ಜಾಹಿರಾತು ವಿಷಯದಲ್ಲಿ ನಟ ಕಿಚ್ಚ ಸುದೀಪ್ ಗೇ ಪ್ರತ್ಯೇಕ ಕಾನೂನಿದ್ಯಾ?

0

ಬೆಂಗಳೂರು:ಕಾನೂನು ಎಲ್ಲರಿಗೂ ಒಂದೇ..ಅವ್ರು ಗಣ್ಯ ವ್ಯಕ್ತಿಯಾಗಿರ್ಲಿ.ಜನ ಸಾಮಾನ್ಯನಾಗಿರ್ಲಿ,ಆದ್ರೆ ಈ ನೆಲದ  ದೌರ್ಭಾಗ್ಯ ಏನ್ ಗೊತ್ತಾ? ತಪ್ಪು ಸಾಮಾನ್ಯ ಮಾಡುದ್ರೆ ಆತನನ್ನು ಶಿಕ್ಷಿಸೊಕ್ಕೆ ಅದಕ್ಕೆ ಸಂಬಂಧಪಟ್ಟ  ಇಲಾಖೆಗಳವ್ರು ಹದ್ದಿನಂತೆ ಹೊಂಚಾಕಿ ಬಲಿ ಹಾಕ್ತಾರೆ,ಅದೇ ಬದ್ಧತೆ-ದಕ್ಷತೆ-ಅವಸರವನ್ನು ಗಣ್ಯರ ವಿಷಯದಲ್ಲಿ ಪ್ರದರ್ಶಿಸೋದೇ ಇಲ್ಲ.ಅದಕ್ಕೆ ನಮ್ ದೇಶ ಹಾಗೂ ಇಲ್ಲಿನ ವ್ಯವಸ್ಥೆ ಇನ್ನೂ ಹೀಗೆನೇ ಇದೆ..ಹೀಗೇನೇ ಇರುತ್ತೆ ಕೂಡ.

ಇದನ್ನೆಲ್ಲಾ ಹೇಳೊಕ್ಕೆ ಕಾರಣವೂ ಇದೆ.ಜಾಹಿರಾತು ಹೋರ್ಡಿಂಗ್,ಫ್ಲೆಕ್ಸ್,ಬ್ಯಾನರ್ಸ್ ಗಳನ್ನೆಲ್ಲಾ ಘನತವೆತ್ತ ಕೋರ್ಟ್ ಸಧ್ಯ ಬೆಂಗಳೂರಿನಲ್ಲಿ ಕಂಪ್ಲೀಟಾಗಿ ಬ್ಯಾನ್ ಮಾಡಿದೆ.ಅದು ಪಾಲನೆಯೂ ಆಗ್ತಿದೆ.ಆದ್ರೆ ಕೆಲವೊಂದು ಸನ್ನಿವೇಶಗಳಲ್ಲಿ ಅದನ್ನು ಪಾಲಿಸ್ಲಿಕ್ಕೆ ಬಿಬಿಎಂಪಿಯ ಆಡಳಿತ ವ್ಯವಸ್ಥೆ ಹಿಂದೇಟ್ ಹಾಕ್ತಿದೆ.ಚಿತ್ರನಟ ಸುದೀಪ್ ವಿಷಯದಲ್ಲಿ ಆಗಿರೋದು ಅದೇ..

ಜೆಪಿ ನಗರದಲ್ಲಿರುವ(ಜರಗನಹಳ್ಳಿ ವಾರ್ಡ್-186) ನಟ ಕಿಚ್ಚ ಸುದೀಪ್ ಮನೆ ಮುಂದೆ ಹಾಗೂ ಮೇಲೆ ಸಂಚಿಂತ್ ಸಂಜೀವ್ ಅವರ ಹುಟ್ಟುಹಬ್ಬದ ಫ್ಲೆಕ್ಸ್ ಗಳು ರಾರಾಜಿಸ್ತಿವೆ.ಫ್ಲೆಕ್ಸ್ ಗಳನ್ನು ಹೈಕೋರ್ಟ್ ಆದೇಶದ ವಿರುದ್ದವಾಗಿ ಹಾಕಿರುವುದು ಅಕ್ಷಮ್ಯ ಹಾಗೂ ನ್ಯಾಯಾಂಗ ನಿಂದನೆಯಾಗುತ್ತೆ.ಈ ಫ್ಲೆಕ್ಸ್ ಹಾಗೂ ಬ್ಯಾನರ್ಸ್ ಗಳನ್ನು ಹಾಕಿದವ್ರು ಯಾರು ಎನ್ನೋದು ಸಧ್ಯಕ್ಕೆ ತಿಳಿದುಬಂದಿಲ್ಲ.ಆದ್ರೆ ಸುದೀಪ್ ಹಾಗೂ ಅವರ ಕುಟುಂಬದ ಗಮನಕ್ಕೆ ಬಾರದೆ ಬೃಹತ್  ಫ್ಲೆಕ್ಸ್ ಗಳನ್ನು  ಹಾಕಿರಲು ಸಾಧ್ಯವೇ ಇಲ್ಲ.ಹಾಗಾಗಿ ನ್ಯಾಯಾಂಗ ನಿಂದನೆಯ ಆರೋಪಕ್ಕೂ ಸುದೀಪ್ ಮನೆಯವ್ರು ತುತ್ತಾಗಲೇಬೇಕಾಗುತ್ತೆ.ಹಾಗಾಗಿ ಇದರ ನೈತಿಕ ಹೊಣೆಯನ್ನು ಸುದೀಪ್ ಕುಟುಂಬ ಹೊರಲೇಬೇಕಾಗುತ್ತೆ.

