“ಹಂದಿ ಅಣ್ಣಿ” ತಮ್ಮ ಗಿರಿ ಮರ್ಡರ್: ಮತ್ತೆ ಶುರುವಾಗುತ್ತಾ ಗ್ಯಾಂಗ್ ವಾರ್-ಬೀಳಲಿವೆಯಾ ಹೆಣಗಳು?

0
ಕೊಲೆಯಾದ ರೌಡಿ "ಹಂದಿ" ಗಿರಿ
ಕೊಲೆಯಾದ ರೌಡಿ “ಹಂದಿ” ಗಿರಿ

ಶಿವಮೊಗ್ಗ: ಲವಕುಶ..ಈ ರೌಡಿಗಳ ಹೆಸರು ಕೇಳದಿರೋರೇ ಕಡ್ಮೆ..ಈ ಪಾತಕಿ ಸಹೋದರರ ಹೆಸ್ರು ಕೇಳಿದ್ರೆ ಮಲೆನಾಡಿಗೆ ಮಲೆನಾಡು ಬೆಚ್ಚಿಬೀಳುತ್ತಿದ್ದ ಕಾಲವಿತ್ತು.ಮಲೆನಾಡಿಗರ ನೆಮ್ಮದಿಯನ್ನು ಕಸಿದುಕೊಂಡು ಅಕ್ಷರಶಃ ಭೀತಿಯ ವಾತಾವರಣ ಸೃಷ್ಟಿಸಿದ್ದ ಮೋಸ್ಟ್ ನಟೋರಿಯಸ್ ಪಾತಕಿ ಬ್ರದರ್ಸ್ ಅವ್ರು.ಹತ್ತಲವು ಬಾರಿ ಜೈಲಿಗೆ ಹೋಗಿ ಬಂದ್ರೂ ಬುದ್ಧಿ ಕಲಿಯದ ಈ ಸಹೋದರರ ಅಂತ್ಯ ಮಾತ್ರ ಅತ್ಯಂತ ಭೀಕರ-ಭೀಬತ್ಸ- ಧಾರುಣವಾಗಿತ್ತು. ಆ ಕೊಲೆ ನಡೆದ  ದಿನ ಶಿವಮೊಗ್ಗಕ್ಕೆ ಶಿವಮೊಗ್ಗೆವೇ ನೆಮ್ಮದಿಯ ಮಗ್ಗಲು ಬದ್ಲಿಸಿತ್ತು.ಅವರ ಅಂತ್ಯಕ್ಕೆ ನಾಂದಿ ಹಾಡಿದ ಪಾತಕಿಗಳಿಗೆ ಮನಸಿನೊಳಗೆ ಒಂದ್ ಥ್ಯಾಂಕ್ಸ್ ಹೇಳಿಕೊಂಡಿದ್ರು ಶಿವಮೊಗ್ಗದ ಜನ.

ಇದನ್ನೆಲ್ಲಾ ನೆನಪಿಸಿಕೊಳ್ಳೊಕ್ಕೆ ಒಂದು ಕಾರಣವೂ ಇದೆ.ಲವ ಕುಶ ಎನ್ನುವ ಪಾತಕಿ ಸಹೋದರರಿಗೆ ಮಸಣದ ಹಾದಿ ತೋರಿಸಿದ ಪಾತಕಿಗಳ ಟೀಮ್ ನ್ನು ಲೀಡ್ ಮಾಡಿದ ಹುಡ್ಗ ಹಂದಿ ಅಣ್ಣಿ.ಗೋಣಿಗ ಬೀದಿಯ ಹುಡುಗ.ಆಗಿನ್ನೂ 20ರ ಆಸುಪಾಸು ಆತನಿಗೆ.ಪಾತಕ ಲೋಕದ ಪರಿಚಯವೇ ಇರದ ಆ ಹುಡುಗ ತನ್ನದೇ ಓರಗೆಯ ಹುಡುಗರನ್ನು ಕಟ್ಕೊಂಡು ಸಾಗರ ರಸ್ತೆಯ ಗ್ಯಾರೇಜ್ ವೊಂದ್ರಲ್ಲಿ ಲವಕುಶರನ್ನು ಹಾಡುಹಗಲೇ ಕೊಚ್ಚಿದ್ದನ್ನು ಕಂಡವ್ರು ಇವತ್ತಿಗೂ ಬೆಚ್ಚಿಬೀಳ್ತಾರೆ.

