ಕೊರೊನಾ ಸೋಂಕಿನ ಭೀತಿಗೆ ತತ್ತರಿಸಿರುವ ವೃದ್ಧಾಶ್ರಮಗಳು- ಹಿರಿಜೀವಗಳ ರಕ್ಷಣೆಯೇ ಸವಾಲು

0

ಬೆಂಗಳೂರು:ಮಹಾಮಾರಿ ಕೊರೊನಾ ಸೋಂಕು ಯಾವ್ ಕ್ಷಣದಲ್ಲಿ ಯಾರಿಗೆ ಹೇಗೆ ತಗಲುತ್ತೆ  ಎನ್ನೋದೇ ಗೊತ್ತಾಗ್ತಿಲ್ಲ.ಅಂತದ್ದರಲ್ಲಿ ಸೋಂಕು ಹೆಚ್ಚು ತೀಕ್ಷ್ಣವಾಗಿ ತಗಲುವ ವಯೋವೃದ್ಧರನ್ನು ಕಾಪಾಡಿಕೊಳ್ಳುವುದು ಕ್ಲಿಷ್ಟಕರ ಹಾಗೂ ಸವಾಲಿನ ಕೆಲಸ.ರಾಜಧಾನಿ ಬೆಂಗಳೂರಲ್ಲಿ ಹೆಚ್ಚಾಗಿರುವ ವಯೋವೃದ್ಧರ ರಕ್ಷಣೆಗೆ ಆಧ್ಯತೆ ನೀಡುವ ಕೆಲಸಗಳು ಅಷ್ಟೇನೂ ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ ಎನ್ನೋದು ವಿಪರ್ಯಾಸಕರ.

ಬೆಂಗಳೂರನ್ನು ಎಲ್ಡರ್ಡ್ ಪ್ಯಾರಡೈಸ್(ವಯೋವೃದ್ಧರ ಪಾಲಿನ ಸ್ವರ್ಗ) ಎಂದೇ ಕರೆಯಲಾಗುತ್ತೆ.ಅಷ್ಟೊಂದು ಅಹ್ಲಾದಕರ-ಅನುಕೂಲಕರವಾದ ವಾತಾವರಣ ಇಲ್ಲಿದೆ. ಅದೇ ರೀತಿ ಮಕ್ಕಳಿಂದ ತಿರಸ್ಕರಿಸಲ್ಪಡುತ್ತಿರುವ ಹಿರಿ ಜೀವಗಳ ನರಕವಾಗಿಯೂ ಬೆಂಗಳೂರು ಮಾರ್ಪಾಡಾಗುತ್ತಿದೆ.ಹಾಗಾಗಿಯೇ ವೃದ್ಧಾಶ್ರಮಗಳು ಹೆಚ್ಚಾಗ್ತಿವೆ.ಅದೊಂದು ಪಕ್ಕಾ ದಂಧೆಯಾಗಿಯೂ ಪರಿಣಮಿಸಿದೆ.ಅದೆಲ್ಲಾ ಒತ್ತಟ್ಟಿಗಿರಲಿ ಬಿಡಿ..ಆದ್ರೆ ಕೊರೊನಾ ವ್ಯಾಪಕವಾಗುತ್ತಿರುವ ಸಧ್ಯದ ಸಂದರ್ಭದಲ್ಲಿ ವೃದ್ಧರನ್ನು ರಕ್ಷಿಸಿಕೊಳ್ಳೋದು ಕಷ್ಟಕರವೇ ಸರಿ.

