IAS ಸಾಧನೆ ಕಂಡಕ್ಟರ್ ಮಧುವಿನ ಕಟ್ಟುಕಥೆನಾ ?!

0
ರಾತ್ರೋರಾತ್ರಿ “ಹೀರೋ” ಆಗಿ “ಝೀರೋ” ಆದ ಬಿಎಂಟಿಸಿ ಕಂಡಕ್ಟರ್ ಮಧು
ರಾತ್ರೋರಾತ್ರಿ “ಹೀರೋ” ಆಗಿ“ಝೀರೋ”  ಆದ ಬಿಎಂಟಿಸಿ ಕಂಡಕ್ಟರ್ ಮಧು

ಬೆಂಗಳೂರು:ಇಂಥಾ ಸುಳ್ಳಾ…

ನಿಜಕ್ಕೂ ಈ ವಿವಾದ ಅನಗತ್ಯವಾಗಿತ್ತೇನೋ…ಪ್ರಚಾರ ಗಿಟ್ಟಿಸಿಕೊಳ್ಳೊಕ್ಕೆ ಈ ರೀತಿ ಆಯ್ತಾ..ಅಥ್ವಾ ಗ್ರಹಿಕೆಯ ಸಮಸ್ಯೆಯಿಂದಾಗಿ ಇಂತದ್ದೊಂದು ಅಚಾತುರ್ಯ ನಡೆದೋಯ್ತಾ ಗೊತ್ತಾಗ್ತಿಲ್ಲ.ಆದ್ರೆ ಒಂದು ದೊಡ್ಡ ಪ್ರಮಾದ ನಡೆದೋಗಿದೆ.ಅದರ ನೈತಿಕ ಹೊಣೆಯನ್ನು ಯಾರು ಹೊರ್ಬೇಕು ಎನ್ನುವುದೇ ಇದೀಗ ದೊಡ್ಡ ಪ್ರಶ್ನೆಯಾಗಿ ಕಾಡ್ತಿದೆ.(ಮಧು ಎನ್ನುವ ಕಂಡಕ್ಟರ್ ನ್ನು ಟಾರ್ಗೆಟ್ ಮಾಡುವ ಉದ್ದೇಶದ ವರದಿ ಇದು ಖಂಡಿತಾ ಇಲ್ಲ.ವಾಸ್ತವದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಅಷ್ಟೇ )

ನಾವೇಳ್ತಿರೋದು, ಬಿಎಂಟಿಸಿ ಕಂಡಕ್ಟರ್ ಮಧು ಎಂಬಾತನ ಸುತ್ತ ಸೃಷ್ಟಿಯಾಗಿರುವ ವಿವಾದದ ಬಗ್ಗೆ. ಮೊನ್ನೆಯವರೆಗೂ  ಎಲ್ಲರ ಪಾಲಿನ ಹೀರೋ ಆಗಿದ್ದ  ಮಧು ಇದೀಗ ಎಲ್ಲರ ದೃಷ್ಟಿಯಲ್ಲಿ ಸುಳ್ಳುಗಾರ ಎನ್ನುವ ಆಪಾದನೆಗೆ ತುತ್ತಾಗಿದ್ದಾನೆ.ಇದು ಅವನೇ ಮಾಡಿಕೊಂಡ ಯಡವಟ್ಟಾ ಅಥ್ವಾ ಬೇರೊಬ್ಬರ  ಅವಸರ ವಿಲನ್ ಸ್ಥಾನದಲ್ಲಿ ಅವನನ್ನು ನಿಲ್ಲುವಂತೆ ಮಾಡ್ತಾ ಗೊತ್ತಾಗ್ತಿಲ್ಲ.ಆತ ಮಾಡಿಕೊಂಡ  ಈ ಯಡವಟ್ಟು ಆತ ನ ಬದುಕು-ವೃತ್ತಿ ಮೇಲೆ ಬೀರಿರುವ ಪರಿಣಾಮ ಎಂತದ್ದೆನ್ನೋ  ಅಂದಾಜು ಆತನಿಗೆ ಗೊತ್ತಿಲ್ಲವೇನೋ.

