ಎಚ್ಚರಿಸಿದ್ದೂ ಅವ್ರೇ…ಮಾತು ತಪ್ಪಿದ್ದೂ ಇವ್ರೇ.. ಮುಖ್ಯಮಂತ್ರಿ ವಿರುದ್ಧ ದೂರು!

0
ಎಮ್ಮೆಲ್ಸಿ ಮಹಾಂತೇಶ ಕವಟಗಿ ಮಠ ಅವರ ಮಗಳ ಮದುವೆಯಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ
ಎಮ್ಮೆಲ್ಸಿ ಮಹಾಂತೇಶ ಕವಟಗಿ ಮಠ ಅವರ ಮಗಳ ಮದುವೆಯ ಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ
ದೂರುದಾರ ನರಸಿಂಹಮೂರ್ತಿ
ದೂರುದಾರ ನರಸಿಂಹಮೂರ್ತಿ

ಬೆಂಗಳೂರು:ಇಂದು ಮಧ್ಯಾಹ್ನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ರಾಜ್ಯಪಾಲರಿಗೆ ದೂರೊಂದು ಸಲ್ಲಿಕೆಯಾಗಲಿದೆ.ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ಈ ದೂರು ಸಲ್ಲಿಸುತ್ತಿದ್ದಾರೆ.ಇದಕ್ಕೆ ಕಾರಣ ಹೇಳೋದು ವೇದಾಂತ..ತಿನ್ನೋದು ಮಾತ್ರ ಬದನೆಕಾಯಿ ಎನ್ನುವಂತಿರುವ ಸಿಎಂ ಯಡಿಯೂರಪ್ಪ ಅವರ ಧೋರಣೆ.

ಕೊರೊನಾ ವೈರಸ್ ನ ಭೀತಿ ಇರುವುದರಿಂದ ಖುದ್ದು ಅವರೇ ಪತ್ರಿಕಾಗೋಷ್ಠಿ ಕರೆದು ಹೆಚ್ಚು ಜನ ಸೇರಬೇಡಿ..6 ಅಡಿ ಅಂತರ ಮೆಂಟೇನ್ ಮಾಡಿ..ಹಸ್ತಲಾಘವ ಕೊಡ್ಬೇಡಿ..ಭಾರತೀಯ ಸಂಸ್ಕ್ರತಿ ಪ್ರಕಾರವೇ ಕೈ ಮುಗಿಯಿರಿ ಎಂದೆಲ್ಲಾ ಹೇಳಿ ಅದಕ್ಕೆ ಸಂಬಂಧಿಸಿದಂತೆ ನೊಟಿಫಿಕೇಷನ್ ನ್ನೂ ಹೊರಡಿಸಿದ ಮುಖ್ಯಮಂತ್ರಿಗಳೇ ತಮ್ಮ ಪಕ್ಷದ ಮುಖಂಡ ಹಾಗೂ ಎಮ್ಮೆಲ್ಸಿ ಮಹಾಂತೇಶ್ ಕಮಟಗಿ ಮಠಅವರ ಮಗಳ ಮದುವೆಯಲ್ಲಿ ಪಾಲ್ಗೊಂಡಿದ್ದು ಎಷ್ಟು ಸರಿ..ಸಾವಿರಾರು ಜನರಿದ್ದ ಆ ಮದುವೆಯಲ್ಲಿ ಪಾಲ್ಗೊಂಡಿದ್ದಲ್ಲದೇ ತಮ್ಮ ಸಂಪುಟದ ಬಹುತೇಕರನ್ನು ಕರೆದುಕೊಂಡು ಹೋಗುವ ಮೂಲಕ ತಮ್ಮ ಆದೇಶವನ್ನು ತಾವೇ ಉಲ್ಲಂಘಿಸಿದ್ದಾರೆ ಎನ್ನುವುದು ನರಸಿಂಹ ಮೂರ್ತಿ ಅವರ ಆರೋಪ.

ಸರ್ಕಾರದ ಆಜ್ಞೆಯನ್ನು ಜವಾಬ್ದಾರಿಯುತ ಹುದ್ದೆಯಲ್ಲಿರುವ ಮುಖ್ಯಮಂತ್ರಿಗಳೇ ಉಲ್ಲಂಘಿಸಿದ್ದಂತದ್ದು ಎಷ್ಟು ಸರಿ..ಅವರಿಗೆ ಯಾವ್ ರೀತಿಯ ಶಿಕ್ಷೆ ವಿಧಿಸಬೇಕೆನ್ನುವುದನ್ನು ರಾಜ್ಯಪಾಲರೇ ತೀರ್ಮಾನಿಸಬೇಕೆಂದು ರಾಜಭವನಕ್ಕೆ ನರಸಿಂಹಮೂರ್ತಿ ಅವರು ದೂರನ್ನು ಸಲ್ಲಿಸಲಿದ್ದಾರೆ.  

Spread the love
Leave A Reply

Your email address will not be published.

Flash News