ಬಿಡಿಎ ಜಾರಿದಳ ಮಿಂಚಿನ ಕಾರ್ಯಾಚರಣೆ-7.5 ಕೋಟಿ ಸ್ವತ್ತು ವಶ- ಮಾಜಿ ಕಾರ್ಪೊರೇಟರ್ ಪತಿ ವಿರುದ್ಧ FIR

0
ವಂಚಕ ಮಹಾಷಯ-ಮಾಜಿ ಕಾರ್ಪೊರೇಟರ್ ವೀಣಾ ಅವರ ಪತಿ ನಾಜೂಕು ನಾಗರಾಜಯ್ಯ
ವಂಚಕ ಮಹಾಷಯ-ಮಾಜಿ ಕಾರ್ಪೊರೇಟರ್ ವೀಣಾ ಅವರ ಪತಿ ನಾಜೂಕು ನಾಗರಾಜಯ್ಯ
ಅಕ್ರಮ ಬಯಲಿಗೆಳೆದು ನಾಗರಾಜಯ್ಯನ ಹೆಡೆಮುರಿಕಟ್ಟಿದ ಜಾರಿದಳದ ದಕ್ಷ ಎಸ್ಪಿ ಶಿವಕುಮಾರ್
ಅಕ್ರಮ ಬಯಲಿಗೆಳೆದು ನಾಗರಾಜಯ್ಯನ ಹೆಡೆಮುರಿಕಟ್ಟಿದ ಜಾರಿದಳದ ದಕ್ಷ ಎಸ್ಪಿ ಶಿವಕುಮಾರ್

ಬೆಂಗಳೂರು: ಮಾಡಿದ್ದುಣ್ಣೋ ಮಹಾರಾಯ ಎನ್ನೋ ಗಾಧೆ ಈ ಮಾಜಿ ಕಾರ್ಪೊರೇಟರ್ ಪತಿ ಮಹಾಶಯಂಗೆ ಸರಿಯಾಗೇ ಒಪ್ಪುತ್ತೆ.ಜೀವಂತವಾಗಿರುವ ಭೂ ಮಾಲೀಕರು ಸತ್ತಿದ್ದಾರೆಂದು ನಕಲಿ ದಾಖಲೆ ಸೃಷ್ಟಿಸಿ,ಪ್ರಾಧಿಕಾರದಿಂದ 37 ಲಕ್ಷ ಭೂ ಪರಿಹಾರ ಹಾಗೂ 7.5 ಕೋಟಿಯ ಬೆಲೆ ಬಾಳುವ ನಿವೇಶನಗಳನ್ನು ಪಡೆದಿದ್ದ ಅಕ್ರಮ ಬಯಲಾಗಿದೆ.ಬಿಡಿಎ ಜಾರಿದಳದ ದಕ್ಷ  ಎಸ್ಪಿ ಶಿವಕುಮಾರ್ ಮಿಂಚಿನ  ಕಾರ್ಯಾಚರಣೆಯಲ್ಲಿ ತನ್ನ ಅಸಲೀಯತ್ತು ಬಯಲಾಗ್ತಿದ್ದಂಗೆ ಮಾಜಿ ಕಾರ್ಪೊರೇಟರ್ ಪತಿರಾಯ ತಲೆಮರೆಸಿಕೊಂಡಿದ್ದಾನೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಜಾರಿದಳ ಅಧಿಕಾರಿಗಳು ಸಖತ್ತಾದ ಕಾರ್ಯಾಚರಣೆಯನ್ನೇ ನಡೆಸಿ ಕೋಟ್ಯಾಂತರ ಬೆಲೆಯ ಅಕ್ರಮವೊಂದನ್ನು ಪತ್ತೆ ಮಾಡಿದ್ದಾರೆ.ಬಿಬಿಎಂಪಿಯ ಹೆಮ್ಮಿಗೆಪುರ ವಾರ್ಡ್(198) ನ ಮಾಜಿ ಕಾರ್ಪೊರೇಟರ್ ಪತಿ ವೀಣಾ ಅವರ ಪತಿ ನಾಗರಾಜಯ್ಯ ಬಿಡಿಎಗಷ್ಟೇ ಅಲ್ಲ ಅಮಾಯಕ ಭೂಮಾಲೀಕನಿಗೆ ಮಾಡಿದ್ದ ಅಕ್ರಮವನ್ನು ಬಯಲು ಮಾಡಿದ್ದಾರೆ.ತನ್ನ ಅಸಲೀಯತ್ತು ಬಟಾಬಯಲಾಗಿ ಶೇಷಾದ್ರಿಪುರಂ ಪೊಲೀಸರು ತನ್ನ ಹುಡುಕಾಟದಲ್ಲಿದ್ದಾರೆಂದು ಗೊತ್ತಾಗ್ತಿದ್ದಂತೆ ನಾಜೂಕು ನಾಗರಾಜಯ್ಯ ಝೂಟ್ ಹೇಳಿದ್ದಾನೆ.

