ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ನಿಜಕ್ಕೂ ಶತಾಯುಷಿನೇ?-ವಯಸ್ಸಿನ ವಿಷಯದಲ್ಲಿ ಹಿರಿಜೀವ ಸುಳ್ಳೇಳಿದ್ರಾ?!

0
ದೊರೆಸ್ವಾಮಿ ಅವರ ವಯಸ್ಸಿನ ಬಗ್ಗೆ ದಾಖಲೆಗಳನ್ನು ಬಿಜೆಪಿಗೆ ಸಲ್ಲಿಸಿರುವ ಸಾಮಾಜಿಕ ಕಾರ್ಯಕರ್ತ ಚಾಮುಂಡಿ ಶಿವಕುಮಾರ್
ದೊರೆಸ್ವಾಮಿ ಅವರ ವಯಸ್ಸಿನ ಬಗ್ಗೆ ದಾಖಲೆಗಳನ್ನು ಬಿಜೆಪಿಗೆ ಸಲ್ಲಿಸಿರುವ ಸಾಮಾಜಿಕ ಕಾರ್ಯಕರ್ತ ಚಾಮುಂಡಿ ಶಿವಕುಮಾರ್

ಬೆಂಗಳೂರು:ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ವಿರುದ್ಧ ದೂರೊಂದು ದಾಖಲಾಗಲು ಸಿದ್ಧತೆ ನಡೆದಿದೆ.ಆ ದೂರು ಅವರ ವಯಸ್ಸಿಗೆ ಸಂಬಂಧಿಸಿದ್ದು.ಅಂದ್ಹಾಗೆ ಆ ದೂರನ್ನು ಕೊಡ್ಲಿಕ್ಕೆ ಮುಂದಾಗಿರೋರು ಯಾರ್ ಗೊತ್ತಾ..ಬಿಡಿಎನ ಅಕ್ರಮಗಳನ್ನು ಮೊದಲ ಬಾರಿಗೆ ಬಯಲಿಗೆ ತಂದ ಸಾಮಾಜಿಕ ಕಾರ್ಯಕರ್ತ ಶಿವಕುಮಾರ್(ಚಾಮುಂಡಿ ಶಿವಕುಮಾರ್).

ಅಂದ್ಹಾಗೆ ಶಿವಕುಮಾರ್ ವಾದ ಏನ್ ಗೊತ್ತಾ:ಶತಾಯುಷಿ ಎಂದೇನು ಹೇಳಿ ಕೊಂಡು ಅಡ್ಡಾಡುತ್ತಿದ್ದಾರಲ್ಲ,ಆ ದೊರೆಸ್ವಾಮಿ ಅವರು 100ರ ಗಡಿ ದಾಟಿಲ್ಲ,ಅವ್ರ ವಯಸ್ಸು 90 ವರ್ಷ ಎನ್ನೋದು.ಸಧ್ಯ ಯತ್ನಾಳ್ ಹೇಳಿಕೆ ಹಿನ್ನಲೆಯಲ್ಲಿ ದೊರೆಸ್ವಾಮಿ ಅವರ ಪರ ಹಾಗೂ ವಿರೋಧವಾಗಿ ನಡೆಯುತ್ತಿರುವ ಹೋರಾಟಗಳು ಈ ದೂರಿನಿಂದಾಗಿ ಮತ್ತೊಂದು ತಿರುವು ಪಡೆದುಕೊಳ್ಳುವ ಸಾಧ್ಯತೆಗಳಿವೆಈ ಕುರಿತಾದ EXCLUSIVE  ನ್ಯೂಸ್  ಕನ್ನಡ ಪ್ಲಾಶ್ ನ್ಯೂಸ್ ನಲ್ಲಿ.