ಮಧು ಎಂ.ಸಿ ಎನ್ನುವ 29 ವರ್ಷದ ಯುವಕ ಯುಪಿಎಸ್ ಸಿ ಪರೀಕ್ಷೆಯಲ್ಲಿ ಗಣನೀಯ ಸಾಧನೆ ಮಾಡಿ ಸಂದರ್ಶನ ನಿರ್ಣಾಯಕ ಘಟ್ಟಕ್ಕೆ ತಲುಪಿದ್ದಾನೆ ಎನ್ನುವ ಸುದ್ದಿ ಪ್ರತಿಷ್ಟಿತ ಪತ್ರಿಕೆಯಲ್ಲಿ ಪ್ರಕಟವಾಗಿದ್ದೇ  ತಡ,ಮಧು ಬೆಳಗಾಗೋದ್ರೊಳಗೆ ದೊಡ್ಡಮಟ್ಟದಲ್ಲಿ ಸುದ್ದಿಯಾಗಿ ಹೋಗಿದ್ದ.ಇಡೀ ರಾಜ್ಯದ ಜನ ಮಧು  ಬಗ್ಗೆ ಆಶ್ಚರ್ಯ ಹಾಗೂ ಅಭಿಮಾನದಿಂದ ಮಾತನಾಡುವಂತಾಯ್ತು.ಮೈ ಮುರಿಯುವಷ್ಟು ಕೆಲಸದ ನಡುವೆ ಬಿಎಂಟಿಸಿ ಕಂಡಕ್ಟರ್ ಒಬ್ಬ ಇಂತದ್ದೊಂದು ಸಾಧನೆ ಮಾಡಿದ್ದಾನೆಂದ್ರೆ ಅದು ಮಹಾನ್ ಸಾಧನೆ,ಅದು ಅನೇಕರಿಗೆ ಮಾದರಿಯಾಗಬೇಕು ಎಂದು ಮಾತನಾಡಿಕೊಂಡ್ರು.ನಿಮಗೆ ಗೊತ್ತಿರಲಿ ಎಂದು ಹೇಳ್ತೀವಿ ಕೇಳಿ,ಮಧು ಫೈನಲ್ ಇಂಟರ್ ವ್ಯೂ ಅಟೆಂಡ್ ಆಗ್ಲಿಕ್ಕೆ ಬೇಕಾದ ಎಲ್ಲಾ ಸಿದ್ಧತೆ ಬಗ್ಗೆ ಮಾರ್ಗದರ್ಶನ ನೀಡೊಕ್ಕೆ ರಾಜ್ಯದ ಅನೇಕ ಹಿರಿಯ ಹಾಗೂ ಟ್ಯಾಲೆಂಟೆಡ್  ಐಎಎಸ್ ಅಧಿಕಾರಿಗಳು ಕೂಡ  ಮುಂದೆ ಬಂದಿದ್ರು,

ಆದ್ರೆ..ಆದ್ರೆ ಯಾವ್ ಸಾಧನೆಯಿಂದಾಗಿ ರಾಜ್ಯದ ಗಮನ ಸೆಳೆದಿದ್ದ ಮಧುವಿನ ಬಗ್ಗೆ ಶಾಕಿಂಗ್ ಎನ್ನುವಂಥ ಸುದ್ದಿಯೊಂದು ಹೊರಬಿದ್ದಿದೆ. ಮಧು ಮಾಡಿದ್ದಾನೆನ್ನುವ ಸಾಧನೆ ಸುಳ್ಳು ಎನ್ನುವುದೇ ಆ ಅಘಾತಕಾರಿ ಸತ್ಯ.ಐಎಎಸ್ ಎಲ್ಲಾ ಹಂತದಲ್ಲೂ ಯಶಸ್ವಿಯಾಗಿದ್ದೇನೆ,ಐಎಎಸ್ ಆಗಲು ಇರೋದು ಇನ್ನೊಂದೇ ಮೆಟ್ಟಿಲು ಎಂದೇಳಿದ್ದೆಲ್ಲಾ ಸುಳ್ಳು,ಅಸಲಿಗೆ ಆತ ಯಾವ್ದೇ ಐಎಎಸ್ ಪರೀಕ್ಷೆಯಲ್ಲಿ ಪಾಸಾಗಿಲ್ಲ.ಆತ ಸುಳ್ಳಿನಿಂದ ಜನರನ್ನು ನಂಬಿಸುವ ಯತ್ನ ಮಾಡಿದ್ದಾನೆನ್ನುವ ಸಂಗತಿ ಈಗ ಹೊರಬಿದ್ದಿದೆ.ಈ ಕಾರಣಕ್ಕೆ ಆತನನ್ನು ಹಾಡಿ ಹೊಗಳಿ ಅಟ್ಟಕ್ಕೇರಿಸಿದ್ದ ಬಿಎಂಟಿಸಿ ಆಡಳಿತ ಮಂಡಳಿನೇ ಈಗ ತಲೆ ತಗ್ಗಿಸುವ ಸ್ಥಿತಿ ಬಂದ್ ತಲುಪಿದೆ.

