ಮಾದ್ಯಮಗಳನ್ನು  ಹೊರಗಿಟ್ಟು ಅಧಿವೇಶನ  ನಡೆಸ್ತಿರುವ ಬಿಜೆಪಿದೂ ಒಂದು ಸರ್ಕಾರನಾ..ಛೀ..ಥೂ..ನಾಚಿಕೆಯಾಗ್ಬೇಕು..

0

ಬೆಂಗಳೂರು:ಇದು ನಿರೀಕ್ಷಿತ ಬಿಡಿ..ಇಂಥಾ ಸರ್ಕಾರದಿಂದ ಇನ್ನೆಂಥದ್ದನ್ನು ನಿರೀಕ್ಷಿಸ್ಲಿಕ್ಕೆ ಆಗುತ್ತೆ ಹೇಳಿ..ಜನಪರ ಆಡಳಿತವನ್ನಂತೂ ಕೊಡ್ಲಿಕ್ಕೆ ಯೋಗ್ಯತೆ ಇಲ್ಲದ ಬಿಎಸ್ ವೈ ನೇತೃತ್ವದ ಬಿಜೆಪಿ ಸರ್ಕಾರ ತನ್ನ ವಿರುದ್ಧ ಸೊಲ್ಲೆತ್ತುವ,ತನ್ನ ಸರ್ಕಾರದ ಆಡಳಿತ ವೈಖರಿಯನ್ನು ಪ್ರಶ್ನಿಸುವ ಎಲ್ಲಾ ಧ್ವನಿಗಳನ್ನು ಅಡಗಿಸುವಂಥ ಕೆಲಸವನ್ನು ಮಾಡುತ್ತಲೇ ಬಂದಿದೆ.ಇದರ ಭಾಗವಾಗಿ ಕಳೆದ ಬಾರಿಯಂತೆ ಈ ಬಾರಿಯೂ ವಿಧಾನಮಂಡಲದ ಅಧಿವೇಶನದಿಂದ ಮಾದ್ಯಮಗಳನ್ನು ಸಂಪೂರ್ಣವಾಗು ಹೊರಗಿಡುವ ಕೆಲಸವನ್ನು ಮಾಡುತ್ತಿದೆ ಎನ್ನುವ ಸ್ಪೋಟಕ ಸತ್ಯ ಹೊರಬಿದ್ದಿದೆ.

 ಫೆಬ್ರವರಿ 17ರಿಂದ ವಿಧಾನ ಮಂಡಲ ಅಧಿವೇಶನ ಆರಂಭವಾಗುತ್ತಿರುವ  ಹಿನ್ನೆಲೆಯಲ್ಲಿ ದೃಶ್ಯ  ಮಾದ್ಯಮಗಳು ಬಿಜೆಪಿ ಸರ್ಕಾರದ ಆಡಳಿತ ವೈಖರಿಯ ಕುರಿತು ಸೃಷ್ಟಿಯಾಗಬಹು ದಾದ ಕೋಲಾಹಲವನ್ನು ಬಿಂಬಿಸೊಕ್ಕೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ.ಆದ್ರೆ ಆ ಪ್ರಯತ್ನಕ್ಕೆ ತಣ್ಣಿರೆರಚುವ ಪ್ರಯತ್ನಗಳನ್ನು ಬಿಎಸ್ ವೈ ಸರ್ಕಾರ ಮಾಡುತ್ತಿದ್ದು,ಈಗಾಗಲೇ ವಿಧಾನಸಭೆ ಹಾಗೂ ವಿಧಾನಪರಿಷತ್ ಸ್ಪೀಕರ್ ಗಳಿಬ್ಬರೂ ಮಾತುಕತೆ ನಡೆಸಿ ಮಾದ್ಯಮ ನಿರ್ಭಂಧಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆನ್ನಲಾಗಿದೆ.

ಮಾದ್ಯಮಗಳ ನಿರ್ಬಂಧವನ್ನು ಖಂಡಿಸಿ ಕಳೆದ ಬಾರಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಮಾದ್ಯಮಗಳು ಪ್ರತಿಭಟನೆ ನಡೆಸಿದ ಸಂದರ್ಭ(ಸಂಗ್ರಹ ಚಿತ್ರ)
ಮಾದ್ಯಮಗಳ ನಿರ್ಬಂಧವನ್ನು ಖಂಡಿಸಿ ಕಳೆದ ಬಾರಿ ಮಾಜಿ ಸಿಎಂ ಎಚ್.ಡಿ ಕುಮಾರ ಸ್ವಾಮಿ ನೇತೃತ್ವದಲ್ಲಿ ಮಾದ್ಯಮಗಳು ಪ್ರತಿಭಟನೆ ನಡೆಸಿದ ಸಂದರ್ಭ (ಸಂಗ್ರಹ ಚಿತ್ರ)

ವಿಧಾನ ಮಂಡಲ ಅಧಿವೇಶನಕ್ಕೆ ಮೀಡಿಯಾ ಕ್ಯಾಮೆರಾಗಳು ಯಾವುದೇ ಕಾರಣಕ್ಕೂ ಎಂಟ್ರಿಯಾಗಬಾರದು.ಪತ್ರಕರ್ತರಿಗೆ ಮಾತ್ರ ಗ್ಯಾಲರಿಯಲ್ಲಿ ಕುಳಿತುಕೊಂಡು ಬರೆದುಕೊಳ್ಳಲಿಕ್ಕಷ್ಟೇನೆ ಅವಕಾಶ ಮಾಡಿಕೊಡಲಾಗಿದೆ.ಕ್ಯಾಮೆರಾಗಳನ್ನು ಹೊರಗಿಟ್ಟೇ ಅಧಿವೇಶನ ನಡೆಸಿ ಯಶಸ್ವಿಯಾಗಿದ್ದರಿಂದ ಪ್ರೇರಣೆ ಪಡೆದೇ ಆ ನಿರ್ಧಾರವನ್ನು ಈ ಬಾರಿಯೂ ಮುಂದುವರೆಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಲಾಗ್ತಿದೆ.