ಹಾಗೆ ಕೊಲೆ ಮಾಡಿ ಭೂಗತವಾದ ಆ ಹುಡಗರು ರಾತ್ರೋರಾತ್ರಿ ಯಾವ್ ಮಟ್ಟದಲ್ಲಿ ಕುಖ್ಯಾತಿಗೆ ಬಂದಿದ್ದರೆಂದ್ರೆ ಲವಕುಶರಂಥ ಪಾತಕಿಗಳನ್ನು ಹೊಡೆಯೊಕ್ಕೆ ಹೊಂಚಾಕ್ತಿದ್ದವರ ಪಾಲಿಗೆ ಹಂದಿ ಅಣ್ಣಿ ಅಂಡ್ ಹಿಸ್ ಟೀಮ್ ನೀಲಿಗಣ್ಣಿನ ಹುಡುಗರಾಗಿಬಿಡ್ತಾರೆ.ಆಮೇಲೆ ಅವರಿಗೆ ಬಂದಂಥ ಸುಪಾರಿಗಳು ಅದೆಷ್ಟೋ…ಪಾತಕ ಲೋಕದಲ್ಲಿ ಶಿವಮೊಗ್ಗದ ಕುಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿದವ್ರೇ ಈ ಹಂದಿ ಅಣ್ಣಿ ಅಂಡ್ ಹಿಸ್ ಟೀಮ್.

ಅದೇ’ಅಣ್ಣಿ ಟೀಮ್ ನಲ್ಲಿದ್ದ ಪಾತಕಿ ಅಣ್ಣಿಯ ಸ್ವಂತ ತಮ್ಮ ಗಿರಿ ಮೊನ್ನೆ ಮೊನ್ನೆಯಷ್ಟೇ ಕೊಲೆಯಾಗಿ ಹೋಗಿದ್ದಾನೆ.ಆತನನ್ನು ತೂರಬಿಲ್ಲೆ ವಿಚಾರದಲ್ಲಿ ರೌಡಿ ಅಜ್ರು ತಂಡ ಕೊಚ್ಚಿ ಕೊಲೆ ಮಾಡಿದೆ.ಅನುಪಿನ ಕಟ್ಟೆಯಲ್ಲಿರುವ ಮಂದಾರಶಾಲೆ ಸಮೀಪ ಸಂಜೆ 5.30ರ ಆಸುಪಾಸಿನಲ್ಲಿ ರೌಡಿ ಗಿರಿ ಹಾಗೂ ಅಜ್ರು ತಂಡ ತೂರಬಿಲ್ಲೆ ಆಡುತ್ತಿತ್ತು.ಆ ವೇಳೆ ಇವರಿಬ್ಬರ ನಡುವೆ ಗಲಾಟೆ ಶುರುವಾಗಿದೆ.ಮಾತಿಗೆ ಮಾತು ಬೆಳೆದು ಅದು ಚೇಸಿಂಗ್ ವರೆಗೂ ವ್ಯಾಪಿಸಿದೆ.ಅಜ್ರು ತಂಡ ಮಾರಕಾಸ್ತ್ರಗಳನ್ನು ಹಿಡಿದು ಬೆರೆಸಾಡಿಕೊಂಡು ಬಂದು ಗಿರಿಯನ್ನು ಗೋಪಾಳ ವೃತ್ತದಲ್ಲಿ ಕೊಲೆ ಮಾಡಿದೆ. ಭರ್ಜಿ ಹಾಗೂ ಲಾಂಗ್ ಗಳಿಂದ ಗಿರಿ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿ ಅಲ್ಲಿಂದ ಪರಾರಿಯಾಗಿದೆ.ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತಾದ್ರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಜಿಲ್ಲಾ ಎಸ್ಪಿ ಕೆ.ಎಂ.ಶಾಂತರಾಜ್
ಜಿಲ್ಲಾ ಎಸ್ಪಿ ಕೆ.ಎಂ.ಶಾಂತರಾಜ್

24 ಗಂಟೆಯೊಳಗೆ ಪಾತಕಿಗಳ ಬಂಧನ:ಕೊಲೆ ಮಾಡಿ ಪರಾರಿಯಾದ ಅಜ್ರು ತಂಡವನ್ನು ತುಂಗಾನಗರ ಠಾಣೆ ಪೊಲೀಸರು 24 ಗಂಟೆಯೊಳಗೆ ಬಂಧಿಸಿ ಕರೆತಂದಿದ್ದಾರೆ.10 ಜನರ ಪೈಕಿ ಅಜ್ರು ಸಲ್ಮಾನ್,ಶೋಯೆಬ್ ಸೇರಿದಂತೆ 6 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು ಉಳಿದ ನಾಲ್ವರ ಪತ್ತೆ ಕಾರ್ಯ ಮುಂದುವರೆದಿದೆ.ಹಲ್ಲೆ-ದೊಂಬಿ-ಗಲಾಟೆಗಳಂಥ ಕ್ಯಾತೆಗಳಲ್ಲಿ ಗಿರಿ ಮೇಲೆ ವಿವಿಧ ಠಾಣೆಗಳಲ್ಲಿ ಸಾಕಷ್ಟು ಪ್ರಕರಣಗಳಲ್ಲಿ ಕೇಸ್ ದಾಖಲಾಗಿವೆ.ಈ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸಿ ಜೈಲಿನಿಂದ ಆಗಷ್ಟೇ ಬಂದಿದ್ದ ಗಿರಿಯನ್ನು ಅಜ್ರು ತಂಡ ಮೂಟೆ ಕಟ್ಟಿದೆ.