ಪ್ರಕರಣದ ವಿವರ: ಅಬ್ದುಲ್ ವಹಾಬ್ ಎನ್ನುವವರು ಕೆಲ ವರ್ಷಗಳ ಹಿಂದೆ ಮೊಹಮ್ಮದ್ ಅರಿಫ್ ಎನ್ನುವವರಿಗೆ 5 ಎಕ್ರೆ 3 ಗುಂಟೆ ಜಮೀನನ್ನು ಮಾರಿರುತ್ತಾರೆ.ಇದನ್ನು ಬಿಡಿಎ ಅಧೀಕೃತವಾಗಿಯೇ ಭೂಸ್ವಾಧೀನ ಮಾಡಿಕೊಂಡಿರುತ್ತೆ ಸಹ.ಆದ್ರೆ ಆರೀಫ್ ಕಾರ್ಯನಿಮಿತ್ತ ಕುವೈತ್ ಗೆ ತೆರಳುತ್ತಿದ್ದಂತೆ ಇದರ ಮಾಹಿತಿಯನ್ನು ಹೇಗೋ ಪತ್ತೆ ಮಾಡಿದ ನಾಗರಾಜಯ್ಯ ಮಾಡಿದ್ದು ಮಾತ್ರ ಹೇಸಿಗೆ ಕೆಲಸ.ಷರೀಪ್ ಊರಲ್ಲಿ ಇಲ್ಲದಿರುವಾಗ ನೇರವಾಗಿ ಅಬ್ದುಲ್ ವಹಾಬ್ ಅವರ ಮಕ್ಕಳ ಬಳಿ ತೆರಳಿ ಹೊಸ ನಾಟಕ ಆಡುತ್ತಾನೆ.ನಿಮ್ಮ ತಂದೆ ಹೆಸರಿನಲ್ಲಿರುವ ಜಮೀನನ್ನು ಬಿಡಿಎ ಸ್ವಾಧೀನಪಡಿಸಿಕೊಂಡಿದೆ.ಅದಕ್ಕೆ ಬೇಕಾದ ಭೂಪರಿಹಾರ ನಾನ್ ಕೊಡಿಸುತ್ತೇನೆಂದು ನಂಬಿಸಿದ್ದಾನೆ.ಆತನನ್ನು ನಂಬಿದ ಅವರಿಂದ ಸಹಿ ಪಡೆದು ನಕಲಿ ದಾಖಲೆ ಸೃಷ್ಟಿಸಿ 37 ಲಕ್ಷ ನಗದು ಹಾಗೂ 5 ಬೆಲೆಬಾಳುವ ನಿವೇಶನಗಳನ್ನು ಪಡೆದು ಅದನ್ನು ಅವರ ಮಕ್ಕಳಿಗೆ ನೀಡದೆ ತಾನೇ ಅದರ ಮಾಲೀಕನಾಗಿಬಿಡ್ತಾನೆ.ಇದೇ ವೇಳೆ ಮುಂದೆ ಸಮಸ್ಯೆಯಾಗಬಾರದೆಂದು ಈ ನಾಜೂಕಯ್ಯ ಅಬ್ದುಲ್ ಷರೀಫ್ ಅವ್ರು ಸತ್ತಿದ್ದಾರೆನ್ನುವ ನಕಲಿ ಮರಣೋತ್ತರ ದೃಢೀಕರಣ ಪತ್ರವನ್ನೂ ಪಡೆದುಬಿಡ್ತಾನೆ.

