್ಲಿ ಯಾವೊಬ್ಬ ಅಧಿಕಾರಿನೂ ಮಾಡದ ವಿಶಿಷ್ಟ ಹಾಗೂ ಕ್ತಾಂತಿಕಾರಿ ಕೆಲಸಕ್ಕೆ ಕೈ ಹಾಕಿಯೇ ಬಿಟ್ರು.
ಬಿಬಿಎಂಪಿ ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಪ್ಲಾಟಿನಂ ಸಿಟ ಮುಂದೆ ಪ್ರತಿಭಟನೆ ಕೈಗೊಂಡೇ ಬಿಟ್ರು.ಬೆಳಗ್ಗೆಯಿಂದ ಸಂಜೆವರೆಗೆ ಕುಳಿತಲ್ಲಿಂದ ಮೇಲೇಳದೆ ಪಾಲಿಕೆ ಬೊಕ್ಕಸಕ್ಕೆ ಬರಬೇಕಿರುವ ಬಾಕಿ ಪಾವತಿಸಿ ಎಂದು ಪಟ್ಟು ಹಿಡಿದ್ ಬಿಟ್ರು.ಪೊಲೀಸರು ಕೂಡ ಇವರನ್ನು ಎಬ್ಬಿಸಲು ಹರಸಾಹಸ ಮಾಡಿದ್ರು.ಆದ್ರೂ ಶಿವೇಗೌಡ ಮೇಲೇಳಲೇ ಇಲ್ಲ.ಆಸ್ತಿ ತೆರಿಗೆ ಪಾವತಿಸಲೇಬೇಕೆಂದು ಸಣ್ಣ ಮಕ್ಕಳಂತೆ ರಚ್ಚೆ ಹಿಡಿದ್ ಕೂತೇ ಬಿಟ್ರು.
ಅಲ್ಲಿವರೆಗೆ ಬಂಡೆಯಂತಿದ್ದ ಆಸ್ತಿ ಮಾಲೀಕ ಸ್ವಲ್ಪ ವಿಚಲಿತನಾದಂತೆ ಕಂಡ.ಅಪಾರ್ಟ್ಮೆಂಟ್ ನಲ್ಲಿದ್ದ ನಿವಾಸಿಗಳು ಕೂಡ ಮಾಲಿಕನನ್ನು ತರಾಟೆಗೆ ತೆಗೆದುಕೊಳ್ಳಲು ಯಾವಾಗ ಶುರು ಮಾಡಿದ್ರೋ ಮಾನ ಹೋಗುತ್ತೆಂದು ಹೆದರಿ ಆಸ್ತಿ ತೆರಿಗೆ ಪಾವತಿಸುವುದಾಗಿ ತಿಳಿಸಿದ್ದಾನೆ.ದೊಡ್ಡ ಮೊತ್ತದ ಹಣವಾಗಿರುವುದರಿಂದ ಸ್ವಲ್ಪ ಕಾಲಾವಕಾಶ ಕೇಳಿದ್ದಾನೆ.ಮೇಲಾಧಿಕಾರಿಗಳನ್ನು ಸಂಪರ್ಕಿಸಿ ಅವರ ಅನುಮತಿ ಮೇರೆಗೆ ಅವಕಾಶ ಕೊಟ್ಟು ನಂತ್ರ ಪ್ರತಿಭಟನೆ ವಾಪಸ್ ಪಡೆದಿದ್ದಾರೆ.
ಈ ನಡುವೆ ಆಸ್ತಿದಾರರೊಂದಿಗೇನೆ ಕಿಕ್ ಬ್ಯಾಕ್ ಆಸೆಗೆ ಶಾಮೀಲಾಗಿ ಅವರು ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳೊಕ್ಕೆ ಬೇಕಾದ ಎಲ್ಲಾ ಸಲಹೆಯನ್ನು ಕೊಡುವಂಥ ನಮಕ್ ಹರಾಮ್ ಅಧಿಕಾರಿಗಳೇ ಹೆಚ್ಚಾಗಿರುವ ನಡುವೆ ಶಿವೇಗೌಡ ಅವರ ಕಾರ್ಯವೈಖರಿ ಶ್ಲಾಘಿಸುವಂತದ್ದು.ಅವರ ಬದ್ಧತೆ ಹಾಗೂ ನಿಷ್ಠೆಗೆ ಸಾರ್ವಜನಿಕವಾಗಿ ಪ್ರಶಂಸೆ ಕೂಡ ವ್ಯಕ್ತವಾಗಿದೆ.ಶಿವೇಗೌಡರ ರೀತಿಯಲ್ಲೇ ಅಧಿಕಾರಿಗಳು ಕೆಲಸ ಮಾಡಿದ್ದೇ ಆದಲ್ಲಿ,ಪಾಲಿಕೆಯ ಆರ್ಥಿಕತೆ ಎಲ್ಲೋ ಹೋಗಿ ಮುಟ್ಟುತ್ತೆ..ಆದ್ರೆ ಸಧ್ಯದ ಸ್ಥಿತಿಯಲ್ಲಿ ಅಧಿಕಾರಿಗಳಿಂದ ಆ ಬದ್ಧತೆಯನ್ನು ನಿರೀಕ್ಷಿಸೋದು,ಆನೆಗೆ ಚೆಡ್ಡಿ ಹಾಕಿದಷ್ಟೆ ಅಭಾಸ.ನಾಯಿ ಬಾಲವನ್ನು ನೆಟ್ಟಗೆ ಮಾಡಿದಷ್ಟೇ ಹಾಸ್ಯಾಸ್ಪದ ಆಗುತ್ತೆ ಅಷ್ಟೇ..

Spread the love
Leave A Reply

Your email address will not be published.

Flash News