“ಮಿಷನ್ ಕೊರೊನಾ”ದ ಈ ಜೋಡೆತ್ತುಗಳ ಕಾರ್ಯಕ್ಕೆ ಹ್ಯಾಟ್ಸಾಫ್.

0
ಬಿಬಿಎಂಪಿ ವಿಶೇಷ ಆಯುಕ್ತ ಡಾ.ರವಿಕುಮಾರ್ ಸುರಪುರ
ಬಿಬಿಎಂಪಿ ವಿಶೇಷ ಆಯುಕ್ತ ಡಾ.ರವಿಕುಮಾರ್ ಸುರಪುರ
ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್
ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್

ಬೆಂಗಳೂರು:ವಿಶ್ವವನ್ನೇ ಸಾವಿನ ಮನೆಯನ್ನಾಗಿ ಪರಿವರ್ತಿಸಿರುವ ಕೊರೊನಾ ರಾಜಧಾನಿ ಬೆಂಗಳೂರನ್ನು ಬಿಟ್ಟಿಲ್ಲ.ಕ್ಷಣ ಕ್ಷಣಕ್ಕೂ ಆತಂಕವನ್ನು ಇಮ್ಮಡಿಗೊಳಿಸುತ್ತಿರುವ ಕೊರೊನಾದ ಮೂಲೋತ್ಪಾಟನೆಗೆ ಬೃಹತ್ಬೆಂಗಳೂರು ಮಹಾನಗರ ಪಾಲಿಕೆ ಕೈಗೊಂಡಿರುವ ಕಾರ್ಯ ನಿಜಕ್ಕೂ  ಮೆಚ್ಚುವಂತದ್ದು. ಬಿಬಿಎಂಪಿ  ವ್ಯಾಪ್ತಿಯಲ್ಲಿ ಕೊರೊನಾ ಮೂಲೋತ್ಪಾಟನೆ ಮಿಷನ್ ನ್ನು ಮುನ್ನಡೆಸುತ್ತಿರುವ ಇಬ್ಬರು ವ್ಯಕ್ತಿಗಳನ್ನು ಇಡೀ ಬೆಂಗಳೂರು ಸ್ಮರಿಸಲೇಬೇಕಾಗ್ತದೆ.ಆ ಇಬ್ಬರು ವ್ಯಕ್ತಿಗಳು ಯಾರೆನ್ನುವ ಕುತೂಹಲ ನಿಮಗಿದ್ದರೆ ಈ ಸ್ಟೋರಿ ನೋಡಿ..

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೊರೊನಾ ಮೂಲೋತ್ಪಾಟನೆ ಹಾಗೂ ನಿಯಂತ್ರಣ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಜನಜಾಗೃತಿ ಮೂಡಿಸುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡುತ್ತಿದೆ ಎನ್ನೋದರಲ್ಲಿ ಅನುಮಾನವಿಲ್ಲ.ಯಾವುದೇ ದೂರು-ಆಕ್ಷೇಪಗಳಿಲ್ಲದೆ ಕೊರೊನಾ ಮಿಷನ್ ನಡೆಯುತ್ತಿದೆ ಎನ್ನೋದೇ ಸತ್ಯವಾದ್ರೆ ಅದಕ್ಕೆ ಪ್ರೇರಕ ಶಕ್ತಿಯಾಗಿ ಕೆಲಸ ಮಾಡುತ್ತಿರುವ ಬಿಬಿಎಂಪಿಯ ಇಬ್ಬರು ಅಧಿಕಾರಿಗಳ ಕಾರ್ಯವನ್ನು ಸ್ಮರಿಸಲೇಬೇಕಾಗ್ತದೆ.ಅವ್ರೇ ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್ ಹಾಗೂ ವಿಶೇಷ ಆಯುಕ್ತ ಡಾ.ರವಿಕುಮಾರ ಸುರಪುರ.

