“ಸೂಪರ್ ಕಾಪ್” ವೆಂಕಟೇಶ್ ಪ್ರಸನ್ನ “ಭೂಗತ ನಂಟು”ಆರೋಪದ ಹಿಂದಿನ ಅಸಲೀಯತ್ತೇನು ಗೊತ್ತಾ?

0
ವೆಂಕಟೇಶ್ ಪ್ರಸನ್ನ ಅವರಿಗೆ ಭೂಗತ ಜಗತ್ತಿನೊಂದಿಗೆ ನಂಟಿತ್ತೆನ್ನುವುದು ನಿಜನಾ?
ವೆಂಕಟೇಶ್ ಪ್ರಸನ್ನ ಅವರಿಗೆ ಭೂಗತ ಜಗತ್ತಿನೊಂದಿಗೆ ನಂಟಿತ್ತೆನ್ನುವುದು ನಿಜನಾ?
ಭೂಗತ ಜಗತ್ತಿನ ನಂಟಿನ ಬಾಂಬ್ ಸಿಡಿಸಿದ ಪಾತಕಿ ರವಿ ಪೂಜಾರಿ
ಭೂಗತ ಜಗತ್ತಿನ ನಂಟಿನ ಬಾಂಬ್ ಸಿಡಿಸಿದ ಪಾತಕಿ ರವಿ ಪೂಜಾರಿ

ಬೆಂಗಳೂರು: ಪೊಲೀಸ್ ವಲಯದಲ್ಲಿ ಖಡಕ್ ಅಧಿಕಾರಿ ಎಂದೇ ಕರೆಯಿಸಿಕೊಂಡಿದ್ದ ವೆಂಕಟೇಶ್ ಪ್ರಸನ್ನ ದಿಢೀರ್ ವಿಲನ್ ಆಗೋಗಿದ್ದಾರೆ.ಇದಕ್ಕೆ ಮುಖ್ಯ ಕಾರಣವೇ ಭೂಗತ ಪಾತಕಿ ರವಿಪೂಜಾರಿ ಬಾಯ್ಬಿಟ್ಟ ಸತ್ಯನಾ..ಗೊತ್ತಾಗ್ತಿಲ್ಲ.ಆದ್ರೆ ಗೊತ್ತಿದ್ದೋ..ಗೊತ್ತಿಲ್ಲದೆಯೋ ಇಲಾಖೆಯೊಳಗೆ ಅವರ ಬಗ್ಗೆ ಇದ್ದ ಆಕ್ರೋಶ-ಅಸಮಾಧಾನ ಬೇರೊಂದು ತಿರುವು ಪಡೆದುಕೊಂಡಿದೆ ಎನ್ನುವುದು ಎಷ್ಟು ಸತ್ಯವೋ ಅವರ ವಿರುದ್ಧ ಕೈಗೊಳ್ಳಲಾಗಿರುವ ಇಲಾಖಾ ಕ್ರಮಗಳ ಬಗ್ಗೆ ಮೆಚ್ಚುಗೆಯ ಮಾತುಗಳು ಕೂಡ ಅಷ್ಟೇ ನಿಜ.