ಅಸಲಿಗೆ ಮಧು ಯುಪಿಎಸ್ ಸಿ ಪರೀಕ್ಷೆಯನ್ನೇ ಪಾಸ್ ಮಾಡಿಲ್ಲ ಎನ್ನೋ ಸುದ್ದಿ ಬಿಎಂಟಿಸಿ ಅಂಗಳದಿಂದ್ಲೇ ಕೇಳಿಬಂದಿದೆ.ಆತನ ಪೂರ್ವಾಪರ ಪರಿಶೀಲಿಸಿದಾಗ ಈ ಅಘಾತಕಾರಿ ಸತ್ಯ ಹೊರಬಿದ್ದಿದೆ.ಸುಮ್ಮನೆ ಪ್ರಚಾರಕ್ಕೆ ಮಧು ತಾನು ಐಎಎಸ್ ಪಾಸಾಗಿದ್ದೇನೆ,ಆ ಸಾಧನೆಗೆ ಇರೋದು ಇನ್ನೊಂದೇ ಮೆಟ್ಟಿಲು ಎಂದು ಸುಳ್ಳು ಹೇಳಿದ್ದಾನಾ ಗೊತ್ತಾಗ್ತಿಲ್ಲ.ಬಿಎಂಟಿಸಿಯಲ್ಲಿ ಈ ಬಗ್ಗೆ ನಡೆದಿದೆ ಎನ್ನಲಾದ ವಿಚಾರಣೆ ವೇಳೆ ಮಧು ತಾನು ಐಎಎಸ್ ಪಾಸಾಗಿಲ್ಲ ಎಂದೇ ಹೇಳಿದ್ದೇ.ಅದನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ತಪ್ಪು ಬರೆಯಲಾಗಿದೆ.ಇದರಲ್ಲಿ ನನ್ನ ತಪ್ಪೇನಿಲ್ಲ ಎಂದು ಕಣ್ಣೀರಿಟ್ಟಿದ್ದಾನೆ.ಅಷ್ಟೇ ಅಲ್ಲ,ತನ್ನ ಬಗ್ಗೆ ಬರೆಯಲಾದ ಸುದ್ದಿಯಿಂದ ತೀವ್ರ ಮುಜುಗರ ಹಾಗೂ ಆತಂಕಕ್ಕೀಡಾಗಿ ನನ್ನ ಮೊಬೈಲ್ ಸ್ವಿಚಾಫ್ ಮಾಡ್ಕೊಂಡು ನಾಪತ್ತೆಯಾಗಿದ್ದೆ.ಮಾದ್ಯಮಗಳು ಮಾಡಿದ ಯಡವಟ್ಟಿಗೆ ನನ್ನ ವೈಯುಕ್ತಿಕ ಜೀವನದ ಮೇಲೆ ಗಂಭೀರ ಪರಿಣಾಮ ಉಂಟಾಗಿದೆ.ನನ್ನನ್ನು ಯಾರು ನಂಬ್ತಾರೆ ಎಂದು ವಿವರಣೆ ನೀಡಿದ್ದಾನೆ ಎನ್ನಲಾಗಿದೆ.ಅಷ್ಟೇ ಅಲ್ಲ,ನನ್ನ ವೃತ್ತಿ ಮೇಲೂ ಇದು ಗಂಭೀರ ಪರಿಣಾಮ ಬೀರಿದೆ ಎಂದು ಕೂಡ ಹೇಳಿದ್ದಾನಂತೆ.

