ಕೊರೊನಾ ಪೀಡಿತರಿಗೆ ಮಿಡಿದ ಕ್ರೀಡಾಹೃದಯ:-ಇವರೇ ಆ ಮಹಾದಾನಿಗಳು..

0

ವಿಶ್ವವನ್ನೇ ನಡುಗಿಸಿರುವ ಕೊರೊನಾ ಮಹಾಮಾರಿಯ ಮರಣಮೃದಂಗ ಇನ್ನೂ ಮುಂದುವರೆದಿದೆ.ಈವರೆಗೂ 21,297 ಜೀವಗಳನ್ನು ಆಪೋಷನ ಪಡೆದಿರುವ ಕೊರೊನಾದ ವಿರುದ್ಧ ವಿಶ್ವವೇ ಹೋರಾಡುತ್ತಿದೆ.ಈ ಹೋರಾಟ ಮಾನಸಿಕ ಸ್ಥೈರ್ಯದ ಜೊತೆಗೆ ಆರ್ಥಿಕ ನೆರವನ್ನೂ ನಿರೀಕ್ಷಿಸುತ್ತಿದೆ.ಆದ್ರೆ ಮಾನವೀಯತೆ ಇನ್ನೂ ನಮ್ಮ ನಡುವೆ ಉಸಿರಾಡುತ್ತಿದೆ ಎನ್ನುವುದನ್ನು ಪ್ರೂವ್ ಮಾಡುವಂಥ ಸನ್ನಿವೇಶ ಎದ್ದುಕಾಣುತ್ತಿದೆ.ಏಕೆಂದ್ರೆ ಕೊರೊನಾ ಮೂಲೋತ್ಪಾಟನೆಯ ಹೋರಾಟಕ್ಕೆ ಆರ್ಥಿಕ ಬೆಂಬಲ ನೀಡಲು ಅನೇಕ ಹೃದಯವಂತರು ಮುಂದೆ ಬರುತ್ತಿದ್ದಾರೆ.ಕ್ರೀಡಾ ಕ್ಷೇತ್ರದಲ್ಲಿನ ಅನೇಕ ದಿಗ್ಗಜರು ಕೊರೊನಾ ಸಂತ್ರಸ್ಥರ ನೆರವಿಗೆ ಧನಸಹಾಯ ಮಾಡಿದ್ದಾರೆ.ಆ ಹೃದಯವಂತರ ಝಲಕ್ ಇಲ್ಲಿದೆ. 

ರೋಜರ್ ಫೆಡರರ್: 20 ಬಾರಿಯ ಗ್ರ್ಯಾಂಡ ಸ್ಲಾಮ್ ವಿಜೇತ ರೋಜರ್ ಫೆಡರರ್ ಕೊರೊನಾ ಸಂತ್ರಸ್ಥರ ನೆರವಿಗೆ 7.9 ಕೋಟಿ ಹಣವನ್ನು ನೀಡಿದ್ದಾರೆ.ಇದನ್ನು ಅವರ ಪತ್ನಿ ಮಿರ್ಕಾ ಬೆಂಬಲಿಸಿದ್ದಾರೆ.

ಲಿಯನಾರ್ಡೋ ಮೆಸ್ಸಿ: ಇನ್ನು ಪುಟ್ಬಾಲ್ ನ ದಂತಕಥೆ ಬಾರ್ಸಿಲೋನಾದ ಮುನ್ಪಡೆ ಹಾಗೂ ಅರ್ಜೆಂಟಿನಾವನ್ನು ಪ್ರತಿನಿಧಿಸುವ ಲಿಯನಾರ್ಡೋ ಮೆಸ್ಸಿ 1 ಮಿಲಿಯನ್ ಯೂರೋ ಅಂದ್ರೆ 8.2 ಕೋಟಿ ಹಣವನ್ನು ಕೊರೊನಾ ಸಂತ್ರಸ್ಥರು ಚಿಕಿತ್ಸೆ ಪಡೆಯುತ್ತಿರುವ  ಬಾರ್ಸಿಲೋನಾದ ಆಸ್ಪತ್ರೆಯೊಂದಕ್ಕೆ ದಾನ ಮಾಡಿದ್ದಾರೆ.ಅಗತ್ಯಬಿದ್ದರೆ ಇನ್ನಷ್ಟು ನೆರವು ನೀಡುವುದಾಗಿಯೂ ಹೇಳಿದ್ದಾರೆ.

ಕ್ರಿಸ್ಟಿಯಾನೋ ರೊನಾಲ್ಡೊ:ಪೊರ್ಚುಗಲ್ ನ ಅತ್ಯಂತ ಸಂವೇದನಾಶೀಲ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಕೊರೊನಾ ವಿದ್ವಂಸಕತೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅಷ್ಟೇ ಅಲ್ಲ,ಕೊರೊನಾ ಸಂತ್ರಸ್ಥರಿಗೆ ಕಣ್ಣೀರು ಮಿಡಿದಿದ್ದಾರೆ.ಪೋರ್ಚುಗೀಸ್ ಆಸ್ಪತ್ರೆಗೆ ಕೋಟ್ಯಾಂತರ ವೆಚ್ಚದ ಮೂರು ಐಸಿಯು ಯೂನಿಟ್ ದಾನ ಮಾಡಿದ್ದಾರೆ.ನಾರ್ತನ್ ಲಿಸ್ಟನ್ ನ ಆಸ್ಪತ್ರೆಗೆ ಎರಡು ಐಸಿಯು ಯೂನಿಟ್ಸ್ ದಾನವಾಗಿ ನೀಡಿದ್ದಾರೆ.ಕೊರೊನಾ ಸಂತ್ರಸ್ಥರ ನೆರವಿಗೆ ನಾನು ಸದಾ ಸಿದ್ಧ ಎಂದಿದ್ದಾರೆ.

