ಅಧಮ್ಯ ಚೇತನಕ್ಕೆ ಇಂದಿರಾ ಕ್ಯಾಂಟೀನ್ ಗುತ್ತಿಗೆ:ರಾಜಕೀಯ ಲಾಭಿ ಗುಮಾನಿ

0

ಬೆಂಗಳೂರು:ಮಾಜಿ ಕೇಂದ್ರ ಸಚಿವ ದಿವಂಗತ ಅನಂತಕುಮಾರ್ ಅವರ ಧರ್ಮಪತ್ನಿ ತೇಜಸ್ವಿನಿ ಅವರ ಅಧಮ್ಯ ಚೇತನ ಸಂಸ್ಥೆಗೆ ಇಂದಿರಾ ಕ್ಯಾಂಟೀನ್ ಆಹಾರ ಪೂರೈಕೆಯ ಗುತ್ತಿಗೆ ದೊರೆತಿದೆ.ಐದು ಸಂಸ್ಥೆಗಳು ಪಾಲ್ಗೊಂಡಿದ್ದ ಬಿಡ್ ನಲ್ಲಿ ಅಂತಿಮವಾಗಿ ಅಧಮ್ಯ ಚೇತನ ಸಂಸ್ಥೆಗೆ ಟೆಂಡರ್ ದೊರೆತಿದೆ.ಆದ್ರೆ ವಿಚಿತ್ರ ಏನ್ ಗೊತ್ತಾ,ಈ ವಿಷಯ ಬಿಬಿಎಂಪಿ ಮೇಯರ್ ಅವರಿಗೂ ಗೊತ್ತಿಲ್ಲ.ಓರ್ವ ಮೇಯರ್ ಗೇನೆ ಈ ವಿಷಯದ ಮಾಹಿತಿನೇ ಇಲ್ಲ ಎಂದ್ರೆ ಇದಕ್ಕೆ ಏನನ್ನಬೇಕೋ ಗೊತ್ತಾಗ್ತಿಲ್ಲ.

 ಸಾಮಾಜಿಕ ಕ್ಷೇತ್ರದಲ್ಲಿ ಅಧಮ್ಯ ಚೇತನದ ಕಾರ್ಯಕ್ಕೆ ಶ್ಲಾಘನೀಯ.ಹಾಗೆಯೇ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು  ಅನೇಕ ಕಡೆ ಸಮರ್ಥವಾಗಿ ನಿಭಾಯಿಸುತ್ತಿರುವ ಹೆಗ್ಗಳಿಕೆಯೂ ಅದಕ್ಕಿದೆ.ಈ ವಿಷಯದಲ್ಲಿ ಯಾರದೇ ಆಕ್ಷೇಪವಿಲ್ಲ.ಆದ್ರೆ ಇಂದಿರಾ ಕ್ಯಾಂಟೀನ್ ಗೆ ಸಂಬಂಧಿಸಿದಂತೆ ಗುತ್ತಿಗೆ ದೊರೆತಿರುವುದರ ಹಿಂದೆ ಬಿಜೆಪಿ ಸರ್ಕಾರದ ಕೈವಾಡ ಇರುವ ಅನುಮಾನಗಳು ವ್ಯಕ್ತವಾಗಿವೆ.ಅಧಮ್ಯ ಚೇತನ ಸಂಸ್ಥೆ ಇಂದಿರಾ ಕ್ಯಾಂಟೀನ್ ಆಹಾರ ಪೂರೈಕೆಯ ಬಿಡ್ ನ ರೇಸ್ ನಲ್ಲಿದ್ದುದು ಎಲ್ಲರಿಗೂ ಗೊತ್ತಿದ್ದ ವಿಚಾರ.ಕಳೆದ ಬಾರಿಯ ಚೆಫ್ ಟಾಕ್,ರಿವಾರ್ಡ್ ಸಂಸ್ಥೆಗಳು,ಇಸ್ಕಾನ್ ನಂಥ ಸಂಸ್ಥೆಗಳು ಈ ಬಾರಿಯ ಬಿಡ್ ನಲ್ಲಿವೆ.

ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ಅವರೇ ಅಧಮ್ಯ ಚೇತನಕ್ಕೆ ಗುತ್ತಿಗೆ ಸಿಕ್ಕಿರೋದು ಸತ್ಯ.ಬೇರೆ ಸಂಸ್ಥೆಗಳ ಹೋಲಿಕೆಯಲ್ಲಿ ಲೋಯರ್ ಬಿಡ್ ಮಾಡಿದ್ದು ಅಧಮ್ಯ ಚೇತನ ಸಂಸ್ಥೆ.ಇತರೆ ಸಂಸ್ಥೆಗಳ ಹೋಲಿಕೆಯಲ್ಲಿ 6 ರೂ ಗಿಂತ ಕಡ್ಮೆ ಅಧಮ್ಯ ಚೇತನದವ್ರು ಬಿಡ್ ಮಾಡಿದ್ರು.ಲೋಯರ್ ಬಿಡ್ ಯಾರು ಮಾಡಿರುತ್ತಾರೋ ಅವರಿಗೆ ಗುತ್ತಿಗೆ ನೀಡೋದು ನಿಯಮ.ಆ ನಿಯಮದ ಅನ್ವಯವೇ ಅಧಮ್ಯ ಚೇತನಕ್ಕೆ ಗುತ್ತಿಗೆ ಕೊಡಲಾಗಿದೆ ಅಷ್ಟೇ,ಟೆಂಡರ್ ಕರೆದದ್ದು ಒಂದು ಝೋನ್ ಗೆ ಮಾತ್ರ.ಉಳಿದ 7 ವಲಯಗಳ ಗುತ್ತಿಗೆಯನ್ನು ಇನ್ನೂ ಕರೆದಿಲ್ಲ ಎನ್ತಾರೆ.

ಅಧಮ್ಯ ಚೇತನಕ್ಕೆ ಗುತ್ತಿಗೆ ಸಿಕ್ಕಿರೋದ್ರ ಹಿಂದೆ ಬಿಜೆಪಿ ಸರ್ಕಾರದ ಕೈವಾಡ ಇದೆ ಎನ್ನುವ ಮಾತು ಕೇಳಿಬಂದಿದೆ.ಬೇರೆ ಸಂಸ್ಥೆಗಳನ್ನು ಬೇಕಂತಲೇ ಹಿಂದಿಕ್ಕಿ,ಅವರಿಂದ ಕಡ್ಮೆ ಬಿಡ್ ಮಾಡಿಸಿ ಗುತ್ತಿಗೆ ನೀಡಲಾಗಿದೆ.ಇದರ ಹಿಂದೆ ಬಿಜೆಪಿಯ ದೊಡ್ಡ ವ್ಯಕ್ತಿಗಳ ಕೈವಾಡ ಇದೆ.ಅಲ್ಲದೇ ತೇಜಸ್ವಿನಿ ಕೂಡ ತನ್ನ ಸಂಸ್ಥೆಗೇನೆ ಗುತ್ತಿಗೆ ಸಿಗ್ಬೇಕೆನ್ನುವ ಕಾರಣಕ್ಕೆ ದೊಡ್ಡ ಮಟ್ಟದಲ್ಲಿ ಲಾಭಿ ಮಾಡಿ ಯಶಸ್ವಿಯಾಗಿದ್ದಾರೆ.ಆದ್ರೆ ಅಧಮ್ಯ ಚೇತನದ ಬಂಡವಾಳ ಏನನ್ನುವುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ ಎನ್ತಾರೆ ಸಾಮಾಜಿಕ ಕಾರ್ಯಕರ್ತ ವಿಜಯ ಸಾರಥಿ.

  ಈರುಳ್ಳಿ-ಬೆಳ್ಳುಳ್ಳಿಯನ್ನು ಊಟದಲ್ಲಿ ಬೆರೆಸುವ ವಿಚಾರದಲ್ಲಿ ಮೊದಲಿಂದಲೂ ಸಾಕಷ್ಟು ಗೊಂದಲಗಳಿವೆ.ಇಸ್ಕಾನ್ ಗೆ ಸಿಗ್ಬೇಕಾದ ಗುತ್ತಿಗೆ ಕಳೆದ ಬಾರಿ ಮಿಸ್ ಆದದ್ದು ಇದೇ ಕಾರಣಕ್ಕೆ.ಗುತ್ತಿಗೆ ಬಿಟ್ರೂ ಬಿಟ್ಟೇವು..ಆದ್ರೆ ಈರುಳ್ಳಿ-ಬೆಳ್ಳುಳ್ಳಿ ಮಾತ್ರ ಬೆರೆಸೊಲ್ಲ ಎನ್ನುವ ವಾದಕ್ಕೆ ಕಟ್ಟುಬಿದ್ದಿದ್ದರಿಂದಾಗಿಯೇ ಇಸ್ಕಾನ್ ತನಗೆ ದಕ್ಕಬಹುದಾಗಿದ್ದ ಗುತ್ತಿಗೆಯನ್ನು ಕಳೆದುಕೊಂಡಿದ್ರು.

