ಬೀದಿಗೆ ಬಿದ್ದ ಐಪಿಎಸ್  ದಂಪತಿ ಜಗಳ:ಪತ್ನಿ ಮನೆ ಮುಂದೆಯೇ ಧರಣಿ ಕೂತ ಪತಿರಾಯ

0
ಪತ್ನಿ ವಿರುದ್ಧ ತಿರುಗಿಬಿದ್ದು ನ್ಯಾಯಕ್ಕಾಗಿ ಧರಣಿ ಕುಳಿತಿರುವ ಐಪಿಎಸ್ ಪತಿ ಅರುಣಾ ರಂಗರಾಜನ್
ಪತ್ನಿ ವಿರುದ್ಧ ತಿರುಗಿಬಿದ್ದು ನ್ಯಾಯಕ್ಕಾಗಿ ಬೆಂಗಳೂರಿನ ಆಕೆಯ ಸರ್ಕಾರಿ ನಿವಾಸದ ಎದುರೇ  ಧರಣಿ ಕುಳಿತಿರುವ ಪತಿ ಅರುಣಾ ರಂಗರಾಜನ್
ಅರುಣಾ ರಂಗರಾಜನ್
ಅರುಣಾ ರಂಗರಾಜನ್
ರಾಜೇಶ್ವರಿ ಇಲಾಖಿಯಾ
ರಾಜೇಶ್ವರಿ ಇಲಾಖಿಯಾ

ಬೆಂಗೂರು:ಸಮಾಜದಲ್ಲಿಎಂತದ್ದೇ ಹೆಸರು ಮಾಡಿರಲಿ.. ಎಷ್ಟೇ ಉನ್ನತ ಸ್ಥಾನದಲ್ಲಿರಲಿ…ವೈಯುಕ್ತಿಕ ಬದುಕು ಸರಿಯಾಗಿ ಇರದೇ ಹೋದ್ರೆ ಅದೆಲ್ಲಾ ವೇಸ್ಟೇ…ಬದುಕಿರುವಾಗ್ಲೇ ನೆಮ್ಮದಿ ಇಲ್ಲದೆ ಪ್ರೇತಾತ್ಮಗಳಾಗಿ ಅಲೆಯುವ ಪರಿಸ್ತಿತಿ ಬಂದ್ ಬಿಡುತ್ತೆ…..

ಬೆಂಗಳೂರಿನಲ್ಲಿ ಇಂತದ್ದೇ ಒಂದು ಘಟನೆ ನಡೆದೋಗಿದೆ.ಗಂಡ ಹೆಂಡತಿ ಇಬ್ಬರೂ ಇಬ್ಬರು ಐಪಿಎಸ್ ಅಧಿಕಾರಿಗಳು..ಸೊಸೈಟಿಯಲ್ಲಿ ಒಳ್ಳೆಯ ಸ್ಥಾನಮಾನ..ಕೈ ತುಂಬಾ ಸಂಬಳ..ಎಲ್ಲಾ ಇದ್ದರೂ ವೈಯುಕ್ತಿಕ ಬದುಕಿನಲ್ಲಿನ ಸಂಘರ್ಷಗಳು ಇವತ್ತು ಅವರ ಕುಟುಂಬವನ್ನು ಬೀದಿಗೆ ತಂದು ನಿಲ್ಲಿಸಿದೆ.

ಆ ಐಪಿಎಸ್ ದಂಪತಿಗಳೇ ಅರುಣಾ ರಂಗರಾಜನ್ ,ಇಲಾ ರಾಜೇಶ್ವರಿ.ನನ್ನ ಮಕ್ಕಳನ್ನು ನನಗೆ ನೋಡಲು ಬಿಡುತ್ತಿಲ್ಲ.ನನ್ನ ವೈಯುಕ್ತಿಕ ಬದುಕನ್ನು ಬರ್ಬಾದ್ ಮಾಡಿದ್ದಾಳೆ ಎಂದು ಅರುಣಾ ರಂಗರಾಜನ್ ನೋವು ತೋಡಿಕೊಳ್ಳೋದಷ್ಟೇ ಅಲ್ಲ,ಪತ್ನಿಯ ಸರ್ಕಾರಿ ನಿವಾಸದ ಎದುರೇ ದರಣಿ ಕೂತ್ ಬಿಟ್ರು.

