ಬೆಂಗ್ಳೂರಲ್ಲಿರೋದು ಕೇವಲ 111 ಅನಧೀಕೃತ ಧಾರ್ಮಿಕ ಕಟ್ಟಡಗಳಾ..ಸುಪ್ರಿಂಕೋರ್ಟ್ ಗೆ ಸಲ್ಲಿಸಲು ಪಟ್ಟಿ ರೆಡಿ?!

0

ಬೆಂಗಳೂರು:ಎಲ್ಲವೂ ನಿರೀಕ್ಷೆಯಂತಾದ್ರೆ  ರಾಜಧಾನಿಯಲ್ಲಿರುವ  ಅನಧೀಕೃತ ಧಾರ್ಮಿಕ ಕೇಂದ್ರಗಳು ಶೀಘ್ರವೇ ಡೆಮಾಲಿಷನ್ ಆಗಬೇಕು.ಏಕೆಂದ್ರೆ ಸುಪ್ರಿಂ ಕೋರ್ಟ್ ಆದೇಶವೇ ಹಾಗಿದೆ.2009ರ ನಂತ್ರ ಸಾರ್ವಜನಿಕ ಸ್ಥಳಗಳನ್ನು ಒತ್ತುವರಿ ಮಾಡ್ಕೊಂಡು ನಿರ್ಮಾಣ ಮಾಡಲಾಗಿರುವ ಎಲ್ಲಾ ಧರ್ಮದ ಧಾರ್ಮಿಕ ಕಟ್ಟಡಗಳನ್ನು ನಿರ್ದಾಕ್ಷಿಣ್ಯವಾಗಿ ತೆರವು ಮಾಡಬೇಕೆನ್ನುತ್ತೆ ಸುಪ್ರಿಂ ಆದೇಶ.ಕೋರ್ಟ್ ನಿಂದ ಪದೇ ಪದೇ ಛೀಮಾರಿ ಹಾಕಿಸಿಕೊಳ್ತಾ ಬಂದಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೂ 198 ವಾರ್ಡ್ ಗಳಲ್ಲಿರುವ 111 ಅನಧೀಕೃತ ಧಾರ್ಮಿಕ ಕೇಂದ್ರಗಳ ಪಟ್ಟಿ ಮಾಡಿ ಸುಪ್ರಿಂಕೋರ್ಟ್ ಗೆ ಸಲ್ಲಿಸೊಕ್ಕೆ ರೆಡಿಯಾಗಿದೆ. ಪಟ್ಟಿಯನ್ನೇನೋ ರೆಡಿ ಮಾಡ್ಕೊಂಡಿರುವ ಬಿಬಿಎಂಪಿ ಮತ್ತೆ ಕೋರ್ಟ್ ನಿಂದ ಉಗಿಸಿಕೊಳ್ಳುವ ಎಲ್ಲಾ ಸಾಧ್ಯತೆ ಕಂಡುಬಂದಿದೆ.ಏಕೆಂದ್ರೆ ಬಿಬಿಎಂಪಿ ಲೀಗಲ್ ಸೆಲ್ ಗೆ ವಾರ್ಡ್ ಎಂಜಿನಿಯರ್ಸ್ ಕೊಟ್ಟಿರುವ ಲೀಸ್ಟೇ ಅಂತದ್ದಿದೆ.ಕಣ್ಣಿಗೆ ಕಾಣಿಸುವ ಎಷ್ಟೋ ಅನಧೀಕೃತ ಧಾರ್ಮಿಕ ಕಟ್ಟಡಗಳೇ ಈ ಲೀಸ್ಟ್ ನಲ್ಲಿಲ್ಲ.

