ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್‌ ಕತ್ತರಿಸದೆ ಬರ್ತಡೇ ಆಚರಿಸಿಕೊಂಡ ದರ್ಶನ್

0

ಬೆಂಗಳೂರು:ಚಾಲೆಜಿಂಗ್ ಸ್ಟಾರ್ ದರ್ಶನ್ ಗೆ ಇಂದು ಹುಟ್ಟು ಹಬ್ಬದ ಸಂಭ್ರಮ.ಹುಟ್ಟು ಹಬ್ಬದ ಮುನ್ನಾದಿನವೇ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಕಳೆದ ರಾತ್ರಿಯೇ ಬೆಂಗಳೂರಿನ ರಾಜಾರಾಜೇಶ್ವರಿನಗರದ ನಿವಾಸದಲ್ಲಿ ಕುಟುಂಬ ಹಾಗೂ ಅಭಿಮಾನಿಗಳೊಂದಿಗೆ ಬರ್ತ್ ಡೇ ಆಚರಣೆ ಮಾಡಿಕೊಂಡರು.

ದಾಸನ ಹುಟ್ಟುಹಬ್ಬದ ವಿಶೇಷ ಎಂದ್ರೆ ಕೇಕ್ ಕತ್ತರಿಸದೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದು.ಇದೇ ವೇಳೆ  ರಾಬರ್ಟ್ ಚಿತ್ರದ ಟೀಸರ್ ಬಿಡುಗಡೆ ಮಾಡಲಾಯಿತು.ದರ್ಶನ್‌ ನೋಡಲು ಕಿಲೋ ಮೀಟರ್ ಗಟ್ಟಲೇ ಸಾಲುಗಟ್ಟಿ ನಿಂತು  ಅಭಿಮಾನಿಗಳು ಶುಭಾಷಯ ಕೋರಿದ್ರು.ಸೆಲ್ಫಿಗೆ ಮುಗಿಬಿದ್ದರೂ ಮೊದಲೇ ಹೇಳಿದಂತೆ ಯಾರಿಗೂ ಸೆಲ್ಪಿ ನೀಡಲಿಲ್ಲ.ಬದಲಿಗೆ ಪ್ರತಿಯೊಬ್ಬ ಅಭಿಮಾನಿಗೆ ಥ್ಯಾಂಕ್ಸ್ ಕೊಟ್ಟರು.ಇದರ  ಹೊರತಾಗ್ಪೋಯೂ ಟೋ ಕ್ಲಿಕಿಸಲು ಹೋದ ಅಭಿಮಾನಿಗಳ ಮೊಬೈಲ್ ಕಿತ್ತುಕೊಳ್ಳುತ್ತಿತ್ತು ಡಿ ಬಾಸ್‌ ಟೀಮ್.

ಸೆಲಬ್ರಿಟಿಗಳಿಂದ ಶುಭಾಷಯ: ರಾಜ್ಯದ ವಿವಿಧ ಕಡೆಯಿಂದ ಬಂದಿದ್ದ ದರ್ಶನ್ ಅಭಿಮಾನಿಗಳು ಕೇಕ್,ಬ್ಯಾನರ್ ಬದಲು ಅಕ್ಕಿ,ದವಸ ಧಾನ್ಯ ತಂದು ದರ್ಶನ್‌ ಗೆ ನೀಡಿದ್ರು.ನಟ ಆದಿತ್ಯ,ಸೃಜನ್ ಲೋಕೇಶ್,ವಿನೋದ್ ಪ್ರಭಾಕರ್ ಸೇರಿದಂತೆ ಅನೇಕ ನಟರು ಕೂಡ ಆಗಮಿಸಿ ದರ್ಶನ್ ಗೆ ಶುಭಾಷಯ ಕೋರಿದ್ರು.ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದರಿಂದ ನುಕ್ಕು ನುಗ್ಗಲು ಉಂಟಾಗಿತ್ತು.ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

