ಬೆಂಗಳೂರಿನಲ್ಲಿ ಬೀದಿನಾಯಿಗಳ ಅಟ್ಟಹಾಸ:ಬಾಲಕನಿಗೆ ಮಾರಣಾಂತಿಕ ಗಾಯ

0

ಬೆಂಗಳೂರು:ರಾಜಧಾನಿ ಬೆಂಗಳೂರಿನಲ್ಲಿ ಬೀದಿ ನಾಯಿಗಳು ಮತ್ತೆ ಅಬ್ಬರಿಸಿವೆ .ಅವುಗಳ  ಅಟ್ಟಹಾಸಕ್ಕೆ ಈ ಬಾರಿ ಮಾರಣಾಂತಿಕವಾಗಿ ಗಾಯಗೊಂಡಿರುವುದು ಬಾಲಕ.ಎಚ್ ಎ ಎಲ್ ಬಳಿಯ ಲಾಲ್ ಬಹದ್ದೂರ್ ಶಾಸ್ತ್ರಿ ನಗರದ ಕೆರೆ ಬಳಿ ಬೀದಿನಾಯಿಗಳು ಬಾಲಕನ ಮೇಲೆರಗಿ  ಆತನನ್ನು ಮಾರಣಾಂತಿಕವಾಗಿ ಗಾಯಗೊಳಿಸಿವೆ.

ಇಂದು ಮಧ್ಯಾಹ್ನ 3 ಕ್ಕೆ ಕೆರೆಯ ವಾಕಿಂಗ್  ಏರಿಯಾದಲ್ಲಿ ಅಡ್ಡಾಡಿಕೊಂಡಿದ್ದ ಬಾಲಕನ ಮೇಲೆ ಅಲ್ಲೇ ಗುಂಪಾಗಿ ಅಡ್ಡಾಡಿಕೊಂಡಿದ್ದ ನಾಲ್ಕೈದು ಬೀದಿನಾಯಿಗಳು ಅಟ್ಯಾಕ್ ಮಾಡಿವೆ.ಬಾಲಕನ  ತೊಡೆ ಹಾಗೂ ಮರ್ಮಾಂಗ ಭಾಗಕ್ಕೆ ಬಾಯಿ ಹಾಕಿ ಆತನನ್ನು ಎಳೆದಾಡುತ್ತಿದ್ದ ಸನ್ನಿವೇಶ ನೋಡಿ ತಕ್ಷಣಕ್ಕೆ ಓಡಿ ಬಂದ ಸತೀಶ್ ಹಾಗೂ ಪಪ್ಪು ಎಂಬಿಬ್ಬರು ಆತನನ್ನು ನಾಯಿಗಳಿಂದ ರಕ್ಷಿಸಿ ಓಡಿಸಿದ್ದಾರೆ.

ತೊಡೆ ಹಾಗೂ ಮರ್ಮಾಂಗ  ಭಾಗದಲ್ಲಿ ನಾಯಿಗಳ ದಾಳಿಯಿಂದಾಗಿ ಗಂಭೀರ ಗಾಯಗಳಾಗಿರುವ ಬಾಲಕನನ್ನು ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ.ಸಧ್ಯಕ್ಕೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕ ಸುರಕ್ಷಿತವಾಗಿದ್ದು ಆತನ ಪೋಷಕರು ಬಿಬಿಎಂಪಿ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Spread the love
Leave A Reply

Your email address will not be published.

Flash News