ಕೊನೆಗೂ ರಾಜಭವನ ತಲುಪಿದ ಪಟ್ಟಿ-10 ಅ(ನ)ರ್ಹರಿಗೆ ಮಂತ್ರಿಗಿರಿ-ಕತ್ತಿ-ಯೋಗಿಗೆ ಕೊಕ್

0

ಬೆಂಗಳೂರು:ರಾಜ್ಯಸರ್ಕಾರದ ಸಂಪುಟ ಸೇರ್ಪಡೆಯ ಪ್ರಹಸನ ಕೊನೆಗು  ಕ್ಲೈಮ್ಯಾಕ್ಲ್ ಹಂತ ತಲುಪಿದೆ. ಕಷ್ಟಕಾಲದಲ್ಲಿ ಬಿಜೆಪಿ ಕೈ ಹಿಡಿದು ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟವರ ಋಣ ತೀರಿಸಿದ್ದಾರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಸಚಿವರಾಗಲಿರುವ 10  ಶಾಸಕರ ಹೆಸರುಗಳನ್ನು ಅಖೈರುಗೊಳಿಸಿ ಅನುಮೋದನೆಗೆ ರಾಜಭವನಕ್ಕೆ ಕಳುಹಿಸಿದ್ದಾರೆ.ಅದರ ಪ್ರತಿ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಲಭ್ಯವಾಗಿದೆ.

10+3 ಎನ್ನುವ  ಅನುಪಾತದಲ್ಲಿ ಮೊದಲು ಸಚಿವ ಸಂಪುಟ ಸೇರ್ಪಡೆ ಫಾರ್ಮೂಲಾದಲ್ಲಿ ನಡೆಯೊಕ್ಕೆ ಸ್ಕೆಚ್ ಹಾಕಲಾಗಿತ್ತು.ಆದ್ರೆ ಕೊನೇ ಗಳಿಗೆಯಲ್ಲಿ ಮೂವರು ಮೂಲ ಬಿಜೆಪಿಗರನ್ನು ಬಿಟ್ಟು ವಲಸಿಗರಿಗೆ ಮಾತ್ರ ಮಣೆ ಹಾಕುವ ನಿರ್ಧಾರಕ್ಕೆ ಬರಲಾಗಿದ್ದು 3 ಮೂಲ ಬಿಜೆಪಿಗರಿಗೆ ತೀವ್ರ ನಿರಾಶೆಯಾದಂತಾಗಿದೆ.

ಅಂದ್ಹಾಗೆ ಬಿಜೆಪಿಗೆ ಬೆಂಬಲ ಕೊಟ್ಟು ಅನರ್ಹರಾಗಿ ಕೊನೆಗೆ ಬೈ ಎಲೆಕ್ಷನ್ ನಲ್ಲಿ ಗೆದ್ದ 10 ಶಾಸಕರಿಗೆ ಯಡಿಯೂರಪ್ಪ ಹೇಳಿದ್ದಂತೆ ಮಾತು ಕೊಟ್ಟಂತೆಯೇ ಸಚಿವ ಸ್ಥಾನ ಕೊಡಲಾಗಿದೆ.ಈ ಪ್ರಯತ್ನದಲ್ಲಿ ಯಡಿಯೂರಪ್ಪ ಸವಾಲುಗಳನ್ನು ಎದುರಿಸಿ ಗೆದ್ದು ಬೀಗಿದ್ದಾರೆ.ಮಾತು ಉಳಿಸಿಕೊಳ್ಳುವುದರಲ್ಲಿ ಯಡಿಯೂರಪ್ಪ ಸದಾ ಮುಂದು ಎನ್ನುವುದನ್ನು ಮತ್ತೆ ಪ್ರೂವ್ ಮಾಡಿದ್ದಾರೆ.ಸ್ವಪಕ್ಷೀಯರ ವಿರೋಧವನ್ನು ಲೆಕ್ಕಿಸದೆ ಹೋದಲ್ಲಿ,ಬಂದಲ್ಲಿ ನನ್ನ ಕಷ್ಟಕಾಲಕ್ಕೆ ಸಹಕರಿಸಿದ ಶಾಸಕರನ್ನು ಕೈ ಬಿಡೊಲ್ಲ ಎಂದಿದ್ದ ಮಾತುಗಳನ್ನು ಎಷ್ಟೇ ವಿರೋಧದದ ಹೊರತಾಗ್ಯೂ ಅನುಷ್ಠಾನಕ್ಕೆ ತರುವ ಮೂಲಕ ರಾಜಕೀಯದಲ್ಲಿ ತೀರಾ ದುರ್ಲಭವಾಗಿರುವ ವಚನ ಪರಿಪಾಲನೆಯನ್ನು ಎತ್ತಿ ಹಿಡಿದು ನಾಲಿಗೆಯನ್ನು ಉಳಿಸಿಕೊಂಡಿದ್ದಾರೆ.