ಬಿಬಿಎಂಪಿ ಮಟ್ಟಿಗೆ ಸವಾಲಾಗಿರುವ ಕೊರೊನಾ  ಮಿಷನ್ ನ್ನು ಮೆಂಟೇನ್ ಹಾಗೂ ಕಂಟ್ರೋಲ್ ಮಾಡುವುದು ಅಂದುಕೊಂಡಷ್ಟು ಸುಲಭವಲ್ಲ.ಸವಾಲಿನ ಜತೆಗೆ ಕ್ಲಿಷ್ಟಕರ ಕೂಡ.ಇಷ್ಟಾದ್ರೂ ಆಯುಕ್ತ ಅನಿಲ್ ಕುಮಾರ್ ಹಾಗೂ ಅವರ ಕಾರ್ಯಕ್ಕೆ ಕೈ ಜೋಡಿಸಿರುವ ಐಎಎಸ್ ಅಧಿಕಾರಿ ರವಿಕುಮಾರ್ ಸುರಪುರ ಹಗಲಿರುಳು ಮಾಡ್ತಿರುವ ಕೆಲಸ ನಿಬ್ಬೆರಗಾಗಿಸುತ್ತೆ.ಬೆಳಗ್ಗೆ ಹೊತ್ತಲ್ಲದ ಹೊತ್ತಲ್ಲಿ ಬಂದು ಬಿಬಿಎಂಪಿ ಕಚೇರಿಗೆ ಬಂದು ಕೂತ್ರೆ ಇಬ್ಬರು ಮತ್ತೆ ವಾಪಸ್ಸಾಗೋದು ರಾತ್ರಿ ಅದೆಷ್ಟೋ ಹೊತ್ತಿಗೆ. ಹೊರಜಗತ್ತಿಗೆ ಗೊತ್ತಾಗದ ರೀತಿಯಲ್ಲಿ ಇಡೀ ವ್ಯವಸ್ಥೆಯನ್ನು ನಿಯಂತ್ರಿಸುತ್ತಿರುವುದು ಸರ್ಕಾರಕ್ಕೇನೆ ಮೆಚ್ಚುಗೆ ಮೂಡಿಸಿದೆ.ಈ ಸಂಬಂಧ ಪ್ರಶಂಸೆಯ ಮಾತು ಕೂಡ ಮುಖ್ಯಮಂತ್ರಿ ಯಡಿಯೂರಪ್ಪ ಅವರಾದಿಯಾಗಿ ಸಚಿವ ಸಂಪುಟದಿಂದ ಕೇಳಿಬಂದಿದೆ.

ಕೊರೊನಾ ನಿಯಂತ್ರಣಕ್ಕೆ ಪೂರಕವಾಗಿ ರಾಜ್ಯದಲ್ಲೇ ಪ್ರಥಮವಾಗಿ ಸ್ಥಾಪಿಸಿದ ವಾರ್ ರೂಂ ನಲ್ಲಿ ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್, ಪೊಲೀಸ್ ಕಮಿಷನರ್ ಭಾಸ್ಕರ ರಾವ್ ಹಾಗೂ ಬಿಬಿಎಂಪಿ ವಿಶೇಷ ಆಯುಕ್ತ ಡಾ.ರವಿಕುಮಾರ್ ಸುರಪುರ
ಕೊರೊನಾ ನಿಯಂತ್ರಣಕ್ಕೆ ಪೂರಕವಾಗಿ ರಾಜ್ಯದಲ್ಲೇ ಪ್ರಥಮವಾಗಿ ಸ್ಥಾಪಿಸಿದ ವಾರ್ ರೂಂ ನಲ್ಲಿ ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್, ಪೊಲೀಸ್ ಕಮಿಷನರ್ ಭಾಸ್ಕರ ರಾವ್ ಹಾಗೂ ಬಿಬಿಎಂಪಿ ವಿಶೇಷ ಆಯುಕ್ತ ಡಾ.ರವಿಕುಮಾರ್ ಸುರಪುರ

ಬಿಬಿಎಂಪಿ ಆಯುಕ್ತರಾಗಿ ಅನಿಲ್ ಕುಮಾರ್ 198 ವಾರ್ಡ್ ಗಳಲ್ಲಿ ಕೊರೊನಾ ಮಿಷನ್ ನನ್ನು ನಿಭಾಯಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ.ಎಷ್ಟೇ ಟೆನ್ಷನ್  ಇದ್ದರೂ ಅದಕ್ಕೆ ತಲೆಕೆಡಿಸಿಕೊಳ್ಳದೆ ಸ್ಥಿತಪ್ರಜ್ಞರಾಗಿ ಮಾಡುತ್ತಿದ್ದಾರೆ.ಕೊರೊನಾ ತನ್ನ ವಿದ್ವಂಸಕತೆಯನ್ನು ದಿನೇ ದಿನೇ ವ್ಯಾಪಕಗೊಳಿಸುತ್ತಿರುವ ಸವಾಲು ಹಾಗೂ ಸಂಕಷ್ಟ ಪರಿಸ್ಥಿತಿಯಲ್ಲಿ ಅವರಿಗಿರಬಹುದಾದ ಒತ್ತಡ ಹಾಗೂ ಆತಂಕದ ಬಗ್ಗೆ ಒಂದು ಕ್ಷಣ ಆಲೋಚಿಸಿದ್ರೂ ಗಾಬರಿಯಾಗುತ್ತೆ.ಆದ್ರೆ ಜವಾಬ್ದಾರಿಯುತ ಹುದ್ದೆಗಳಲ್ಲಿ ಕೆಲಸ ಮಾಡಿ ಪಡೆದ ಅನುಭವ ಇಂಥ ಸಂಕಷ್ಟದ ಸ್ಥಿತಿಯಲ್ಲಿ ನೆರವಿಗೆ ಬರುತ್ತಿದೆ ಎಂದ್ರೂ ತಪ್ಪಾಗ್ಲಿಕ್ಕಿಲ್ಲ.

