ಕೊರೊನಾ ಸೋಂಕು-ಬೆಂಗಳೂರೇ ಪ್ರಥಮ-ಹೊಸದಾಗಿ 32 ಶಂಕಿತರ ಪತ್ತೆ

0

ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದೆ.ಸೋಂಕಿತರ ಸಂಖ್ಯೆಯಲ್ಲಿ ಬೆಂಗಳೂರು ಪ್ರಥಮ ಸ್ಥಾನದಲ್ಲಿದೆ.ದಕ್ಷಿಣ ಕನ್ನಡದಲ್ಲೂ 7 ಸೋಂಕಿನ ಪ್ರಕರಣ ಪತ್ತೆಯಾಗಿದ್ದು ಇಂದು ಹೊಸದಾಗಿ 32 ಸೋಂಕಿತರ ಮಾಹಿತಿ ಲಭ್ಯವಾಗಿದೆ.ಅವರನ್ನು ಆಸ್ಪತ್ರೆ ಹಾಗೂ ಮನೆಗಳಲ್ಲಿಟ್ಟು ಚಿಕಿತ್ಸೆ ನೀಡುವ ಕೆಲಸಗಳಾಗುತ್ತಿದೆ.

ಅಂದ್ಹಾಗೆ ರಾಜ್ಯಾದ್ಯಂತ ಕೊರೊನಾ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಈವರೆಗೂ   319 ಮಂದಿಯನ್ನು ಮನೆಯಲ್ಲಿರಿಸಿ ಚಿಕಿತ್ಸೆ ನೀಡಲಾಗ್ತಿದೆ.ಇದರಲ್ಲಿ 71 ಜನರಿಗೆ ನೆಗೆಟಿವ್ ಬಂದಿದ್ದು,48 ಜನರ ಸ್ಯಾಂಪಲನ್ನು ಪರೀಕ್ಷೆಗೆ ಕಳುಹಿಸಲಾಗಿದೆ.ಇನ್ನು ರಾಜ್ಯಾದ್ಯಂತ ಇಂದು(17-03-2020) 32 ಸೋಂಕಿನ ಪ್ರಕರಣ ಪತ್ತೆಯಾಗಿದೆ.

ಅದರ ಪೈಕಿ ಬೆಂಗಳೂರು ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ 4 ಹಾಗೂ ಬೆಂಗಳೂರಿನ ಇತರೆ ಆಸ್ಪತ್ರೆಗಳಲ್ಲಿ 10 ಸೋಂಕಿತರು ಅಡ್ಮಿಟ್ ಆಗಿದ್ದಾರೆ.

ಹಾಗೆಯೇ  ದಕ್ಷಿಣ ಕನ್ನಡ – 7,ಬಳ್ಳಾರಿ – 1,ಚಿಕ್ಕಮಗಳೂರು – 1, ಕೊಡಗು – 2,ಉಡುಪಿ – 1,ಬೀದರ್ – 1,ಗದಗ – 1,ಉತ್ತರ ಕನ್ನಡ ದಲ್ಲಿ 4 ಪ್ರಕರಣ ಪತ್ತೆಯಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. 

 

ಹೊಸದಾಗಿ ಪತ್ತೆಯಾದ  ಸೋಂಕಿತರ ಸಂಖ್ಯೆ(32)

ಸ್ಥಳ                                              ಸೋಂಕಿತ ಪ್ರಕರಣ

ಬೆಂಗಳೂರು ರಾಜೀವ್ ಗಾಂಧಿ           – 4
ಬೆಂಗಳೂರಿನ ಇತರೆ ಆಸ್ಪತ್ರೆಗಳು       – 10
ದಕ್ಷಿಣ ಕನ್ನಡ                                      – 7
ಬಳ್ಳಾರಿ                                                – 1
ಚಿಕ್ಕಮಗಳೂರು                                   – 1
ಕೊಡಗು                                               – 2
ಉಡುಪಿ                                               – 1
ಬೀದರ್                                               -1
ಗದಗ                                                   – 1
ಉತ್ತರ ಕನ್ನಡ                                     – 4  

Spread the love
Leave A Reply

Your email address will not be published.

Flash News