ಇಡೀ ದೇಶ ಕೊರೊನಾ ಭೀತಿಗೆ ಸಿಲುಕಿದ್ರೆ.. ಇವರಿಗೆ ಅದೆಂಥಾ ಹೊಸಕಾರು ಶೋಕಿನೋ?

0

ಬೆಂಗಳೂರು:ಇಡೀ ದೇಶ ಕೊರೊನಾ ಭೀತಿಗೆ ಸಿಲುಕಿ ತತ್ತರಿಸುತ್ತಿದ್ದರೆ..ಮುಂದೇನ್ ಮಾಡ್ಬೇಕೆನ್ನೋ ಚಿಂತೆಯಲ್ಲಿ ಮುಳುಗೋಗಿದ್ದರೆ ಬೃಹತ್  ಬೆಂಗಳೂರು ಮಹಾನಗರ ಪಾಲಿಕೆಯ ಆಡಳಿತ ವ್ಯವಸ್ಥೆಗೆ ಕಾರಿನ ಶೋಕಿ ಶುರುವಾಗಿದೆ.ಇದ್ಯಾವುದರ ಪರಿವೆಯೂ ಇಲ್ಲದೆ ಹೊಸ ನಾಲ್ಕು ಕಾರುಗಳನ್ನು ಖರೀದಿಸಿ ಅದಕ್ಕೆ ಶರಂಪರ ಮಕ್ಕಳಂತೆ ರಚ್ಚೆ ಹಿಡಿದು ಜಗಳವಾಡುತ್ತಿದ್ದಾರೆ  ಇಲ್ಲಿನ ಅಧಿಕಾರಿಗಳು ಹಾಗೂ ಚುನಾಯಿತರು ಎನ್ನುವ ಮಾಹಿತಿ ಪಾಲಿಕೆ ಕ್ಯಾಂಪಸ್ ನಲ್ಲಿ ಹರಿದಾಡುತ್ತಿದೆ.

ನಿಜಕ್ಕೂನಾಚಿಕೆಯಾಗುವ ಅಷ್ಟೇ ಏಕೆ ಹೇಸಿಗೆ ತರಿಸುವ ಕೆಲಸ ಇದು.ಕೊರೊನಾಗೆ ಬೆಂಗಳೂರಿಗರು ತತ್ತರಿಸಿ ಹೋಗಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕಿರುವುದು ಲೋಕಲ್ ಗವರ್ನಮೆಂಟ್ ಆಗಿ ಬಿಬಿಎಂಪಿ ಕೆಲಸ.

ಆದ್ರೆ ಇಲ್ಲಿನ ಆಡಳಿತ ವ್ಯವಸ್ಥೆ ಮಾಡುತ್ತಿರುವುದೇನು?ಬಿಬಿಎಂಪಿ ಕೇಂದ್ರ ಕಚೇರಿಯನ್ನು ಸುತ್ತಾಕಿದ್ರೂ ಸುರಕ್ಷತೆಗೆ ಬೇಕಿರೋ ಬಹುತೇಕ ಕ್ರಮಗಳನ್ನೇ ಗಾಳಿಗೆ ತೂರಲಾಗಿದೆ.ಯಾರೊಬ್ಬರಿಗೂ ಸುರಕ್ಷತೆಯ ಚಿಂತೆ ಇದ್ದಂತಿಲ್ಲ.ಇಂಥಾ ನಿರ್ಲಕ್ಷ್ಯದ ಪರಿಸ್ಥಿತಿ ಇರುವ ನಡುವೆಯೇ ಇಲ್ಲಿನ ಅಧಿಕಾರಿಗಳು ಹಾಗೂ ಕಾರ್ಪೊರೇಟರ್ಸ್ ಗೆ ಕಾರುಗಳ ಶೋಕಿ ಶುರುವಾಗಿದೆ ಎಂದ್ರೆ ಇವರನ್ನು ಇನ್ನ್ಯಾವ ಪದಗಳಲ್ಲಿ ಬೈಯ್ಯಬೇಕೋ ಗೊತ್ತಾಗ್ತಿಲ್ಲ.