ಎಲ್ಲರಿಗೂ ತಿಳಿದಿರುವಂತೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರು ಶತಾಯುಷಿ,ನೂರರ ಗಡಿ ದಾಟಿರುವ ಹಿನ್ನಲೆಯಲ್ಲಿ ಅವರನ್ನು ಹತ್ತಾರು ವೇದಿಕೆಗಳಲ್ಲಿ ಗೌರವಿಸಲಾಗಿದೆ ಕೂಡ. ದೊರೆಸ್ವಾಮಿ ಅವರು ಕೂಡ ಅದೇ ವಾದ ಮುಂದುವರೆಸಿಕೊಂಡು ಬಂದಿದ್ರು. ಆದ್ರೆ ಅದೇ ವಯಸ್ಸು ಇದೀಗ ದೊಡ್ಡ ವಿವಾದವನ್ನೇ ಹುಟ್ಟಿಸಿದೆ.ದೊರೆಸ್ವಾಮಿ ಅವರಿಗೆ 100 ವರ್ಷ ಆಗೇ ಇಲ್ಲ.ಅವರು ಸುಳ್ಳು ಹೇಳ್ತಿದಾರೆ. ಅವರ ನೈಜ ವಯಸ್ಸು 90 ಎನ್ನೋದು ಅವರ ವಯಸ್ಸಿನ ಕುರಿತು ದೂರು ನೀಡುತ್ತಿರುವವರ ವಾದ.ಇದು ಸಧ್ಯ ದೊರೆಸ್ವಾಮಿ ವಿರುದ್ಧ ಒಂದು ಗುಂಪು ನಡೆಸುತ್ತಿರುವ ಹೋರಾಟದ ಬೆಂಕಿಗೆ ತುಪ್ಪ ಸುರಿದಂತಾಗುತ್ತೆ ಎನ್ನೋದು ಮಾತ್ರ ಸತ್ಯ.
ಏನಿದೆ ದಾಖಲೆ: ನಮ್ಮ ನಾಡಿನ ಸಾಕ್ಷಿಪ್ರಜ್ನೆ..ಹಿರಿಯ ಜೀವ-ಧೀಮಂತ ವ್ಯಕ್ತಿತ್ವ ಎಂದೆಲ್ಲಾ ಕರೆಯಿಸಿಕೊಳ್ಳುವ ದೊರೆಸ್ವಾಮಿ ವಿರುದ್ಧ ಅವರಿಗೆ ನೂರು ವರ್ಷಗಳೇ ಆಗಿಲ್ಲ ಎನ್ನುವಂಥ ಗಂಭೀರ ಆರೋಪ ಮಾಡುತ್ತಿರುವವರ ಪ್ರಕಾರ, ದೊರೆಸ್ವಾಮಿ ಅವರಿಗೆ ಮಂಜೂರಾದ ನಿವೇಶನದಲ್ಲಿ ಉಲ್ಲೇಖವಾಗಿರುವ ವಯಸ್ಸೇ ಬಹುದೊಡ್ಡ ದಾಖಲೆಯಂತೆ.ತಮ್ಮನ್ನು ಎನ್ ಆರ್ ಕಾಲೋನಿ ನಿವಾಸಿ ಎಂದು ಘೋಷಿಸಿಕೊಂಡು  12-06-1998ರಲ್ಲಿ ನಿವೇಶನವೊಂದನ್ನು ಬಾಲಾಜಿ ಹೌಸ್ ಬಿಲ್ಡಿಂಗ್ ಕೋ ಆಪರೇಟಿವ್ ಸೊಸೈಟಿ ಯಿಂದ ಮಂಜೂರು ಮಾಡಿಸಿಕೊಂಡಿದ್ರಂತೆ.

ಅಂದ್ಹಾಗೆ ಅವರಿಗೆ ದ್ವಾರಕನಗರದ ವಾಜರಹಳ್ಳಿಯಲ್ಲಿ 193 ಸಂಖ್ಯೆಯ
60* 40 ಅಡಿ ವಿಸ್ತೀರ್ಣದ ನಿವೇಶನ ಮಂಜೂರಾಗಿತ್ತು.ಇದಕ್ಕೆ 2.28 ಲಕ್ಷ ಪಾವತಿಯನ್ನೂ ಮಾಡಿದ್ದಾರೆ.ಆ ದಾಖಲೆಗಳಲ್ಲಿ ನಮೂದಾಗಿದ್ದ ದೊರೆಸ್ವಾಮಿ ಅವರ ವಯಸ್ಸು 68.ಇಂದಿಗೆ ಅಂದ್ರೆ 2020ಕ್ಕೆ ಅವತ್ತಿನ ವಯಸ್ಸನ್ನು ತಾಳೆ ಹಾಕಿದ್ರೆ ಇವರಿಗೆ ಇವತ್ತು ಆಗ್ಬೇಕಿದ್ದ ವಯಸ್ಸು 90.
ಅಷ್ಟೇ ಅಲ್ಲ, 06-10-2003 ರಲ್ಲಿ ಅದೇ ನಿವೇಶನಕ್ಕೆ ಆಬ್ಸಲೂಟ್ ಸೇಲ್ ಡೀಡನ್ನು ಕೆಂಗೇರಿಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮಾಡಲಾಗುತ್ತೆ.1998ರಲ್ಲಿ 68 ಆಗಿದ್ದ ಅವರ ವಯಸ್ಸು 2003ರಲ್ಲಿ ಆಗಬೇಕಿದ್ದುದು 73.ಆದ್ರೆ ಅದೇ ನಿವೇಶನವನ್ನು ಒಂದು ವರ್ಷದ ನಂತ್ರ ಅಂದ್ರೆ 14-12-2004 ರಲ್ಲಿ ಮೊಮ್ಮಗಳು ನಮ್ರತಾ ರಾಣಿಗೆ ಗಿಫ್ಟ್ ಡೀಡ್ ಮಾಡಿಕೊಡುವ ವೇಳೆ ದಾಖಲೆಗಳಲ್ಲಿ ನಮೂದಾಗಿರುವ ವಯಸ್ಸು 87.

