ಪ್ರಿಯಕರನ ಜೊತೆ ಸೇರಿ ಹೆತ್ತಮ್ಮನಿಗೆ ಮೂಟೆ ಕಟ್ಟಿದ ನಿರ್ದಯಿ ಮಗಳು

0
ಮಗಳಿಂದಲೇ ಕೊಲೆಯಾದ ತಾಯಿ ನಿರ್ಮಲಾ
ಮಗಳಿಂದಲೇ ಕೊಲೆಯಾದ ತಾಯಿ ನಿರ್ಮಲಾ
ಪ್ರಿಯಕರನ ಜತೆ ಸೇರಿ ತಾಯಿಯನ್ನೇ ಕೊಂದು ಮುಗಿಸಿದ ಮಗಳು ಅಮೃತಾ
ಪ್ರಿಯಕರನ ಜತೆ ಸೇರಿ ತಾಯಿಯನ್ನೇ ಕೊಂದು ಮುಗಿಸಿದ ಮಗಳು ಅಮೃತಾ

ಬೆಂಗಳೂರು:ಇನ್ನು ಅದೆಂತೆಂಥಾ ಸುದ್ದಿ ನೋಡ್ಬೇಕೋ..ಕೇಳ್ಬೇಕೋ ಗೊತ್ತಾಗ್ತಿಲ್ಲ.ಅದಕ್ಕೆ ಸೇರ್ಪಡೆ  ಎನ್ನುವಂತೆ ಹೊತ್ತು ಹೆತ್ತು ಸಾಕಿ ಬೆಳೆಸಿದ ತಾಯಿಯನ್ನೇ ಮಗಳೊಬ್ಬಳು ಪ್ರಿಯಕರನ ಜತೆ ಸೇರ್ಕಂಡು ಮುಗಿಸಿ ಸಾಕ್ಷ್ಯನೇ ಉಳಿಯಬಾರದೆಂದು ತಮ್ಮನನ್ನೂ ಮುಗಿಸಲು ಯತ್ನಿಸಿದ ವಿಕೃತಿಯ ಘಟನೆಗೆ ರಾಜಧಾನಿ ಬೆಂಗಳೂರು ಸಾಕ್ಷಿಯಾಗಿದೆ.

ಸಾಲ ಮಾಡ್ಕೊಂಡಿದ್ದ ವಿಚಾರವಾಗಿ ತಾಯಿ ನಿರ್ಮಲಾರ ಜತೆ ಮಗಳು ಅಮೃತ ಪದೇ ಪದೇ ಗಲಾಟೆ ಮಾಡುತ್ತಿದ್ದಳು ಎನ್ನಲಾಗಿದೆ.ಸಿಂಪೋನಿ ಎನ್ನುವ ಸಾಫ್ಟ್ ವೇರ್ ಕಂಪೆನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಅಮೃತ  ಓರ್ವನನ್ನು ಇಷ್ಟಪಡುತ್ತಿದ್ದಳು.ಆತನ ಜತೆಗೆ ತುಂಬಾ ಸಲುಗೆ ಇರುತ್ತಿದ್ದ ವಿಚಾರವನ್ನು ತಾಯಿ ಹಾಗೂ ತಮ್ಮ ವಿರೋಧಿಸುತ್ತಿದ್ದರೆನ್ನಲಾಗಿದೆ.

ಮಾಡಿಕೊಂಡ ಸಾಲ ತೀರಿಸಲು ಹಣ ಕೊಡು ಎಂದು ತಾಯಿಯನ್ನು ಪದೇ ಪದೇ ಪೀಡಿಸುತ್ತಿದ್ದಳಲ್ಲದೇ ತನ್ನ ಪ್ರೀತಿಗೆ ಒಪ್ಪಿಗೆ ಕೊಡು ಎಂದು ಸತಾಯಿಸುತ್ತಿದ್ದ ಮಗಳಿಗೆ ಚೆನ್ನಾಗಿ ಬೈಯ್ದು ಬುದ್ಧಿ ಹೇಳಿದ್ದಳು ತಾಯಿ ಹಾಗೂ ತಮ್ಮ ಹರೀಶ್.ಆದ್ರೆ ನಿಮ್ಮನ್ನು ಕೊಂದಾದ್ರೂ ಪ್ರೀತಿಯನ್ನು ಪಡೆಯತ್ತೇನೆ ಎಂದು ಆಗಾಗ ಹೇಳುತ್ತಿದ್ದಳು.ಆದ್ರೆ ಇದನ್ನು ಗಂಭೀರವಾಗಿ ತೆಗೆದುಕೊಳ್ಳದ ತಾಯಿ ಹಾಗೂ ಮಗನನ್ನು ಆಕೆ ಎಂದುಕೊಂಡಂತೆಯೇ ಮಸಣಕ್ಕೆ ಸೇರಿಸಿದ್ದಾಳೆ.

ಕೆ ಆರ್ ಪುರಂನ‌ ಅಕ್ಷಯ್ ನಗರದಲ್ಲಿ ವಾಸವಾಗಿದ್ದಈ ಕುಟುಂಬದಲ್ಲಿ ಕಳೆದ ಒಂದನೇ ತಾರೀಖು ಗಲಾಟೆಯಾಗಿದೆ.ಅಕ್ಕಪಕ್ಕದವರು ಕೂಡ ಮಾಮೂಲಲ್ವಾ ಎಂದುಕೊಂಡು ಸುಮ್ಮನಾಗಿದ್ದಾರೆ.ಆದ್ರೆ ಅದೇ ವೇಳೆ ಪಲ್ಸರ್ ಬೈಕ್ ನಲ್ಲಿ ತನ್ನ ಪ್ರಿಯಕರನನ್ನು ಕರೆಯಿಸಿಕೊಂಡಿರುವ ಆಕೆ ತಾಯಿಗೆ ಚಾಕುವಿನಿಂದ ಇರಿದು ಕೊಂದೇ ಬಿಟ್ಟಿದ್ದಾಳೆ.ನಂತರ ಇದಕ್ಕೆ ಸಾಕ್ಷಿಯಾಗಿದ್ದ ತಮ್ಮನನ್ನು  ಕೊಲ್ಲಲು ಯತ್ನಿಸುತ್ತಾಳೆ.ಇದಕ್ಕೆ ಆಕೆಯ ಪ್ರಿಯಕರ ಕೂಡ ಸಾಥ್ ಕೊಟ್ಟಿದ್ದಾನೆ.ಆದ್ರೆ ಕಿರುಚಾಡಿ,ಅರಚಾಡಿ ಹೇಗೆ ತಪ್ಪಿಸಿಕೊಂಡಿದ್ದಾನೆ.ನಂತರ ಇಬ್ಬರೂ ಅಲ್ಲಿಂದ ಎಸ್ಕೇಪ್.

ಘಟನೆ ಬಗ್ಗೆ ತಮ್ಮ ಹರೀಶ್ ತಕ್ಷಣಕ್ಕೆ ಪೊಲೀಸರಿಗೆ ತಿಳಿಸಿದ್ದಾನೆ.ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ನಾಪತ್ತೆಯಾಗಿರುವ ಮಗಳು ಹಾಗೂ ಪ್ರಿಯಕರನ ಹುಡುಕಾಟದಲ್ಲಿ ನಿರತವಾಗಿದ್ದಾರೆ. 

Spread the love
Leave A Reply

Your email address will not be published.

Flash News