ಸಿಎಂ ಸಭೆಯಿಂದ ಕಣ್ಣೀರಿಡ್ತಾ ಹೊರಬಂದ್ರಾ ಪೊಲೀಸ್ ಕಮಿಷನರ್ ಭಾಸ್ಕರ ರಾವ್?!

0

ಬೆಂಗಳೂರು:ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವೇ ಲಾಕ್ ಡೌನ್ ಆಗಿದೆ.ಇಂಥಾ ಸಂದರ್ಭಗಳಲ್ಲಿ ಸೂಪರ್ ಮಾರ್ಕೆಟ್ ಗಳು ಕೆಲಸ ಮಾಡ್ಲಿಕ್ಕೆ ಅವಕಾಶ ನೀಡೊಕ್ಕೆ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ ರಾವ್ ಲಂಚ ಪಡೆದ್ರಾ….

ಇಂತದ್ದೊಂದು ಗಂಭೀರ ಆರೋಪ ಮಾಡಿದ್ದಾರೆನ್ನಲಾಗ್ತಿರುವುದು ಹಾದಿ ಬೀದಿಯಲ್ಲಿ ಹೋಗಿ ಬರೋರಲ್ಲ.ಬದ್ಲಿಗೆ ಈ ರಾಜ್ಯ ಸರ್ಕಾರ ಉಪಮುಖ್ಯಮಂತ್ರಿ ಎನಿಸಿಕೊಂಡ ಡಾ.ಅಶ್ವತ್ಥನಾರಾಯಣ. ಇಂತದ್ದೊಂದು ಗಂಭೀರ ಆರೋಪದಿಂದಾಗಿ ಆಯುಕ್ತ ಭಾಸ್ಕರ ರಾವ್ ತೀವ್ರ ಮುಜುಗರಕ್ಕೆ ಒಳಗಾಗಿ ಸಭೆಯಿಂದ ಕಣ್ಣೀರಿಡುತ್ತಾ ಹೊರಗೆ ಬಂದರೆನ್ನುವ ಮಾತುಗಳು ಈಗಾಗ್ಲೇ ವ್ಯಾಪಕವಾಗಿ ಕೇಳಿಬರುತ್ತಿವೆ.

ನಡೆದಿದ್ದೇನು? ಕೊರೊನಾ ವೈರಸ್ ಭೀತಿ ಹಿನ್ನಲೆಯಲ್ಲಿನ ಲಾಕ್ ಡೌನ್ ನ ಪ್ರಗತಿ ಹಾಗೂ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆಯೊಕ್ಕೆ ಸಿಎಂ ಬಿ.ಎಸ್ ಯಡಿಯೂರಪ್ಪ ಸಭೆ ಕರೆದಿದ್ದರು.ಈ ವೇಳೆ ಚರ್ಚೆ ವೇಳೆ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ್,ಪೊಲೀಸ್ ಕಮಿಷನರ್ ಸೂಪರ್ ಮಾರ್ಕೆಟ್ ಅಸೋಸಿಯೇಷನ್ ಅವರಿಂದ ಕೊರೊನಾದಂಥ ಸಂಕಷ್ಟದ ಸನ್ನಿವೇಶದಲ್ಲೂ ಉದ್ದಿಮೆ ನಡೆಸ್ಲಿಕ್ಕೆ ಅವಕಾಶ ನೀಡಲು ಹಣ ಪಡೆದಿದ್ದಾರೆಂಬ ಆರೋಪದ ಬಾಂಬ್ ಸಿಡಿಸಿದ್ದಾರೆನ್ನಲಾಗಿದೆ.