 ಸಚಿನ್ ತೆಂಡೂಲ್ಕರ್-ಗೌತಮ್ ಗಂಭೀರ್ :ಕ್ರಿಕೆಟ್ ನ ದಂತಕಥೆ ಸಚಿನ್ ತೆಂಡೂಲ್ಕರ್ ಕೂಡ ಕೊರೊನಾ ವಿರುದ್ದದ ಕೇಂದ್ರ ಸರ್ಕಾರದ ಹೋರಾಟಕ್ಕೆ ಬೆಂಬಲ ಹಾಗೂ ಆರ್ಥಿಕ ನೆರವು ನೀಡಿದ್ದಾರೆ.50 ಲಕ್ಷ ದೇಣಿಗೆಯನ್ನು ನೀಡಿದ್ದಾರೆ. ಹಾಗೆಯೇ ಮಾಜಿ ಕ್ರಿಕೆಟರ್ ಹಾಗೂ ಸಂಸದ ಗೌತಮ್ ಗಂಭೀರ್ ಕೂಡ ತಮ್ಮ ಉಳಿತಾಯದ 50 ಲಕ್ಷ ಹಣವನ್ನು ಕೊರೊನಾ ವಿರುದ್ಧದ ಕೇಂದ್ರ ಸರ್ಕಾರದ ಹೋರಾಟಕ್ಕೆ ನೀಡುವ ಮೂಲಕ ಹೃದಯವಂತಿಕೆ ಮೆರೆದಿದ್ದಾರೆ.

 

ಸೌರವ್ ಗಂಗೂಲಿ:ಮಾಜಿ ಭಾರತ ಕ್ರಿಕೆಟ್ ತಂಡದ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.ಹಾಗೆಯೇ ಸಂತ್ರಸ್ಥರ ಕುಟುಂಬಕ್ಕೆ ಉಚಿತ ಪಡಿತರ ನೀಡುವುದಾಗಿಯೂ ಘೋಷಿಸಿದ್ದಾರೆ.

ಪಿ.ವಿ ಸಿಂಧೂ: ಖ್ಯಾತ ಬ್ಯಾಂಡ್ಮಿಟನ್ ತಾರೆ ಪಿ.ವಿ ಸಿಂಧೂ ಕೂಡ ಸಹಾಯಹಸ್ತ ಚಾಚುವಲ್ಲಿ ಹಿಂದೆ ಬಿದ್ದಿಲ್ಲ.ತೆಲಂಗಾಣ ಹಾಗೂ ಆಂದ್ರಪ್ರದೇಶ ಸರ್ಕಾರದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.ಅಗತ್ಯಬಿದ್ದರೆ ಮತ್ತಷ್ಟು ನೆರವು ನೀಡುವುದಾಗಿ ಘೋಷಿಸಿ ಕೊರೊನಾ ಸಂತ್ರಸ್ಥರ ಶೀಘ್ರ ಚೇತರಿಕೆಗೆ ಪ್ರಾರ್ಥಿಸಿದ್ದಾರೆ.

ಹಾಗೆಯೇ ಬಾಂಗ್ಲಾದೇಶದ ಕ್ರಿಕೆಟ್ ತಂಡ ತಮ್ಮ ಅರ್ಧ ತಿಂಗಳ ಸಂಬಳವನ್ನು ಕೊರೊನಾ ಪೀಡಿತರ ನೆರವಿಗೆ ನೀಡೋದಾಗಿ ಘೋಷಿಸಿದ್ದಾರೆ.ಕ್ರಿಕೆಟ್ ನ  ಪಠಾಣ್ ಸಹೋದರರು 6 ಸಾವಿರ ಮಾಸ್ಕ್ ನೀಡುವ ಘೋಷಣೆ ಮಾಡಿದ್ದಾರೆ.ಪಾಕಿಸ್ತಾನ ಕ್ರಿಕೆಟರ್ ಶಹೀದ್ ಅಫ್ರಿದಿ ಸೋಪ್,ವೈದ್ಯಕೀಯ ಸಲಕರಣೆ ಹಾಗೂ ಆಹಾರ ಸಾಮಾಗ್ರಿ ಪೂರೈಸಲು ಮುಂದೆ ಬಂದಿದ್ದಾರೆ.ಕುಸ್ತಿಪಟು ಭಜರಂಗ ಪೂನಿಯಾ ತಮ್ಮ 6 ತಿಂಗಳ ವೇತನ,ಮಾಜಿ ಕ್ರಿಕೆಟರ್ ರಾಮ್ ರತನ್ ಶುಕ್ಲಾ ತಮ್ಮ 3 ತಿಂಗಳ ಸಂಬಳ,ಮಾಜಿ ಬಾಕ್ಸರ್ ಅಮೀರ್ ಖಾನ್ ತಮಗೆ ಸೇರಿದ 60 ಸಾವಿರ ಚದರ ಅಡಿ ಜಾಗವನ್ನು ಕೊರೊನಾ ಪೀಡಿತರ ಶೂಶ್ರೂಷೆಗೆ ಬಿಟ್ಟುಕೊಡಲು ನಿರ್ಧರಿಸಿದ್ದಾರೆ.

 

Spread the love
Leave A Reply

Your email address will not be published.

Flash News