ಕೊರೊನಾ ಭೀತಿಗೆ ಚರ್ಚ್ ಗಳ ಪ್ರೇಯರ್ರೂ ಸ್ಟಾಪ್…

0

ಬೆಂಗಳೂರು:ಕರ್ನಾಟಕದಾದ್ಯಂತ ಸರ್ಕಾರ ಲಾಗೂ ಮಾಡಿರುವ  ಕೊರೊನಾ ಎಮರ್ಜೆನ್ಸಿ ಹಿನ್ನೆಲೆಯಲ್ಲಿ ಧಾರ್ಮಿಕ ಚಟುವಟಿಕೆಗಳಿಗೂ ಭಾರೀ ತೊಂದರೆಯಾಗಿದೆ.ಹಿಂದೂ ದೇವಸ್ಥಾನಗಳು ಭಕ್ತಾಧಿಗಳಿಗೆ ತಾತ್ಕಾಲಿಕವಾಗಿ ಬಾಗಿಲು ಹಾಕಿರುವ, ಮುಸ್ಲಿಂ ಮಸೀದಿಗಳಲ್ಲಿ ಧಾರ್ಮಿಕ ವಿಧಿವಿಧಾನಗಳ ಸಮಯವನ್ನು  ಕಡಿತ ಮಾಡಿರುವ ಬೆನ್ನಲ್ಲೇ ಕ್ರೈಸ್ತ ಚರ್ಚ್ ಗಳಲ್ಲೂ ಪ್ರಾರ್ಥನೆ-ಪೂಜೆಗಳನ್ನು ನಿಷೇಧಿಸುವ ತೀರ್ಮಾನಕ್ಕೆ ಬರಲಾಗಿದೆ. 

ಮಾರ್ಚ್ 31 ರವರೆಗೆ  ಚರ್ಚ್ ಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ  ನಿಷೇಧ ಹೇರಲಾಗಿದೆ.ಭಕ್ತಾಧಿಗಳು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು.ಎಮರ್ಜೆನ್ಸಿ ಜಾರಿ ಇರುವ ಮಾರ್ಚ್ 31ರವರಗೆ‌ ಸಾಮೂಹಿಕ ಪ್ರಾರ್ಥನೆ ನಿಷೇಧಿಸಲಾಗಿದೆ ಎಂದು ಬೆಂಗಳೂರು ಮಹಾಧರ್ಮ ಕ್ಷೇತ್ರದಿಂದ ಸುತ್ತೋಲೆ ಹೊರಬಿದ್ದಿದೆ.

ಕೊರೊನಾ ಹರಡದಂತೆ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿರೋದಾಗಿ ಬೆಂಗಳೂರು ಮಹಾಧರ್ಮಾಕ್ಷೇತ್ರದ  ಅರ್ಚ್ ಬಿಷಪ್ ಡಾ. ಪೀಟರ್ ಮಖಾದೋ  ಆದೇಶ ಹೊರಡಿಸಿದ್ದು  ಬೆಂಗಳೂರಿನ ಚರ್ಚ್ ಗಳಿಗೆ, ಚರ್ಚ್ ಮುಖ್ಯಸ್ಥರಿಗೆ ಸುತ್ತೋಲೆ ತಲುಪಿಸಲಾಗಿದೆ.ಹಾಗಂತ ಚರ್ಚ್ ಗಳನ್ನು ಮುಚ್ಚೊಲ್ಲ.ಅವು ಎಂದಿನಂತೆ ಬಾಗಿಲು ತೆರೆದುಕೊಳ್ಳಲಿವೆ.ವೈಯಕ್ತಿಕವಾಗಿ ಬಂದು ಪ್ರಾರ್ಥನೆ ಸಲ್ಲಿಸಿ ಹೋಗಲು ಅವಕಾಶವಿದೆ ಆದರೆ   ಆದರೆ ಸಾಮೂಹಿಕವಾಗಿ ಸೇರುವಂತಿಲ್ಲ ಎಂದು ಅರ್ಚ್ ಬಿಷಪ್ ಡಾ. ಪೀಟರ್ ಮಖಾದೋ ತಿಳಿಸಿದ್ದಾರೆ.

 

Spread the love
Leave A Reply

Your email address will not be published.

Flash News