ಪಾತಕಿಗಳ ಪಾಲಿಗೆ ಸಿಂಹಸ್ವಪ್ನ ಎಂದೇ ವೆಂಕಟೇಶ ಪ್ರಸನ್ನ ಕರೆಯಿಸಿಕೊಂಡಿದ್ದರು.ಖಡಕ್ ಅಂಡ್ ಟಫ್ ಕಾಪ್ ಎನ್ನುವ ಹೆಗ್ಗಳಿಕೆಯೂ ಅವರಿಗಿತ್ತು…ಆದ್ರೆ ಅವೆಲ್ಲಾ ಅವರು ಇಷ್ಟ್ ವರ್ಷ ತೊಟ್ಟ ಮುಖವಾಡ ಮಾತ್ರ ಎನ್ನೋದು ಭೂಗತ ಪಾತಕಿ ರವಿ ಪೂಜಾರಿ ಸ್ಪೋಟಿಸಿದ ಅಘಾತಕಾರಿ ಸಂಗತಿಗಳಿಂದ ಬಟಾಬಯಲಾಗಿದೆ.ಯಾವ್ ಲೆವಲ್ ನಲ್ಲಿ ಒಂದು ಘನತೆ-ಗೌರವ ಕಾಯ್ದುಕೊಂಡಿದ್ರೋ ಅದೆಲ್ಲಾ ಮಣ್ಣುಪಾಲಾಗಿದೆ.ವೆಂಕಟೇಶ್ ಪ್ರಸನ್ನ ಹೀಗಾ ಎನ್ನುವ ಟೀಕೆಗಳು ಕೇಳಿಬರಲಾರಂಭಿಸಿವೆ.ಪಾತಕಿಯ ಬಾಯಲ್ಲಿ ಅವರ ಬಗ್ಗೆ ಕೇಳಿಬಂದ ಮಾತುಗಳು ಹಾಗೂ ಅದರ ಲಯ ತಿಳಿಯುತ್ತಿದ್ದಂತೆ ಇಲಾಖೆಯ ಮೇಲಾಧಿಕಾರಿಗಳು ಒಂದು ಕ್ಷಣನೂ ಆಲೋಚಿಸದೆ ತತ್ ಕ್ಷಣಕ್ಕೆ ಅವರನ್ನು ವಿವಿಐಪಿ ಭದ್ರತೆ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರನ್ನಾಗಿ ಟ್ರಾನ್ಸ್ ಫರ್ ಮಾಡಲಾಗಿದೆ.

ಅಂದ್ಹಾಗೆ ವೆಂಕಟೇಶ್ ಪ್ರಸನ್ನ ಅವರ ಟ್ರ್ಯಾಕ್ ರೆಕಾರ್ಡ್  ಇಂಪ್ರೆಸ್ಸಿವ್ ಆಗಿ ಇದೆ.ಐವರು ಭೂಗತ ಪಾತಕಿಗಳನ್ನು ವಿದೇಶದಲ್ಲಿ ಬಂಧಿಸಿ ಭಾರತಕ್ಕೆ ಕರೆ ತರುವಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಹೆಗ್ಗಳಿಕೆ ವೆಂಕಟೇಶ್ ಪ್ರಸನ್ನರದು.ಆದ್ರೆ ಅದೇ ಈಗ ಅವರಿಗೆ ಮುಳುವಾಗಿದ್ದು ಮಾತ್ರ ವಿಪರ್ಯಾಸ.ಇದು ಸತ್ಯ..ಯಾವತ್ತೋ ಸ್ಪೋಟವಾಗಬೇಕಿತ್ತು.ಅವರ ಅಸಲೀಯತ್ತು ಇಂದಲ್ಲ ನಾಳೆ ಬಯಲಾಗ್ಲೇಬೇಕಿತ್ತು ಎನ್ನುವುದೇ ಸತ್ಯವಾಗಿದ್ರೆ ಅದು ಇಲಾಖೆಗೂ ಗೊತ್ತಾಗ್ಲಿ..ಹಾಗೆಯೇ ಕರ್ನಾಟಕಕ್ಕೂ ಜಗಜ್ಜಾಹೀರಾಗಲಿ ಬಿಡಿ ಎನ್ನುವುದು ವಾಸ್ತವವಾದಿಗಳ ವಾದ.