ಅಧ್ಯಯನಗಳು ಹೇಳುವಂತೆಯೇ ಕೊರೊನಾ ವೈರಸ್ ನ  ಸಾಂಕ್ರಾಮಿಕತೆ 10 ವರ್ಷದೊಳಗಿನ ಮಕ್ಕಳಂತೆ 60 ದಾಟಿದ ವಯೋವೃದ್ಧರನ್ನು ಈಸಿಯಾಗಿ ಅಟಕಾಯಿಸಿ ಕೊಳ್ಳುತ್ತೆ.ವೃದ್ದಾಶ್ರಮಗಳಲ್ಲಿ  ಬದುಕಿನ ಇಳಿಸಂಜೆಯಲ್ಲಿರುವ ವೃದ್ಧರ ರಕ್ಷಣೆಗೆ ಅಗತ್ಯವಿರುವ ಕ್ರಮಗಳನ್ನು ಎಷ್ಟರ ಮಟ್ಟಿಗೆ ಕೈಗೊಳ್ಳಲಾಗ್ತಿದೆ ಎನ್ನೋದನ್ನು ನೋಡಿದ್ರೆ ಬೇಸರವಾಗುತ್ತೆ.ಎಣಿಕೆ ಸಂಖ್ಯೆಯ ವೃದ್ಧಾಶ್ರಮಗಳನ್ನು ಬಿಟ್ಟರೆ ಬಹುತೇಕ ವೃದ್ಱಾಶ್ರಮಗಳಲ್ಲಿ ವೃದ್ಧರನ್ನು ಕೊರೊನಾ ಸೋಂಕಿನಿಂದ ರಕ್ಷಿಸುವ ವ್ಯವಸ್ಥೆಗಳೇ ಇಲ್ಲ.ಇದನ್ನು ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತಗಳು ಗಂಭೀರವಾಗಿ ಪರಿಗಣಿಸಬೇಕು.

ರೋಗ ಪ್ರತಿರೋಧಕ ಶಕ್ತಿ 60 ದಾಟಿದ ವಯೋವೃದ್ಧರಲ್ಲಿ ಕಡ್ಮೆ ಇರುವುದರಿಂದ ಕೊರೊನಾ ಸಲೀಸಾಗಿ ದಾಳಿ ಮಾಡುತ್ತೆ.ಅಷ್ಟೇ ಅಲ್ಲ ರೋಗವನ್ನು ಎದುರಿಸುವ ಶಕ್ತಿಯೇ ಕಡ್ಮೆಯಾಗಿರುವ ಕಾರಣಕ್ಕೆ ಅದರ ಗಂಭೀರ ಪರಿಣಾಮಗಳು ಬದುಕನ್ನೇ ಬಲಿಪಡೆದುಕೊಳ್ಳುವ ಆತಂಕವಿದೆ ಎನ್ನೋದನ್ನು ಅಧ್ಯಯನಗಳೇ ದೃಢಪಡಿಸಿವೆ.ಆದ್ರೆ ಬಹುತೇಕ ವೃದ್ದಾಶ್ರಮಗಳು ಹಿರಿ ಜೀವಗಳನ್ನು ಕೊರೊನಾದಿಂದ ರಕ್ಷಿಸುವಂಥ ವ್ಯವಸ್ಥೆಯನ್ನು ಮಾಡಿಕೊಂಡಿಲ್ಲ.ಕೊರೊನಾ ಮೂರನೇ ಹಂತಕ್ಕೆ ತಲುಪಿರುವಾಗ್ಲೂ ಅಂತದ್ದೊಂದು ವ್ಯವಸ್ಥೆ ಅಳವಡಿಸಿಕೊಳ್ಳುವ ಪ್ರಯತ್ನಕ್ಕೂ ಕೈ ಹಾಕಿಲ್ಲ.ಬಹುಷಃ ವಯೋವೃದ್ಧರೆನ್ನುವ ಕಾರಣಕ್ಕೆ ಅಂಥಾ ತಾತ್ಸಾರನ ಗೊತ್ತಿಲ್ಲ.ಆದ್ರೆ ಅದರ ಸಾಂಕ್ರಾಮಿಕತೆ ಇತರರಿಗೆ ಹರಡಿದ್ರೆ ಸಾಮೂಹಿಕ ನರಮೇಧವೇ ನಡೆದೋಗುತ್ತೆ ಎನ್ನುವ ಅರಿವೂ ಅವರಿಗಿದ್ದಂತಿಲ್ಲ.