ಸರ್ಕಾರದ ಈ  ನಿರ್ದಾರದಿಂದಾಗಿ ಮಿಡಿಯಾ ಕ್ಯಾಮರಾಗಳಿಗೆ ವಿಧಾನಸಭಾ ಸಭಾಂಗಣದ ಒಳಗೆ ಪ್ರವೇಶವಿರುವುದಿಲ್ಲ.ಕಲಾಪದ ಪ್ರಸಾರಕ್ಕೆ ಯಾವುದೇ ಅವಕಾಶವಿಲ್ಲ.ಹಾಗಾಗಿನೇ ಸಚಿವಾಲಯ,ಇದುವರೆಗೂ ಕ್ಯಾಮರಾಮನ್ ಗಳಿಗೆ ವಿಧಾನಸಭೆಯ ಪಾಸ್ ನೀಡಿಲ್ಲ.ವರದಿಗಾರರು ಮಾತ್ರ ಒಳಗೆ ಕುಳಿತು ವರದಿಗಾರಿಕೆ ಮಾಡಬಹುದಾಗಿರುತ್ತಷ್ಟೇ.

ಫೆ.17 ರಿಂದ ಆರಂಭವಾಗಲಿರುವವಿಧಾನಸಭೆ ಜಂಟಿ ಅಧಿವೇಶನಕ್ಕೆ ರಾಜ್ಯಪಾಲ ವಿ.ಆರ್ ವಾಲ ಆಹ್ವಾನಿಸಿದ ಸ್ಪೀಕರ್ ಕಾಗೇರಿ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ
ಫೆ.17 ರಿಂದ ಆರಂಭವಾಗಲಿರುವವಿಧಾನಸಭೆ ಜಂಟಿ ಅಧಿವೇಶನಕ್ಕೆ ರಾಜ್ಯಪಾಲ ವಿ.ಆರ್ ವಾಲ ಆಹ್ವಾನಿಸಿದ ಸ್ಪೀಕರ್ ಕಾಗೇರಿ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ.

ಬಿಎಸ್ ವೈ ಸರ್ಕಾರದ ಮಾದ್ಯಮ ನಿರ್ಬಂಧದ ಆಲೋಚನೆಗೆ ವಿಪಕ್ಷಗಳಿಂದ ವ್ಯಾಪಕ ವಿರೋಧ-ಟೀಕೆ ಕೇಳಿಬಂದಿದೆ.ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾ ಮಾದ್ಯಮಗಳನ್ನು ಹೊರಗಿಟ್ಟು ಅಧಿವೇಶನ ನಡೆಸಿರುವಂಥ ಕೆಟ್ಟ ಸರ್ಕಾರ ಬಿಜೆಪಿದು.ನಮ್ಮನ್ನು ಎಚ್ಚರಿಸುವ,ನಾವು ಎಡವಿದಾಗ ನಮ್ಮನ್ನು ಮೇಲಕ್ಕೆತ್ತುವ,ಸಾರ್ವಜನಿಕ ಜೀವನದಲ್ಲಿ ಶಿಸ್ತು ಹಾಗೂ ಕ್ರಮಬದ್ಧವಾಗಿ ನಡೆದುಕೊಳ್ಳುವಂಥೆ ಮಾಡುವ ವಾಚ್ ಡಾಗ್ಸ್ ಗಳನ್ನು ದೂರವಿಡುವುದು ಎಷ್ಟು ಸರಿ,ಇದು ಮಾದ್ಯಮದ ಮೇಲೆ ಸರ್ಕಾರ ನಡೆಸುತ್ತಿರುವ ಕೊಲೆ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿವೆ.

ಉತ್ತಮವಾಗಿ ಆಡಳಿತ ಮಾಡುತ್ತಿದ್ದುದ್ದೇ ಆದ್ರೆ ಮಾದ್ಯಮಗಳಿಗೇಕೆ ಹೆದರಬೇಕು.ಅವರನ್ನು ಹೊರಗಿಡುವ ಕೆಲಸವನ್ನೇಕೆ ಮಾಡಬೇಕು..ಮಾದ್ಯಮಗಳನ್ನು ಹೊರಗಿಡುವ ಮೂಲಕ ತನ್ನ ಬಂಡವಾಳ ಹಾಗೂ ಅಸಲೀಯತ್ತನ್ನು ಸಾರ್ವಜನಿಕವಾಗಿ ತಾನೇ ಪ್ರದರ್ಶಿಸಿಕೊಳ್ಳುತ್ತಿದೆ ಎಂದು ಕುಹಕವಾಡಿದ್ದಾರೆ.

ಅದೇನೇ ಆಗಲಿ,ಕಳೆದ ಬಾರಿಯಂತೆ ಈ ಬಾರಿಯೂ ವಿದ್ಯುನ್ಮಾನ ಮಾದ್ಯಮಗಳ ಮೇಲೆ ನಿಯಂತ್ರಣ ಹೇರುವಂಥ ಕೆಲಸವನ್ನು ಜವಾಬ್ದಾರಿಯುತ ಸರ್ಕಾರವಾಗಿ ಬಿಜೆಪಿ ಮಾಡ್ತಿರುವುದು ಖಂಡನಾರ್ಹ ಹಾಗೂ ನಾಚಿಕೆಗೇಕು ಕೂಡ.

Spread the love
Leave A Reply

Your email address will not be published.

Flash News