118 ಎನ್ ಕೌಂಟರ್ ಸ್ಪೆಷಲಿಸ್ಟ್ ಸೂಪರ್ ಕಾಪ್  ಪ್ರದೀಪ್ ಶರ್ಮಾ
118 ಎನ್ ಕೌಂಟರ್ ಸ್ಪೆಷಲಿಸ್ಟ್ ಸೂಪರ್ ಕಾಪ್  ಪ್ರದೀಪ್ ಶರ್ಮಾ

ರವಿ ಪೂಜಾರಿ ಕೊಟ್ಟ ಡ್ಯಾಮೇಜಿಂಗ್ ಸ್ಟೇಟ್ಮೆಂಟ್ ಏನ್ ಗೊತ್ತಾ? ರವಿ ಪೂಜಾರಿಯನ್ನು ವಿದೇಶದಿಂದ ಬಂಧಿಸಿ ಏರ್ ಪೋರ್ಟ್ ಗೆ ಕರೆತಂದಾಗ ಪೊಲೀಸ್ರನ್ನು ಆತ ಕೇಳಿದ ಮಾತೇನು ಗೊತ್ತಾ..ನನ್ನ ಕ್ಲೋಸ್ ಫ್ರೆಂಡ್  ವೆಂಕಟೇಶ ಪ್ರಸನ್ನ ಎಲ್ಲಿ..ಅವರೊಂದಿಗಿನ ನಂಟು ಬಹಳ, ವರ್ಷದ್ದು. ನಾನು ಏನೇ ವ್ಯವಹಾರ ಮಾಡಿದ್ರೂ ಅದರ ಮಧ್ಯಸ್ಥಿಕೆ ವಹಿಸುತ್ತಿದ್ದವರೇ ಪ್ರಸನ್ನ ಎಂಬ ಆ ಮಾತು ವೆಂಕಟೇಶ್ ಪ್ರಸನ್ನ ಅವರ ಕೆರಿಯರ್ ಮೇಲೆ ಎಂಥಾ ಕಪ್ಪುಮಸಿ ಬಳಿದಿದೆ ಗೊತ್ತಾ.ಅದನ್ನು ಖುದ್ದು ಪ್ರಸನ್ನ ಅವರೇ ಕಲ್ಪಿಸಿಕೊಳ್ಳೊಕ್ಕಾ ಗೊಲ್ಲ,ಅಥವಾ ಮೇಲಾಧಿಕಾರಿಗಳಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡ್ಲಿಕ್ಕಾಗೊಲ್ಲ,ಏಕೆಂದ್ರೆ ಆ ಮಟ್ಟದ ಡ್ಯಾಮೇಜನ್ನು ಮಾಡಿರುವ ರವಿಪೂಜಾರಿಯ ಆರೋಪ ವೆಂಕಟೇಶ್ ಪ್ರಸನ್ನ ಅವರನ್ನು ತಲೆ ತಗ್ಗಿಸುವಂತೆ ಮಾಡಿರೋದಷ್ಟೇ ಅಲ್ಲ,ಭೂಗತ ನಂಟನ್ನು ಪೊಲೀಸ್ ಇಲಾಖೆ ಹೊಂದಿರುವುದು ಅಧೀಕೃತ ಎನ್ನುವುದನ್ನು ಸಾರಿ ಹೇಳಿದೆ.ಹಾಗಾಗಿನೇ ಮೇಲಾಧಿಕಾರಿಗಳು ಆರೋಪದ ಬಗ್ಗೆ ಒಂದೇ ಒಂದು ವಿವರಣೆಯನ್ನೂ ಕೇಳದೆ ಟ್ರಾನ್ಸ್ ಫರ್ ಮಾಡಿದ್ದಾರೆ.