ಮಾದ್ಯಮಗಳ ಸುದ್ದಿಯಿಂದ ಬೆಳಗಾಗುವುದರೊಳಗೆ ಹೀರೋ ಆದ ಮಧು
ಮಾದ್ಯಮಗಳ ಸುದ್ದಿಯಿಂದ ಬೆಳಗಾಗುವುದರೊಳಗೆ ಹೀರೋ ಆದ ಮಧು
ಕರ್ನಾಟಕ ಅಷ್ಟೇ ಅಲ್ಲ ಬೇರೆ ರಾಜ್ಯದ ಮಾದ್ಯಮಗಳಲ್ಲೂ ಸದ್ದು ಮಾಡಿದ್ದ ಮಧು “ಸಾಧನೆ”?
ಕರ್ನಾಟಕ ಅಷ್ಟೇ ಅಲ್ಲ ಬೇರೆ ರಾಜ್ಯದ ಮಾದ್ಯಮ ಗಳಲ್ಲೂ ಸದ್ದು ಮಾಡಿದ್ದ ಮಧು “ಸಾಧನೆ”?

ಆದ್ರೆ ಹಾಗಂತ ಮಧು ಹೇಳೋ ಈ ಸಂಗತಿಯನ್ನು ಅಷ್ಟು ಸಲೀಸಾಗಿ ನಂಬೊಕ್ಕೂ ಆಗೊಲ್ಲ.ಏಕೆಂದ್ರೆ ಆತ ಮಾದ್ಯಮಗಳ ಮೇಲೆ ತಪ್ಪು ಹೊರಿಸಿ ನುಣುಚಿಕೊಳ್ಳೋಕ್ಕೂ ಆಗೊಲ್ಲ.ಇಷ್ಟು ಸೀರಿಯಸ್ಸಾದ ವಿಚಾರವನ್ನು ಮಾದ್ಯಮಗಳಲ್ಲಿ ಬರೆಯುವಾಗ ಪೂರ್ವಾಪರವನ್ನು ಅವಲೋಕಿಸದಷ್ಟು ವರದಿಗಾರರು ದಡ್ಡರಾಗಿರುವುದಿಲ್ಲ.ಆದ್ರೆ ಇಲ್ಲಿ ಪ್ರಶ್ನೆ ಇರೋದು ಆತ ಏನು ಐಎಎಸ್ ಪರೀಕ್ಷೆಗೆ ಹಾಜರಾಗಿದ್ದಾನೆ ಎನ್ನೋದಕ್ಕೆ ಆತ ತೋರಿಸಿದ ಹಾಲ್ ಟಿಕೆಟ್ ನ್ನು ಆ ಮಾದ್ಯಮದ ವರದಿಗಾರರು ಕ್ರಾಸ್ ಚೆಕ್ ಮಾಡುವಂಥ ಗೋಜಿಗೆ ಏಕೆ ಹೋಗಲಿಲ್ಲ ಎನ್ನುವುದು.ಏಕೆಂದ್ರೆ ಮಧು ವಿಷಯದಲ್ಲಿ ಈಗ ಆತನಷ್ಟೇ ಅಪರಾಧಿ ಸ್ಥಾನದಲ್ಲಿ ಪೂರ್ವಾಪರ ವಿಚಾರಿಸುವ ಗೋಜಿಗೆ ಹೋಗದ ಮಾದ್ಯಮವೂ ನಿಲ್ಲಬೇಕಾಗ್ತದೆ.ಏಕೆಂದ್ರೆ ಓದುಗರನ್ನು ತಪ್ಪು ವರದಿಗಳ ಮೂಲಕ ದಾರಿ ತಪ್ಪಿಸುವಂತದ್ದು ವೃತ್ತಿ ಧರ್ಮವಲ್ವೇ ಅಲ್ಲ.ಆ ಕಾರಣಕ್ಕೆ ಈಗಾಗ್ಲೇ ಆ ಇಂಗ್ಲೀಷ್ ಮಾದ್ಯಮದ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬರುತ್ತಿವೆ.ಆ ಮಾದ್ಯಮ ಕೂಡ ಓದುಗರಲ್ಲಿ ಕ್ಷಮೆಯಾಚಿಸಿದೆ ಕೂಡ.