ಫ್ಲೆಕ್ಸ್-ಬ್ಯಾನರ್ಸ್ ಗಳಿಗೆ ಸಂಬಂಧಿಸಿದಂತೆ ಪರ್ಮಿಷನ್ ಕೊಡುವ ಹೊಣೆಗಾರಿಕೆ ಮೊದ್ಲಿಂದ್ಲೂ ಸಹಾಯಕ ಕಂದಾಯಾಧಿಕಾರಿಗಳ ಮೇಲಿದೆ.ಜಾಹಿರಾತು ಬ್ಯಾನ್ ಆದ್ಮೇಲೂ ಎಲ್ಲೇ ವಯಲೇಷನ್ ಆದ್ರೂ ಅದರ ವಿರುದ್ದ ಕಾನೂನಾತ್ಮಕ ಕ್ರಮ ಕೈಗೊಳ್ಳೋದು ಅವರ ಹೊಣೆಗಾರಿಕೆ.ಆದ್ರೆ ಇದರ ಬಗ್ಗೆ ಯಾವ್ದೇ ಮಾಹಿತಿ ತಮಗೆ ಇಲ್ಲ ಎನ್ನುತ್ತಾರೆ ಈ ವಾರ್ಡ್ ನ ಅಧಿಕಾರಿಗಳು.ವಿಚಿತ್ರ ಹಾಗು ವಿಶೇಷ ಎಂದ್ರೆ  ಜೆಪಿನಗರ ವಾರ್ಡ್ ಹಾಗೂ ಜರಗನಹಳ್ಳಿ ವಾರ್ಡ್ ನ ಬಾರ್ಡರ್ ನಲ್ಲಿ ಸುದೀಪ್ ಮನೆ ಬರುತ್ತೆ.ಎರಡೂ ವಾರ್ಡ್ ಗಳಲ್ಲೂ ಫ್ಲೆಕ್ಸ್ ಗಳನ್ನು ಹಾಕಲಾಗಿದೆ.ಹಾಗಾಗಿ ಎರಡೂ ವಾರ್ಡ್ ಗಳ ಸಹಾಯಕ ಕಂದಾಯಾಧಿಕಾರಿಗಳು ಇದರ ಹೊಣೆ ಹೊರಲೇಬೇಕಾಗುತ್ತೆ,.ಆದ್ರೆ ದುರಾದೃಷ್ಟಕರ ಎಂದ್ರೆ ಯಾರೊಬ್ಬರಿಗೂ ಇದರ ಮಾಹಿತಿಯೇ ಇಲ್ಲ.