ಕೌನ್ಸಿಲ್ ಮೀಟಿಂಗ್ ನಡೆಯುವ ಬಿಲ್ಡಿಂಗ್ ನ  ತಳ ಮಹಡಿಯಲ್ಲೇ ಕಾರುಗಳು ಕೊಳೆಯುತ್ತಿವೆ,.ಸುಸ್ಥಿತಿಯಲ್ಲಿರುವ ಕಾರುಗಳನ್ನು ಇಲ್ಲಿನ ಆಡಳಿತ ವ್ಯವಸ್ಥೆ ತನ್ನ ಶೋಕಿಗಾಗಿ ಇವತ್ತು ಅವುಗಳನ್ನು ಗುಜರಿಗೆ ಸೇರೋ ಸ್ಕ್ರಾಪ್ ನ್ನಾಗಿ ಪರಿವರ್ತಿಸಿಬಿಟ್ಟಿವೆ.ಉತ್ತಮ ಸ್ಥಿತಿಯಲ್ಲಿರುವ ಕಾರುಗಳನ್ನು ಬಿಟ್ಟು ಪ್ರತಿ ವರ್ಷದಂತೆ ಹೊಸ ಕಾರುಗಳನ್ನು ಖರೀದಿಸುವ ಶೋಕಿಗೆ ಬಿದ್ದು ನಾಲ್ಕು ಹೊಸ ಕಾರುಗಳನ್ನು ಖರೀದಿಸಿ ಅವುಗಳನ್ನು ಜೋಪಾನವಾಗಿಡಲಾಗಿದೆಯಂತೆ.

ಕಾೆರುಗಳಿಗೆ ಕಾಂಪಿಟೇಷನ್:ಇನ್ನೋವಾ ಕಂಪೆನಿಯ ಕ್ರಿಸ್ಟಾ ಮಾಡೆಲ್ ನ 4 ಕಾರುಗಳನ್ನು ಖರೀದಿಸಲಾಗಿದೆ ಎನ್ನಲಾಗ್ತಿದೆ.ಹೈ ಎಂಡ್ ರೇಟ್ ನ ಈ ಕಾರುಗಳಿಗಾಗಿ ಐಎಎಸ್ ಅಧಿಕಾರಿಗಳಿಂದ ಹಿಡಿದು ಕಾರ್ಪೊರೇಟರ್ಸ್ ಪೈಪೋಟಿಗೆ ಬಿದ್ದಿದ್ದಾರೆ.ಹುದ್ದೆಯಲ್ಲಿ ನಾವ್ ದೊಡ್ಡೋರು,ವಿಧಾನಸೌಧ,ವಿಕಾಸ ಸೌಧ ಸೇರಿದಂತೆ ಪ್ರತಿಷ್ಟಿತ ಸ್ಥಳಗಳಿಗೆ ಹೋಗಬೇಕಾಗಿರುತ್ತೆ.ಅಂಥದ್ದರ ಕಡೆ ಉತ್ತಮ ಸ್ಥಿತಿಯಲ್ಲಿಲ್ಲದ ಕಾರುಗಳನ್ನು ಕೊಂಡೋಗುವುದು ಬಿಬಿಎಂಪಿ ಪ್ರತಿಷ್ಟೆಗೆ ಸಲ್ಲದ ವಿಚಾರ ಎನ್ನುವುದು ಇನ್ನೋವಾ ಕಾರುಗಳಿಗೆ ರಚ್ಚೆ ಹಿಡಿದಿರುವ ಅಧಿಕಾರಿಗಳ ಮಾತು.

ಅದೇ ಸ್ಥಾಯಿ ಸಮಿತಿ  ಅಧ್ಯಕ್ಷರಾಗಿರುವ ಕಾರ್ಪೊರೇಟರ್ಸ್ ಗಳ ವಾದವೇ ಇನ್ನೊಂದು.ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಕೊಡಲಾಗಿರುವ ಕಾರುಗಳು ಹಳೆಯದ್ದಾಗಿವೆ.ಕೆಲವು ಗುಡ್ ಕಂಡೀಷನ್ ನಲ್ಲಿಲ್ಲ.ಬಳಸಲಿಕ್ಕೂ ಸಾಧ್ಯವಾಗದ ಸ್ಥಿತಿಯಲ್ಲಿರುವ ಕಾರುಗಳು ರಸ್ತೆಯಲ್ಲಿ ಕೈ ಕೊಡುತ್ತವೆ.ಇದರಿಂದ ಕೆಲಸ ಮಾಡಲಾಗುತ್ತಿಲ್ಲ.ಹಾಗಾಗಿ ಹೊಸ ಕಾರುಗಳು ನಮಗೇ ಬೇಕು,ಅಧಿಕಾರಿಗಳಿಗೆ ಬೇರೆಯವರ ಬಳಿ ಇರುವ ಕಾರುಗಳನ್ನು ಕೊಡಿಸಿ,ನಮಗೆ ಮಾತ್ರ ಹೊಸ ಕಾರುಗಳೇ ಬೇಕೆಂದು ಈಗಾಗ್ಲೇ ಮೇಯರ್ ಅವರ ಬಳಿ ಇಂಡೆಂಟ್ ಹಾಕ್ಕೊಂಡು ಕೂತಿದ್ದಾರೆ.