ಪೂರ್ವಾಪರ ಅವಲೋಕಿಸದೆ ಹಾಡಿ ಹೊಗಳಿದ್ದ ಬಿಎಂಟಿಸಿ ಎಂಡಿ ಶಿಖಾ
ಪೂರ್ವಾಪರ ಅವಲೋಕಿಸದೆ ಹಾಡಿ ಹೊಗಳಿದ್ದ ಬಿಎಂಟಿಸಿ ಎಂಡಿ ಶಿಖಾ

ಶಿಖಾ ಅವರೇ ಯಡವಿದ್ರಾ..ಅನುಮಾನ ಹೀಗೂ ಕಾಡ್ಲಿಕ್ಕೆ ಶುರುಮಾಡಿದೆ.ಮಧುವಿನ ಸಾಧನೆ ಬಗ್ಗೆ ಹಾಡಿ ಹೊಗಳಿದ್ದ ಶಿಖಾ ಅಂತದ್ದೊಂದು ಕೆಲಸ ಮಾಡುವಾಗ ಪೂರ್ವಾಪರ ಅವಲೋಕಿಸುವ ಕೆಲಸ ಮಾಡ್ಬೇಕಿತ್ತು.ಒಂದು ಸಂಸ್ಥೆಯ ಮುಖ್ಯಸ್ಥೆಯಾಗಿ ಅದು ಅವರ ಬಾಧ್ಯಸ್ಥಿಕೆ ಹಾಗು ಹೊಣೆಗಾರಿಕೆ ಕೂಡ.ಆತ ಬಂದು ಹೇಳಿದಾಗ ವಿಶ್ ಮಾಡಿದ ಶಿಖಾ ಪತ್ರಿಕೆಗೆ ಈ ಬಗ್ಗೆ ಅಧೀಕೃತವಾಗಿ ಮಾಹಿತಿ ಹಾಗು ಹೇಳಿಕೆ ಕೊಡುವಾಗ  ಮಧುವಿನ ಸಾಧನೆಯ ಸತ್ಯಾಸತ್ಯತೆಯನ್ನು ಅವಲೋಕಿಸ್ಬೇಕಿತ್ತು.ಅದನ್ನು ಮಾಡದೆ ಮಾತಿನ ಭರಾಟೆಯಲ್ಲಿ ಮಧುವನ್ನು ಹಾಡಿ ಹೊಗಳಿ ತಪ್ ಮಾಡ್ಬಿಟ್ರಾ ಎನಿಸುತ್ತೆ.

ಮಧು ಸಾಧನೆಯನ್ನು ಮಾದರಿಯಾಗಿ ಬಿಂಬಿಸಿದ್ದ ಮಾಧ್ಯಮಗಳು
ಮಧು ಸಾಧನೆಯನ್ನು ಮಾದರಿಯಾಗಿ ಬಿಂಬಿಸಿದ್ದ ಮಾಧ್ಯಮಗಳು