ತಾವು ನಿರೀಕ್ಷಿಸಿಯೇ ಇರದಿದ್ದ ಇಂತದ್ದೊಂದು ಘಟನೆಯಿಂದಾಗಿ ತೀವ್ರ ಶಾಕ್ ಗೆ ಒಳಗಾದರೆನ್ನಲಾದ ಪೊಲೀಸ್ ಕಮಿಷನರ್ ಭಾಸ್ಕರ ರಾವ್,ಡಿಸಿಎಂ ಜತೆಗೆ ವಾಗ್ಯುದ್ಧಕ್ಕಿಳಿ ದಿದ್ದಾರೆ.ಸಬೂತ್ ಇದೆಯಾ ಎಂದು ಪ್ರಶ್ನಿಸಿದ್ದಕ್ಕೆ ವೀಡಿಯೋ ಫುಟೇಜಸ್ ಇದೆ ಎನ್ನುತ್ತಿದ್ದಂತೆ ವಿಚಲಿತರಾದರೆನ್ನಲಾಗಿದೆ.ಪಾಸ್ ವಿತರಣೆ ವಿಚಾರದಲ್ಲಿಯೂ ಆನ್ ಲೈನ್ ಫುಡ್ ಡೆಲಿವರಿ ಕಂಪೆನಿಗಳಿಗೆ ಹೆಚ್ಚಿನ ಪಾಸ್ ನೀಡುವ ಬಗ್ಗೆಯೂ ತಾರತಮ್ಯ ಮಾಡಿದ್ದಾರೆ ಎಂದು ಆಪಾದಿಸಿದಾಗ ಕೆಂಡಾಮಂಡಲವಾದ ಭಾಸ್ಕರ ರಾವ್ ಡಿಸಿಎಂ ಅಶ್ಚತ್ಥ ನಾರಾಯಣ ವಿರುದ್ಧ ತಿರುಗಿಬಿದ್ದಿದ್ದಾರಂತೆ.ಕೆಲ ನಿಮಿಷಗಳವರೆಗೆ ಇವರಿಬ್ಬರ ನಡುವೆ ಮಾತಿನ ಚಕಮಕಿಯೇ ನಡೆದೋಗಿದೆ.ಆರೋಪ ಪ್ರತ್ಯಾರೋಪಗಳ ನಡುವೆ ಏಕವಚನ ಪ್ರಯೋಗ ಕೂಡ ನಡೆದಿದೆ ಎನ್ನಲಾಗಿದೆ.ಇದರಿಂದ ತೀವ್ರ ಬೇಸರಗೊಂಡ ಭಾಸ್ಕರ ರಾವ್ ಕಣ್ಣೀರಿಡುತ್ತಾ ಸಭೆಯಿಂದ ಹೊರಬಿದ್ದಿದ್ದಾರೆನ್ನಲಾಗಿದೆ.ಇವರಿಬ್ಬರ ನಡುವಿನ ಜಗಳವನ್ನು ಬಿಡಿಸಲು ಖುದ್ದು ಮುಖ್ಯಮಂತ್ರಿಗಳೇ ಮಧ್ಯಪ್ರವೇಶಿಸಿದ್ರೂ ಇಬ್ಬರೂ ಸಮಾಧಾನಗೊಳ್ಳಲಿಲ್ಲ ಎನ್ನಲಾಗಿದೆ.

ಡಿಸಿಎಂ ಅಶ್ವತ್ಥ ನಾರಾಯಣ ಅವರು ಪೊಲೀಸ್ ಕಮಿಷನರ್ ಭಾಸ್ಕರ ರಾವ್ ವಿರುದ್ದ ಮಾಡಿರುವ ಲಂಚದ ಆರೋಪ ಇದೀಗ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಯಲ್ಲಿ ತೀವ್ರ ಚರ್ಚೆ ವಿಷಯವಾಗಿದೆ. ಡಿಸಿಎಂ ಅಶ್ವತ್ಥನಾರಾಯಣ ತಮ್ಮ ಆರೋಪವನ್ನು ಹೇಗೆ ಸಮರ್ಥಿಸಿಕೊಳ್ತಾರೋ..ಭಾಸ್ಕರ ರಾವ್ ಇದಕ್ಕೆ ಹೇಗೆ ಸ್ಪಷ್ಟನೆ ಕೊಡ್ತಾರೋ ಎರಡೂ ಕುತೂಹಲ ಮೂಡಿಸಿದೆ. 

Spread the love
Leave A Reply

Your email address will not be published.

Flash News