RR  ನಗರ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ:ಬಿಜೆಪಿ ನಾಯಕರಿಂದ್ಲೂ ಒತ್ತಡ ಇಲ್ಲ

0

ಬೆಂಗಳೂರು:ಇದಕ್ಕೇ ಹೇಳೋದು ಮಾಸ್ಟರ್ ಸ್ಟ್ರೋಕ್..ಆರ್ ಆರ್ ನಗರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡ್ತೀನಂಥ ಹೇಳ್ತಿದ್ದ ಬಿಜೆಪಿ ಮುಖಂಡರು ಅನರ್ಹ ಶಾಸಕ ಮುನಿರತ್ನಂಗೆ ಹೇಳ್ತಿದ್ದರೂ,ಹಿಂದಿನಿಂದಲೇ ಅವರಿಗೆ ಟಿಕೆಟ್ ದಕ್ಕದಂತೆ ಮಾಡುವ ಹುನ್ನಾರವನ್ನೂ ನಡೆಸುತ್ತಿದ್ದಾರಾ ಗೊತ್ತಿಲ್ಲ.ಇಂತದ್ದೊಂದು ಅನುಮಾನಕ್ಕೆ ಕಾರಣವಾಗಿದ್ದು ಬಿಜೆಪಿ ಯುವ ಮುಖಂಡ ತುಳಸಿ ಮುನಿರಾಜು ಅವರ ಹೇಳಿಕೆ,ವರ್ತನೆ ಹಾಗೂ ಆತ್ಮವಿಶ್ವಾಸ.

ಗಜಪ್ರಸದವಂತಿದ್ದ ಸಂಪುಟ ರಚನೆ ಕಾರ್ಯವೇನೋ ಮುಗಿದು ನೆಮ್ಮದಿಯ ನಿಟ್ಟುಸಿರು ಬಿಡ್ಲಿಕ್ಕೆ ಅಣಿಯಾಗುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್ ವೈ ಹಾಗೂ ಪಕ್ಷದ ವರಿಷ್ಠರಿಗೆ ತಲೆನೋವಾಗುವಂಥ ಬಾಂಬೊಂದನ್ನು ಎಸೆದಿದ್ದಾರೆ ತುಳಸಿ ಮುನಿರಾಜು.ಯಾವುದೇ ಕಾರಣಕ್ಕೂ ಮುನಿರತ್ನ ವಿರುದ್ದ ದಾಖಲಿಸಿರುವ ಕೇಸ್ ವಾಪಸ್ ಪಡೆಯೊಲ್ಲ,ಅದಕ್ಕೆ ನನ್ನ ವರಿಷ್ಠರಿಂದ್ಲೂ ಯಾವುದೇ ಒತ್ತಡ ಕೇಳಿಬಂದಿಲ್ಲ.ಹಾಗಾಗಿ ನಾನೇ ಅಲ್ಲಿ ಬಿಜೆಪಿ ಕ್ಯಾಂಡೇಟ್ ಎನ್ನುವುದನ್ನು ಸೂಚ್ಯವಾಗಿ ಹೇಳಿದ್ದಾರೆ ತುಳಸಿ.

ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ವೇಳೆಯಲ್ಲಿ ನಕಲಿ ವೋಟರ್ ದಂಧೆಯನ್ನೇ ನಡೆಸುತ್ತಿದ್ದ ಮಾಫಿಯಾವನ್ನು  ರೆಡ್ ಹ್ಯಾಂಡಾಗಿ ಸೀಜ್ ಮಾಡಿ ಆ ಬಗ್ಗೆ ಮುನಿರತ್ನ ಸೇರಿದಂತೆ ಹಲವರ ವಿರುದ್ಧ ಕೇಸ್ ಹಾಕಿದ್ರು ತುಳಸಿ ಮುನಿರಾಜು.