ಇಡೀ ರಾಜ್ಯ ಕೊರೊನಾ ವೈರಸ್ ಸೃಷ್ಟಿಸಿರುವ ಭೀತಿ ಬಗ್ಗೆ ತಲೆಕೆಡಿಸಿಕೊಂಡಿದ್ದರೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರುಗಳು ಇದ್ಯಾವುದರ ಚಿಂತೆಯೂ ಇಲ್ಲದವರಂತೆ ಹೊಸ ಕಾರುಗಳಿಗೆ ಕಾಂಪಿಟೇಷನ್ ಗೆ ಬಿದ್ದು ಜಗಳವಾಡುತ್ತಿದ್ದಾರೆನ್ನೋದು ನಾಚಿಕೆಗೇಡಿನ ಸಂಗತಿ.ಇವರು ಮಾಡುವ ಕೆಲಸಕ್ಕೆ ಈಗ ಕೊಟ್ಟಿರುವ ಕಾರುಗಳೇ ಹೆಚ್ಚು.ಹೊಸ ಕಾರುಗಳನ್ನು ಕೊಟ್ಟರೆ ಇವರ ಓಡಾಟಕ್ಕೆ ಬ್ರೇಕ್ ಹಾಕೊಕ್ಕೆ ಸಾಧ್ಯವೇ ಇಲ್ಲ.ಹಾಗಾಗಿ ಕಾರುಗಳನ್ನು ರದ್ದು ಮಾಡಿ ಅವಶ್ಯಕತೆ ಇದ್ದಾಗ ಮಾತ್ರ ಬಳಕೆ ಮಾಡುವಂತಾಗ್ಬೇಕು.ಮೇಯರ್-ಕಮಿಷನರ್ ಇದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕೆನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಶಿವಕುಮಾರ್.

ಹೌದು,..ರಾಜ್ಯದ ಪರಿಸ್ಥಿತಿ ಸಧ್ಯಕ್ಕೆ ಸರಿಯಿಲ್ಲದಿರುವಾಗ ಯಾವುದಕ್ಕೆ ಆಧ್ಯತೆ ಕೊಟ್ಟು ಕೆಲಸ ಮಾಡ್ಬೇಕೋ,ಅದಾಗದೆ ಅನಗತ್ಯ ಹಾಗೂ ದುಂದುವೆಚ್ಚಕ್ಕೆ ಬಿಬಿಎಂಪಿಯ ಆಡಳಿತ ವ್ಯವಸ್ಥೆ ಮುಂದಾಗಿರುವುದಕ್ಕೆ ಬೆಂಗಳೂರಿಗರು ಶಾಪ ಹಾಕ್ತಿದ್ದಾರೆ.ಜನ ಭಯದಲ್ಲಿ ಸಾಯ್ತಿದ್ರೆ ಇವರಿಗೆ ಕಾರಿನ ಶೋಕಿನಾ..ಇವರಿಗೇನ್ ಬರ್ಬಾರ್ದೆ ಎಂದು ಬೈಯ್ದುಕೊಳ್ಳುತ್ತಿದ್ದಾರೆ.ಜನ ಹೀಗೆ ಬೈಯ್ದುಕೊಳ್ಳುತ್ತಿರುವುದಕ್ಕೂ ಒಂದು ಸಕಾರಣವಿದೆ.ಅವರ ಆಕ್ರೋಶಕ್ಕೂ ಅರ್ಥವಿದೆ ಎನ್ಸುತ್ತೆ ಅಲ್ವಾ..

Spread the love
Leave A Reply

Your email address will not be published.

Flash News