ಓವರ್ ಸ್ಪೀಡ್ ಕಾರು ತಡೆಯಲು ಹೋದ ಮುಖ್ಯಪೇದೆ ಸಾವು

0

ಬೆಂಗಳೂರು:ವಾಹನಗಳ ಓವರ್ ಸ್ಪೀಡ್ ಚೆಕ್ ಮಾಡಲಿಕ್ಕೆಂದೇ ನಿಯೋಜನೆಗೊಂಡಿರುವ ಇಂಟರ್ ಸೆಪ್ಟರ್ ವಾಹನಕ್ಕೆ ಕಾರು ಡಿಕ್ಕಿ ಹೊಡೆದು ಪೊಲೀಸ್ ಮುಖ್ಯ ಪೇದೆ ಸಾವನ್ನಪ್ಪಿದ್ದಾರೆ.ಮತ್ತೋರ್ವ ಪೇದೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕ್ಕಜಾಲ ಠಾಣಾ ವ್ಯಾಪ್ತಿಯ ಕಾಡೇನಹಳ್ಳಿ ರಸ್ತೆಯಲ್ಲಿ ಇಂಟರ್ ಸೆಪ್ಟರ್ ವಾಹನವನ್ನು ನಿಲ್ಲಿಸಿಕೊಂಡು ಹೆಡ್ ಕಾನ್ಸ್ ಟೇಬಲ್ ಧನಂಜಯ್ಯ ಕೆಲಸ ಮಾಡ್ತಿದ್ದರು.ಈ ವೇಳೆ ವೇಗವಾಗಿ ಬಂದ ಕಾರು ಇಂಟರ್ ಸೆಪ್ಟರ್ ವಾಹನಕ್ಕೆ ಡಿಕ್ಕಿ ಹೊಡೆದಿದೆ.ಕಾರು ಚಾಲಕ ಕುಶಾಲ್ ರಾಜ್ ಮಾಡಿದ ಅಪಘಾತದ ತೀವ್ರತೆ ಎಷ್ಟಿತ್ತೆಂದ್ರೆ ಮುಖ್ಯ ಪೇದೆ ಧನಂಜಯ ಗಂಭೀರ ಗಾಯಗೊಂಡಿದ್ದಾರೆ.
ತಕ್ಷಣಕ್ಕೆ ಅವರನ್ನು ಕೊಡಿಗೆಹಳ್ಳಿ ಗೇಟ್ ಬಳಿಯ ಎಸ್ಟರ್ ಕಾವೇರಿ‌ ಮೆಡಿಕಲ್ ಸೆಂಟರ್ ಗೆ ದಾಖಲು ಮಾಡಲಾಯಿತಾದ್ರೂ
ವೈದ್ಯರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ಈ ವೇಳೆ ದ್ವಿಚಕ್ರ ವಾಹನ ಕೂಡ ಡಿಕ್ಕಿ ಹೊಡೆದಿದೆ,ವಾಹನ ಸವಾರ ಉಮಾಮಹೇಶ್ ಗೂ ಗಾಯವಾಗಿದೆ.
ಅಂದ್ಹಾಗೆ ಕುಶಾಲ್ ರಾಜ್ 7-10 ಕ್ಕೆ ಪ್ಲೈಟ್ ಇದ್ದಿದ್ದರಿಂದ ಏರ್ ಪೋರ್ಟ್ ಗೆ ವೇಗವಾಗಿ ಹೋಗುತ್ತಿದ್ದರು.ಓವರ್ ಸ್ಪೀಡ್ ಆಗಿದ್ರಿಂದಾಗಿ ಕಾರು ತಡೆಯಲು ಪೊಲೀಸರು ಮುಂದಾಗಿದ್ದಾರೆ.ಈ ವೇಳೆ ಅಪಘಾತ ಸಂಭವಿಸಿ ಮುಖ್ಯಪೇದೆ ಸಾವನ್ನಪ್ಪಿದ್ದಾರೆ.ದುರಂತ ಎಂದ್ರೆ ವಾರದಲ್ಲಿ ಧನಂಜಯ್ಯ ಸೇರಿದಂತೆ ಇಬ್ಬರ ಪೊಲೀಸ್ ಪೇದೆಗಳು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ನಂದಿನಿ ಲೇಔಟ್ ಮುಖ್ಯ ಪೇದೆ ಭಕ್ತರಾಮ್ ಕಾರು ಡಿಕ್ಕಿ ಯಾಗಿ ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಬಹುದು.

Spread the love
Leave A Reply

Your email address will not be published.

Flash News