ಮಿಸ್ಟರ್-ಮಿಸ್ ಏಷ್ಯಾ ಗ್ಲಾಮರ್ 2020 ಸ್ಪರ್ಧೆಗೆ ಶಿವಮೊಗ್ಗದ ಪ್ರತಿಭೆ ಅದಿತಿ ಫರಿಯಾಸ್

0

ಶಿವಮೊಗ್ಗ/ಬೆಂಗಳೂರು.ಸೌಂದರ್ಯ ಕ್ಷೇತ್ರದಲ್ಲಿ ನಡೆಯುವ ಫ್ಯಾಷನ್ ಶೋಗಳಲ್ಲಿ ಮಲೆನಾಡಿನ ಪ್ರತಿಭೆಗಳು ಪಾಲ್ಗೊಂಡು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದು ಈವರೆಗೂ ಕಡಿಮೆಯೇ..ಅಂಥಾ ಕೊರಗನ್ನು ನೀಗಿದ ಪ್ರತಿಭೆ ಶಿವಮೊಗ್ಗದ ಹೆಮ್ಮೆ  ಅದಿತಿ ಮ್ಯಾಕ್ಸಿಮ್ ಪರಿಯಾಸ್.ಫ್ಯಾಷನ್ ಕ್ಷೇತ್ರದಲ್ಲಿ ಹೊಸ ಭರವಸೆ ಮೂಡಿಸಿರುವ,ಮಿಂಚು ಹರಿಸಿರುವ ಉದಯೋನ್ಮುಖ ಫ್ಯಾಷನ್ ಪ್ರತಿಭೆ ಅದಿತಿ ಸಾಧನೆಯ ಮತ್ತೊಂದು ಮೈಲಿಗಲ್ಲು ಸ್ಥಾಪಿಸುವ ಭರವಸೆ ಮೂಡಿಸಿದ್ದಾರೆ.

ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಫ್ಯಾಷನ್ ನ ರಂಗೀನ್ ಲೋಕದಲ್ಲಿ ತಮ್ಮ ಛಾಪನ್ನು ಮೂಡಿಸಿರುವ ಅದಿತಿ ಮತ್ತೊಂದು ಮಹತ್ವದ ಸ್ಪರ್ಧಾ ಹಂತ ಎಂದೇ ಕರೆಯಿಸಿಕೊಳ್ಳುವ ಮಿಸ್ಟರ್-ಮಿಸ್ ಏಷ್ಯಾ ಗ್ಲಾಮರ್ 2020 ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.ಅಂದ್ಹಾಗೆ ಅದಿತಿ ಕೇವಲ ಬೆಡಗು ಬಿನ್ನಾಣ-ಸೌಂದರ್ಯದಿಂದ ಮಾತ್ರವಲ್ಲ, ತಮ್ಮ ಪ್ರತಿಭೆ ಮೂಲಕವೇ ಈ ಹಿಂದೆ ನಡೆದ ಅನೇಕ ಸ್ಪರ್ಧೆಗಳಲ್ಲಿ ಗಮನ ಸೆಳೆದಿದ್ದಾರೆ.

ಮಲೆನಾಡಿನ ಹೆಬ್ಬಾಗಿಲ ಜಿಲ್ಲೆ ಶಿವಮೊಗ್ಗದ ಪ್ರತಿಭೆಯಾಗಿರುವ ಅದಿತಿ  ಮಿಸ್ಟರ್-ಮಿಸ್ ಏಷ್ಯಾ ಗ್ಲಾಮರ್ 2020 ಸ್ಪರ್ಧೆಯಲ್ಲಿ ಗೆದ್ದು ಜಿಲ್ಲೆಗೆ ಗೌರವ-ಹೆಮ್ಮೆ ತರಲಿದ್ದಾರೆ ಎನ್ನುವ ವಿಶ್ವಾಸದಲ್ಲಿದ್ದಾರೆ ಶಿವಮೊಗ್ಗದ ಜನತೆ.ಅಂದ್ಹಾಗೆ ಶಿವಮೊಗ್ಗದ ಜನರ ನಿರೀಕ್ಷೆ ಈ ಮೂಲಕ ಈಡೇರಲಿ,ಅದಿತಿ ಈ ಸ್ಪರ್ಧೆಯಲ್ಲಿ ಗೆಲ್ಲುವ ಮೂಲಕ ಫ್ಯಾಷನ್ ಲೋಕದಲ್ಲಿ ಮತ್ತಷ್ಟು ಮಿಂಚು ಹರಿಸಲಿ,ಆ ಮೂಲಕ ಶಿವಮೊಗ್ಗದ ಹೆಸರನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯಲಿ ಎಂದು ಹಾರೈಸಿರುವ ಶಿವಮೊಗ್ಗ ಆಕೆಗೊಂದು ಬೆಸ್ಟ್ ಲಕ್ ಹೇಳಿದೆ.

Spread the love
Leave A Reply

Your email address will not be published.

Flash News