ಹಿಂದೆಲ್ಲಾ ಹೇಗೋ ಗೊತ್ತಿಲ್ಲ,ಆದ್ರೆ ಅನಧೀಕೃತ ಧಾರ್ಮಿಕ ಕಟ್ಟಡಗಳ ವಿಷಯದಲ್ಲಿ ಈ ಬಾರಿಯಂತೂ  ಸುಪ್ರಿಂ ಕೋರ್ಟ್  ತುಂಬಾನೇ ಸ್ಟ್ರಿಕ್ಟಾಗಿದೆ.ಸೀರಿಯಸ್ಸಾಗಿ ವಿಚಾರಣೆ ನಡೆಸುತ್ತಿದೆ.ಸ್ವಾರ್ಥ ಹಾಗೂ ಹಣದಾಸೆಗೆ ದೇವರುಗಳನ್ನು ಬೀದಿಗೆ ತರುತ್ತಿರುವಂಥವ್ರ ವಿರುದ್ದ ಸಿಕ್ಕಾಪಟ್ಟೆ ಗರಂ ಆಗಿರುವುದರಿಂದ್ಲೇ ಸಾರ್ವಜನಿಕ ಸ್ಥಳಗಳಾದ ರಸ್ತೆ,ಫುಟ್ಪಾತ್,ಪಾರ್ಕ್,ಆಟದ ಮೈದಾನಗಳನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿರುವ ದೇವಸ್ಥಾನ,ಚರ್ಚ್,ಮಸೀದಿ,ಗುರುದ್ವಾರಗಳನ್ನು ತೆರವು ಮಾಡ್ಲಿಕ್ಕೆ ಆರ್ಡರ್ ಮಾಡಿದೆ.ಈ ಕಾರಣಕ್ಕೆ ಎಲ್ಲಾ ಬಿಬಿಎಂಪಿ ಸೇರಿದಂತೆ ಎಲ್ಲಾ ಮುನ್ಸಿಪಲ್ಸ್ ಹಾಗೂ ಕಾರ್ಪೊರೇಷನ್ಸ್ ಗೆ ಸೂಚನೆ ನೀಡಿ ಅನಧೀಕೃತ ಧಾರ್ಮಿಕ ಕಟ್ಟಡಗಳ ಲೀಸ್ಟ್ ಸಿದ್ಧಪಡಿಸುವಂತೆ ಸೂಚಿಸಿತ್ತು.ಈ ಹಿನ್ನಲೆಯಲ್ಲಿ ಕಾನೂನುಕೋಶಕ್ಕೆ ಬಿಬಿಎಂಪಿ ಎಲ್ಲಾ 8 ವಲಯಗಳ ವಾರ್ಡ್ ಎಂಜಿನಿಯರ್ಸ್ ಪಟ್ಟಿಯೊಂದನ್ನು ರವಾನಿಸಿದ್ದಾರೆ.ಆದ್ರೆ ಆ ಪಟ್ಟಿಯಲ್ಲಿರುವ ಕಟ್ಟಡಗಳ ಸಂಖ್ಯೆಗೂ ವಾಸ್ತವಕ್ಕೂ ಹೋಲಿಕೆಯೇ ಇಲ್ಲ.

ಕಾನೂನುಕೋಶಕ್ಕೆ ವಾರ್ಡ್ ಎಂಜಿನಿಯರ್ಸ್ ಸಲ್ಲಿಸಿರುವ  8 ವಲಯಗಳಲ್ಲಿನ  ಅನಧೀಕೃತ ಧಾರ್ಮಿಕ ಕೇಂದ್ರಗಳ ವಿವರ ಇಂತಿದೆ.

ವಲಯ                    ಧಾರ್ಮಿಕ ಕೇಂದ್ರಗಳ ಪಟ್ಟಿ
ದಕ್ಷಿಣ ವಲಯ         44
ಪಶ್ಚಿಮ ವಲಯ       46
ಪೂರ್ವ                     11
ಆರ್ ಆರ್ ನಗರ       04
ದಾಸರಹಳ್ಳಿ              02
ಮಹಾದೇವಪುರ       01
ಯಲಹಂಕ               03
ಬೊಮ್ಮನಹಳ್ಳಿ        ಇಲ್ಲ.. 