ಮಾದ್ಯಮಗಳಲ್ಲಿ ಈ ಬಗ್ಗೆ ವರದಿಯಾಗುವಾಗ್ಲೂ ಹಾಗೆಯೇ ಆ ಬಗ್ಗೆ ಮಾದ್ಯಮಗಳಿಗೆ ಹೇಳಿಕೆ ಕೊಡುವಾಗ್ಲೂ ಹೊಣೆಗಾರಿಕೆ ಪಕ್ಕಕ್ಕಿಟ್ಟುಬಿಟ್ರಾ ಗೊತ್ತಾಗ್ತಿಲ್ಲ.ಯಾವಾಗ ಮಧು ಜತೆ ಕೆಲಸ ಮಾಡುವವರೇ ಐಎಎಸ್ ಪಾಸ್ ಮಾಡಿದ್ದಾನೆನ್ನುವ ಸುದ್ದಿಯನ್ನು ಸುಳ್ಳು ಎಂದು ಹೇಳಲಿಕ್ಕೆ ಶುರುಮಾಡಿದ್ರೋ,ಅದನ್ನಿಟ್ಟುಕೊಂಡು ಮಾದ್ಯಮಗಳು ಪ್ರಶ್ನೆ ಮಾಡ್ಲಿಕ್ಕೆ ಶುರುಮಾಡಿದ್ವೋ ಆಗ ಆತನಿಗೆ ಸಾಕ್ಷ್ಯ ಕೇಳೊಕ್ಕೆ ಶುರುಮಾಡಿದ್ರಂತೆ ಶಿಖಾ.

ಮಧು ನಿಜವಾಗ್ಲೂ ಐಎಎಸ್ ಪಾಸ್ ಮಾಡಿದ್ರೆ ಅದಕ್ಕೆ ಪೂರಕವಾದ ಹಾಲ್ ಟಿಕೆಟ್ ಹಾಗೂ ತೇರ್ಗಡೆಯಾಗಿದ್ದಕ್ಕೆ ಪೂರಕವಾದ ಎಲ್ಲಾ ದಾಖಲೆ ಪೂರೈಸ್ಬೇಕಿತ್ತು.ಯಾವಾಗ ಸಾಕ್ಷ್ಯ ಕೇಳಿದ್ರೋ ಆ ಕ್ಷಣದಿಂದ್ಲೇ ತನ್ನ ಮೊಬೈಲ್ ಸ್ವಿಚಾಫ್ ಮಾಡ್ಕೊಂಡು ಭೂಗತನಾಗ್ಬಿಟ್ಟ.ಇಲಾಖೆ ಸಿಬ್ಬಂದಿಯಿಂದ್ಲೇ ಆತನನ್ನು ಹುಡುಕಿಸಿ ಕರೆತಂದು ವಿಚಾರಿಸಿದ್ರೆ ಶಿಖಾ ಮೇಡಮ್ ಅವ್ರ  ಎದೆ ಝಲ್ ಎನ್ನುವ ಸಂಗತಿ ಹೇಳ್ಬಿಟ್ಟ.ನಾನು ಹೇಳಿದ್ದನ್ನು ತಪ್ಪಾಗಿ ಅರ್ಥೈಸಿ ಸುದ್ದಿ ಮಾಡಲಾಗಿದೆ ಎಂದ್ ಬಿಟ್ಟನಂತೆ.ಆತನನ್ನು ಹಾಡಿ ಹೊಗಳಿ ಅಟ್ಟಕ್ಕೇರಿಸಿದ್ದ ಶಿಖಾ ಮೇಡಮ್ ಈ ಸುದ್ದಿ ಕೇಳಿ ದಿಗ್ಬ್ರಾಂತರಾಗಿದ್ದಾರೆ.ಕೆಂಡಾಮಂಡಲಗೊಂಡ್ರೂ ಏನೂ ಮಾಡ್ಲಿಕ್ಕಾಗದ ಸ್ಥಿತಿ ಅವ್ರದು.ಆದ್ರೆ ಒಂದಂತೂ ಸತ್ಯ  ಆತನಿಂದಾಗಿ ತೀವ್ರ ಮುಜುಗರ ಅನುಭವಿಸ್ತಿರುವ ಶಿಖಾರಿಗೆ ಬಹುದೊಡ್ಡ ಪಾಠವನ್ನೇ ಕಲಿಸಿದ್ದಾನೆ ಮಧು.