ಮುನಿರತ್ನ ಗೆದ್ದರೂ ಕೋರ್ಟ್ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ಮುನಿರತ್ನ ಬೆಚ್ಚಿಬಿದ್ದಿದ್ದರು.ಮುನಿರತ್ನರನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದ್ದ ಈ ಪ್ರಕರಣದಿಂದ್ಲೇ ಬಿಜೆಪಿಗೆ ಹೆದರಿ ಕಾಂಗ್ರೆಸ್ ತೊರೆದು ಅನರ್ಹತೆಯ ಶಿಕ್ಷೆಯನ್ನು ಎದುರಿಸುವಂತಾಗಿದ್ದು ಸುಳ್ಳಲ್ಲ.

ಆದ್ರೆ ಈ ಪ್ರಕರಣದಲ್ಲಿ ತುಳಸಿ ಮುನಿರಾಜು ದಾಖಲಿಸಿರುವ ಪ್ರಕರಣವನ್ನು ವಾಪಸ್ ಪಡೆದು ಕ್ಲೀನ್ ಚಿಟ್ ಕೊಡಿಸುವಂತೆ ಮಾಡುವ ಜವಾಬ್ದಾರಿ ನಮ್ಮದು ಎಂದು ಪಕ್ಷದ ವರಿಷ್ಠರು ಭರವಸೆ ಕೊಟ್ಟ ಮೇಲೆಯೇ ಧೈರ್ಯ ಮಾಡಿ ಕೈಗೆ ಮೋಸ ಮಾಡಿ ಬಿಜೆಪಿ ಸೇರ್ಪಡೆಯಾಗಿದ್ದು ಕೂಡ ಸುಳ್ಳಲ್ಲ.ಅನರ್ಹವಾದ ಶಾಸಕರೆಲ್ಲಾ ಚುನಾವಣೆಯಲ್ಲಿ ನಿಂತು ಅರ್ಹರಾಗಿರುವಾಗ್ಲೇ ಅವರ ಜತೆಯಲ್ಲೇ ಇದ್ದ ಮುನಿರತ್ನ ಅವರಿಗೆ ಆ ಭಾಗ್ಯ ಸಿಕ್ಕಿಲ್ಲ.ಇದಕ್ಕೆ ಕ್ಷೇತ್ರದ ಚುನಾವಣೆ ನಿಗಧಿಯಾಗದಿರುವುದೇ ಕಾರಣ.ಚುನಾವಣೆ ಯಾವಾಗ ನಡೆಯಲಿದೆ..ಕೇಂದ್ರ ನಡೆಸಲಿದೆ ಎನ್ನುವ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಮುನಿರತ್ನಂ ನಾಯ್ಡುಗೆ ಬಿಜೆಪಿಯಿಂದ ಸ್ಪರ್ಧಿಸಲು ಟಿಕೆಟ್ ಸಿಗುತ್ತೆ ಎನ್ನುವ ಆತ್ಮವಿಶ್ವಾಸ ವ್ಯಾಪಕವಾಗಿದೆ.ಆದ್ರೆ ಅದಕ್ಕೆ ತೊಡರಾಗಿರುವ ತುಳಸಿಯನ್ನು ಹೇಗೆ ಸೈಡ್ ಗೆ ಹಾಕಿ,ಟಿಕೆಟ್ ಪಡೆಯುವುದೋ ಎನ್ನೋದೇ ಗೊತ್ತಾಗ್ತಿಲ್ಲ.ಸಿಎಂ ಯಡಿಯೂರಪ್ಪರಾದಿಯಾಗಿ ದೊಡ್ಡವರ ಬಳಿಯೆಲ್ಲಾ ತುಳಸಿಗೆ ಹೇಳಿಸಿದ್ರೂ ತುಳಸಿ ಮಾತ್ರ ಹಿಡಿದ ಪಟ್ಟನ್ನು ಸಡಿಲಿಸಿಲ್ಲ.