ಕಾರ್ಯನಿಮಿತ್ತ ತೆರಳಿದ ಷರೀಫ್ ಭಾರತಕ್ಕೆ ಬಂದ್ಮೇಲೆ ಪರಿಹಾರ ಕೋರಿ ಬಿಡಿಎ ಗೆ ಅರ್ಜಿ ಸಲ್ಲಿಸಿದಾಗ ನಾಗರಾಜಯ್ಯನ ವಂಚನಾಪುರಾಣ ಬೆಳಕಿಗೆ ಬರುತ್ತೆ.ತಕ್ಷಣ ಕಾರ್ಯಪ್ರವೃತ್ತರಾದ ಜಾರಿದಳದ ಎಸ್ಪಿ ಶಿವಕುಮಾರ್ ತಮ್ಮ ತಂಡದೊಂದಿಗೆ ಪ್ರಕರಣದ ಬೆನ್ನತ್ತುತ್ತಾರೆ.ನಾಗರಾಜಯ್ಯನನ್ನು ವಿಚಾರಣೆಗೊಳಪಡಿಸಿದಾಗ ಅಸಲೀಯತ್ತು ಗೊತ್ತಾಗುತ್ತೆ.ನಾಗರಾಜಯ್ಯ ಸಲ್ಲಿಸಿದ್ದ ಮರಣದೃಢೀಕರಣ ಪತ್ರ ಕೂಡ ಬೋಗಸ್ ಎಂದು ಸಾಬೀತಾಗುತ್ತೆ.ನಾಗರಾಜಯ್ಯ ಮಾಡಿದ ಅಕ್ರಮದ ಹಿನ್ನಲೆಯಲ್ಲಿ ಆತನ ವಿರುದ್ಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ 27/2020, ಐಪಿಸಿ ರೀತ್ಯ ಕಲಂ 417, 418,419, 420,468,471 ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.ನಾಗರಾಜಯ್ಯನಿಂದ ವಿಚಾರಣೆ ವೇಳೆ ಆತನಿಂದ 37 ಲಕ್ಷ ಭೂಪರಿಹಾರ ಹಾಗೂ 5 ನಿವೇಶನಗಳನ್ನು ಮುಟ್ಟುಗೋಲು ಹಾಕ್ಕೊಂಡಿರುತ್ತಾರೆ.

ಬಿಡಿಎ ಇತಿಹಾಸದಲ್ಲಿ ಇತ್ತೀಚಿನ ದಿನಗಳಲ್ಲಿ ಜಾರಿದಳ ನಡೆಸಿದ  ಭಾರೀ ಕಾರ್ಯಾಚರಣೆ ಇದಾಗಿದ್ದು 7.50 ಕೋಟಿ ಮೊತ್ತದಷ್ಟು ಬಿಡಿಎಗೆ ಆಗಿದ್ದ ನಷ್ಟವನ್ನು ತಪ್ಪಿಸಿದ ಜಾರಿದಳದ ಎಸ್ಪಿ ಶಿವಕುಮಾರ್ ಹಾಗೂ ತಂಡಕ್ಕೆ ಬಿಡಿಎ ಆಯುಕ್ತ ಡಾ.ಪ್ರಕಾಶ್ ಅಭಿನಂದನೆ ಸಲ್ಲಿಸಿದ್ದಾರೆ.

Spread the love
Leave A Reply

Your email address will not be published.

Flash News