ಕೊರೊನಾ ನಿಷ್ಕಾಳಜಿ ಬೇಡ-ಕೇಸ್ ಹಾಕ್ಬೇಕಾದೀತು ಹುಷಾರ್?

0

ಬೆಂಗಳೂರು:ಕರೋನಾ ಭೀತಿ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಸೊಂಕಿತರಿಗೆ ಖಡಕ್‌ ವಾರ್ನಿಂಗನ್ನೇ ಕೊಟ್ಟಿದ್ದಾರೆ.ಯಾರಿಗೆ ಸೋಂಕಿರಲಿ ಅವರು ತಮ್ಮ ಗಮನಕ್ಕೆ ತಂದ್ರೆ ಅವರಿಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡುತ್ತೇವೆ,ಅದನ್ನು ಬಿಟ್ಟು ಮಾಹಿತಿ ಮುಚ್ಚಿಟ್ಟು ಅದು ಇನ್ನಿತರರಿಗೆ ಹರಡಿ ಅದರಿಂದ ಜೀವಗಳಿಗೆ ಕಂಟಕ ಉಂಟುಮಾಡುವ ಕಿಡಿಗೇಡಿಗಳನ್ನು ಕಾನೂನಿನ ಅಡಿ ಶಿಕ್ಷಿಸಬೇಕಾಗುತ್ತೆ ಎಂದು ಎಚ್ಚರಿಸಿದ್ದಾರೆ..ಹಾಗೆಯೇ ಕೊರೋನಾ ಕುರಿತು ನಿಷ್ಕಾಳಜಿ ತೋರುವವರ ವಿರುದ್ಧ KP Act 31(L) ಅಡಿಯಲ್ಲಿ ಕೇಸ್ ಬುಕ್ ಮಾಡುವುದಾಗಿ ಎಚ್ಚರಿಸಿದ್ದಾರೆ.

ಕೊರೊನಾ ಭೀತಿ ವ್ಯಾಪಕವಾಗಿರುವ ಸನ್ನಿವೇಶದಲ್ಲಿ ಎಲ್ಲದರ ಮಾಹಿತಿ ನಮಗೆ ದಿಢೀರ್ ಸಿಕ್ಕಿ ಬಿಡೊಲ್ಲ.ನಮಗೆ ಸಂಪರ್ಕದ ಮೂಲವೇ ನಾಗರಿಕರು.ಅವರು ಮಾಹಿತಿ ಕೊಟ್ಟರೆ ನಾವು ಕ್ರಮಕ್ಕೆ ಮುಂದಾಗಬಹುದು.ಆದ್ರೆ ಕೊರೊನಾ ಭೀತಿ ಹರಡಿರುವ ಸನ್ನಿವೇಶದಲ್ಲಿ ಸೋಂಕು ಕಾಣಿಸಿಕೊಂಡಿರಬಹುದಾದ  ಅನೇಕರು ನಾನಾ ಕಾರಣಗಳಿಗೆ ಕೊರೊನಾ ಸೋಂಕಿನ ಬಗ್ಗೆ ಮಾಹಿತಿ ಕೊಡೊಕ್ಕೆ ಹಿಂದೇಟು ಹಾಕುವ ಸಾಧ್ಯತೆಗಳಿವೆ.ಆದ್ರೆ ಹಾಗೆ ಮಾಡಬಾರದು.ಈ ಹಿನ್ನಲೆಯಲ್ಲಿ ನಾವು ಜಾಗೃತಿ ಮೂಡಿಸಿದ್ದೇವೆ.ಒಂದ್ ಹೆಜ್ಜೆ ಮುಂದ್ಹೋಗಿ ಈಗ ಖಡಕ್ ವಾರ್ನಿಂಗ್ ಕೂಡ ಕೊಟ್ಟಿದ್ದೇವೆ.ಸೋಂಕು ತಮಗೆ ಇದ್ದ ಹೊರತಾಗ್ಯೂ ಅದನ್ನು ನಮಗೆ ತಿಳಿಸದೆ ದೊಡ್ಡ ಸಮಸ್ಯೆಯಾಗೊಕ್ಕೆ ಕಾರಣವಾದವ್ರ ವಿರುದ್ದ KP Act 31(L) ಅಡಿಯಲ್ಲಿ ಕೇಸ್ ಬುಕ್ ಮಾಡುವ ಅವಕಾಶವಿದ್ದು ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಆಯುಕ್ತ ಭಾಸ್ಕರ ರಾವ್ ಕನ್ನಡ ಫ್ಲಾಶ್ ನ್ಯೂಸ್ ಗೆ ತಿಳಿಸಿದ್ದಾರೆ.  

Spread the love
Leave A Reply

Your email address will not be published.

Flash News