ಕೈಗೆ ಸ್ಯಾನಿಟೈಸರ್ ನೀಡುವುದು,ಮುಖಕ್ಕೆ ಮಾಸ್ಕ್ ನೀಡುವುದು ಸೇರಿದಂತೆ ಪೌಷ್ಠಿಕ ಆಹಾರ ಪೂರೈಕೆ,ಸೋಶಿಯಲ್ ಡಿಸ್ಟೆನ್ಸ್ ಕಾಯ್ದುಕೊಳ್ಳುವಿಕೆ..ಆರೋಗ್ಯಕರವಾದ ವಾತಾವರಣ ಕಲ್ಪಿಸುವಂಥ ವ್ಯವಸ್ಥೆಗಳು ಬಹುತೇಕ ವೃದ್ದಾಶ್ರಮಗಳಲ್ಲಿ ಕಂಡುಬರುತ್ತಿಲ್ಲ.ಹಣಕಾಸಿನ ಕೊರತೆಯನ್ನೇ ಇದಕ್ಕೆ ಕಾರಣವಾಗಿ ನೀಡುತ್ತವೆ ಬಹುತೇಕ ವೃದ್ಧಾಶ್ರಮಗಳ ಆಡಳಿತ ಮಂಡಳಿಗಳು.

ಅಶಕ್ತ ಪೋಷಕರ ಸಭಾ ವೃದ್ಧಾಶ್ರಮದ ಕಾರ್ಯದರ್ಶಿ ಅಶೋಕ್ ಕುಮಾರ್
ಅಶಕ್ತ ಪೋಷಕರಸಭಾ ವೃದ್ಧಾಶ್ರಮ  ಕಾರ್ಯದರ್ಶಿ ಅಶೋಕ್ ಕುಮಾರ್

ಆದ್ರೆ ಇದೆಲ್ಲಕ್ಕೂ ಅಪವಾದ ಎನ್ನುವಂತೆ ವಿವಿ ಪುರಂನ ಸಜ್ಜನ್ ರಾವ್ ಸರ್ಕಲ್ ನಲ್ಲಿರುವ ಅಶಕ್ತ ಪೋಷಕರ ಸಭಾ ಎನ್ನುವ ವೃದ್ಧಾಶ್ರಮದಲ್ಲಿ ಕೊರೊನಾ ವಿರುದ್ಧದ ಸಮರಕ್ಕೆ ಪೂರಕವಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.90 ವರ್ಷಕ್ಕಿಂತಲೂ ಹಳೆಯದಾದ ವೃದ್ದಾಶ್ರಮದಲ್ಲಿ 200ಕ್ಕೂ ಹೆಚ್ಚು ವೃದ್ಧರಿದ್ದಾರೆ.

ಕೊರೊನಾ ಸುದ್ದಿ ಹರಡು ತ್ತಿದ್ದಂತೆ ಎಚ್ಚೆತ್ತುಕೊಂಡ ಆಡಳಿತ ಮಂಡಳಿ ಕೊರೊನಾ ಹೋರಾಟಕ್ಕೆ ವಾತಾವರಣವನ್ನು ಸಜ್ಜುಗೊಳಿಸಿತು.ವೃದ್ಧರ ನಡುವಿನ ಅಂತರವನ್ನು ಕಡಿಮೆ ಮಾಡಲಾ ಯಿತು.ಮಾಸ್ಕ್ ಕಡ್ಡಾಯವಾಗಿ ಧರಿಸುವಂತೆ ಸೂಚಿಸಲಾಗಿದೆ.

