ಬೆಂಗಳೂರಿನಲ್ಲಿ ಬೌ ಬೌ ದಾಳಿ-ಕೂದಲೆಳೆಯಲ್ಲಿ ಪಾರಾದ ಬಾಲಕ

0

ಬೆಂಗಳೂರು:ರಾಜಧಾನಿ ಬೆಂಗಳೂರಿನಲ್ಲಿ ಅದೇಕೋ ಬೀದಿ ನಾಯಿಗಳು ಮನುಷ್ಯರನ್ನು ಕಂಡ್ರೆ ಎಗರಿ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಮೊನ್ನೆ ತಾನೇ ಎಚ್ ಎಎಲ್ ವ್ಯಾಪ್ತಿಯಲ್ಲಿ ಬಾಲಕನೋರ್ವನನ್ನು ಕಚ್ಚಿ ಗಾಯಗೊಳಿಸಿದ್ದ ಘಟನೆ ನಡೆಯಿತು.ಅದರ ಕಹಿ ಮಾಸುವ ಮುನ್ನವೇ ಕೆಂಗೇರಿ ವ್ಯಾಪ್ತಿಯಲ್ಲೂ ಇದೇ ರೀತಿಯ ಘಟನೆ ನಡೆದು ಸಾರ್ವಜನಿಕರಲ್ಲಿ ಆತಂಕ ನಿರ್ಮಾಣವಾಗಿದೆ.

ಕೆಂಗೇರಿಯ ಬಂಡೆ ಮಠ ವ್ಯಾಪ್ತಿಯಲ್ಲಿ ಅಂಗಡಿಗೆ ತಿಂಡಿ ತರಲಿಕ್ಕೆಂದು ಬಾಲಕನೋರ್ವ ಹೋಗುತ್ತಿದ್ದ.ಈ ವೇಳೆ ಆತನ ಮೇಲೆರಗಿವೆ ಎನ್ನಲಾದ ನಾಯಿಗಳ ಗುಂಪು ದಾಳಿ ಶುರುಮಾಡಿವೆ.ಬಾಲಕ ಕೂಗಲಾರಂಭಿಸಿದಾಗ ಮತ್ತಷ್ಟು ನಾಯಿಗಳು ಆತನ ಮೇಲೆರಗಿವೆ.ಇದರಿಂದ ಭೀತಿಗೊಂಡು ಕಿರುಚಲಾರಂಭಿಸಿದಾಗ ಸ್ಥಳೀಯರು ನೆರವಿಗೆ ಬಂದು ನಾಯಿಗಳನ್ನು ಓಡಿಸಿದ್ದಾರೆ.

ಇದನ್ನೂ ಓದಿ:  ಬೆಂಗಳೂರಿನಲ್ಲಿ ಬೀದಿನಾಯಿಗಳ ಅಟ್ಟಹಾಸ:ಬಾಲಕನಿಗೆ ಮಾರಣಾಂತಿಕ ಗಾಯ:

ಬಾಲಕನನ್ನು ನಾಯಿಗಳಿಂದ ತಪ್ಪಿಸಿದ ಸ್ಥಳೀಯರು ಬೀದಿ ನಾಯಿಗಳ ಹಾವಳಿ ವ್ಯಾಪಕವಾಗಿದ್ರೂ ಅವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದ ಬಿಬಿಎಂಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಯಿಗಳ ಸಂಖ್ಯೆ ನಿಯಂತ್ರಣಕ್ಕಂಥ ಬಿಬಿಎಂಪಿ ಮಾಡುತ್ತಿರುವ ಸಂತಾನಹರಣ ಶಸ್ತ್ರಚಿಕಿತ್ಸೆ ಯಲ್ಲಿ ಗುತ್ತಿಗೆ ಪಡೆದಿರುವ ಎನ್ ಜಿಓ ಗಳು ಎಸಿಬಿಯನ್ನು ಸಮರ್ಪಕವಾಗಿ ಮಾಡಿದಿದ್ದರೆ ಇವತ್ತು ನಾಯಿಗಳ ಸಂಖ್ಯೆ ಹೆಚ್ಚಳವಾಗೋದ್ರ ಜತೆಗೆ ಅವುಗಳ ಉಪಟಳನೂ ಅಸಹನೀಯವಾಗುವಂಥ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲವೇನೋ..ಬಿಬಿಎಂಪಿ ಎಚ್ಚೆತ್ತುಕೊಳ್ಳುವುದಕ್ಕೆ ಇನ್ನೆಷ್ಟು ಇಂಥ ಘಟನೆಗಳಾಗ್ಬೋಕೋ ಗೊತ್ತಾಗ್ತಿಲ್ಲ.

Spread the love
Leave A Reply

Your email address will not be published.

Flash News