ರವಿ ಪೂಜಾರಿ ಅರೋಪವನ್ನು ನಂಬೋದಾ?..ಒಬ್ಬ ಕ್ರಿಮನಲ್ ಆಗಿ ಕೇಸನ್ನು ಡೈವರ್ಟ್ ಮಾಡೊಕ್ಕೆ ರವಿ ಪೂಜಾರಿ ಹಾಗೆ ಹೇಳಿರ್ಬೋದು ಎಂದೇ  ಇಟ್ಟುಕೊಳ್ಳೋಣ,ಆದ್ರೆ ಆರೋಪಕ್ಕೆ ಒಂದಷ್ಟು ಪುಷ್ಠಿ ನೀಡುವಂಥ ಸಂಗತಿಗಳಿರುವುದನ್ನು ಒಪ್ಪಬೇಕಾಗುತ್ತೆ. ವೆಂಕಟೇಶ ಪ್ರಸನ್ನ ಕರಾವಳಿಯಲ್ಲಿ 12 ವರ್ಷ ಸೇವೆ ಸಲ್ಲಿಸಿದ್ದಾರೆ.ಅದು ಕೂಡ ಭೂಗತ ಜಗತ್ತು ಹೆಚ್ಚು ಆಕ್ಟೀವ್ ಆದ ಕಾಲದಲ್ಲಿ.ರವಿಪೂಜಾರಿ,ಬನ್ನಂಜೆ ರಾಜಾ,ರಾಕೇಶ್ ಪೂಂಜಾ,ಮುತ್ತಪ್ಪ ರೈ,ಕಲಿ ಯೋಗೇಶ..ಹೀಗೆ ಅಂಡರ್ ವರ್ಲ್ಡ್ ನಲ್ಲಿ ಕರಾವಳಿ ಪಾತಕಿಗಳು ಕಾಂಪಿಟೇಶನ್ ನಲ್ಲಿ ಹವಾ ಮೆಂಟೇನ್ ಮಾಡೊಕ್ಕೆ ಜಿದ್ದಿಗೆ ಬಿದ್ದವರಂತೆ ಕಚ್ಚಾಡಿಕೊಳ್ಳುತ್ತಿರುವಾಗಲೇ ಅಧಿಕಾರಿಯಾಗಿದ್ದ ವೆಂಕಟೇಶ ಪ್ರಸನ್ನ ಅವರಿಗೆ ಸಹಜವಾಗೇ ಪಾತಕಿಗಳ ಸಂಪರ್ಕ ಸಾಧ್ಯವಾಗಿದ್ದಿರಬಹುದು.ಹಾಗಂತ ಸಂಬಂಧ ಇತ್ತೆನ್ನುವ ಸಮರ್ಥನೆಗೆ ಬರ್ಲಿಕ್ಕೆ ಆಗೊಲ್ಲ.ಆದ್ರೆ ತಾನು ಸೇರಿದಂತೆ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಕಲಿ ಯೋಗೇಶ ಯಾವುದಾದ್ರೂ ಡೀಲ್ ಮಾಡಿದ್ರೆ ಹಣಕಾಸಿನ ಡಿಸ್ಪ್ಯೂಟ್ ನ್ನು ಸಾಲ್ವ್ ಮಾಡಿ ಹಣವನ್ನು ಪಡೆದುಕೊಳ್ಳುತ್ತಿದ್ದವರೇ ವೆಂಕಟೇಶ ಪ್ರಸನ್ನ ಎನ್ನುವುದು  ರವಿ ಪೂಜಾರಿ ಆರೋಪ. ಕೆಲವೊಮ್ಮೆ ಮಾತ್ನಾಡಿ ಒಪ್ಪಿಸಿದಷ್ಟು ಹಣವನ್ನು ನನಗೆ ಒಪ್ಪಿಸುತ್ತಿರಲಿಲ್ಲ ..ಅದರಲ್ಲಿ ಒಂದಷ್ಟನ್ನು ಜೇಬಿಗಿಳಿಸಿಕೊಂಡುಬಿಡ್ತಿದ್ದರು ಎಂದೇಳುವ ಮೂಲಕ ಪ್ರಸನ್ನ ಅವರ ದಕ್ಷತೆ-ಪ್ರಾಮಾಣಿಕತೆಯನ್ನು ಪ್ರಶ್ನಿಸುವಂತೆ ಮಾಡಿದ್ದಾನೆ ರವಿಪೂಜಾರಿ.