ಸ್ಯಾನಿಟೈಸರ್ ಬಳಕೆಯಂತೂ ಪ್ರತಿ ಅರ್ಧ ಗಂಟೆಗೊಮ್ಮೆ ನಿರಂತರವಾಗಿ ನಡೆಯುತ್ತಲೇ ಇದೆ.ಊಟದ ಮನೆಯಲ್ಲೂ ಸೋಶಿಯಲ್ ಡಿಸ್ಟೆನ್ಸ್ ಮೆಂಟೇನ್ ಮಾಡಲಾಗ್ತಿದೆ.ಶುಚಿತ್ವಕ್ಕೆ ಹೆಚ್ಚು ಆಧ್ಯತೆ ಕೊಡಲಾಗಿದೆ ಎನ್ನುತ್ತಾರೆ ಕಾರ್ಯದರ್ಶಿ ಅಶೋಕ್ ಕುಮಾರ್.

ಕೊರೊನಾ ಭೀತಿ ಇರುವುದರಿಂದ ಪರಿಸ್ತಿತಿ ಸಂಪೂರ್ಣ ತಿಳಿಯಾಗುವವರೆಗೂ ಸಾರ್ವಜನಿಕರಿಗಾಗ್ಲಿ,ಪೋಷಕರ ಮಕ್ಕಳು-ಸಂಬಂಧಿಕರಿಗಾಗಲಿ ಪ್ರವೇಶವನ್ನು ನಿರ್ಭಂಧಿಸಲಾಗಿದೆ.ಯಾರೇ ಬಂದ್ರೂ ಅವರನ್ನು ವಾಪಸ್ ಕಳುಹಿಸಲಾಗ್ತಿದೆ.ಸೋಂಕು ತೀಕ್ಷ್ಣವಾಗಿ ಹರಡುವ ಸಾಧ್ಯತೆಗಳಿರುವುದರಿಂದ ಯಾವ್ದೇ ಹೊಸ ವೃದ್ಧರನ್ನು ಆಶ್ರಮದೊಳಗೆ ಸೇರಿಸಿಕೊಳ್ಳಸದಿರುವ ನಿರ್ದಾರಕ್ಕೆ ಬರಲಾಗಿದೆ.ಇದು ಕೆಲವರಿಗೆ ಬೇಸರ ತರಿಸಬಹುದು.ಆದ್ರೆ ಸಧ್ಯದ ಪರಿಸ್ತಿತಿಯಲ್ಲಿ ಇಂತದ್ದೊಂದು ನಿರ್ದಾರವನ್ನು ತೆಗೆದುಕೊಳ್ಳೋದು ಅನಿವಾರ್ಯ ಎನ್ನುತ್ತಾರೆ ಅಶೋಕ್ ಕುಮಾರ್.

ಆದ್ರೆ ಎಲ್ಲಾ ವೃದ್ಧಾಶ್ರಮಗಳಲ್ಲೂ ಅಶಕ್ತ ಪೋಷಕರ ಸಭಾದಂಥ ವ್ಯವಸ್ಥೆಗಳಿಲ್ಲ.ಹಾಗಂತ ಅದನ್ನು ಅಳವಡಿಸಿಕೊಳ್ಳೋದು ಕಷ್ಟವೇನಲ್ಲ.ವೃದ್ಧರ ಜೀವಗಳನ್ನು ಜತನ ದಿಂದ ಕಾಯುವ ಬದ್ಧತೆ ಹಾಗೂ ಕಾಳಜಿ ಮೂಡಿಸಿಕೊಳ್ಳಬೇಕಿದೆಯಷ್ಟೇ..ವೃದ್ಧರ ಮಕ್ಕಳಿಂದ ಲಕ್ಷಾಂತರ ಹಣವನ್ನು ಪಡೆದುಕೊಳ್ಳುತ್ತಿರುವ ಅನೇಕ ವೃದ್ಧಾಶ್ರಮಗಳು ವೃದ್ಧರ ಜೀವಗಳನ್ನು ರಕ್ಷಿಸುವಂಥ ಕೆಲಸಕ್ಕೆ ಮುಂದಾಗ್ಬೇಕು.ಇಲ್ಲವಾದಲ್ಲಿ ಬಹುದೊಡ್ಡ ದುರಂತವೇ ನಡೆದೋದೀತು.

Spread the love
Leave A Reply

Your email address will not be published.

Flash News