ಮೊಮ್ಮಗಳ ಮೇಲೆ ನಡೆದ ಹಲ್ಲೆ ಕಂಡು ಕರುಳುಕಿತ್ತು ಬಂತು

0

ಬೆಂಗಳೂರು: ತಮ್ಮ ಮೊಮ್ಮಗಳು..ಆ ರೀತಿ ಕೆಲಸ ಮಾಡ್ಲಿಕ್ಕೆ ಸಾಧ್ಯವೇ ಇಲ್ಲ.ಆಕೆ ಗೌರವಸ್ಥ ಕುಟುಂಬದ ಹಿನ್ನಲೆಯುಳ್ಳವಳು..ಅವಳು ಯಾವ್ದೇ ತಪ್ಪು ಮಾಡಿದ್ದಾಳೆ..ಅದೂ ದೇಶದ್ರೋಹದ ಘೋಷಣೆ ಕೂಗುವಂಥ ತಪ್ಪು ಮಾಡಿರೊಕ್ಕೆ ಸಾಧ್ಯವೇ ಇಲ್ಲ…ಇದು ಕಾಶ್ಮೀರ್ ಫ್ರೀ ಘೊಷಣೆ ಕೂಗಿ ಅಮೂಲ್ಯಳನ್ನು ಹಿಂಬಾಲಿಸಿರುವ ಆರುದ್ರಾ ಅಲಿಯಾಸ್.. ಆರ್ದ್ರಾ ಅಲಿಯಾಸ್ ಅನ್ನಪೂರ್ಣಳ ಬಗ್ಗೆ ಆಕೆಯ ಅಜ್ಜ-ಅಜ್ಜಿ ಹೇಳಿದ ಕಾನ್ಫಿಡೆಂಟ್ ಮಾತುಗಳು. ಮಲ್ಲೇಶ್ವರಂನ 11 ನೇ ಕ್ರಾಸ್ ನಲ್ಲಿರುವ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿರುವ ಆರ್ದ್ರಾ ಅವರ ಅಜ್ಜ ರಾಮಸ್ವಾಮಿ ಬ್ಯಾಂಕ್ ನ ನಿವೃತ್ತ ಉದ್ಯೋಗಿ.ತುಂಬಾ ಸಂಪ್ರದಾಯಸ್ಥ ಕುಟುಂಬ ಅವರದು.ತಾವಾಯ್ತು ತಮ್ಮ ಪಾಡಾಯ್ತು.. ದೇವರುದಿಂಡರೆಂದುಕೊಂಡು ನೆಮ್ಮದಿಯಿಂದ ವಾಸವಾಗಿದ್ದ ಕುಟುಂಬಕ್ಕೆ ತಮ್ಮ ಮೊಮ್ಮಗಳ ಕೃತ್ಯ ಹಾಗೂ ಆಕೆಯ ಅರೆಸ್ಟ್ ದಿಗ್ಬ್ರಾಂತಿಯನ್ನೇ ಉಂಟುಮಾಡಿದೆ.ಪೊಲೀಸರ ನೆರಳೇ ಸೋಕದ ತಮ್ಮ ಮನೆಗೆ ಪೊಲೀಸರ ದಂಡು ಆಗಮಿಸಿದ್ದಕ್ಕೆ ತೀವ್ರ ಶಾಕ್ ಗೆ ಒಳಗಾದ ವೃದ್ಧ ದಂಪತಿ.ಅಂತರ್ಯದಲ್ಲಿ ನೋವಿದ್ದರೂ ಅದನ್ನೆಲ್ಲೂ ತೋರಿಸಿಕೊಳ್ಳದೆ ತಮ್ಮ ಮೊಮ್ಮಗಳ ಬಗ್ಗೆ ಕಾನ್ಫಿಡೆಂಟಾಗಿ ಮಾದ್ಯಮಗಳ ಮುಂದೆ ಮಾತ್ನಾಡಿದ್ರು.
 ಮೊಮ್ಮಗಳು ಫ್ಯಾಷನ್ ಡಿಸೈನಿಂಗ್ ಕೋರ್ಸನ್ನು ಇಷ್ಡಪಟ್ಟೇ ಮಾಡಿದ್ಲು,ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಆಕೆ ಓದಿದ್ದು.ಅಲ್ಲಿ ಓದಿದೋಳು ಎಂದ್ರೆ ಎಷ್ಟು ಪ್ರತಿಭಾನ್ವಿತೆ ಎನ್ನೋದನ್ನು ನೀವೇ ಊಹಿಸಿಕೊಳ್ಳಿ.