ಪ್ರತೀಕಾರದ ಬೆಂಕಿಯಲ್ಲಿ ಕುದಿಯುತ್ತಿರುವ ಹಂದಿ ಅಣ್ಣಿ:ಸಹೋದರನನ್ನು ಕಳೆದುಕೊಂಡಿರುವ ಹಂದಿ ಅಣ್ಣಿ ಪ್ರತೀಕಾರದ ಜ್ವಾಲೆಯಲ್ಲಿ ಕುದಿಯುತ್ತಿದ್ದಾನೆ.ಸಹೋದರನ ಶವದ ಎದುರೇ ಪ್ರತಿಜ್ಞೆಯನ್ನು ಮಾಡಿದ್ದಾನೆನ್ನಲಾಗಿರುವ ಅಣ್ಣಿ ಸಹೋದರನನ್ನು ಕೊಂದಿರುವ ರೌಡಿ ಅಜ್ರು ಹಾಗೂ ಆತನ ತಂಡವನ್ನು ಕೊಂದು ಗಿರಿ ಆತ್ಮಕ್ಕೆ ಶಾಂತಿಮ ದೊರಕಿಸಿಕೊಡುವುದಾಗಿ ಆಣೆ ಮಾಡಿದ್ದಾನೆ ಎನ್ನಲಾಗಿದೆ.
ಆದ್ರೆ ಭಯ ಇರೋದೇ ಅಲ್ಲಿ,ಇಷ್ಟು ದಿನ ಯಾವ್ದೇ ಕೊಲೆ-ದೊಂಬಿ-ಗಲಾಟೆಗಳಿಲ್ಲದೆ ನೆಮ್ಮದಿಯಿಂದ ಇದ್ದ ಶಿವಮೊಗ್ಗದ ನೆಲದಲ್ಲಿ ಮತ್ತೆ ರಕ್ತಪಾತ ಉಂಟಾಗಲಿದೆಯೇ ಎನ್ನುವ ಆತಂಕ ಕಾಡ್ತಿದೆ.

ಅಲರ್ಟ್ ಆಗ್ಬೇಕಿದೆ ಶಿವಮೊಗ್ಗ ಪೊಲೀಸ್:  ಮಾಡಿರುವ ಶಪಥದಿಂದ ಅಜ್ರು ಹಾಗೂ ಆತನ ತಂಡ ಅಷ್ಟೇ ಅಲ್ಲ ಪಾತಕಿಗಳ ಕುಟುಂಬ ಕೂಡ ನೆಮ್ಮದಿ ಕಳ್ಕೊಂಡಿದೆ.ಯಾವ್ ಕ್ಷಣದಲ್ಲಿ ಎಲ್ಲಿ ಹೆಣಗಳು ಬೀಳ್ತವೋ ಎನ್ನೋ ಆತಂಕ ಆವರಿಸಿದೆ.ಪೊಲೀಸರು ಹೀಗಾಗದಂತೆ ಎಚ್ಚರಿಕೆ ವಹಿಸುವುದಾಗಿ ಹೇಳಿದ್ರೂ ಅತಿಯಾದ ಆತ್ಮವಿಶ್ವಾಸದಲ್ಲಿ ಮೈಮರೆಯಬಾರದಷ್ಟೇ..ಒಟ್ಟಿನಲ್ಲಿ ಹಂದಿ ಅಣ್ಣಿಯ ಸಹೋದರ ಗಿರಿಯ ಮರ್ಡರ್ ಶಿವಮೊಗ್ಗದ ನೆಲದಲ್ಲಿ ಮತ್ತೆ ರಕ್ತಪಾತಕ್ಕೆ ಕಾರಣವಾಗುತ್ತಾ ಎನ್ನುವ ಭೀತಿಯನ್ನಂತೂ ಮೂಡಿಸಿದೆ.

Spread the love
Leave A Reply

Your email address will not be published.

Flash News