ಫೆಬ್ರವರಿ 1 ರಿಂದಲೇ ಹಾಲು-ಮೊಸರು ದರದಲ್ಲಿ 2 ರೂ ಏರಿಕೆ

0

ಬೆಂಗಳೂರು: ಫೆಬ್ರವರಿ 1 ರಿಂದ ಹಾಲು ಗ್ರಾಹಕರ ತುಟಿಯನ್ನಷ್ಟೇ ಅಲ್ಲ,ಜೇಬನ್ನೂ ಸುಡಲಿದೆ.ಕೆಎಂಎಫ್ ನಷ್ಟದಲ್ಲಿರುವ ಹಿನ್ನಲೆಯಲ್ಲಿ ದರ ಏರಿಕೆ ಅನಿವಾರ್ಯ ಎನ್ನುವ ಸ್ಥಿತಿಯನ್ನು ತಿಳಿಗೊಳಿಸ್ಲಿಕ್ಕೆ ಸರ್ಕಾರ ಇಂತದ್ದೊಂದು ನಿರ್ದಾರ ಪ್ರಕಟಿಸಿದೆ.ಹಾಲಿ ದರದಲ್ಲಿ  ಲೀಟರ್ ಗೆ 2 ರೂ ಏರಿಕೆ ಮಾಡಲು ಸರ್ಕಾರ ಒಪ್ಪಿಗೆ ನೀಡಿದ್ದು ಮೊಸರಿನ ದರವು ಲೀಟರ್ ಮೇಲೆ 2 ರೂ ಹೆಚ್ಚಳವಾಗಲಿದೆ.

ಕೆಎಂಎಫ್ ನಷ್ಟದಲ್ಲಿರುವ ಜತೆಗೆ ರೈತರು ಸಂಕಷ್ಟದಲ್ಲಿರುವ ಸಂಗತಿಯನ್ನು ಸರ್ಕಾರದ ಗಮನಕ್ಕೆ ತರಲಾಗಿತ್ತಲ್ಲದೇ ಹಾಲಿನ ದರವನ್ನು ಲೀಟರ್ ಗೆ 5 ರೂ ಏರಿಕೆ ಮಾಡಬೇಕೆಂದು ಸರ್ಕಾರಕ್ಕೆ ಕೆಎಂಎಫ್ ಪ್ರಸ್ತಾಪ ಸಲ್ಲಿಸಿತ್ತು.ಆದ್ರೆ ತೂಗಿ ಅಳೆದು ಅಂತಿಮವಾಗಿ ಲೀಟರ್ ಗೆ 2 ರೂ ದರ ಏರಿಕೆ ಮಾಡಲಾಗಿದೆ.ಮೊಸರಿಗೂ ಇದೇ ಹೆಚ್ಚಳ ಅನ್ವಯವಾಗಲಿದೆ.ಪರಿಷ್ಕ್ರತ ದರ ಇದೇ ಫೆಬ್ರವರಿ 1 ರಿಂದ್ಲೇ ಜಾರಿಯಾಗಲಿದೆ.

ಕೆಎಂಎಫ್  ಮಾಡಿರುವ ದರ ಏರಿಕೆಯಿಂದಾಗಿ 1 ರೂ ರೈತರಿಗೆ ಪ್ರೋತ್ಸಾಹಧನವಾಗಿ ಸಿಗಲಿದೆ.ಇನ್ನೊಂದು ರೂನಲ್ಲಿ ಮೇವು,ಮಾರಾಟಗಾರರಿಗೆ ಲಾಭ ದೊರೆಯಲಿದೆ ಎಂದು ಕೆಎಂಎಫ್ ನ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಕನ್ನಡಫ್ಲ್ಯಾಶ್ ನ್ಯೂಸ್ ಗೆ ತಿಳಿಸಿದ್ದಾರೆ.

 

 

Spread the love
Leave A Reply

Your email address will not be published.

Flash News