ಕೊರೊನಾ ನಿಯಂತ್ರಣ ಕಾರ್ಯಕ್ಕೆ ಪೂರಕವಾಗಿ ಕಾರ್ಯನಿರ್ವಹಣೆ ವೇಳೆಯಲ್ಲಿ ಡಿಸಿಪಿ ಡಾ.ಶರಣಪ್ಪ,ಬಿಬಿಎಂಪಿ ಮೇಯರ್ ಗೌತಮ್ ಕುಮಾರ್,ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಹಾಗೂ ವಿಶೇಷ ಆಯುಕ್ತ ಡಾ.ರವಿಕುಮಾರ್ ಸುರಪುರ
ಕೊರೊನಾ ನಿಯಂತ್ರಣ ಕಾರ್ಯಕ್ಕೆ ಪೂರಕವಾಗಿ ಕಾರ್ಯ ನಿರ್ವಹಣೆ ವೇಳೆಯಲ್ಲಿ ಡಿಸಿಪಿ ಡಾ.ಶರಣಪ್ಪ,ಬಿಬಿಎಂಪಿ ಮೇ ಯರ್ ಗೌತಮ್ ಕುಮಾರ್,ಬಿಬಿಎಂಪಿ ಆಯುಕ್ತ ಅನಿಲ್ ಕುಮಾ ರ್ ಹಾಗೂ ವಿಶೇಷ ಆಯುಕ್ತ ಡಾ.ರವಿಕುಮಾರ್ ಸುರಪುರ

ಕೊರೊನಾ ಮಿಷನ್ ನ ಕಾರ್ಯಪ್ರಗತಿಯ ಮಾಹಿತಿ ಪಡೆಯುವುದರ ಜೊತೆಗೆ ಅಧಿಕಾರಿಗಳಿಗೆ ಅಗತ್ಯವಿರುವ ಮಾಹಿತಿಯನ್ನು ಪೂರೈಸುವ ಕೆಲಸವನ್ನೂ ಕಮಿಷನರ್ ಅನಿಲ್ ಕುಮಾರ್ ಮಾಡುತ್ತಿದ್ದಾರೆ.ಇದರ ಜೊತೆಗೆ ಅವರ ಪರಿಶ್ರಮದ ಧ್ಯೋತಕವಾಗಿರುವ ವಾರ್ ರೂಂನಲ್ಲಿ ಠಿಕಾಣಿ ಹೂಡಿ ಪ್ರತಿ ಕ್ಷಣದ ಮಾಹಿತಿಯನ್ನು ಪಡೆಯುತ್ತಾ ತ್ವರಿತಗತಿಯಲ್ಲಿ ಆಗಬೇಕಿರುವ ಕೆಲಸವನ್ನು “ಎಟ್ ದಿ ಸ್ಪಾಟ್” ಆಧ್ಯತೆ ಮೇರಗೆ ಕೆಳ ಹಂತದ ಅಧಿಕಾರಿಗಳ ಮೂಲಕ ನಿರ್ವಹಿಸುತ್ತಿದ್ದಾರೆ.ಇದರ ನಡುವೆಯೇ ಬೆಂಗಳೂರಿ ಗರ ಸಮಸ್ಯೆ-ಕಷ್ಟ-ಅಹವಾಲುಗಳನ್ನು ಸಮಾಧಾನದಿಂದ ಕೇಳಿ ಅದಕ್ಕೆ ಪರಿಹಾರ ಸೂಚಿಸುವ ಮೂಲಕ ಜನಸ್ನೇಹಿ ಕಮಿಷನರ್ ಎನ್ನುವ ಪ್ರೀತಿಗೆ ಪಾತ್ರರಾಗಿದ್ದಾರೆ.