ದೇಶಪ್ರೇಮದ ಬಗ್ಗೆ ಸದಾ ಮಾತ್ನಾಡಿದ್ತಿದ್ದ ಆಕೆ ಮೇಲೆ ಇವತ್ತು ದೇಶದ್ರೋಹದ ಆರೋಪ ಕೇಳಿಬಂದಿರೋದ್ರಿಂದ ಶಾಕ್ ಆಗಿದ್ದೇವೆ.ನಮಗೆ ಇನ್ನೂ ಅದನ್ನು ನಂಬಲಿಕ್ಕೆ ಆಗ್ತಿಲ್ಲ ಎನ್ನುವಾಗ ಅಜ್ಜ ರಾಮಸ್ವಾಮಿ ಗದ್ಗತರಾಗಿದ್ರು. 
ಫ್ಯಾಷನ್ ಡಿಸೈನಿಂಗ್ ಮುಗಿಸಿದ ಮೇಲೆ ಸಿ ವಿ ರಾಮನ್ ನಗರದಲ್ಲಿ ಕೆಲಸ ಮಾಡ್ತಿದ್ಲು.ಮನೆಗೆ ಬಂದೋಗೋದು ಕಷ್ಟವಾಗ್ತಿದೆ.ಹಾಗಾಗಿ ತನ್ನ ಫ್ರೆಂಡ್ ಪಿಜಿಯಲ್ಲಿ ಇರುತ್ತೇನೆಂದು ಇಷ್ಟಪಟ್ಟು ಇದ್ಲು.ಆಗಾಗ ಮನೆಗೆ ಬಂದೋಗುತ್ತಿದ್ಲು.ಪಿಜಿಯಲ್ಲಿ ಇರೋದು ಬೇಡ ಎಂದು ಸಣ್ಣ ಮನೆ ಮಾಡಿಕೊಡುವ ಆಲೋಚನೆಯೂ ನಮಗಿತ್ತು.ಇದೆಲ್ಲದರ ತಯಾರಿಯಲ್ಲಿರುವಾಗ್ಲೇ ಆಕೆಯ ಬಂಧನದ ಸುದ್ದಿ ಹೊರಬಿದ್ದಿದೆ.ಯಾವತ್ತೂ ಕನಸು ಮನಸಿನಲ್ಲಿಯೂ ದೇಶವಿರೋಧಿಯಾಗಿ ಆಲೋಚಿಸದ ತಮ್ಮ ಮೊಮ್ಮಗಳು ಹೀಗೊಂದು ಹೇಳಿಕೆ ಕೊಟ್ಟು ಬಂಧನಕ್ಕೊಳಗಾಗುವ ವೇಳೆ ಆಕೆ ಮೇಲೆ ನಡೆಸಲಾದ ಹಲ್ಲೆ ದೃಶ್ಯ ನೋಡ್ತಿದ್ದಂಗೆ ಕರುಳು ಕಿತ್ತು ಬಂತು ಎಂದು ವೃದ್ದ ದಂಪತಿಗಳು ಹೇಳುವಾಗ ದುಃಖ ಉಮ್ಮಳಿಸಿ ಬರ್ತಿತ್ತು.
 ಆಕೆ ಹೀಗೆ ಮಾಡ್ಲಿಕ್ಕೆ ಸಾಧ್ಯವಿಲ್ಲ.ಒಂದೊಮ್ಮೆ ಹಾಗೆ ಮಾಡಿದ್ದೇ ಆದಲ್ಲಿ ತಪ್ಪು..ಈ ಬಗ್ಗೆ ಕೂಲಂಕುಶವಾದ ಪರಿಶೀಲನೆ ನಡೆಯಬೇಕಿದೆ.ಅವಳನ್ನು ಪ್ರಜ್ನಾಪೂರ್ವಕವಾಗೇ ತಪ್ಪಿನಲ್ಲಿ ಸಿಲುಕಿಸುವ ಯತ್ನ ಮಾಡಲಾಗಿದೆಯೇ..ಆಕೆ ಈ ರೀತಿ ಮಾಡೋದ್ರ ಹಿಂದೆ ಯಾವುದಾದ್ರೂ ದ್ರೋಶದ್ರೋಹಿಗಳ ಕೈವಾಡ ಇದೆಯೇ ಎನ್ನುವುದನ್ನು ತನಿಖೆ ಮೂಲಕ ಹೊರಬರಬೇಕಿದೆ.ಸತ್ಯ ಸಮಾಧಿಯಾಗಬಾರದು ಅಷ್ಟೇ ಎಂದು ಹೇಳಿ ಹೊರಟ್ರು.   

Spread the love
Leave A Reply

Your email address will not be published.

Flash News