ಮಾಧ್ಯಮಗಳು ಅಭಿಮಾನಪೂರ್ವಕವಾಗಿ ಮಾಡಿದ ವರದಿ ಝಲಕ್
ಮಾಧ್ಯಮಗಳು ಅಭಿಮಾನ ಪೂರ್ವಕವಾಗಿ ಮಾಡಿದ ವರದಿ ಝಲಕ್

ಶಿಕ್ಷಿಸುವುದೇ ಅಂತಿಮವಲ್ಲ-ಐಎಎಸ್ ಕನಸು ಇನ್ನೂ ಇದ್ದರೆ ಬೆನ್ತಟ್ಟಿ ಪ್ರೋತ್ಸಾಹಿಸ್ಬೇಕಿದೆ: ಈಗ ಪ್ರಶ್ನೆ ಇರೋದು ಮಧು ಏಕೆ ಇಂತದ್ದೊಂದು ಸುಳ್ಳು ಹೇಳ್ದಾ ಎನ್ನೋದು,ಪ್ರಜ್ಞಾಪೂರ್ವಕವಾಗಿ ಇದನ್ನು ಮಾಡಿದ್ನೋ ಅಥವಾ ಪ್ರಚಾರದ ಆಸೆಗೆ ಇಂತದ್ದೊಂದು ಯಡವಟ್ಟು ಮಾಡಿಕೊಂಡ್ನಾ ಎನ್ನೋದು.ಮಧು ಗೊತ್ತಿದ್ದೇ ಆ ತಪ್ಪು ಮಾಡಿದ್ರೆ ಅದು ಅಕ್ಷಮ್ಯ,ಯಾವ್ದೋ ಆತುರಕ್ಕೆ ಬಿದ್ದು ಗಿಮಿಕ್ ಗೆ ಈ ರೀತಿ ಮಾಡಿದ್ರೆ ಕ್ಷಮಿಸಲಿಕ್ಕಾಗದಂಥ ತಪ್ಪೇನಲ್ಲ ಎಂದು ಕ್ಷಮಿಸಿ ಬಿಡ್ಬೋದೇನೋ.ಏಕೆಂದ್ರೆ ಮಧುವಿನ ಮುಖ ಹಾಗೂ ಹಾವಭಾವ ಗಮನಿಸಿದ್ರೆ ಆತ ಕ್ರೈಮ್ ಮಾಡುವ ಖತರ್ನಾಕ್ ಕ್ರಿಮಿನಲ್ ತರವೇನೂ ಕಾಣೊಲ್ಲ.ಆ ಮುಗ್ಧತೆ ಇನ್ನೂ ಆತನ ಮುಖದಲ್ಲಿದೆ.

ಯಾವ್ದೋ ಉತ್ಸಾಹದಲ್ಲಿ ಹೀಗೊಂದ್ ಸುಳ್ಳೇಳಿ ಎಲ್ಲರನ್ನು ಹಾದಿ ತಪ್ಪಿಸಿರಬಹುದೇನೋ,ಈ ಕಾರಣಕ್ಕೆ ಆತನನ್ನು ಶಿಕ್ಷಿಸುವ ಮಟ್ಟಕ್ಕೆ ಆಡಳಿತ ಮಂಡಳಿ ಹೋದ್ರೆ ಅದು ಅಡ್ಡಪರಿಣಾಮಗಳಿಗೆ ಎಡೆ ಮಾಡಿಕೊಡುವ ಅಪಾಯ ಇದೆ.ಇಲಾಖಾ ಮಟ್ಟದಲ್ಲಿಯೇ ಇದಕ್ಕೆ ಕೊನೆ ಆಡ್ಬೇಕು.ಆತನನ್ನು ಶಿಕ್ಷಿಸುವ ಕೆಲಸಕ್ಕೆ ಕೈ ಹಾಕದೆ ,ಈಗಲೂ ಆತನಲ್ಲಿ ನಿಜಕ್ಕೂ ಐಎಎಸ್ ಆಗಬೇಕೆನ್ನುವ  ಕನಸು ಇದ್ದರೆ ಅದನ್ನು ಪೋಷಿಸಿ ಬೆಳೆಸೋ ಕೆಲಸ ಮಾಡ್ಬೇಕು.ಆ ಮೂಲಕ ಆಡಳಿತ ಮಂಡಳಿ ಗ್ರೇಟ್ ಆಗ್ಬೇಕಿದೆ.

Spread the love
Leave A Reply

Your email address will not be published.

Flash News