ಕೊರೊನಾ ಜನಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟ ವೇಳೆ ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್ ಹಾಗೂ ವಿಶೇಷ ಆಯುಕ್ತ ಡಾ.ರವಿಕುಮಾರ್ ಸುರಪುರ
ಕೊರೊನಾ ಜನಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟ ವೇಳೆ ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್ ಹಾಗೂ ವಿಶೇಷ ಆಯುಕ್ತ ಡಾ.ರವಿಕುಮಾರ್ ಸುರಪುರ

ಕಮಿಷನರ್ ಅನಿಲ್ ಕುಮಾರ್ ಅವರ ಕೆಲಸಕ್ಕೆ ಹೆಗಲು ಕೊಟ್ಟ ಕೆಲಸ ಮಾಡುತ್ತಿರುವ ವಿಶೇಷ ಆಯುಕ್ತ ಡಾ.ರವಿಕುಮಾರ್ ಸುರಪುರ ತಮ್ಮ ಮೂಲವೃತ್ತಿಯಾಗಿದ್ದ ವೈದ್ಯವೃತ್ತಿಯ ಅನುಭವಗಳನ್ನು ಸಂಕಷ್ಟದ ಸಮಯದಲ್ಲಿ ಸಮಾಜಕ್ಕೆ ಧಾರೆ ಎರೆಯುತ್ತಿದ್ದಾರೆ.ಆರೋಗ್ಯದ ಸಮಸ್ಯೆ ಎದುರಿಸುತ್ತಿರುವ ಬೆಂಗಳೂರಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅವರ ಕಾರ್ಯನಿರ್ವಹಣೆ ಇತರೆ ಅಧಿಕಾರಿಗಳಿಗೆ ಮಾದರಿಯಾಗುವಂತದ್ದು.

ರಾಜಸ್ಥಾನ ಕೆಡರ್ ಐಎಎಸ್ ಅಧಿಕಾರಿಯಾಗಿರುವ ರವಿಕುಮಾರ್ ಸುರಪುರ ಮೂಲತಃ ಧಾರವಾಡದವರು.ಕನ್ನಡವನ್ನು ಹೆಚ್ಚು ಪ್ರೀತಿಸುವ ರವಿಕುಮಾರ್ ಸುರಪುರ ತಮ್ಮ ಸಾರ್ವಜನಿಕ ಆಡಳಿತ ಸೇವಾವಧಿಯಲ್ಲಿ ಜನ್ಮ ಕೊಟ್ಟ  ಕರ್ನಾಟಕಕ್ಕೆ ಏನಾದರೊಂದಿಷ್ಟು ನೆನಪಿನಲ್ಲುಳಿಯುವಂಥ ಕೆಲಸವನ್ನು ಮಾಡ್ಬೇಕೆನ್ನುವ ಹಿರಿದಾಸೆ ಹೊಂದಿದ್ದಾರೆ.ಅದಕ್ಕೊಂದು ಅವಕಾಶವನ್ನು ಕೊರೊನಾದ ಈ  ಸಂಕಷ್ಟದ ಸನ್ನಿವೇಶ ತಂದುಕೊಟ್ಟಿದೆ.ಈ ವೇಳೆ ಸ್ವಲ್ಪವೂ ಮೈಮರೆಯದೆ ತಮ್ಮ ಹೊಣೆಗಾರಿಕೆ ಹಾಗೂ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.ಸರ್ಕಾರ ಹಾಗೂ ಬಿಬಿಎಂಪಿ ನಡುವೆ ಸಮನ್ವಯ ಸಾಧಿಸುವ ಹೊಣೆಗಾರಿಕೆ ಅವರ ಮೇಲಿದೆ.ಇವರ ಕಾರ್ಯವೈಖರಿ ಅರಿತೇ ಸರ್ಕಾರ ರವಿಕುಮಾರ್ ಅವರಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿನ ಕೊರೊನಾ ಮಿಷನ್ ನ ಹೊಣೆಗಾರಿಕೆ ನೀಡಿದೆ. ಕಮಿಷನರ್ ಅನಿಲ್ ಕುಮಾರ್ ಅವರ ಜೊತೆ ಕೈ ಜೋಡಿಸಿ ಕೆಲಸ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ಕಮಿಷನರ್ ಅನಿಲ್ ಕುಮಾರ್ ಹಾಗೂ ರವಿಕುಮಾರ್ ಸುರಪುರ ಎನ್ನುವ ಜೋಡೆತ್ತು ಕೊರೊನಾ ಸೃಷ್ಟಿಸಿರುವ ವಿಪತ್ತಿನ ಸಂದರ್ಭದಲ್ಲಿ ಮಾಡುತ್ತಿರುವ ಕೆಲಸ ಅನುಕರಣೀಯ.ಮಾದರಿ ಕೂಡ.ಇಡೀ ಬೆಂಗಳೂರು ಇವರಿಬ್ಬರಿಗೆ ಹ್ಯಾಟ್ಸಾಫ್ ಹೇಳಲೇಬೇಕು..

Spread the love
Leave A Reply

Your email address will not be published.

Flash News