ಲಾಟರಿ ಹಗರಣದಲ್ಲಿ ಆರೋಪಿ ಸ್ಥಾನದಲ್ಲಿ ನಿಂತಿದ್ದ ಸೂಪರ್ ಕಾಪ್ ಅಲೋಕ್ ಕುಮಾರ್
ಲಾಟರಿ ಹಗರಣದಲ್ಲಿ ಆರೋಪಿ ಸ್ಥಾನದಲ್ಲಿ ನಿಂತಿದ್ದ ಸೂಪರ್ ಕಾಪ್ ಅಲೋಕ್ ಕುಮಾರ್
ಭೂಗತ ನಂಟಿನ ಆರೋಪಕ್ಕೆ ಸಿಕ್ಕಾಕಿಕೊಂಡಿದ್ದ ಕನ್ನಡದ ಹೆಮ್ಮೆಯ ಪುತ್ರ ಸೂಪರ್ ಕಾಪ್ ದಯಾನಾಯಕ್..
ಭೂಗತ ನಂಟಿನ ಆರೋಪಕ್ಕೆ ಸಿಕ್ಕಾಕಿಕೊಂಡಿದ್ದ ಕನ್ನಡದ ಹೆಮ್ಮೆಯ ಪುತ್ರ ಸೂಪರ್ ಕಾಪ್ ದಯಾನಾಯಕ್..

ರವಿ ಪೂಜಾರಿ ಆರೋಪದ ಮೇಲಿರೋ ನಂಬಿಕೆ ಪ್ರಸನ್ನ ಅವರ ಮೇಲೇಕೆ ಇಲ್ಲ: ರವಿ ಪೂಜಾರಿ ಹಾಗೆ ಹೇಳಿದಾಕ್ಷಣ ಅದನ್ನು ಒಪ್ಪಬೇಕೇಂದೇನೂ ಇಲ್ಲ.ಇದರಲ್ಲಿ ಪ್ರಸನ್ನ ಅವರನ್ನು ಡಿಮಾರಲೈಸ್ ಮಾಡುವ ಪ್ರಯತ್ನವೂ ನಡೆದಿರಬಹುದು.ಭೂಗತ ಪಾತಕಿಗಳ ಹೆಡೆಮುರಿಕಟ್ಟಿ ವಿದೇಶದಿಂದ ಕರೆತಂದು ಹೀರೋ ಆದ ಪ್ರಸನ್ನಅವರ ಏಳ್ಗೆಯನ್ನು ಸಹಿಸದ ಇಲಾಖೆಯ ಅಧಿಕಾರಿಗಳೇ ಕಡ್ಡಿಯಲ್ಲಿ ಹೋಗುವಂತದ್ದಕ್ಕೆ ಕೊಡಲಿ ತೆಗೆದುಕೊಳ್ಳುವ ಕೆಲಸಕ್ಕೆ ಮುಂದಾಗಿದ್ದಾರಾ ಗೊತ್ತಾಗ್ತಿಲ್ಲ.ಅಧಿಕಾರಿ ವಿರುದ್ಧ ಪಾತಕಿಯೊಬ್ಬ ಕೊಟ್ಟ ಹೇಳಿಕೆ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸ್ಬೇಕಿದ್ದ ಮೇಲಾಧಿಕಾರಿಗಳು ಇದ್ಯಾವುದನ್ನು ಮಾಡುತ್ತಿಲ್ಲ.ಪೂಜಾರಿ ಹೇಳಿಕೆಗಳೇ ಸತ್ಯ,ಪ್ರಸನ್ನ ಅವರಿಗೆ ಭೂಗತ ಜಗತ್ತಿನ ಸಂಪರ್ಕ ಇರೋದು ಸತ್ಯ ಎನ್ನುವ ಅಂತಿಮ ನಿರ್ದಾರಕ್ಕೆ ಬಂದವರಂತೆ ಮಾಡುತ್ತಿದ್ದಾರೆ.ತಮ್ಮ ಅಧಿಕಾರ ಪರ ನಿಂತು ಸತ್ಯಾಸತ್ಯತೆ ಪರಿಶೀಲಿಸುವುದನ್ನು ಬಿಟ್ಟು ಪ್ರಸನ್ನ ಅವರ ವಿರುದ್ದ FIR  ದಾಖಲಿಸಿ ತತ್ ಕ್ಷಣ ವಿಚಾರಣೆಗೊಳಪಡಿಸುವ ಸಿದ್ಧತೆ ಮಾಡ್ತಿದ್ದಾರಂತೆ.ಪೊಲೀಸ್ ಇಲಾಖೆಯೊಳಗೇ ಇಂತದ್ದೊಂದು ವೃತ್ತಿ ಮಾತ್ಸರ್ಯ-ಅಸೂಯೆ-ಕಾಲೆಳೆಯುವ ವ್ಯವಸ್ಥಿತ ಷಡ್ಯಂತ್ರಗಳಿವೆಯೆಲ್ಲಾ ಎನ್ನೋದೇ ಬೇಸರದ ಸಂಗತಿ.