ಅಂದ್ಹಾಗೆ  ಯಶವಂತಪುರ ಕ್ಷೇತ್ರ ಶಾಸಕ ಎಸ್.ಟಿ ಸೋಮಶೇಖರ ಗೌಡ,ಗೊಕಾಕ್ ನ ರಮೇಶ ಜಾರಕಿಹೊಳಿ,ಬಳ್ಳಾರಿ ಜಿಲ್ಲೆ ವಿಜಯನಗರ ಆನಂದ್ ಸಿಂಗ್,ಚಿಕ್ಕಾಬಳ್ಳಾಪುರ ಎಮ್ಮೆಲ್ಲೆ ಡಾ.ಕೆ.ಸುಧಾಕರ್,ಕೆ.ಆರ್ ಪುರಂನ ಭೈರತಿ ಬಸವರಾಜ್,ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್,ಹಿರೇಕೆರೂರು ಶಾಸಕ ಬಿ.ಸಿ ಪಾಟೀಲ್,ಮಹಾಲಕ್ಷ್ಮಿ ಲೇ ಔಟ್ ಶಾಸಕ ಕೆ.ಗೋಪಾಲಯ್ಯ,ಕೆ.ಆರ್ ಪೇಟೆ ಎಮ್ಮೆಲ್ಲೆ ನಾರಾಯಣಗೌಡ ಹಾಗೂ ಶ್ರೀಮಂತ ಪಾಟೀಲ ಅವರಿಗೆ ಸಚಿವ ಸ್ಥಾನ ಪಕ್ಕಾ ಆಗಿದ್ದು ಅವರ ಹೆಸರುಗಳುಳ್ಳ ಪಟ್ಟಿ ಈಗಾಗ್ಲೇ ರಾಜಭವನ ಸೇರಿದೆ.ರಾಜ್ಯಪಾಲ ವಝುಬಾಯಿ ವಾಲಾ ಅವರಿಂದ ಅನುಮೋದನೆಯೂ ಸಿಕ್ಕಿದೆ.

ಆದ್ರೆ ಮಹೇಶ್ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ದಕ್ಕದಿರುವುದು ಆಶ್ಚರ್ಯ ಉಂಟುಮಾಡಿದೆ.ಆದ್ರೆ ಮುಂದಿನ ಅವಧಿಯಲ್ಲಿ ಅವರನ್ನು ಪರಿಗಣಿಸುವುದಾಗಿ ಯಡಿಯೂರಪ್ಪ ಹೇಳಿದ್ದಾರೆ.ಇನ್ನು ಮೂಲ ಬಿಜೆಪಿಗರ ಪೈಕಿ ಬಹುತೇಕ ಸಚಿವ ಸಂಪುಟ ಸೇರಲಿದ್ದ ಉಮೇಶ ಕತ್ತಿ ಹಾಗೂ ಸಿ.ಪಿ ಯೋಗೇಶ್ವರ್ ಹೆಸರನ್ನು ನಾನಾ ಕಾರಣಗಳ ಹಿನ್ನಲೆಯಲ್ಲಿ ಕೈ ಬಿಡಲಾಗಿದೆ.ಮೂಲ ಬಿಜೆಪಿಗರನ್ನು ಇದು ಮೇಲ್ನೋಟಕ್ಕೆ ಸಮಾಧಾನ ಪಡಿಸಿದಂತೆ ಕಂಡ್ರೂ ಒಳಗೊಳಗೆ ಕುದಿಯುತ್ತಿರುವ ಕತ್ತಿ ಬಂಡಾಯದ ಬಾವುಟ ಹಾರಿಸುವ ಎಲ್ಲಾ ಸೂಚನೆ ನೀಡಿದ್ದಾರೆ.ಇದು ಯಾವಾಗ ಎನ್ನುವುದು ಮಾತ್ರ ಸ್ಪಷ್ಟವಾಗಿಲ್ಲ.

 

Spread the love
Leave A Reply

Your email address will not be published.

Flash News