ಕೊರೊನಾ ತುರ್ತು ಚಿಕಿತ್ಸೆಗೆ 20 ಸಾವಿರ ರೂಂ ಅಡ್ವಾನ್ಸ್ ಬುಕ್

0

ಬೆಂಗಳೂರು:ಕೊರೊನಾ ಮೂರನೇ ಹಂತ ಪ್ರವೇಶಿಸಿರುವಾಗ್ಲೇ ಸರ್ಕಾರ ಮುಂಜಾಗರೂಕತಾ ಕ್ರಮವಾಗಿ ರಾಜ್ಯದಲ್ಲಿ ಒಟ್ಟು 20 ಸಾವಿರ ರೂಮ್ ಗಳನ್ನು ಅಡ್ವಾನ್ಸಾಗಿ ಬುಕ್ ಮಾಡಿದೆ ಎನ್ನುವ ಸುದ್ದಿ ಹೊರಬಿದ್ದಿದೆ.ಕೊರೊನಾ ತನ್ನ ವ್ಯಾಪಕತೆ ಮೆರೆಯಬಹುದಾದ ಮುನ್ಸೂಚನೆಯನ್ನು ಆರೋಗ್ಯ ಇಲಾಖೆ ನೀಡಿರುವಂತದ್ದನ್ನು ಗಂಭೀರವಾಗಿ ಪರಿಗಣಿಸಿ ಯಾವುದೇ ರಿಸ್ಕ್ ತೆಗೆದುಕೊಳ್ಳಲಿಚ್ಛಿಸದೆ ಇಂತದ್ದೊಂದು ನಿರ್ದಾರ ಮಾಡಿದೆ ಎನ್ನಲಾಗಿದೆ. 

ಕೊರೊನಾ ಪ್ರಕರಣ ಹೆಚ್ಚಾದ್ರೆ ರೋಗಿಗಳಿಗೆ ಚಿಕಿತ್ಸೆ ನೀಡೊಕ್ಕೆ ಆಸ್ಪತ್ರೆಗಳ ಕೊರತೆ ಕಂಡುಬಂದ್ರೆ ಯಾವುದೇ ರೀತಿಯಲ್ಲೂ ತೊಂದರೆ ಉಂಟಾಗಬಾರದು ಎನ್ನುವ ಕಾರಣಕ್ಕೆ ಮುಂಜಾಗ್ರತಕ್ರಮವಾಗಿ 20 ಸಾವಿರ ರೂಂಗಳನ್ನು ಈಗಾಗ್ಲೇ ಬುಕ್ ಮಾಡಲಾಗಿದೆ.ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಲಾಡ್ಜ್ ಗಳು..ಪ್ರವಾಸಿ ಮಂದಿರಗಳು ಹಾಗೂ ಕಲ್ಯಾಣ ಮಂಟಪಗಳನ್ನು ಕೂಡ ಚಿಕಿತ್ಸೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ.ಕೊರೊನಾ ಪ್ರಕರಣ ಹೆಚ್ಚಾಗ್ತಿದ್ದಂತೆ ಬುಕ್ ಮಾಡಿದ ರೂಗಳಲ್ಲಿ ಅಡ್ಮಿಟ್ ಮಾಡಿಕೊಳ್ಳಬೇಕೆಂದು ಈಗಾಗ್ಲೇ ಸಂಬಂಧಿಸಿದವರಿಗೆ ಸೂಚಿಸಲಾಗಿದೆ. 