ಎಲ್ಲಾ ಸೂಪರ್ ಕಾಪ್ ಗಳ ಕಥೆನೂ ಇದೆ: ವೆಂಕಟೇಶ್ ಪ್ರಸನ್ನ ಅವರ ಸಧ್ಯದ ಸ್ಥಿತಿ ಗಮನಿಸಿದ್ರೆ ಎನ್ ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್,118 ಎನ್ ಕೌಂಟರ್ ಮಾಡಿದ ಪ್ರದೀಪ್ ಶರ್ಮಾ ಹಾಗೂ ನಮ್ಮವರೇ ಆದ  ಸೂಪರ್ ಕಾಪ್ ಅಲೋಕ್ ಕುಮಾರ್ ಅವರ ಕಥೆ ನೆನಪಾಗುತ್ತೆ.ಸಮಾಜ ಘಾತುಕರನ್ನು ಸದೆಬಡಿದ ದಯಾನಾಯಕ್ ವಿರುದ್ಧವೂ ಅವರು ಪೀಕ್ ನಲ್ಲಿದ್ದಾಗ್ಲೇ ಭೂಗತ ನಂಟಿನ ಆರೋಪ ಹೊರಿಸಲಾಗಿತ್ತು.ಇನ್ನು 118 ಎನ್ ಕೌಂಟರ್ ಮಾಡಿದ ಪ್ರದೀಪ್ ಶರ್ಮಾ ವಿರುದ್ಧ ಇರುವ ಆರೋಪ,ಕೋರ್ಟ್ ಕೇಸ್ ಗಳು ಒಂದಾ ಎರಡಾ..ಬೇರೆಲ್ಲು ಬೇಡ,ಕರ್ನಾಟಕದ ಸೂಪರ್ ಕಾಪ್ ಅಲೋಕ್ ಕುಮಾರ್ ಅವರನ್ನು ಲಾಟರಿ ಹಗರಣದಲ್ಲಿ  ಸಿಕ್ಕಿಸಿ ಹಾಕಿದ್ದು ಇನ್ನ್ಯಾರು ಅಲ್ಲ,ಸ್ವತಃ ಡಿಪಾರ್ಟ್ಮೆಂಟ್ ನಲ್ಲಿರುವ ಕುಪತ ಮನಸ್ಥಿತಿಗಳಷ್ಟೇ..ಇವು..ಹೈ ಪ್ರೋಫೈಲ್ ಕೇಸ್ ಗಳಷ್ಟೇ.ಕೆಳಹಂತದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಅದೆಷ್ಟೋ ಪೊಲೀಸ್ ಅಧಿಕಾರಿಗಳಿಗೆ ಪ್ರಾಮಾಣಿಕತೆಯೇ ಮುಳುವಾಗಿದೆ.ಮಾಫಿಯಾ ಜತೆ ಕೈ ಜೋಡಿಸುವಂತೆ ಮೇಲಾಧಿಕಾರಿಗಳೇ ಆದೇಶ ನೀಡುವ ಮಟ್ಟಕ್ಕೆ ಪರಿಸ್ಥಿತಿ ಬಂದಿದೆ ಎಂದು ಕೇಳಿದ್ರೆ ಬೇಸರದ ಜತೆ ಪೊಲೀಸ್ ವ್ಯವಸ್ಥೆ ಬಗ್ಗೆ ಆಕ್ರೋಶ ಮೂಡುತ್ತೆ.

