“ಸ್ಲಂ ಭರತ” ಬೆಂಬಲಿಗ ಪುಡಿರೌಡಿಗಳ ಪುಂಡಾಟಿಕೆ

0

ಬೆಂಗಳೂರು:ಪಾತಕಿ ಸ್ಲಂಭರತ ಎನ್ ಕೌಂಟರ್ ನಲ್ಲಿ ಸತ್ತೋದ್ರೂ ಆತನ ಹಿಂಬಾಲಕ ಪುಡಿ ರೌಡಿಗಳ ಕ್ಯಾತೆ ಇನ್ನು ಮುಗಿದಿಲ್ಲ ಎನಿಸುತ್ತೆ.ಭರತನ ಎನ್ ಕೌಂಟರ್ ಗೆ ರಿವೆಂಜ್ ಎನ್ನುವಂತೆ ಅವನ ಹಿಂಬಾಲಕರು ಬೆಂಗಳೂರಿನಲ್ಲಿ ತಮ್ಮ ಪುಂಡಾಟಿಕೆಯನ್ನು ಮುಂದುವರೆಸಿದ್ದಾರೆ.ರಾಜಧಾನಿಯ ಅನೇಕ ಕಡೆ ರಾತ್ರಿಯೆಲ್ಲಾ ಆಕ್ಟೀವ್ ಆಗ್ತಿರುವ ಭರತನ ಬೆಂಬಲಿಗರು ಮನೆಗಳ ಮುಂದೆ ನಿಲ್ಲಿಸಿದ್ದ ವಾಹನಗಳ ಗಾಜುಗಳನ್ನು ಪುಡಿಗೊಳಿಸಿ ಹಾನಿಯನ್ನುಂಟುಮಾಡುತ್ತಿರುವ ಬಗ್ಗೆ ದೂರುಗಳು ಬರ್ತಿವೆ.ಭರತನ ಸಾವಿಗೆ ಪ್ರತಿಕಾರ ಎನ್ನುವ ರೀತಿಯಲ್ಲಿ ಈ ಘಟನೆಗಳು ನಡೆಯುತ್ತಿದ್ದು ಪೊಲೀಸರು ಸಹ ಈ ನಿಟ್ಟಿನಲ್ಲಿ ಅವನ ಬೆಂಬಲಿಗರ ಹೆಡೆಮುರಿಕಟ್ಟುವ ಕೆಲಸ ಮಾಡ್ಬೇಕಿದೆ.ಇಲ್ಲವಾದಲ್ಲಿ ಅವನ ಬೆಂಬಲಿಗರಿಂದ ಜೀವಹಾನಿ ಉಂಟಾಗುವ ಸಾಧ್ಯತೆಯಿದೆ.ಎನ್ ಕೌಂಟರ್ ಮೂಲಕ ಪಾತಕ ಲೋಕಕ್ಕೆ ವಾರ್ನ್ ಮಾಡಿರುವ ಖಡಕ್ ಡಿಸಿಪಿ ಶಶಿಕುಮಾರ್ ಅಂಡ್ ಹಿಸ್ ಟೀಮ್ ಕಾರ್ಯಪ್ರವೃತ್ತವಾಗ್ಬೇಕಿದೆ. ಪೊಲೀಸ್ ಕಮಿಷನರ್ ಭಾಸ್ಕರ ರಾವ್ ಕೂಡ ಆ ಅಧಿಕಾರವನ್ನು ತಮ್ಮ ಪೊಲೀಸರಿಗೆ ನೀಡ್ಬೇಕಿದೆ.

 ಇದನ್ನೂ ನೋಡಿ…  “ಸ್ಲಂ ಭರತ” ಬೆಂಬಲಿಗ ಪುಡಿರೌಡಿಗಳ ಪುಂಡಾಟಿಕೆ 

 

Spread the love
Leave A Reply

Your email address will not be published.

Flash News