ಮೇಲಿನ ಪಟ್ಟಿಯನ್ನು ನೋಡಿದ್ರೆ ಎಂಥಾ ಮೂರ್ಖನಿಗೂ ಅರ್ಥವಾಗುತ್ತೆ ವಾರ್ಡ್ ಎಂಜಿನಿಯರ್ಸ್ ಕಳುಹಿಸಿರುವ ಈ ಪಟ್ಟಿ ಕರಾರುವಕ್ಕಾಗಿಲ್ಲ..ಸತ್ಯಕ್ಕೆ ದೂರವಾದ ರೀತಿಯ ಮಾಹಿತಿಯನ್ನು ಕೊಡಲಾಗಿದೆ ಎಂದು. ಏಕೆಂದ್ರೆ  ದೊಡ್ಡದಾದ  ಪಶ್ಚಿಮ ವಲಯದಲ್ಲಿ  ಅತೀ ಹೆಚ್ಚು ಅಂದರೆ 46 ಧಾರ್ಮಿಕ ಕಟ್ಟಡಗಳಿವೆ.ಇದೇ ಅತೀ ಹೆಚ್ಚಿನ ಅನಧೀಕೃತ ಧಾರ್ಮಿಕ ಕಟ್ಟಡಗಳಿರುವ ವಲಯವಂತೆ.ಅದರ ನಂತರದ ಸ್ಥಾನದಲ್ಲಿರುವುದು ದಕ್ಷಿಣ ವಲಯ. ಇಲ್ಲಿ  44 ಧಾರ್ಮಿಕ ಕಟ್ಟಡಗಳಿವೆಯಂತೆ.ಇನ್ನು  ಪೂರ್ವ ವಲಯದಲ್ಲಿ ಕೇವಲ 11 ಧಾರ್ಮಿಕ ಕಟ್ಟಡಗಳಿವೆ ಎಂದು ಎಂಜಿನಿಯರ್ಸ್ ಮಾಹಿತಿ ಕೊಟ್ಟಿದ್ದಾರೆ.ಆಶ್ಚರ್ಯ ಎಂದ್ರೆ ಬೃಹತ್ತಾದ ಆರ್ ಆರ್ ನಗರ ವಲಯದಲ್ಲಿ ದುರ್ಬೀನ್ ಹಾಕಿ ಹುಡುಕಿದ್ರೂ ಅಧಿಕಾರಿಗಳಿಗೆ ಸಿಕ್ಕಿದ್ದ ಕೇವಲ  4 ಅನಧೀಕೃತ ಧಾರ್ಮಿಕ ಕಟ್ಟಡಗಳಂತೆ..ಇನ್ನು ಯಲಹಂಕದಲ್ಲಿ ಕೇವಲ 03 ಹಾಗೂ ದಾಸರಹಳ್ಳಿಯಲ್ಲಿ ಕೇವಲ 02 ಧಾರ್ಮಿಕ ಕಟ್ಟಡಗಳಿವೆ ಎಂದು ಮಾಹಿತಿ ಕೊಟ್ಟಿದ್ದಾರೆ ಅಧಿಕಾರಿಗಳು.ಅದೆಲ್ಲಕ್ಕಿಂತ ಹೆಚ್ಚಾಗಿ ಮಹಾದೇವಪುರದಲ್ಲಿ  ಕೇವಲ 01 ಅನಧೀಕೃತ ಧಾರ್ಮಿಕ ಕಟ್ಟಡ ಎಂದು ಮಾಹಿತಿ ಕೊಟ್ಟಿರುವ ವಾರ್ಡ್ ಎಂಜಿನಿಯರ್ಸ್ ಒಂದು ಹೆಜ್ಜೆ ಮುಂದ್ಹೋಗಿ ಬೊಮ್ಮನಹಳ್ಳಿಯಲ್ಲಿ ಯಾವುದೇ ಅನಧೀಕೃತ  ಧಾರ್ಮಿಕ ಕಟ್ಟಡವಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಅನಧಿಕೃತ ಧಾರ್ಮಿಕ ಕಟ್ಟಡಗಳ ವಿರುದ್ಧ ಹೋರಾಡುತ್ತಿರುವ ಸಾಮಾಜಿಕ ಕಾರ್ಯಕರ್ತ ರಾಮು
ಅನಧಿಕೃತ ಧಾರ್ಮಿಕ ಕಟ್ಟಡಗಳ ವಿರುದ್ಧ ಹೋರಾಡುತ್ತಿರುವ ಸಾಮಾಜಿಕ ಕಾರ್ಯಕರ್ತ ರಾಮು
ಬಿಬಿಎಂಪಿ ಕಾನೂನುಕೋಶದ ಮುಖ್ಯಸ್ಥ ದೇಶಪಾಂಡೆ
ಬಿಬಿಎಂಪಿ ಕಾನೂನುಕೋಶದ ಮುಖ್ಯಸ್ಥ ದೇಶಪಾಂಡೆ

