3ನೇ ಬಾರಿ ದೆಹಲಿ ಗದ್ದುಗೆ ಅಲಂಕರಿಸಲಿರುವ ಕೇಜ್ರಿವಾಲ್- ಬಿಜೆಪಿ ಸಾಧನೆ ಉತ್ತಮ-ಕಾಂಗ್ರೆಸ್ ಸ್ಥಿತಿ ಹೀನಾಯ..

0

ನವದೆಹಲಿ:ಆಮ್ ಆದ್ಮಿ ಪಕ್ಷದ ಕೈಯಿಂದ ಅಧಿಕಾರ ಕಸಿದುಕೊಂಡು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತನ್ನ ಪಾರಮ್ಯ ಸ್ಥಾಪಿಸುವ ಬಿಜೆಪಿ ಕನಸು ನುಚ್ಚು ನೂರಾಗಿದೆ.ನಾನೋ..ನೀನೋ ಎಂದು ತೊಡೆ ತಟ್ಟಿದ್ದ ಮೋದಿ ಹಾಗೂ ಕೇಜ್ರಿವಾಲ್ ಅವರ ನಡುವಿನ ಪೈಪೋಟಿಯಲ್ಲಿ ಕೇಜ್ರಿವಾಲ್ ಮೇಲುಗೈ ಸಾಧಿಸುವುದು ನಿಚ್ಚಳವಾಗಿದೆ.

ಯೆಸ್..ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಮ್ಮೆ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಸರ್ಕಾರವೇ ಮತ್ತೊಮ್ಮೆ ಅಧಿಕಾರಕ್ಕೆ ಬರೋದು ಬಹುತೇಕ ಖಚಿತ.ಇದನ್ನು ಮತದಾನ ಮುಗಿಯುತ್ತಿದ್ದಂತೆ ಹೊರಬಿದ್ದ ಚುನಾವಣೋತ್ತರ ಸಮೀಕ್ಷೆಗಳೇ ಸಾರಿ ಹೇಳುತ್ತಿವೆ.ಹೌದು.. ಕೇಂದ್ರ ಮತ್ತು ಆಮ್‌ ಆದ್ಮಿ ಪಕ್ಷದ ಜಿದ್ದಾಜಿದ್ದಿನ ಸಮರದಲ್ಲಿ ಮೋದಿಗೆ ತೀವ್ರ ಮುಖಭಂಗವಾಗಿರುವುದನ್ನು ಸಮೀಕ್ಷೆಗಳು ಪ್ರೂವ್ ಮಾಡಿವೆ.

ಬಹುತೇಕ ಎಲ್ಲ ಸಮೀಕ್ಷೆಗಳು ಆಮ್‌ ಆದ್ಮಿ ಪಕ್ಷದ ಪೊರಕೆಯೇ ಬಿಜೆಪಿಯ ಕಮಲವನ್ನು ಕಮರಿಸಿದೆ. ಹಾಗೆಯೇ ಕಾಂಗ್ರೆಸ್‌ ಪಕ್ಷವನ್ನು ಗುಡಿಸಿ ಹಾಕಿದೆ.ಏಕೆಂದ್ರೆ 50ಕ್ಕೂ ಹೆಚ್ಚು ಸ್ಥಾನ ಪಡೆಯುವ ಮೂಲಕ ಆಮ್‌ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್‌ ಮತ್ತೆ ಅಧಿಕಾರದ ಗದ್ದುಗೆ ಏರಲಿದ್ದಾರೆ ಎನ್ನುವುದನ್ನು ಸಮೀಕ್ಷೆಗಳು ಸಾರಿ ಹೇಳಿವೆ.

ಸಮೀಕ್ಷೆಯಲ್ಲಿ ಅರವಿಂದ ಕೇಜ್ರಿವಾಲ್,ಸತತ ಎರಡನೇ ಬಾರಿಗೆ ದೆಹಲಿಯ’ಆಮ್‌ ಆದ್ಮಿ’ಗಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.ಮೂರನೇ ಬಾರಿ ಮುಖ್ಯ ಮಂತ್ರಿಯಾಗೋದನ್ನು ತಪ್ಪಿಸ್ಲಿಕ್ಕೆ ಯಾರಿಂದ್ಲೂ ಸಾಧ್ಯವಿಲ್ಲ ಎನ್ನುವುದು ಇದರಿಂದ ಪ್ರೂವ್ ಆಗಿದೆ.