ಇನ್ನು ವಾರ್ಡ್ ನ ಕಾರ್ಪೊರೇಟರ್ ಶೋಭಾ ಮುನಿರಾಮ್  ಅವರಿಗೆ ಈ ಬಗ್ಗೆ ಕೇಳಿದ್ರೆ ಹೌದಾ ಎಂದು ನಮ್ಮನ್ನೇ ಪ್ರಶ್ನಿಸ್ತಾರೆ.ನಾಳೆ ಬೆಳಗ್ಗೆ ಇದರ ಬಗ್ಗೆ ಕ್ರಮ ಕೈಗೊಳ್ತೇನೆ ಎನ್ತಾರೆ.ಬಹುಷಃ ಸುದೀಪ್ ಅವರು ಒಬ್ಬ ಸೆಲಬ್ರಿಟಿ,ಅವರ ವಿರುದ್ದ ಕ್ರಮ ಕೈಗೊಂಡ್ರೆ ನಮ್ ಬಗ್ಗೆ ಏನ್ ಬೇಜಾರ್ ಪಡ್ಕೋತಾರೋ ಎನ್ನುವ ಅಳುಕಿನಿಂದ ಗೊತ್ತಿದ್ದೇ ಕಾರ್ಪೊರೇಟರ್ ಇದರ ಗೋಜಿಗೆ ಹೋಗಿಲ್ವೇನೋ ಗೊತ್ತಾಗ್ತಿಲ್ಲ.ಮೇಡಮ್ ಹೋಗ್ಲಿ,ವಾರ್ಡ್ ನಲ್ಲಿ ಟೂ ವೀಲರ್ ಹಾಕ್ಕೊಂಡು ಪ್ರತಿಯೊಂದನ್ನು ಪರಿಶೀಲಿಸುವ ಕಾರ್ಪೊರೇಟರ್  ಅವರ ಪತಿ ಕಮ್  ಜಿಪಿಎ ಹೋಲ್ಡರ್ ಮುನಿರಾಮ್ ಅವರ ಗಮನಕ್ಕೆ ರಾಜಾರೋಶವಾಗಿ ನಡೆದ ಈ ಸಂಗತಿ ಬರಲಿಲ್ಲ ಎನ್ನೋದು ನಂಬೋ ವಿಷಯವೇ ಅಲ್ಲ.ಸುದೀಪ್ ಸೆಲಬ್ರಿಟಿ,ಅವರ ಮನೆ ಮುಂದೆ ಹಾಕಿರುವ ಫ್ಲೆಕ್ಸ್ ಗಳನ್ನು ತೆರವು ಮಾಡಿದ್ರೆ ಸುದೀಪ್ ಸೇರಿದಂತೆ ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸ್ತಾರೆನ್ನೋ ಕಾರಣಕ್ಕೆ ಕಾರ್ಪೊರೇಟರ್ ಹಾಗೂ ಅಧಿಕಾರಿಗಳು ಗೊತ್ತಿದ್ದೂ ಅವನ್ನು ತೆರವು ಮಾಡುವ ಗೋಜಿಗೆ ಹೋಗಿಲ್ಲ ಎನ್ನೋದು ಸ್ಥಳೀಯರ ಆರೋಪ.

 ಸುದೀಪ್ ಅಷ್ಟೇ ಅಲ್ಲ ಯಾವ್ದೇ ದೊಡ್ಡ ಸೆಲಬ್ರಿಟಿ ಇರ್ಲಿ,ಕಾನೂನಿಗೆ ಗೌರವ ಕೊಡೋದು ಅವರ ಹೊಣೆಗಾರಿಕೆ ಹಾಗೂ ಬಾಧ್ಯಸ್ಥಿಕೆ.ಆದ್ರೆ ತನ್ನ ಸಂಬಂಧಿಯ ಬೃಹತ್ ಪ್ಲೆಕ್ಸ್ ಗಳು ಮನೆ ಮುಂದೆ ಮೇಲೆಲ್ಲಾ ರಾರಾಜಿಸ್ತಿರುವುದನ್ನು ಕಂಡೂ ಸುಮ್ಮನಿರೋದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವಂಥದ್ದಲ್ಲ. ಸಮಾಜದ ಜವಾಬ್ದಾರಿಯುತ ಗಣ್ತರಾಗಿ ಅವರು ಈ ಫ್ಲೆಕ್ಸ್ ಗಳಿಗೆ ಅವಕಾಶ ಕೊಡದಿದ್ರೆ ದೊಡ್ಡವರೆನಿಸಿಕೊಳ್ತಿದ್ದರೇನೋ..ಕಾನೂನಿಗೆ ಗೌರವ ಕೊಟ್ಟಂತಾಗ್ತಿತ್ತು.ಆದ್ರೆ ಅದ್ಯಾವುದನ್ನೂ ಮಾಡದೆ ಕೋರ್ಟ್ ಆದೇಶವನ್ನು ಉಲ್ಲಂಘಿಸ್ಲಿಕ್ಕೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಅವಕಾಶ ಮಾಡಿಕೊಟ್ಟಿದ್ದು ಮಾತ್ರ ನ್ಯಾಯಾಂಗ ನಿಂದನೆ ಅಲ್ದೇ ಇನ್ನೇನು..

Spread the love
Leave A Reply

Your email address will not be published.

Flash News