ಹಾಗಾದ್ರೆ ನನ್ನತ್ರ ಇರೋ ಲೀಸ್ಟ್ ಸುಳ್ಳಾ?:ಬಿಬಿಎಂಪಿ ಅಧಿಕಾರಿಗಳು ಸುಳ್ಳು ಲೀಸ್ಟ್ ಕೊಟ್ಟಿದ್ದಾರೆ ಎನ್ನೋ ಅನುಮಾನ ಕಾಡ್ಲಿಕ್ಕೆ ಕಾರಣವೂ ಇದೆ.ಅನಧೀಕೃತ ಧಾರ್ಮಿಕ ಕಟ್ಟಡಗಳ ಬಗ್ಗೆ ಕಾನೂನಾತ್ಮಕವಾಗಿ ಹೋರಾಡುತ್ತಿರುವ ಸಾಮಾಜಿಕ ಕಾರ್ಯಕರ್ತ ರಾಮು ಅವರ ಬಳಿ 8 ವಲಯಗಳಲ್ಲಿರುವ ಹತ್ತಿರತ್ತಿರ ಸಾವಿರಾರು ಅನಧೀಕೃತ ಧಾರ್ಮಿಕ ಕಟ್ಟಡಗಳ ವಿವರ ಇದೆ.ಇದನ್ನು ಕೊಟ್ಟವರು ಕೂಡ ಇದೇ ವಾರ್ಡ್ ಎಂಜಿನಿಯರ್ಸ್.ತನಗೆ ಮಾಹಿತಿ  ಕೊಡುವಾಗ ಇದ್ದ ಅನಧೀಕೃತ ಧಾರ್ಮಿಕ ಕಟ್ಟಡಗಳ ಪ್ರಸ್ತಾಪ ಲೀಗಲ್ ಸೆಲ್ ಗೆ ಸಲ್ಲಿಕೆಯಾಗಿರುವ ಲೀಸ್ಟ್ ನಲ್ಲಿಂದ ಹೇಗೆ ಬಿಟ್ಟೋಗಿದೆ ಎಂದು ಪ್ರಶ್ನಿಸ್ತಾರೆ.ಅಧಿಕಾರಿಗಳು ಕಾಟಾಚಾರಕ್ಕೆ ನೀಡಿರುವ ಈ ಪಟ್ಟಿಯನ್ನೇ ಕೋರ್ಟ್ ನಲ್ಲೇ ಪ್ರಶ್ನಿಸ್ತೇನೆ ಎಂದಿರುವ ರಾಮು,ಈ ಪಟ್ಟಿಯನ್ನೇನಾದ್ರೂ ಕಾನೂನುಕೋಶದ ಮುಖ್ಯಸ್ಥರು  ಸಲ್ಲಿಕೆ ಮಾಡಿದ್ರೆ ಸುಪ್ರಿಂ ಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಳ್ಳೋದು ಗ್ಯಾರಂಟಿ ಎನ್ತಾರೆ.

