ಹೊಟೇಲ್ ಗಳಲ್ಲಿ ಊಟ ಸಿಗ್ತಿಲ್ವೇ..ಡೋಂಟ್ ವರಿ “ಆನ್ ಲೈನ್ ಫುಡ್ ಡೆಲಿವರಿ” ಇದೆ..

0

ಬೆಂಗಳೂರು: ಕೊರೊನಾ ವೈರಸ್ ಭೀತಿಗೆ ದೇಶವೇ ತಲ್ಲಣಿಸಿದೆ.ಜನಜೀವನ ಸಂಪೂರ್ಣ ಅಸ್ಥವ್ಯಸ್ಥಗೊಂಡಿದೆ.ಎಲ್ಲಾ ವ್ಯವಹಾರಗಳು ಸ್ಥಗಿತಗೊಂಡು ಆರ್ಥಿಕತೆ ಬುಡಮೇಲಾಗಿದೆ.ಮೊದಲಿನ ಪರಿಸ್ಥಿತಿಗೆ ಬರೊಕ್ಕೆ ಇನ್ನೆಷ್ಟು ದಿನ..ತಿಂಗಳು..ವರ್ಷಗಳು ಬೇಕಾಗ್ಬೋದೋ ಗೊತ್ತಾಗ್ತಿಲ್ಲ.ಇನ್ನು 21 ದಿನ ಇಡೀ ದೇಶವೇ ಲಾಕ್ ಡೌನ್ ಆಗಿರುವ ಸಂದರ್ಭದಲ್ಲಿ ಆಹಾರದ ಪೂರೈಕೆಯೂ ಹಳಿ ತಪ್ಪಿದೆ.ಹೊಟೇಲ್ ಗಳು ತಮ್ಮ ಸೇವೆಯನ್ನು ಸ್ಥಗಿತಗೊಳಿಸಿರುವುದರಿಂದ ಅವುಗಳನ್ನೇ ನಂಬಿದ್ದ ಗ್ರಾಹಕರು ದಿಕ್ಕು ತೋಚದಂತಾಗಿದ್ದಾರೆ.ಈ ಸಮಸ್ಯೆಗೆ ಪರಿಹಾರವಾಗಿ ಕೆಲಸ ಮಾಡುತ್ತಿದೆ ಆನ್ ಲೈನ್ ಫುಡ್ ಡೆಲಿವರಿ ವ್ಯವಸ್ಥೆ.

ಹೊಟೇಲ್ ಗಳು ಮುಚ್ಚಿರೋದ್ರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಗ್ರಾಹಕರ ಪಾಲಿಗೆ ಆಪದ್ಭಾಂಧವವಾಗಿ ಕೆಲಸ ಮಾಡುತ್ತಿರುವುದು ಆನ್ ಲೈನ್ ಫುಡ್ ಡೆಲಿವರಿ ವ್ಯವಸ್ಥೆ.ಝೋಮ್ಯಾಟೋ..ಸ್ವಿಗ್ಗಿ..ಊಬರ್ ಈಟ್ಸ್ ನಂಥ ಸಂಸ್ಥೆಗಳು ಹೊಟೇಲ್ ಗಳಿಲ್ಲದೆ ಪರದಾಡುತ್ತಿರುವ ಗ್ರಾಹಕರ ಹಸಿವನ್ನು ನೀಗಿಸುವ ಕೆಲಸ ಮಾಡುತ್ತಿವೆ.ನಿತ್ಯ ಬರುತ್ತಿದ್ದ ಆರ್ಡರ್ ಗಳು  ಕಡ್ಮೆಯಾಗಿದ್ದರೂ ಗ್ರಾಹಕರು ಮಾತ್ರ ಬುಕ್ ಮಾಡಿ ಆಹಾರ ಪಡೆಯುತ್ತಿರುವಂತದ್ದು ಮಾತ್ರ ನಿಂತಿಲ್ಲ.

