ನೂತನ ಸಚಿವರಿಗೆ ಖಾತೆ-ಸವದಿ ಖಾತೆಗೆ ಕೊಕ್-ಬೆಳಗಾಂ ಸಾಹುಕಾರ್ ಗೆ ಇಂಧನ-ಸುಧಾಕರ್ ಗೆ ವೈದ್ಯಕೀಯ ಶಿಕ್ಷಣ,ಕೌರವಗೆ ಬಂಧಿಖಾನೆ,ಗೋಪಾಲಯ್ಯಗೆ ಕಾರ್ಮಿಕ ಖಾತೆ ಖಚಿತ!

0

ಬೆಂಗಳೂರು:ಕೊನೆಗೂ ನೂತನ ಸಚಿವರಿಗೆ ಖಾತೆಗಳನ್ನು  ಹಂಚಿಕೆ ಮಾಡಲಾಗಿದೆ.ಖಾತೆ ಹಂಚಿಕೆಯಲ್ಲಿ ಖ್ಯಾತೆ ಏನಾದ್ರೂ ತೆಗೆಯಬಹುದೆನ್ನುವ ಆತಂಕ ಇದರಿಂದಾಗಿ ದೂರವಾಗಿದೆ.

ಅಂದ್ಹಾಗೆ ನೂತನ ಸಚಿವರ ಪೈಕಿ ಯಶವಂತಪುರ ಕ್ಷೇತ್ರ ಶಾಸಕ ಎಸ್ ಟಿ ಸೋಮಶೇಖರ ಅವರಿಗೆ ಡಿಸಿಎಂ ಸವದಿ ಬಳಿ ಇರುವ  ಸಾರಿಗೆ ಖಾತೆ ಸಿಗುವ ಸಾಧ್ಯತೆಗಳೇ ದಟ್ಟವಾಗಿದೆ.ಇಲ್ಲವಾದ್ರೆ ಅವರೇ ಕೇಳಿರುವ  ಸಹಕಾರ ಖಾತೆ ದಕ್ಕುವ ಸಾಧ್ಯತೆ ದಟ್ಟವಾಗಿದೆ.ಇನ್ನು  ಗೋಕಾಕ್ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಜಲಸಂಪನ್ಮೂಲ ಅಥವಾ ಇಂಧನ ನೀಡೋ ಬಗ್ಗೆ ಚರ್ಚೆ ನಡೆದಿದೆ. ಒಂದು ವೇಳೆ ಜಲಸಂಪನ್ಮೂಲ ಖಾತೆ ನೀಡಿದರೆ ಬೆಳಗಾವಿ ಉಸ್ತುವಾರಿ ಕೈ ತಪ್ಪುವ ಸಾಧ್ಯತೆ ಇದೆ.

ಬೆಳಗಾವಿ ಉಸ್ತುವಾರಿಗೆ ಸಾಹುಕಾರ ಪಟ್ಟು ಹಿಡಿದಿರೋದ್ರಿಂದ ಹೈ ಕಮ್ಯಾಂಡ್ ಹೇಗೆ ನಿರ್ಧಾರ ತೆಗೆದುಕೊಳ್ಳುತ್ತೆ ಎನ್ನೋದು ಕೂಡ ಕುತೂಹಲ ಮೂಡಿಸಿದೆ.ಇನ್ನು ಚಿಕ್ಕಾಬಳ್ಳಾಪುರ ಶಾಸಕ ಡಾ. ಸುಧಾಕರ ಅವರಿಗೆ  ವೈದ್ಯಕೀಯ ಶಿಕ್ಷಣ ಸಿಗುವ ಸಾಧ್ಯತೆ ಇದ್ದು,ಕೆ.ಆರ್ ಪುರಂ ಶಾಸಕ ಭೈರತಿ ಬಸವರಾಜ ಅವರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಅಥವಾ ನಗರಾಭಿವೃದ್ಧಿ ಸಿಗುವ ಚಾನ್ಸೆಸ್ ಇದೆ.