ಸುಳ್ಳೇಳಿದ್ರೆ ಶಿಕ್ಷೆ ಅನುಭವಿಸ್ತಾರೆ: ಈ ಬಗ್ಗೆ ಕಾನೂನುಕೋಶದ ಮುಖ್ಯಸ್ಥರನ್ನು ಕೇಳಿದ್ರೆ ಲೀಸ್ಟ್ ಬಗ್ಗೆ ಮತ್ತೊಮ್ಮೆ ಕೂಲಂಕುಶವಾಗಿ ಪರಿಶೀಲನೆ ಮಾಡಬೇಕೆಂದು ಸೂಚಿಸಿದ್ದೇನೆ.ನಮ್ಮ ಸೂಚನೆ ಮೇರೆಗೆ ಕೊಟ್ಟ ಲೀಸ್ಟ್ ನಲ್ಲಿ ಅಂತಿಮವಾಗಿರುವುದು ಇದೇ 111 ಕಟ್ಟಡಗಳು.ಈ ವಿಷಯದಲ್ಲಿ ಕರ್ತವ್ಯಲೋಪ ಅಥವಾ ತಪ್ಪು ಮಾಹಿತಿ ಕೊಟ್ಟರೆ ಅಂಥವ್ರ ವಿರುದ್ದ ಕಠಿಣ ಕ್ರಮಕ್ಕೆ ಶಿಫಾರಸ್ಸು ಮಾಡುವುದಾಗಿ ಹೇಳ್ತಾರೆ ಲೀಗಲ್ ಸೆಲ್ ಹೆಡ್ ದೇಶಪಾಂಡೆ.

ಅದೇನೇ ಇರಲಿ,ವಾರ್ಡ್ ಎಂಜಿನಿಯರ್ಸ್  ಕೊಟ್ಟಿರುವ ಮಾಹಿತಿಯನ್ನು ಅವಲೋಕಿಸಿದ್ರೆ ಇವರಿಗೆಲ್ಲಾ ಸುಪ್ರಿಂ ಭಯವಿಲ್ಲ ಎನಿಸುತ್ತೆ.ಇವರೆಲ್ಲಾ,ತಾವು ಕೊಡುವ ಮಾಹಿತಿಯನ್ನೇ  ಕಣ್ಣಿಗೊತ್ತಿಕೊಂಡು ನಂಬಿಬಿಡುತ್ತೆ ಸುಪ್ರಿಂ ಕೋರ್ಟ್ ಎನ್ನುವ ಭ್ರಮೆಯಲ್ಲಿದ್ದಂತೆ  ತೋರುತ್ತೆ.ಏಕೆಂದ್ರೆ ಸುಪ್ರಿಂ ಕೋರ್ಟ್ ಗೂ ಗೊತ್ತಿದೆ ಬೃಹತ್ತಾಗಿ ಬೆಳೆದಿರುವ ಬೆಂಗಳೂರಿನಲ್ಲಿರಬಹುದಾದ  ಅನಧೀಕೃತ ಧಾರ್ಮಿಕ ಕಟ್ಟಡಗಳ ಅಂದಾಜು  ಸತ್ಯ. ಅಷ್ಟೇ ಅಲ್ಲ, ಈಗಾಗ್ಲೇ ಇತರರು ಸಲ್ಲಿಸಿರುವ ಅನಧೀಕೃತ ಧಾರ್ಮಿಕ ಕಟ್ಟಡಗಳ ಅರ್ಜಿ ವಿಚಾರಣೆಯೂ ಪ್ರಗತಿಯಲ್ಲಿದೆ.ಇಂಥಾ ಪರಿಸ್ಥಿತಿಯಲ್ಲಿ ವಾರ್ಡ್ ಎಂಜಿನಿಯರ್ಸ್ ಅನಧೀಕೃತ ಕಟ್ಟಡಗಳ ವಿಷಯದಲ್ಲಿ ಗಂಭೀರತೆ ಪ್ರದರ್ಶಿಸದಿರುವುದನ್ನು ಮೇಲ್ನೋಟಕ್ಕೆ ಈ ಲೀಸ್ಟೇ ಸಾರಿ ಹೇಳುತ್ತೆ.

Spread the love
Leave A Reply

Your email address will not be published.

Flash News