ಸಂತೋಷದ ದಿನಗಳಲ್ಲಿ ರಂಗರಾಜನ್-ರಾಜೇಶ್ವರಿ
ಸಂತೋಷದ ದಿನಗಳಲ್ಲಿ ರಂಗರಾಜನ್-ರಾಜೇಶ್ವರಿ

ಅಂದ್ಹಾಗೆ ಅರುಣಾ ರಂಗರಾಜನ್ ಕಲಬುರಗಿ ಐಎಸ್ಡಿ ಎಸ್ಪಿ ಇನ್ನು ಪತ್ನಿ ರಾಜೇಶ್ವರಿ ವಿವಿಐಪಿ ಭದ್ರತಾ ಡಿಸಿಪಿ.ಇಬ್ಬರೂ ಪ್ರೀತಿಸಿ ಮದುವೆಯಾದವ್ರು.ಅನೇಕ ವರ್ಷಗಳವರೆಗೆ ಜತೆಗೆ ಇದ್ದವರು.ಅವರಿಗೆ ಮುದ್ದಾದ ಮಕ್ಕಳಿವೆ.ಆದ್ರೆ ಅದ್ಯಾವುದೋ ಕೆಟ್ಟ ಗಳಿಗೆಯಲ್ಲಿ ಇಬ್ಬರೂ ಬೇರೆಯಾದ್ರು.ಇದರ ಕುರುಹಾಗಿ ಮಗು ಜನಿಸಿತ್ತು.ಬೇರೆಯಾದ ಮೇಲೆ ಅವರಿಗೆ ಏನನ್ನಿಸಿತೇನೋ ಗೊತ್ತಿಲ್ಲ,ಮತ್ತೆ ಒಂದಾದ್ರು.ಅದರ ಕುರುಹಾಗಿ ಮತ್ತೊಂದು ಮಗುವಾಯ್ತು.ಆನಂತ್ರವೂ ಒಂದಷ್ಟು ವರ್ಷ ಚೆನ್ನಾಗಿದ್ರು.ಆದ್ರೆ ಇದ್ದಕ್ಕಿದ್ದಂತೆ ಪತ್ನಿ ಇಲಾ ವರ್ತನೆಯಲ್ಲಿ ಬದ್ಲಾವಣೆ ಕಂಡ್ ಬಂದಿದ್ದರಿಂದ ಅವರಿಂದ ಬೇರೆಯಾದ್ರು.

ಕಾನೂನು ಪ್ರಕಾರವೇ ಡೈವೋರ್ಸ್ ಪಡೆದ ದಂಪತಿಗಳ ನಡುವೆ ಮಕ್ಕಳ ವಿಚಾರದಲ್ಲಿ ಆದ ಒಪ್ಪಂದವನ್ನು ಇಲಾ ಉಲ್ಲಂಘಿಸ್ತಿದ್ದಾರೆನ್ನುವುದು ರಂಗರಾಜನ್ ಆರೋಪ.ಮಕ್ಕಳನ್ನು ನೋಡದಿರುವಂತೆ ಒತ್ತಡ ಹೇರುತ್ತಿದ್ದಾರೆ.ಸಾಲದ್ದಕ್ಕೆ ನನ್ನ ಕರ್ತವ್ಯದಲ್ಲೂ ಹಸ್ತಕ್ಷೇಪ ಮಾಡುತ್ತಿದ್ದಾರೆನ್ನವುದು ಪತಿಯ ಆರೋಪ.

ಇದಕ್ಕೆ ಬೇಸತ್ತಿಯೇ ಇಂದು ಪತ್ನಿ ನಿವಾಸದ ಎದಿರು ನೇರವಾಗಿ ಬಂದು ಧರಣಿ ಕೂತ ಪತಿಯನ್ನು ಮನವೊಲಿಸಲು ಪೊಲೀಸರು ಮುಂದಾದ್ರು.ಆದ್ರೆ ಅದಕ್ಕೆ ಸೊಪ್ಪಾಕದೆ ಅಲ್ಲಿಯೇ ಕೂತ್ ಬಿಟ್ರು.ಅರೆಸ್ಟ್ ಆದ್ರೂ ಪರ್ವಾಗಿಲ್ಲ.ನನಗೆ ನ್ಯಾಯ ಕೊಡಿ ಎಂದು ಪಟ್ಟು ಹಿಡಿದ್ರು.ಐಪಿಎಸ್ ಪತಿ ಪತ್ನಿಯ ಈ ರಾದ್ಧಾಂತ ನೋಡುಗರಿಗೆ ಒಂದಷ್ಟು ಸಮಯ ಪುಕ್ಕಟೆ ಮನರಂಜನೆ ನೀಡಿದ್ದಂತೂ ಸತ್ಯ. 

Spread the love
Leave A Reply

Your email address will not be published.

Flash News