“ನಾಡೋಜ” “ಪತ್ರಿಕೋದ್ಯಮಿ” ಪಾಟೀಲ ಪುಟ್ಟಪ್ಪ ನಿಧನ

0

ಬೆಂಗಳೂರು/ಹುಬ್ಬಳ್ಳಿ: ಹಿರಿಯ ಪತ್ರಕರ್ತ,ಖ್ಯಾತ ಲೇಖಕ,ಹೋರಾಟಗಾರ,ವಿಮರ್ಷಕ.ಚಿಂತಕ ಹೀಗೆ ನಾನಾ ಮಜಲುಗಳಲ್ಲಿ ಅವಿರತವಾಗಿ ದುಡಿದ ನಾಡಿನ ಹಿರಿಯ ಚೇತನ ನಾಡೋಜ ಪಾಟೀಲ ಪುಟ್ಟಪ್ಪ ಇನ್ನಿಲ್ಲ.ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಅವರಿಗೆ 102 ವರ್ಷ ವಯಸ್ಸಾಗಿತ್ತು.ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಪಾಟೀಲ ಪುಟ್ಟಪ್ಪ ಕೆಲ ವರ್ಷಗಳಿಂದಿತ್ತೀಚೆಗೆ ಎಲ್ಲಾ ಚಟುವಟಿಕೆಗಳಿಂದ್ಲೂ ವಿಮುಖರಾಗಿದ್ದರು.

ಮೂಲತಃ ಹಾವೇರಿಯವರಾಗಿದ್ದ ಪಾಟೀಲ ಪುಟ್ಟಪ್ಪ ಜನವರಿ 1914ರಲ್ಲಿ ಹಾವೇರಿ ಜಿಲ್ಲೆಯ ಕುರಬಗೋಡದಲ್ಲಿ ಜನಿಸಿದರು.ಅಲ್ಲಿಯೇ ಓದಿ ನಂತರ ಬ್ಯಾಡಗಿಹಾವೇರಿಧಾರವಾಡ‍ದಲ್ಲಿ  ವ್ಯಾಸಂಗ ಮಾಡಿದರು. ಕರ್ನಾಟಕ ಕಾಲೇಜಿನಲ್ಲಿ ಪದವಿ ಪಡೆದು ನಂತರ   ಬೆಳಗಾವಿಯಲ್ಲಿ ಕಾನೂನು ಅಧ್ಯಯನ ಮಾಡಿ ಅಲ್ಲಿಯೇ ಕಾನೂನುಸೇವೆ ಸಲ್ಲಿಸಲಾರಂಭಿಸಿದರು.ವಕೀಲ ವೃತ್ತಿಗಾಗಿ ಮುಂಬೈಗೆ ತೆರಳಿದ ಅವರು ಅಲ್ಲಿಯೇ ಕೆಲವು ಪತ್ರಿಕೆಗಳಲ್ಲಿ ಕೆಲಸ ಮಾಡಿದರು.ಅದೇ ಅನುಭವ ಹಿನ್ನಲೆಯಲ್ಲಿ 1949ರಲ್ಲಿ ಅಮೆರಿಕಾದ ಕ್ಯಾಲಿಪೋರ್ನಿಯಾಕ್ಕೆ ತೆರಳಿ ಪತ್ರಿಕೋದ್ಯಮದಲ್ಲಿ ಪದವಿ ಪಡೆದರು.ಅಲ್ಲಿಂದ ಮರಳಿದ ನಂತರ ನವಯುಗ ಮಾಸಪತ್ರಿಕೆಯ ಸಂಪಾದಕರಾದರು. 1954ರಲ್ಲಿ ಅವರೇ   ಪ್ರಪಂಚ ಪತ್ರಿಕೆಯನ್ನು ಸ್ಥಾಪಿಸಿ ಅದರ ಸಂಸ್ಥಾಪಕ ಸಂಪಾದಕರಾದರು. ತಮ್ಮ ನೇರ,ನಿಷ್ಠೂರ ಹಾಗು ಕರಾರುವಕ್ಕಾದ ಬರವಣಿಗೆಯಿಂದ್ಲೇ ಹೆಸರು ಮಾಡಿದ್ದ ಪಾಟೀಲ ಪುಟ್ಟಪ್ಪ ಅವರ ಬರಹಗಳು ರಾಜಕೀಯ ವ್ಯವಸ್ಥೆಯನ್ನೇ ಅಲುಗಾಡಿಸಿದ ಉದಾಹರಣೆಗಳಿವೆ.ಹಾಗಾಗಿ ರಾಜಕೀಯದವರ ಪಾಲಿಗೆ ಅನೇಕ ವರ್ಷಗಳವರೆಗೂ ಪಾಟೀಲ ಪುಟ್ಟಪ್ಪ ನುಂಗಲಾರದ ತುತ್ತಾಗಿ ಪರಿಣಮಿಸಿದ್ದರು. 1962 ರಿಂದ 1974ರವರೆಗೂ ಅವರ ಗಣನೀಯ ಸೇವೆ ಗುರುತಿಸಿ ಸರ್ಕಾರ ಅವರನ್ನು ಎರಡು ಅವಧಿಗೆ ರಾಜ್ಯಸಭಾ ಸದಸ್ಯರನ್ನಾಗಿ ನೇಮಕ ಮಾಡಿ ಗೌರವ ಸಲ್ಲಿಸಿತು.1942ರ ಆಗಸ್ಟ್ 9 ರಂದು ಕಾಲೇಜಿನ ಬ್ರಿಟಿಷ್ ಅಧಿಕಾರಿಗೆ  ಗಾಂಧಿ ಟೊಪ್ಪಿಗೆ ಹಾಕುವ ಮೂಲಕ ಹೆಸರು ಮಾಡಿದ್ದರು. ಬದುಕಿದ್ದ ದಿನಗಳವರೆಗೂ ಅಪ್ಪಟ ಗಾಂಧೀವಾದಿಯಾಗಿ ಬದುಕಿದ್ದ ಪಾಟೀಲ ಪುಟ್ಟಪ್ಪ ಅವರ ಸಾವಿಗೆ ರಾಜ್ಯಪಾಲ ವಝುಬಾಯಿ ವಾಲಾ, ಸಿಎಂ ಬಿ.ಎಸ್ ಯಡಿಯೂರಪ್ಪ,ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಮಾಜಿ ಸಿಎಂಗಳಾದ ಸಿದ್ಧರಾಮಯ್ಯ,ಎಚ್.ಡಿ ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ವಿಷಾದ ವ್ಯಕ್ತಪಡಿಸಿದ್ದಾರೆ.

Spread the love
Leave A Reply

Your email address will not be published.

Flash News