ನಿರಪರಾಧಿಗಳಿಗೆ ಮಾತ್ರ  ಶಿಕ್ಷೆಯಾಗಬಾರದು:  ವೆಂಕಟೇಶ ಪ್ರಸನ್ನ ಅವರ ವಿರುದ್ದ ಇಷ್ಟೆಲ್ಲಾ ಆರೋಪ ಕೇಳಿಬರುತ್ತಿದ್ದರೂ ಅವರ ಬೆನ್ನಿಗೆ ನಿಲ್ಲೊಕ್ಕೆ ಯಾವೊಬ್ಬ ಮೇಲಾಧಿಕಾರಿನೂ ಮುಂದೆ ಬರುತ್ತಿಲ್ಲ.ಸಾಕ್ಷ್ಯಗಳಿಲ್ಲದ ಹೊರತಾಗ್ಯೂ ಒಬ್ಬ ಪಾತಕಿ ಕೊಟ್ಟ ಹೇಳಿಕೆಯನ್ನು ನಂಬೋ ಇಲಾಖೆ,ಪಾತಕಿಗಳ ಹೆಡೆಮುರಿ ಕಟ್ಟಿದ ವೆಂಕಟೇಶ್ ಪ್ರಸನ್ನ ಅವರ ಮೇಲೆ ಇಲ್ಲದಿರೋದು ದುರಂತ. ಪ್ರಸನ್ನ ಅವರ ವಿರುದ್ಧ ಯಾವುದೇ ಕ್ರಮಗಳಾಗ್ಲಿ,ಆದ್ರೆ ಅದೆಲ್ಲಾ ವಿಚಾರಣೆ ಮೂಲಕ ದೃಢಪಟ್ಟ ಮೇಲೆ ಜಾರಿಯಾದ್ರೆ ಒಳ್ಳೇದು.ಅದರಲ್ಲಿ ಪ್ರಸನ್ನ ಅವರು ತಪ್ಪು ಮಾಡಿರೋದು ಸಾಬೀತಾದ್ರೆ ಶಿಕ್ಷೆಯಾಗಲಿ,ಆದ್ರೆ ಮಾಡದ ತಪ್ಪಿಗೆ ಅವರನ್ನು ಬಲಿ ಹಾಕುವುದರ ಮೂಲಕ ಇಲಾಖೆ ಹಾಗೂ ಸಮಾಜಕ್ಕೆ ತಪ್ಪು ಸಂದೇಶ ಮಾತ್ರ ರವಾನೆಯಾಗಬಾರದು ಅಲ್ವಾ..ಏಕೆಂದ್ರೆ ಕಾನೂನೇ ಹೇಳುತ್ತೆ ನಿರಪರಾಧಿಗೆ ಮಾತ್ರ ಶಿಕ್ಷೆಯಾಗಬಾರದೆಂದು.ಆ ನ್ಯಾಯದ ಪರಿಪಾಲನೆ ವೆಂಕಟೇಶ್ ಪ್ರಸನ್ನ ಅವರ ವಿಷಯದಲ್ಲಿಯೂ ಆಗಲಿ..ಅಲ್ವೆ..

Spread the love
Leave A Reply

Your email address will not be published.

Flash News