 ಬೆಂಗಳೂರಿನ  ಬಿಬಿಎಂಪಿಯ ವ್ಯಾಪ್ತಿಯಲ್ಲಿ ಕೋವೆಡ್ -19 ವೈರಾಣು (ಸೋಂಕು) ತಡೆಯುವ ಉದ್ದೇಶದಿಂದ ವೈರಾಣು ಶಂಕಿತರನ್ನು ಪ್ರತ್ಯೇಕವಾಗಿ ಇಡಲು ಪ್ರಥಮ ಹಂತದಲ್ಲಿ 2 ಮತ್ತು 3 ಸ್ಟಾರ್ ಮಟ್ಟದ ಸುಮಾರು 17 ಹೋಟೆಲ್ ಗಳನ್ನು ಗುರುತಿಸಲಾಗಿದೆ.ಈ ಹೊಟೇಲ್ ಲಾಡ್ಜ್ ಗಳಲ್ಲಿ  1297 ಪ್ರತ್ಯೇಕ ಕೊಠಡಿಗಳನ್ನು ಸರ್ಕಾರದ ನಿರ್ದೇಶನದಂತೆ ಮುಂಜಾಗ್ರತಾ ಕ್ರಮಕ್ಕಾಗಿ ವ್ಯವಸ್ಥೆ ಮಾಡಿಕೊಳ್ಳಲು ಬಿಬಿಎಂಪಿ ವಶಕ್ಕೆ ಪಡೆಯಲು ಕ್ರಮ ವಹಿಸಲಾಗಿದೆ.

ಅದರಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಇದೇ ವ್ಯವಸ್ಥೆಗೆ ಆದೇಶ ನೀಡಲಾಗಿದ್ದು ಮುಂಗಡವಾಗಿ ಎಲ್ಲಾ ಲಾಡ್ಜ್ ಗಳನ್ನು ಬುಕ್ ಮಾಡಲಾಗಿದ್ದು ಯಾವ್ದೇ ಕ್ಷಣದಲ್ಲೂ ಕೊರೊನಾ ಸೋಂಕಿತರನ್ನು ರೂಂಗಳಿಗೆ ದಾಖಲಿಸಿ ಚಿಕಿತ್ಸೆ ಪ್ರಾರಂಭಿಸುವಂತೆ ಸೂಚನೆ ನೀಡುವ ಸಾಧ್ಯತೆಗಳಿರುವುದರಿಂದ ಸಂಬಂಧಪಟ್ಟ ಆಡಳಿತ ಸಂಸ್ಥೆಗಳು ಮಾನಸಿಕವಾಗಿ ಸಿದ್ಧವಾಗಬೇಕೆಂದು ಸರ್ಕಾರ ಸೂಚಿಸಿದೆ.

ಈ ಹೊಟೇಲ್ ಗಳಲ್ಲಿ ಶಂಕಿತರನ್ನು ಇರಿಸಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುವುದು.ರೋಗವನ್ನು ದೃಢಪಡಿಸಿಕೊಳ್ಳಲು ಇರುವ ಕಫದ ಮಾದರಿಗಳನ್ನು ಲ್ಯಾಬ್ ಪರೀಕ್ಷೆಗೊಳಪಡಿಸುವವರೆಗೂ ಸೋಂಕಿತನನ್ನು ರೂಂಗಳಲ್ಲಿ ಇರಿಸಲಾಗುತ್ತೆ.ಹವಾನಿಯಂತ್ರಣ ವ್ಯವಸ್ಥೆ ಕೊರೊನಾ ಚಿಕಿತ್ಸೆಗೆ ಅಡ್ಡಿಯಾಗುವುದರಿಂದ ಎಸಿ ವ್ಯವಸ್ಥೆಯನ್ನು ಬೇರ್ಪಡಿಸಲು ಈಗಾಗಲೇ ಸೂಚಿಸಲಾಗಿದೆ.ಚಿಕಿತ್ಸೆಗೆ ರೂಂಗಳನ್ನು ಬಳಸಿಕೊಳ್ಳುವುದರಿಂದ ಅದಕ್ಕೆ ನಿಗಧಿಯಾಗಿರುವ ಹಣ ಪಾವತಿಸಲಾಗುವುದು.ಈ ರೀತಿಯ ವ್ಯವಸ್ಥೆಯನ್ನು ಹೊಟೇಲ್-ಲಾಡ್ಜ್ ಗಳಲ್ಲಿ ಮಾಡಲಾಗಿದೆ.ಆಸ್ಪತ್ರೆಗಳಲ್ಲಿ ಕೊಠಡಿಗಳ ಕೊರತೆ ಕಂಡುಬಂದಾಕ್ಷಣ  ಹೊಟೇಲ್-ಲಾಡ್ಜ್ ಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. 

Spread the love
Leave A Reply

Your email address will not be published.

Flash News