ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಿಲ್ಲ:ಪರಿಸ್ಥಿತಿ ಅಂಡರ್ ಕಂಟ್ರೋಲ್:ಡಾ.ಕೆ ಸುಧಾಕರ್

0

ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಯಾವುದೇ ಏರಿಕೆಯಾಗಿಲ್ಲ.1,09,131 ಜನರ ಮೇಲೆ ಎಂದಿನಂತೆ ಇಟ್ಟಿರುವ ನಿಗಾ ಪರಿಸ್ಥಿತಿ ಮುಂದುವರೆಯಲಿದೆ.731 ಜನರನ್ನು ಪರೀಕ್ಷೆ ಮಾಡಿದ್ದು,591 ಜನರ ಟೆಸ್ಟ್ ನೆಗಟೀವ್ ಬಂದಿದೆ.ರಾಜ್ಯ ಸರ್ಕಾರ ತೆಗೆದುಕೊಳ್ಳಬೇಕಾದ ಎಲ್ಲಾ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ ಎಂದು ವೈಧ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರತ್ಯೇಕವಾಗಿ 32  ಜನರ ಮೇಲೆ ಕಣ್ಣು ಇಟ್ಟಿದ್ದೇವೆ.ಇಂದು 11ಜನರನ್ನ ನಿಗಾದಲ್ಲಿಟ್ಟಿದ್ದು,19 ರಲ್ಲಿ 6 ಮಂದಿಯಲ್ಲಿ ಮಾತ್ರ ಪಾಸಿಟೀವ್ ಬಂದಿದೆ.ಇದನ್ನ ಹೊರತುಪಡಿಸಿ ಬೇರೆ ಪಾಸೀಟೀವ್ ಪ್ರಕರಣ ಬಂದಿಲ್ಲ.ಇಂದಿನಿಂದ ಎ,ಬಿ,ಸಿ ಎಂದು ವರ್ಗಾವಣೆ ಮಾಡಿದ್ದೇವೆ ಎಂದು ವಿವರಿಸಿದರು.

ಮೂರು  ವರ್ಗಗಳ ಪೈಕಿ ಎ- ಸೋಂಕಿನ ಶಂಕೆ ಕಂಡು ಬಂದವರು, ಬಿ-ಡಯಾಬಿಟಿಸ್,ವೃದ್ಧರು,ಅಸ್ತಮಾ ಇರುವವರು ಹಾಗೆಯೇ ಸಿ- ರೋಗದ ಲಕ್ಷಣಗಳಿಲ್ಲದವರು ಎಂದು ವಿಭಾಗಿಸಿದ್ದೇವೆ.ಯಾವುದೇ ದೇಶದಿಂದ ಬಂದ್ರೂ ಅವರನ್ನು ತಪಾಸಣೆಗೊಳಪಡಿಸಲಾಗುವುದು. ಹೆಲ್ಪ್ ಲೈನ್ ಗೆ ಹಲವು ಕರೆಗಳು ಬರುತ್ತಿವೆ ಎಂದರು.

ಶುಕ್ರವಾರ ಅಮೆರಿಕಾ ಬಿಟ್ಟು ಮಾರ್ಗ ಮಧ್ಯೆ ಜರ್ಮನಿಯ ಫ್ರಾಂಕ್ ಪರ್ಟ್ ನಲ್ಲಿ ನಾಲ್ಕು ತಾಸು ಭಾರತದ ವಿಮಾನಕ್ಕೆ ಕಾದಿದ್ದೆ, ನಮಗೆ ಅಲ್ಲಿ ಯಾವುದೇ ಮಾಹಿತಿ ಕೇಳಲಿಲ್ಲ. ನೇರವಾಗಿ ವಿಮಾನ ಹತ್ತಿಸಿದರು. ಬೆಂಗಳೂರಿನಲ್ಲಿ ಎಲ್ಲಾ ತಪಾಸಣೆ ಮಾಡಿದರು.ಎಲ್ಲವನ್ನೂ ಪಡೆದು ಮನೆಗೆ ಕಳಿಸಿಕೊಟ್ಟರು ಎಂದು ಅಮೆರಿಕಾದಿಂದ ಸುರೇಶ್ ಜಾದವ್ ಫೇಸ್ಬುಕ್ ನಲ್ಲಿ ನೋಟ್ ಮಾಡಿದ್ದಾರೆ.ಇದರಿಂದ ನಮಗೂ ಸಂತೋಷವಾಗಿದೆ ಎಂದರು.

ಕೊರೋನಾ ನಿಯಂತ್ರಣಕ್ಕೆ ಗಂಭೀರ ಕ್ರಮತೆಗೆದುಕೊಂಡಿದ್ದೇವೆ.ಗ್ರೀಸ್ ಗೆ ಹೋದ ದಂಪತಿ ಬಗ್ಗೆ ಈಗಾಗಲೇ ಹೇಳಿದ್ದೇವೆ.ದಂಪತಿ ಹನಿಮೂನ್ ಗೆ ತೆರಳಿದ್ದರು.ಅವರಿಬ್ಬರು ಮಾರ್ಚ್ .8 ರಂದು ಇಬ್ಬರೂ ಬೆಂಗಳೂರಿಗೆ ಬಂದಿದ್ದು ನಿಜ.ಅವರಲ್ಲಿ ಪತ್ನಿ ಬೆಂಗಳೂರಿನಲ್ಲೇ ಉಳಿಯುತ್ತಾರೆ.ಡೊಮೆಸ್ಟಿಕ್ ಫ್ಲೈಟ್ ನಲ್ಲಿ ಇಲ್ಲಿಗೆ ಬಂದಿದ್ದರುಮಾರ್ಚ್ 8 ರಂದು ಮುಂಬೈನಿಂದ ಇಂಡಿಗೋ ವಿಮಾನದಲ್ಲಿ ಬಂದಿದ್ದರು.ಡೆಲ್ಲಿಯಿಂದ ಗತಿಮಾನ್ ಎಕ್ಸ್ ಪ್ರೆಸ್ ನಲ್ಲಿ ಆಗ್ರಾಗೆ ತೆರಳಿದ್ದಾರೆ.ಬೆಂಗಳೂರಿಗೆ ಬಂದಿದ್ದರೂ ನಿಲ್ದಾಣದಿಂದ ಹೊರಗೆ ಬಂದಿಲ್ಲ.ವಿಮಾನನಿಲ್ದಾಣದಿಂದಲೇ ದೆಹಲಿಗೆ ವಾಪಸ್ ಆಗಿದ್ದಾರೆ ಎಂದು ಸುಧಾಕರ್ ವಿವರಿಸಿದರು.

 

Spread the love
Leave A Reply

Your email address will not be published.

Flash News