ತಿನ್ನೋರೇ ಇಲ್ಲದ ಇಂದಿರಾ ಕ್ಯಾಂಟೀನ್ ದರ ಹೆಚ್ಚಳವಂತೆ

0

ಬೆಂಗಳೂರು:ಇಂದಿರಾ ಕ್ಯಾಂಟೀನ್ ಆಹಾರವೂ ಇನ್ಮುಂದೆ ತುಟ್ಟಿಯಾಗುವ ಸಾಧ್ಯತೆಗಳಿವೆ. ಏಕೆಂದರೆ  ಬಿಬಿಎಂಪಿ ದರ ಪರಿಷ್ಕರಣೆಗೆ ಮುಂದಾಗಿದೆ.ಬೆಳಗ್ಗೆ 5 ರೂನಲ್ಲಿ ಸಿಗ್ತಿದ್ದ ತಿಂಡಿಯ ದರದಲ್ಲಿ5 ರೂ ಹಾಗೂ ಮಧ್ಯಾಹ್ನ ಹಾಗೂ ರಾತ್ರಿ 10 ರೂನಲ್ಲಿ ಲಭ್ಯ ವಿರ್ತಿದ್ದ ಊಟದ ದರವನ್ನು 5 ರೂ ಗೆ ಏರಿಕೆ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ.

ಗುತ್ತಿಗೆದಾರರಿಗೆ ಆರ್ಥಿಕ ಹೊರೆಯಾಗುತ್ತಿದೆ ಎನ್ನುವ ಕಾರಣ ಮುಂದಿಟ್ಟುಕೊಂಡು ದರ ಪರಿಷ್ಕರಣೆಗೆ ಬಿಬಿಎಂಪಿ ಮುಂದಾಗುತ್ತಿದೆ.ಆದ್ರೆ ಇಂದಿರಾ ಕ್ಯಾಂಟೀನ್ ಆಹಾರವನ್ನು ತಿನ್ನೋರ ಸಂಖ್ಯೆ ಗುಣಮಟ್ಟ ಇಲ್ಲ ಕಾರಣಕ್ಕೆ ತೀವ್ರ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಹೆಚ್ಚಳ ಮಾಡೋದು ಮೂರ್ಖತನ ಎನ್ನುವುದು ಬೆಂಗಳೂರಿಗರ ಅಭಿಪ್ರಾಯ.

ಕಳೆದ ಒಂದು ವರ್ಷದಿಂದ  ಇಂದಿರಾ ಕ್ಯಾಂಟೀನ್ ಆಹಾರಕ್ಕೆ ಸಬ್ಸಿಡಿಯನ್ನು ಸರ್ಕಾರ ನೀಡುತ್ತಿಲ್ಲ.ಗುತ್ತಿಗೆದಾರರು ಪ್ರತಿ ಪ್ಲೇಟ್ ಮೇಲೆ ನಿಗಧಿಪಡಿಸಿ ನೀಡುತ್ತಿರುವ ದರವೂ ಪರಿಷ್ಕರಣೆಯಾಗಿಲ್ಲ.ಇಂಥಾ ಪರಿಸ್ಥಿತಿಯಲ್ಲಿ ಅದೇ ದರವನ್ನು ಇಟ್ಕೊಂಡು ಆಹಾರ  ನೀಡೋದು ಕಷ್ಟವಾಗುತ್ತೆ ಎನ್ನುವ ಆತಂಕ ವ್ಯಕ್ತಪಡಿಸಿರುವುದರಿಂದ,ಬಿಬಿಎಂಪಿ ಗುತ್ತಿಗೆದಾರರ ಬೆನ್ನಿಗೆ ನಿಲ್ಲೊಕ್ಕೆ ಮುಂದಾಗಿದೆ ಎನ್ನಲಾಗ್ತಿದೆ.ದರ ಪರಿಷ್ಕರಣೆ  ನಾಟಕ ಆಡುವ ಮೂಲಕ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಟ್ಟು ಹಣ ಲೂಟ್ ಮಾಡುವ ಪ್ಲ್ಯಾನ್ ಕೂಡ ಇರಬಹುದೆನ್ನಲಾಗ್ತಿದೆ.

ಇನ್ನೊಂದು,ಇಂದಿರಾ ಕ್ಯಾಂಟೀನ್ ಆಹಾರಕ್ಕೆ ಕೆಲವರು ಮುಗಿಬೀಳುತ್ತಿದ್ದುದೇ ಕಡಿಮೆ ದರ ಎನ್ನುವ ಕಾರಣಕ್ಕೆ.ಈಗ ಅದೇ ದರವನ್ನು ಹೆಚ್ಚಳ ಮಾಡಲಾಗ್ತದೆ ಎಂದ್ರೆ ಜನ ಬೇರೆ ಹೊಟೇಲ್ ಕ್ಯಾಂಟೀನ್ ಗಳಿಗೆ ಹೋಗುವ ಸನ್ನಿವೇಶ ನಿರ್ಮಾಣವಾಗ್ತದೆ.ಆಗ ಜನರ ಸಂಖ್ಯೆ ಮತ್ತಷ್ಟು ಕಡಿಮೆಯಾಗುತ್ತೆ ಎನ್ನುವುದು ಇಂದಿರಾ ಕ್ಯಾಂಟೀನ್ ಆಹಾರವನ್ನು ರೆಗ್ಯೂಲರ್ ಆಗಿ ಸೇವಿಸ್ತಿರುವ ಜನಾರ್ಧನ್ ಮಾತು.

ಸ್ವಲ್ಪವೂ ಗುಣಮಟ್ಟವಿಲ್ಲದ  ಇಂದಿರಾ ಕ್ಯಾಂಟೀನ್ ಗಳನ್ನು ಉಳಿಸಿಕೊಳ್ಳೋದರಿಂದ ಯಾವುದೇ ಪ್ರಯೋಜನವಿಲ್ಲ,ಹಾಗಾಗಿ ಮುಚ್ಚಬೇಕು ಎನ್ನುವ ಮಾತು ಕೇಳಿಬರುತ್ತಿರುವಾಗ್ಲೇ ದರ ಪರಿಷ್ಕರಣೆಗೆ ಮುಂದಾಗಿರುವುದರ ಹಿಂದೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಲೂಟಿಕೋರತನ ಎದ್ದುಕಾಣುತ್ತಿದೆಯೇ ಹೊರತು,ಗ್ರಾಹಕರ ಹಿತ ಕಾಯೋ ಉದ್ದೇಶವಲ್ಲ ಎನ್ನೋದು ಸ್ಪಷ್ಟ.

 

 

Spread the love
Leave A Reply

Your email address will not be published.

Flash News