ಒಂದೇ ವರ್ಷದಲ್ಲಿ ಏರಿಕೆಯಾಗುತ್ತೆ ದೊರೆಸ್ವಾಮಿ ಅವ್ರ ವಯಸ್ಸು 87 ಆಗಿದ್ದೇಗೆ.ಒಂದೇ ವರ್ಷದಲ್ಲಿ 14 ವರ್ಷ ಹೆಚ್ಚಾಗಿದ್ದೇಗೆ ಎನ್ನೋದು ಅಚ್ಚರಿಯನ್ನಷ್ಟೇ ಅಲ್ಲ ಅನುಮಾನಕ್ಕೂ ಎಡೆಮಾಡಿಕೊಟ್ಟಿದೆ.
ದೊರೆಸ್ವಾಮಿ ಅವರ ಮೊಮ್ಮಗಳು 15-04-2011 ರಲ್ಲಿ ತಮಗೆ ಗಿಫ್ಟ್ ಡೀಡ್ ಮಾಡಿಕೊಟ್ಟಿದ್ದ ನಿವೇಶನವನ್ನು ಎಸ್.ಕೆ ಶ್ರೀನಿವಾಸನ್,ಎಚ್.ಆರ್ ಜಯಶ್ರೀ ಎನ್ನೋರಿಗೆ ಮಾರಾಟ 36 ಲಕ್ಷಕ್ಕೆ ಸೈಟ್ ಮಾರಾಟ ಮಾಡುತ್ತಾರೆ.

ಈ ದಾಖಲೆಗಳಲ್ಲಿ ನಮೂದಾಗಿರುವ ವಯಸ್ಸಿನ ಅಂತರದ ಬಗ್ಗೇನೆ ಸಾಕಷ್ಟು ಪ್ರಶ್ನೆ ಮೂಡುತ್ತಿದೆ.ದೊರೆಸ್ವಾಮಿ ಅವರೇ ನಮೂದಿಸಿದ ವಯಸ್ಸಿನ ಮಾಹಿತಿ ಪ್ರತಿಯೊಂದು ಹಂತಗಳಲ್ಲೂ ವ್ಯತ್ಯಾಸ ಹೊಂದುತ್ತಾ ಹೋಗಿದ್ದೇಗೆ ಎನ್ನುವ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಕಾಡುತ್ತಿದೆ.

ಇನ್ನೊಂದು ವಿಚಿತ್ರ ಹಾಗೂ ಆಶ್ಚರ್ಯದ ವಿಷಯ ಏನೆಂದ್ರೆ,ಯತ್ನಾಳ್ ಹೇಳಿಕೆ ಹಿನ್ನಲೆಯಲ್ಲಿ ದೊರೆಸ್ವಾಮಿ ವಿರುದ್ಧ ದೊಡ್ಡ ಮಟ್ಟದ ವಿರೋಧವನ್ನೇ ವ್ಯಕ್ತಪಡಿಸುತ್ತಿರುವ ಬಿಜೆಪಿ ನಾಯಕರಿಗೆ  ಸಾಮಾಜಿಕ ಕಾರ್ಯಕರ್ತ  ಚಾಮುಂಡಿ ಶಿವಕುಮಾರ್ ಎಲ್ಲಾ ದಾಖಲೆ ಸಲ್ಲಿಸಿದ್ದರೂ ಯಾವೊಬ್ಬ ಬಿಜೆಪಿ ಮುಖಂಡರು ಸಹ ಇದರ ಬಗ್ಗೆ ಗಂಭೀರಾಗಿ ಪ್ರತಿಕ್ರಿಯಿಸಿಲ್ಲವಂತೆ.ಇದರ ಬಗ್ಗೆ ಚಾಮುಂಡಿ ಶಿವಕುಮಾರ್ ತೀವ್ರ ಬೇಸರ ಹಾಗೂ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಅದೇನೇ ಇರಲಿ,ಹಿರಿಯ ಜೀವ ದೊರೆಸ್ವಾಮಿ ಅವರ ವಯಸ್ಸಿನ ಬಗ್ಗೆ ಚಾಮುಂಡಿ ಶಿವಕುಮಾರ್ ಅವರ ದಾಖಲೆ ಸಾಕಷ್ಟು ಚರ್ಚೆ-ಪ್ರಶ್ನೆ ಹುಟ್ಟಾಕಿರುವುದಂತೂ ಸತ್ಯ.ಇದು ಇನ್ನ್ಯಾವ ತಿರುವನ್ನು ಪಡೆಯಲಿದೆಯೋ ಕಾದು ನೋಡ್ಬೇಕಿದೆ.

Spread the love
Leave A Reply

Your email address will not be published.

Flash News