ಇದೇ ವೇಳೆ ಮಾತನಾಡಿದ ನಟ ದರ್ಶನ್ ಹುಟ್ಟುಹಬ್ಬ ಪ್ರತಿವರ್ಷದಂತೆ ಈ ವರ್ಷವೂ ಇದೆ. ಅಭಿಮಾನಿಗಳು ನನ್ನಮಾತಿಗೆ ಬೆಲೆಕೊಟ್ಟು ಮೊಲ, ಬಾತು ಕೋಳಿ ಗಿಫ್ಟ್ ತಂದಿದ್ದಾರೆ .ಕಳೆ ಬಾರಿಯಂತೆ ಈ ಬಾರಿಯೂ ಕೇಕ್ ಇಲ್ಲ- ಎಲ್ಲಾ ನೀಟಾಗಿದೆ.ಇವ್ರು ಕೊಡೋ ದವಸ ಧಾನ್ಯಗಳು ಸಾಕಷ್ಟು ಜನ್ರಿಗೆ ಉಪಯೋಗ ಆಗ್ತಿದೆ. ಅಭಿಮಾನಿಗಳು ಕೊಟ್ಟ ಈ ದಾನ ಮನೆ ತುಂಬುತ್ತಿದೆ ಎಂದರು.

ಇನ್ನು ಮನರಂಜೆ ಹಿನ್ನಲೆಯಲ್ಲಿ ಮಾತನಾಡಿದ ದರ್ಶನ್‌, ರಾಬರ್ಟ್ ಟೀಸರ್ ನಲ್ಲಿ ನೀವು ಈಗ ನೋಡಿರೋದು 10% ಮಾತ್ರ. ರಾಜವೀರ ಮದಕರಿ ಶೂಟಿಂಗ್ ಶುರುವಾಗಿದೆ ಮುಂದೆ ಹೇಳ್ತಿನಿ.ಇದೇ ವೇಳೆ ಕೆಲವು ಆಂಗ್ಲ ಮಾದ್ಯಮಗಳು ಇಂಗ್ಲೀಷ್‌ ನಲ್ಲಿ ಬೈಟ್‌ ಕೇಳಿದ್ವು.ಇದಕ್ಕೆ ಉತ್ತರಿಸಿದ ದರ್ಶನ್‌, ಕಾರ್ಪೋರೇಷನ್ ಸ್ಕೂಲ್ ನಲ್ಲಿ ಓದಿರೋನಿಗೆ ಇಂಗ್ಲಿಷ್ ಎಲ್ ಬರುತ್ತೆ ಎಂದ್ರು.

ಬರ್ತಡೇ ದಿನವೂ ಡಬ್ಬಿಂಗ್:‌ಕಷ್ಟಪಟ್ಟು ಜೀವನದಲ್ಲಿ ಮೇಲೆ ಬಂದಿರುವ ದರ್ಶನ್‌ ಬರ್ತಡೇ ದಿನವೂ ಕೆಲಸ ಮಾಡಿದ್ದು ವಿಶೇಷ.ಬಸವಣ್ಣ ಅವರ ಕಾಯಕವೇ ಕೈಲಾಸ ಎನ್ನುವ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟಿರುವ  ದಾಸ ತಮ್ಮ ಬಹು ನಿರೀಕ್ಷೆಯ ರಾಬರ್ಟ್ ಚಿತ್ರಕ್ಕೆ ಡಬ್ಬಿಂಗ್ ಮಾಡಿಕೊಟ್ರು. ಪ್ರತಿವರ್ಷ ಸಹ ಬರ್ತಡೇ ದಿನ ಡಬ್ಬಿಂಗ್ ಅಥವಾ ಸಿನಿಮಾ ಕೆಲಸದಲ್ಲಿ ಭಾಗಿಯಾಗುವ ಸಂಪ್ರದಾಯ ಮುಂದುವರೆಸಿಕೊಂಡು ಬಂದಿರುವ ದರ್ಶನ್ ಎರಡು ಮೂರು ಗಂಟೆಗಳ ಕಾಲ ರಾಬರ್ಟ್ ಡಬ್ಬಿಂಗ್ ನಲ್ಲಿ ಭಾಗಿಯಾದ್ರು.

 

 

Spread the love
Leave A Reply

Your email address will not be published.

Flash News