ಇದೇ ವಾದವನ್ನು ಅಧಮ್ಯ ಚೇತನ ಮುಂದುವರೆಸುತ್ತಾ,ಅಥ್ವಾ ಆಹಾರಕ್ಕೆ  ಈರುಳ್ಳಿ-ಬೆಳ್ಳುಳ್ಳಿ ಬೆರೆಸಲಾಗ್ತದೆಯಾ ಎನ್ನುವ ಪ್ರಶ್ನೆಗಳಿಗೂ ಉತ್ತರ ಸಿಗ್ಬೇಕಾಗ್ತದೆ.ಒಂದ್ವೇಳೆ ಈರುಳ್ಳಿ-ಬೆಳ್ಳುಳ್ಳಿ ಬಳಸದ ಹೊರತಾಗ್ಯೂ ಅಧಮ್ಯ ಚೇತನಕ್ಕೆ ಇಂದಿರಾ ಕ್ಯಾಂಟೀನ್ ಗುತ್ತಿಗೆ ನೀಡಲಾಗಿದೆ ಎನ್ನೋದಾದ್ರೆ ಅದು ದೊಡ್ಡ ವಿವಾದವನ್ನೇ ಸೃಷ್ಟಿಸುವುದರಲ್ಲಿ ಅನುಮಾನವಿಲ್ಲ.ಇಸ್ಕಾನ್ ಗೊಂದು ನ್ಯಾಯ..,ಅಧಮ್ಯ ಚೇತನಕ್ಕೊಂದು ನ್ಯಾಯನಾ ಎಂದು ಸಾರ್ವಜನಿಕರೇ ಪ್ರಶ್ನೆ ಮಾಡುವ ಸ್ಥಿತಿ ನಿರ್ಮಾಣವಾಗುತ್ತೆ.

ಇಷ್ಟೆಲ್ಲಾ ನಡೆಯುತ್ತಿದ್ದರೂ ಇಂದಿರಾ ಕ್ಯಾಂಟೀನ್ ನ ಒಂದು ವಲಯದ ಗುತ್ತಿಗೆ ಅಧಮ್ಯ ಚೇತನಕ್ಕೆ ಸಿಕ್ಕಿರುವ ಬಗ್ಗೆ ಮೇಯರ್ ಗೌತಮ್ ಗಾಗ್ಲಿ,ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ಗೆ ಇಲ್ಲ ಎಂದ್ರೆ ಈ ಗುತ್ತಿಗೆ ವಿಚಾರ ದೊಡ್ಡ ಮಟ್ಟದಲ್ಲಿ ನಡೆದಿರಬಹುದಾದ ಲಾಭಿ ಎನಿಸಿಕೊಳ್ಳುತ್ತೆ ಎನ್ನೋದು ಹಲವರ ಆರೋಪ.ಅದೇನೇ ಆಗಲಿ ಜನಸಾಮಾನ್ಯದ ಹಸಿವನ್ನು ನೀಗಿಸುವ ಇಂದಿರಾ ಕ್ಯಾಂಟೀನ್ ಆಹಾರ ಪೂರೈಕೆ ಗುತ್ತಿಗೆ ಪಡೆದಿರುವ ಅಧಮ್ಯ ಚೇತನ ಈ ಟಫ್ ಟಾಸ್ಕನ್ನು ಹೇಗೆ ಟ್ಯಾಕಲ್ ಮಾಡುತ್ತೆ.ಆಹಾರದ ಸಂಯೋಜನೆ ಹಾಗು ಗುಣಮಟ್ಟವನ್ನು ಹೇಗೆ ಕಾಯ್ದುಕೊಳ್ಳುತ್ತೆ ಎನ್ನೋದು ಕುತೂಹಲ ಮೂಡಿಸಿದೆ.

Spread the love
Leave A Reply

Your email address will not be published.

Flash News