ಮಹಾಲಕ್ಷ್ಮಿ ಲೇ ಔಟ್ ಕ್ಷೇತ್ರ ಶಾಸಕ ಕೆ. ಗೋಪಾಲಯ್ಯ ಅವರಿಗೆ  ಕಾರ್ಮಿಕ ಖಾತೆ ನೀಡಲು ಹೈಕಮಾಂಡ್ ನಿರ್ಧರಿಸಿದೆ.ಹಾಗೆಯೇ ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ  ಅವರಿಗೆ ಪೌರಾಡಳಿತ ಅಥವಾ ತೋಟಗಾರಿಕೆ ಸಿಗುವ ಸಾಧ್ಯತೆಗಳಿವೆ.

ಮತ್ತು ಹಿರೇಕೆರೂರ್ ಶಾಸಕ ಬಿ.ಸಿ.ಪಾಟೀಲ ಅವರಿಗೆ  ಆಹಾರ ನಾಗರಿಕ ಪೂರೈಕೆ, ಬಂದಿಖಾನೆ ಅಥವಾ ಅರಣ್ಯ ಖಾತೆ ಸಿಗುವ ಸಾಧ್ಯತೆಗಳಿವೆ.

ಕೆ.ಆರ್ ಪೇಟೆ ಶಾಸಕ ಕೆ.ನಾರಾಯಣಗೌಡ  ಅವರಿಗೆ ಪ್ರವಾಸೋದ್ಯಮ ಅಥವಾ ಸಣ್ಣ ನೀರಾವರಿ ಖಾತೆ ಸಿಕ್ಕರೆ,ಬಳ್ಳಾರಿ ಜಿಲ್ಲೆಯ ವಿಜಯಪುರ ಶಾಸಕ ಆನಂದ್ ಸಿಂಗ್ ಅವರಿಗೆ- ಕೌಶಲ್ಯಾಭಿವೃದ್ಧಿ, ಯುವಜನ ಸೇವೆ ಮತ್ತು ಕ್ರೀಡೆ ಸಿಗೋ ಸಾಧ್ಯತೆ ದಟ್ಟವಾಗಿದೆ.ಹಾಗೆಯೇ ಕಾಗವಾಡ ಶಾಸಕಶ್ರೀಮಂತ ಪಾಟೀಲರಿಗೆ  ಸಕ್ಕರೆ ಖಾತೆ ನೀಡುವುದು ಬಹುತೇಕ ನಿಚ್ಚಳ ಎನ್ನಲಾಗಿದೆ. 

 ಸಚಿವರು                                     ಖಾತೆ(ಸಂಭಾವ್ಯ)

1-ಎಸ್ ಟಿ ಸೋಮಶೇಖರ –   ಸಾರಿಗೆ ಅಥವಾ ಸಹಕಾರ ಖಾತೆ ಸಾಧ್ಯತೆ

 

2-ರಮೇಶ ಜಾರಕಿಹೊಳಿ –     ಜಲಸಂಪನ್ಮೂಲ ಅಥವಾ ಇಂಧನ

 

3-ಡಾ. ಸುಧಾಕರ –                 ವೈದ್ಯಕೀಯ ಶಿಕ್ಷಣ

 

4-ಭೈರತಿ ಬಸವರಾಜ –          ಹಿಂದುಳಿದ ವರ್ಗಗಳ ಕಲ್ಯಾಣ ಅಥವಾ ನಗರಾಭಿವೃದ್ಧಿ

 

5-ಕೆ.ಗೋಪಾಲಯ್ಯ –             ಕಾರ್ಮಿಕ

 

6-ಶಿವರಾಂ ಹೆಬ್ಬಾರ –              ಪೌರಾಡಳಿತ ಅಥವಾ ತೋಟಗಾರಿಕೆ

 

7-ಬಿ.ಸಿ.ಪಾಟೀಲ –                  ಆಹಾರ ನಾಗರಿಕ ಪೂರೈಕೆ, ಬಂದಿಖಾನೆ ಅಥವಾ ಅರಣ್ಯ

 

8-ನಾರಾಯಣಗೌಡ –             ಪ್ರವಾಸೋದ್ಯಮ ಅಥವಾ ಸಣ್ಣ ನೀರಾವರಿ

 

9-ಆನಂದ್ ಸಿಂಗ –                 ಕೌಶಲ್ಯಾಭಿವೃದ್ಧಿ, ಯುವಜನ ಸೇವೆ ಮತ್ತು ಕ್ರೀಡೆ

 

10- ಶ್ರೀಮಂತ ಪಾಟೀಲ:       ಸಕ್ಕರೆ

 

 

 

Spread the love
Leave A Reply

Your email address will not be published.

Flash News