ಬೆಂಗಳೂರಿನಲ್ಲಿ ಶಂಕಾಸ್ಪದ ರೀತಿಯಲ್ಲಿ ಅಪಘಾತ-ಕೊಲೆ ಶಂಕೆ?

0
ಅಪಘಾತ ನಡೆದ ಸ್ಥಳದಲ್ಲಿ ಮಹಜರ್ ನಡೆಸುತ್ತಿರುವ ಬಾಗಲೂರು ಪೊಲೀಸರು
ಅಪಘಾತ ನಡೆದ ಸ್ಥಳದಲ್ಲಿ ಮಹಜರ್ ನಡೆಸುತ್ತಿರುವ ಬಾಗಲೂರು ಪೊಲೀಸರು

ಬೆಂಗಳೂರು:ಬೈಕನ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಾಗಲೂರು ವ್ಯಾಪ್ತಿಯ ಮಿಟ್ಟಗಾನಹಳ್ಳಿಯಲ್ಲಿ ನಡೆದಿದೆ ಉಮಾಶಂಕರ್ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
 ಡಕಾಯಿತಿ ದರೋಡೆ ಸೇರಿದಂತೆ ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಉಮಾಶಂಕರ್ ಇತ್ತೀಚೆಗೆ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದ
ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದ ಹಲ್ಲೆ ಪ್ರಕರಣದಲ್ಲೂ ಕೂಡ ಭಾಗಿಯಾಗಿದ್ದ ಉಮಾಶಂಕರ್ ಭರತ್ ಎಂಬಾತನ ಜತೆ ಹೋಗುವ ಸಂದರ್ಭದಲ್ಲಿ ಆತನನ್ನು ಹಿಂಬಾಲಿಸಿಕೊಂಡು ಬಂದು ಡಿಕ್ಕಿ ಹೊಡೆದ ಕಾರು ಯಾರಿಗೆ ಸೇರಿದ್ದು ಎನ್ನುವುದು ಈವರೆಗೂ ತಿಳಿದುಬಂದಿಲ್ಲ ಆದರೆ ಪ್ರಕರಣ ನಡೆದ ರೀತಿ ನೋಡಿದರೆ ಕಾರನ್ನು ಫಾಲೋ ಮಾಡಿಕೊಂಡು ಬಂದು ಬೇಕಂತಲೇ ಡಿಕ್ಕಿ ಹೊಡೆದಿರಬಹುದು ಎನ್ನಲಾಗಿದೆ ಇದಕ್ಕೆ ಕಾರಣ ಯಾರು ಎನ್ನುವುದು ತನಿಖೆಯಿಂದ ತಿಳಿದುಬರಬೇಕಿದೆ ಅಷ್ಟೆ
ಅಪಘಾತದ ತೀವ್ರತೆಗೆ ಗಾಯಗೊಂಡ ಉಮಾಶಂಕರ್ ಆಸ್ಪತ್ರೆಗೆ ಸೇರಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ ಇನ್ನು ಆತನ ಜತೆಗಿದ್ದ ಭರತ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಕರಣ ದಾಖಲಿಸಿಕೊಂಡಿರುವ ಬಾಗಲೂರು ಪೊಲೀಸರು ಕಾರು ಯಾರದು ಅದರ ಮಾಲೀಕರು ಯಾರು ಘಟನೆಗೆ ಕಾರಣವಾದ ಅಂಶಗಳೇನು ಎನ್ನುವುದರ ಹಿನ್ನಲೆಯಲ್ಲಿ ಪತ್ತೆ ಕಾರ್ಯ ಕೈಗೊಂಡಿದ್ದಾರೆ.  

Spread the love
Leave A Reply

Your email address will not be published.

Flash News