ವಿವಿಧ ಏಜೆನ್ಸಿಗಳು ನಡೆಸಿರುವ ಚುನಾವಣೋತ್ತರ ಸಮೀಕ್ಷೆಗಳು ವಿವರ ಕೆಳಕಂಡಂತಿದೆ.
ಟೈಮ್ಸ್ ನೌ-ಐಪಿಎಸ್‌ಒಎಸ್‌ ಗಳ ಜಂಟಿ ಸಮೀಕ್ಷೆ ಪ್ರಕಾರ ಆಮ್‌ ಆದ್ಮಿ ಪಕ್ಷಕ್ಕೆ 44, ಬಿಜೆಪಿಗೆ 26 ಸ್ಥಾನ ದೊರೆಯಲಿದೆ.ಕಾಂಗ್ರೆಸ್‌ ಖಾತೆ ತೆರೆಯದಿರುವುದು ವಿಪರ್ಯಾಸ. ಎಬಿಪಿ ನ್ಯೂಸ್ ಸಿ ವೋಟರ್ ಸಮೀಕ್ಷೆ ಆಪ್ 56 ಸ್ಥಾನ ಪಡೆಯಲಿದೆ.ಬಿಜೆಪಿ 12 ಕಾಂಗ್ರೆಸ್ 2 ಸ್ಥಾನ ಪಡೆಯಲಿದೆ.

ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಪ್ರಕಾರ ಆಪ್ 63 ಸ್ಥಾನ ಪಡೆಯಲಿದೆ.ಬಿಜೆಪಿ 7 ಸ್ಥಾನ ಪಡೆಯಲಿದ್ದು ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳ ಸಾಧನೆ ಶೂನ್ಯ.

ಜನ್ ಕಿ ಬಾತ್ ನಡೆಸಿರುವ ಸಮೀಕ್ಷೆ ಪ್ರಕಾರ ಆಪ್ 55 ಸ್ಥಾನ ಪಡೆಯಲಿದ್ದು ಬಿಜೆಪಿ 15 ಸ್ಥಾನ ಪಡೆಯಲಿದೆ.

ನ್ಯೂಸ್ X ನೇತಾ ಸಮೀಕ್ಷೆ ಪ್ರಕಾರ ಆಪ್ 55 ಸ್ಥಾನಗಳನ್ನೂ ಬಿಜೆಪಿ 14 ಸ್ಥಾನಗಳನ್ನು ಪಡೆಯಲಿದೆ.ಕೈ ಕೇವಲ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಲಿದೆಯಂತೆ.

ಇಂಡಿಯಾ ನ್ಯೂಸ್ ನೇಷನ್ ಸಮೀಕ್ಷೆ ಪ್ರಕಾರ ಆಪ್ 55 ಸ್ಥಾನಗಳನ್ನು ಪಡೆದು ಸರ್ಕಾರ ರಚಿಸಲಿದೆಯಂತೆ.ಬಿಜೆಪಿ 14 ಸ್ಥಾನಗಳನ್ನು ಕೈ ಕೇವಲ 1 ಸ್ಥಾನ ಪಡೆಯಲಿದೆ.

ಸುದರ್ಶನ್ ನ್ಯೂಸ್ ನ ಸಮೀಕ್ಷೆ ಪ್ರಕಾರ ಆಪ್ 42 ಸ್ಥಾನಗಳನ್ನು ಪಡೆಯಲಿದೆಯಂತೆ. ಬಿಜೆಪಿ 26 ಸ್ಥಾನಗಳನ್ನು ಪಡೆಯಲಿದ್ದು ಕಾಂಗ್ರೆಸ್ 2 ಸ್ಥಾನ ಗಳಿಸಲಿದೆ.
ಇಂಡಿಯಾ ಟಿವಿ ಸಮೀಕ್ಷೆಗಳು ಆಪ್ 44 ಸ್ಥಾನಗಳನ್ನು ಪಡೆಯಲಿದೆ.ಬಿಜೆಪಿ ಉಳಿದ 26 ಸ್ಥಾನಗಳನ್ನು ಪಡೆಯಲಿದೆಯಂತೆ.

ಟಿವಿ-9 ಭಾರತ್ ವರ್ಷ ಸಿಸೆರೋ ನಡೆಸಿರುವ ಸಮೀಕ್ಷೆ ಪ್ರಕಾರ ಆಮ್ ಆದ್ಮಿ ಪಕ್ಷ 54 ಸ್ಥಾನಗಳನ್ನು ಪಡೆಯಲಿದ್ರೆ ಬಿಜೆಪಿ 15 ಹಾಗೂ ಕೈ ಕೇವಲ 1 ಸ್ಥಾನ ಪಡೆಯಲಿದೆ ಎಂದಿವೆ.

ಆದ್ರೆ ಪ್ರಧಾನಿ ಮೋದಿ ಅವರು ಮಾತ್ರ ಚುನಾವಣಾ ಫಲಿತಾಂಶ ಬರಲಿ ಆಮೇಲೆ ಹೇಳ್ತೇನೆ ಎಂದಿದ್ದಾರೆ.ಅಂದ್ಹಾಗೆ 70 ಸಂಖ್ಯಾಬಲದ ದಿಲ್ಲಿ ವಿಧಾನಸಭೆಯಲ್ಲಿ ಅಧಿಕಾರ ಸ್ಥಾಪಿಸಲು ಅಗತ್ಯವಿರುವುದು 36 ಸ್ಥಾನಗಳು.

Spread the love
Leave A Reply

Your email address will not be published.

Flash News