ಆನ್ ಲೈನ್ ಫುಡ್ ಡೆಲಿವರಿ ಕಂಪೆನಿಗಳು ರಾಜಧಾನಿಗರ ಆಹಾರ ಬೇಡಿಕೆ ಪೂರೈಸ್ತಿವೆ ಹೊಟೇಲ್ ಗಳ  ಗ್ರಾಹಕ ಸೇವೆ ಲಾಕ್ ಡೌನ್ ಆದ್ರೂ ಆನ್ಲೈ ನ್ ಫುಡ್ ಡೆಲಿವರಿ ಅಬಾಧಿತವಾಗಿದೆ.ಕಂಪೆನಿಗಳ ಕಿಚನ್ ನೊಳಗೆ ಎಂದಿನಂತೆ  ಆಹಾರ ಸಿದ್ಧವಾಗ್ತಿದೆ.   ಕಡ್ಮೆ ಪ್ರಮಾಣದ ಬೇಡಿಕೆಯಲ್ಲೇ ಎಂದಿನಂತೆ ಆಹಾರ ಪೂರೈಸುತ್ತಿವೆತುರ್ತು ಸಮಯದಲ್ಲೂ ಗ್ರಾಹಕರ ವಿಶ್ವಾಸ ಕಳೆದುಕೊಳ್ಳದೆ ಉತ್ತಮ  ಸೇವೆ ನೀಡುತ್ತಿವೆ ಎನ್ನುತ್ತಾರೆ ಆನ್ ಲೈನ್ ಡೆಲಿವರಿ ಕಂಪೆನಿಯೊಂದರ ಮುಖ್ಯಸ್ಥ ರಶೀದ್.

ಆಹಾರ ಪೂರೈಕೆ ಕಂಪೆನಿಗಳು ವೆಜ್-ನಾನ್ ವೆಜ್ ಆಹಾರ ಪೂರೈಕೆಯನ್ನುಎಂದಿನಂತೆ ಮುಂದುವರೆಸಿವೆ.ವ್ಯತ್ಯಾಸ ಏನೆಂದ್ರೆ. ಸಸ್ಯಹಾರಕ್ಕೆ ಬೇಡಿಕೆ ಹೆಚ್ಚಾಗಿದ್ದರೆ,ಕರೋನಾಕ್ಕೆ ಮಾಂಸಹಾರ ಕಾರಣ ಎಂಬ ಆತಂಕದಲ್ಲಿ ಮಾಂಸಹಾರಕ್ಕೆ ಬೇಡಿಕೆ ತಗ್ಗಿದೆ.ಇಷ್ಟಾದ್ರೂ ಆರ್ಡರ್ ಕಡ್ಮೆ ಬಂದ್ರೂ ಸಸ್ಯಹಾರದ ಜತೆಗೇನೆ ಮಾಂಸಹಾರ ಸೇವೆಯನ್ನೂ ಕೂಡ ನೀಡುತ್ತಿವೆ.

ಇನ್ನು ಆಹಾರ ಪೂರೈಸುವ ಡೆಲಿವರಿ ಬಾಯ್ಸ್ ಗಳ ಸುರಕ್ಷತೆಗೂ ಆಧ್ಯತೆ ಕೊಡಲಾಗಿದೆ.ಯಾವುದೇ ಅಪಾರ್ಟ್ಮೆಂಟ್ ಗಳೊಳಗೆ ಅವರಿಗೆ ಎಂಟ್ರಿಯಿಲ್ಲ.ಫುಡ್ ಆರ್ಡರ್ ಕೊಟ್ಟವರು ಮಾಸ್ಕ್ ಹಾಕಿದ್ದರೆ ಮಾತ್ರ ಅಂಥವರಿಂದ ಆಹಾರ ಪಡೆಯುತ್ತಿರೋದ್ರಿಂದ ಪ್ರತಿಯೋರ್ವ ಡೆಲಿವರಿ ಬಾಯ್ ಗೂ ಸ್ಯಾನಿಟೈಸರ್…ಮಾಸ್ಕ್ ಧರಿಸಿಯೇ ಡೆಲಿವರಿ ನೀಡುವಂತೆ ಸೂಚನೆ ನೀಡಲಾಗಿದೆ ಎನ್ನುತ್ತಾರೆ ಆನ್ ಲೈನ್ ಫುಡ್  ಡೆಲಿವರಿ ಕಂಪೆನಿಯ ಮ್ಯಾನೇಜರ್ ಮತೀನ್.

ಹೀಗೆ ಬೇಡಿಕೆ ಕಡ್ಮೆಯಾದ್ರೂ ಇರುವ ವ್ಯವಸ್ಥೆಯೊಳಗೇನೆ ರಾಜಧಾನಿಯಲ್ಲಿ ಜನರ ಆಹಾರದ ಬೇಡಿಕೆಯನ್ನು ಪೂರೈಸುವ ಕೆಲಸ ಮಾಡುತ್ತಿವೆ ಆನ್ ಲೈನ್ ಫುಡ್ ಡೆಲಿವರಿ ಕಂಪೆನಿಗಳು.

  

Spread the love
Leave A Reply

Your email address will not be published.

Flash News