ಕೊರೊನಾ..ಕೊರೊನಾ..ನಿನ್ ತವರೂರು ಚೀನಾನಾ..ವೈರಲ್ ಆಗ್ತಿದೆ ಕೊರೊನಾ ಆಲ್ಬಂ

0

ಬೆಂಗಳೂರು:ಕೊರೊನಾ ಭೀತಿಗೆ ಇಡೀ ದೇಶವೇ ತತ್ತರಿಸುತ್ತಿದೆ.ಇದರ ನಡುವೆ ಕೊರೊನಾ ಮಹಾಮಾರಿಯನ್ನು ಎದುರಿಸಲು ಜಾಗೃತಿಯ ಕಾರ್ಯಕ್ರಮಗಳು ಹೆಚ್ಚೆಚ್ಚು ಆಗಬೇಕಿದೆ.ಈ ನಿಟ್ಟಿನಲ್ಲಿ ಸರ್ಕಾರಗಳು ಕೂಡ ಸಾಕಷ್ಟು ರೀತಿಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿವೆ.ಇದೆಲ್ಲದರ ಜೊತೆಗೇನೆ ಕೆಲವು ಪ್ರಯತ್ನಗಳು ಕೂಡ ದೇಶದ ಬಗ್ಗೆ ಕಾಳಜಿ ಇರುವ ಸಾಕಷ್ಟು ಉತ್ಸಾಹಿ ಯುವಕರು ಮಾಡುತ್ತಾ ಬಂದಿದ್ದಾರೆ.

ಸರ್ಕಾರ ಕೊರೊನಾ ಬಗ್ಗೆ ಜನಜಾಗೃತಿ ಮೂಡಿಸಲು ಪೇಪರ್..ಟಿವಿ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾಗಳನ್ನು ಬಳಸಿಕೊಂಡು ಯಶಸ್ವಿಯಾಗ್ತಿದೆ.ಮಾದ್ಯಮಗಳ ಮೂಲಕ ಜನರಿಗೆ ಪರಿಣಾಮಕಾರಿಯಾದ ಜಾಗೃತಿಯೂ ಲಭ್ಯವಾಗುತ್ತಿದೆ.ಅದು ಒಂದು ಹಂತದಲ್ಲಿ ನಡೆಯುವ ಕಾರ್ಯಕ್ರಮಗಳು.ಇನ್ನೊಂದೆಡೆ   ಸ್ವಯಂಪ್ರೇರಿತವಾಗಿ ಕೆಲವು ಯುವ ತಂಡಗಳು  ಜನಾಂದೋಲನದ ಭಾಗವಾಗಿ  ತಮ್ಮದೇ ವಿಶಿಷ್ಟ ಪ್ರಯತ್ನಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ.ಇಂಥ ಪ್ರಯತ್ನಗಳಲ್ಲಿ ಬೆಂಗಳೂರಿನ ಉತ್ಸಾಹಿ ಯುವಕರ ತಂಡ  ರೂಪಿಸಿರುವ ಕೊರೊನಾ..ಕೊರೊನಾ..ನಿನ್ ತವರು ಚೀನಾನಾ.. ಎಂಬ ಹಾಡು ಇದೀಗ ಹೆಚ್ಚೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದೆ.

ಯುವ ಕಲಾವಿದ ಹಾಗೂ ಬ್ಯುಸಿನೆಸ್ ಮ್ಯಾನ್ ವೀರೇಂದ್ರ ನೇರಲಹಳ್ಳಿ ಹಾಗು ತಂಡ ರೂಪಿಸಿರುವ ಹಾಡಿನಲ್ಲಿ ವ್ಯಂಗ್ಯದ ಮೂಲಕ ಕೊರೊನಾ ಭೀತಿಯ ಮಾರಕತೆ ಹಾಗೂ ಅಪಾಯವನ್ನು ತಿಳಿಸೇಳುವ ಪ್ರಯತ್ನ ಮಾಡಲಾಗ್ತಿದೆ.ಸ್ವತಃ ಕಲಾವಿದ ವೀರೇಂದ್ರ ಅವರೇ ಆಲ್ಬಂನಲ್ಲಿ ಮುಖ್ಯಪಾತ್ರಧಾರಿಯಾಗಿ ಕಾರ್ಯನಿರ್ವಹಣೆ ಮಾಡಿದ್ದು ಕೊರೊನಾ ಬಗ್ಗೆ ಮಾಡುತ್ತಿರುವ ಈ  ಜನಜಾಗೃತಿ ಕಾರ್ಯಕ್ರಮವನ್ನು ಜನರು ಸದುಪಯೋಗಪಡಿಸಿಕೊಳ್ಳಬೇಕು,ಹಾಗೆಯೇ ಜಾಗೃತಿಯಿಂದ ಕೊರೊನಾ ಮಹಾಮಾರಿಯನ್ನು ಮೂಲೋತ್ಪಾಟನೆ ಮಾಡಬೇಕೆನ್ನುವ ಸಂದೇಶ ಸಾರಿದ್ದಾರೆ.ಈ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಕೂಡ ಆಗ್ತಿದೆ. ವೀರೂ ಮಲ್ಟಿಮೀಡಿಯಾದ ಮಾಲೀಕ ವೀರೇಂದ್ರ ಎಸ್ ನೇರಲಹಳ್ಳಿ ಅವರ ಈ ಕಾರ್ಯಕ್ಕೆ ಗಿರೀಶ್ ಕೆ.ಎಸ್,ಇಂದ್ರಜಿತ್,ಚಂದು,ಅದಾಮ್ ಶಾ ಕೈ ಜೋಡಿಸಿದ್ದಾರೆ.

 

 

Spread the love
Leave A Reply

Your email address will not be published.

Flash News