ಇನ್ಮುಂದೆ “ಮಾಜಿ”ಗಳಿಗೆ ಸೆಕ್ಯೂರಿಟಿನೂ ಇಲ್ಲ-ಗನ್ ಮ್ಯಾನ್ ಇಲ್ಲ:ಪೊಲೀಸ್ ಕಮಿಷನರ್ ಆದೇಶ

0

ಬೆಂಗಳೂರು:ಅಧಿಕಾರ ಇಲ್ಲದಿದ್ದರೂ ಗನ್ ಮ್ಯಾನ್ ಗಳನ್ನಿಟ್ಟುಕೊಂಡು ಓಡಾಡೋ ಶೋಕಿ ಸಾಕಷ್ಟು ಮಾಜಿಗಳಿಗಿದೆ.ಅದನ್ನು ಇಷ್ಟ್ ವರ್ಷ ಸರ್ಕಾರಗಳೂ ಕೇಳ್ತಿರಲಿಲ್ಲ.ಮಾಜಿಗಳು ಕೂಡ ಒಂದಲ್ಲಾ ಒಂದ್ ನೆವ ಹೇಳ್ಕೊಂಡು ತಮ್ಮ ಸೆಕ್ಯೂರಿಟಿ ಸೇವೆಯನ್ನು ಮುಂದುವರೆಸಿಕೊಂಡಿರುತ್ತಿದ್ದರು.ಆದ್ರೆ ಇನ್ಮುಂದೆ ಹಾಗಾಗೋ ಛಾನ್ಸೇ ಇಲ್ಲ.ಏಕೆಂದ್ರೆ ರಾಜ್ಯ ಸರ್ಕಾರ ಮಾಜಿ ಸಚಿವರಿಗೆ ನೀಡಿದ್ದ ಗನ್ ಮ್ಯಾನ್ ಹಾಗು ಸೆಕ್ಯುರಿಟಿ ವಾಪಸ್ ಪಡೆಯುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ ಹಿನ್ನಲೆಯಲ್ಲಿ ಮಾಜಿಗಳಿಗೆ ನೀಡಿದ್ದ ಗನ್ ಮ್ಯಾನ್ ಸೆಕ್ಯೂರಿಟಿ ಹಾಗೂ ಭದ್ರತೆಯನ್ನು ವಾಪಸ್ ಪಡೆದಿದೆ.
ಅಂದ್ಹಾಗೆ
ಸಮ್ಮಿಶ್ರ ಸರ್ಕಾರದ ವೇಳೆ ಗನ್ ಮ್ಯಾನ್ ಹಾಗು ಮನೆಗೆ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿತ್ತು.ಆದ್ರೆ ಅವರಿಗೆ ನೀಡಲಾಗುತ್ತಿರುವ ಈ ಸವಲತ್ತಿನಿಂದ ಪೊಲೀಸ್ ಇಲಾಖೆಗೆ ಹೊರೆಯಾಗುತ್ತಿದೆ ಎನ್ನುವ ಅಂಶದ ಹಿನ್ನಲೆಯಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾಜಿಗಳಿಗೆ ನೀಡಲಾಗಿದ್ದ ಸೆಕ್ಯೂರಿಟಿಯನ್ನು ವಾಪಸ್ ಪಡೆಯುವಂತೆ ಸೂಚಿಸಿದ್ದಾರೆ.
“ಎ ” ಮತ್ತು “ಬಿ” ಶ್ರೇಣಿ ಎಂದು ಡಿವೈಡ್ ಮಾಡಿ ನೀಡಲಾಗಿದ್ದ ಭದ್ರತೆಯನ್ನು ವಾಪಸ್ ಪಡೆದು ಆದೇಶ ಮಾಡಿದೆ.
ಅಂದ್ಹಾಗೆ ಪೊಲೀಸ್ ಇಲಾಖೆಯ ಈ ಕ್ರಮದಿಂದ ರಾಜ್ಯದ 27 ಮಾಜಿ ಸಚಿವರಿಗೆ ನೀಡಲಾಗಿದ್ದ ಗನ್ ಮ್ಯಾನ್ ಭದ್ರತೆ ಹಿಂಪಡೆಯಲಾಗ್ತಿದೆ.ಅವರಿನ್ನು ತಮ್ಮ ಕೈಯಾರೆ ಹಣ ಖರ್ಚು ಮಾಡ್ಕೊಂಡು ಸೆಕ್ಯೂರಿಟಿ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾಗ್ತದೆ.ಕಳೆದ ಡಿಸೆಂಬರ್ 22 ರಂದು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರ ಆದೇಶದ ಹಿನ್ನಲೆಯಲ್ಲಿ ಆರ್.ದೇಶಪಾಂಡೆ, ಬಂಡೆಪ್ಪ ಕಾಶಪ್ಪನವರ್, ಡಿಸಿ ತಮ್ಮಣ್ಣ, ರಮೇಶ್ ಜಾರಕಿಹೋಳಿ, ಜಿ.ಟಿ ದೇವೆಗೌಡ ಸೇರಿದಂತೆ 27 ಮಾಜಿಗಳು ಎ ಮತ್ತು ಬಿ ದರ್ಜೆಯ ಸೆಕ್ಯೂರಿಟಿ ಸೌಲಭ್ಯವನ್ನು ಕಳೆದುಕೊಳ್ಳಲಿದ್ದಾರೆ.
ಆದ್ರೆ A ಶ್ರೇಣಿಯಲ್ಲಿ ಐದು ಮಂದಿ ಮಾಜಿ ಸಚಿವರಿಗೆ ನೀಡಲಾಗುತ್ತಿರುವ z ಶ್ರೇಣಿ ಮತ್ತು ಪೈಲಟ್ ಮುಂದುವರಿಸಲಾಗುತ್ತಿದೆ.ಡಿಕೆಶಿ, ಜಿ.ಪರಮೇಶ್ವರ, ಕೆ.ಜೆ. ಜಾರ್ಜ್, ಎಂ.ಬಿ ಪಾಟೀಲ್, ಹೆಚ್.ಡಿ ರೇವಣ್ಣ ಅವರಿಗೆ ನೀಡಲಾಗುತ್ತಿರುವ Z ಶ್ರೇಣಿ ಭದ್ರತೆ ಮುಂದುವರೆಯಲಿದೆ.

Spread the love
Leave A Reply

Your email address will not be published.

Flash News