ಕೈ ಪಕ್ಷದ ಶಾಸಕರಾಗಿದ್ದಾಗ ಬಿಜೆಪಿಗರ  ವಿರುದ್ಧ ಹಲ್ಲೆ ಮಸೆಯುತ್ತಲೇ ದ್ವೇಷದ ರಾಜಕಾರಣ ಮಾಡಿ,ಅಮಾಯಕರನ್ನು ಜೈಲಿಗೆ ಕಳುಹಿಸಿದಂತ ಮುನಿರತ್ನ ಪರವಾಗಿ ಕೆಲಸ ಮಾಡ್ಬೇಕೆನ್ನುವುದು ಯಾವ ತರದ ಅನಿಷ್ಟವೋ ಗೊತ್ತಾಗ್ತಿಲ್ಲ.ನಮ್ಮ ಆತ್ಮಸಾಕ್ಷಿ ಈ ವಿಷಯಕ್ಕೆ ಖಂಡಿತಾ ಒಪ್ಪೊಲ್ಲ ಎನ್ನುವ ವಾದ ಮುಂದಿಟ್ಟುಕೊಂಡೇ ತುಳಸಿ ದೂರು ವಾಪಸ್ ಪಡೆಯೋದಾಗ್ಲಿ,ಮುನಿರತ್ನಂ ಜತೆ ಕೈ ಜೋಡಿಸುವುದಾಗ್ಲಿ..ಅವರ ಬೆನ್ನಿಗೆ ನಿಂತು ಕೆಲಸ ಮಾಡುವುದಾಗ್ಲಿ ಸಾಧ್ಯವೇ ಇಲ್ಲ ಎನ್ನುವ ಮಾತನ್ನು ಸ್ಪಷ್ಟಪಡಿಸಿದ್ದಾರೆ.ಇದು ಪಕ್ಷದ ವರಿಷ್ಠರಿಗಿಂತ ಮುನಿರತ್ನಂಗೆ ಎದೆ ಹೊಡೆಯುವಂತೆ ಮಾಡಿದೆ.

ಪಕ್ಷದ ವರಿಷ್ಠರು ಹೇಳಿದ  ಮೇಲೂ ಬಿಜೆಪಿ ಟಿಕೆಟ್ ಪಡೆದೇ ತೀರುತ್ತೇನೆ..ತುಳಸಿಯನ್ನು ವರಿಷ್ಠರು ಸಮಾಧಾನ ಮಾಡಿ ನನ್ನ ಪರವಾಗಿಯೇ ಕೆಲಸ ಮಾಡ್ಲಿಕ್ಕೆ ಹಚ್ಚುತ್ತಾರೆನ್ನುವ ನಿರೀಕ್ಷೆಗಳೆಲ್ಲಾ ನುಚ್ಚು ನೂರಾಗಿದೆ. ತುಳಸಿ  ಅವ್ರೇ ಕ್ಷೇತ್ರ ಬಿಟ್ಟುಕೊಡುವ ಮಾತೂ ಇಲ್ಲ…ನನ್ನ ರಾಜಕೀಯ ಶತೃ ಮುನಿರತ್ನನ ಪರ ಕೆಲಸ ಮಾಡುವ ಪ್ರಮೇಯವೇ ಇಲ್ಲ.ಈ ವಿಷಯದಲ್ಲಿ ನನ್ನದು ಒಂದೇ ನಿಲುವು…ವಾದ..ಅದರಂತೆ ವರಿಷ್ಠರು ಕೂಡ ತುಳಸಿ ಬೆನ್ನಿಗೆ ನಿಂತಂತೆ ಹೇಳಿಕೆ ಕೊಡ್ತಿರುವುದನ್ನು ನೋಡಿದ್ರೆ ತುಳಸಿ ಬಗ್ಗೆ ಮುನಿ ಸದಾ ಒಂದು ಆತಂಕ-ಭಯ ಇಟ್ಟುಕೊಂಡೇ ಇರ್ಬೇಕಾದ ಸ್ಥಿತಿ ನಿರ್ಮಾಣವಾದಂತಾಗಿದೆ.ಸೋ ಆರ್ ಆರ್ ನಗರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಗಾಗಿಯೇ ತುಳಸಿ ಮುನಿರಾಜು ಗೌಡ ಹಾಗೂ ಮುನಿರತ್ನ ನಡುವೆ ದೊಡ್ಡ  ಪೈಪೋಟಿಯೇ ಏರ್ಪಡುವ ಸಾಧ್ಯತೆಗಳೇ ದಟ್ಟವಾಗಿವೆ.

Spread the love
Leave A Reply

Your email address will not be published.

Flash News