ಕರುಳು ಹಿಂಡುತ್ತೆ ಬಾರದ ಅಮ್ಮನಿಗಾಗಿ ಕನವರಿಸೋ ಕಂದಮ್ಮನ ಕಣ್ಣೀರು

0

ಇದು…. ಕೊರೊನಾಗೆ ಬಲಿಯಾದ ಅಮ್ಮನನ್ನು ಕಳಕೊಂಡು ತಬ್ಬಲಿಯಾದ ಇಟಲಿ ದೇಶದ ಕಂದಮ್ಮನ ಕರುಳು ಹಿಂಡುವ ಕಥೆ ಕಣ್ರಿ..ಎಂಥ ಕಲ್ಲು ಹೃದಯವನ್ನೂ ಕರಗಿಸುತ್ತೆ ಈ ಕಂದಮ್ಮನ ಕಥೆ..ಕೊರೊನಾ ಮಹಾಮಾರಿ ಈ ಮಗುವಿನ ಅಮ್ಮನನ್ನು ಆಪೋಷನ ತೆಗೆದುಕೊಳ್ತು.ಎಲ್ಲರಿಗೂ ಗೊತ್ತಿರುವಂತೆ ಸ್ವಂತದವರನ್ನು ಕೂಡ ಅಂಥಾ ಶವಗಳತ್ತ ಬಿಡೊಲ್ಲ..ಹಾಗೆ ಸುಮಾರು ದಿನಗಳಿಂದ ಕಾಣದ ಅಮ್ಮ ಎಲ್ಲಿ ಹೋದಳು ಎಂದು ಸಂಬಂಧಿಕರ ಬಳಿ ಕೇಳಿದೆ.ಅವರು ಅಮ್ಮ ದೇವರ ಬಳಿ ಹೋಗಿದ್ದಾಳೆ..ಆಕಾಶದಲ್ಲಿ ನಕ್ಷತ್ರವಾಗಿದ್ದಾಳೆ.ರಾತ್ರಿ ಹೊತ್ತು ಕಾಣಿಸುತ್ತಾಳೆ ಎಂದು ಸಮಾಧಾನ ಮಾಡಿದ್ದಾರೆ.

ಅವರಿವರು ಹೇಳಿದಂತೆ ಈ ಮಗು ಅಮ್ಮ ಸತ್ತು ಹೋದಾಗಿನಿಂದಲೂ ಬೆಳಗ್ಗೆ-ಸಂಜೆ ಎನ್ನದೆ ತನ್ನ ಸಹೋದರನನ್ನು ಕೈ ಹಿಡಿದು ಎಳೆದು ಮನೆಯಿಂದ ಹೊರ ಬರುತ್ತೆ.ಆಕಾಶದ ಕಡೆ ದೃಷ್ಟಿ ನೆಟ್ಟು ಅಮ್ಮ..ಅಮ್ಮ..ಬಾ ಅಮ್ಮ ಎಂದು ಕರೆಯಲಾರಂಭಿಸಿದೆ.ತನ್ನ ತಾಯಿ ಇನ್ನಿಲ್ಲ..ಮತ್ತೆಂದೂ ಬರೊಲ್ಲ ಎಂಬ ಸತ್ಯದ ಅರಿವಿಲ್ಲದ ಆ ಮಗು ಅಮ್ಮನಿಗಾಗಿ ಕನವರಿಸುವ ಈ ದೃಶ್ಯ ಕಂಡು ಸಹೋದರ ಕಣ್ಣೀರಿಡುತ್ತಿದ್ದಾನೆ.ಅಂದ್ಹಾಗೆ ಆ ಕಂದಮ್ಮನ ಅಣ್ಣ ಏನು ದೊಡ್ಡವನಲ್ಲ..ಬುದ್ಧಿ ಬಂದ ವಯಸ್ಸು ಅವನದಲ್ಲ.ಆದ್ರೆ ತಾಯಿ ಕೊರೊನಾದಿಂದ ಸತ್ತಿದ್ದಾಳೆನ್ನುವ ಸತ್ಯ ಆತನ ಅರವಿಗಿದೆ.ಹಾಗಾಗಿ ತನ್ನ ತಮ್ಮ ಅಮ್ಮನಿಗಾಗಿ ಕನವರಿಸುವ ಆ ದೃಶ್ಯ ಕಂಡು ಅಳುವನ್ನು ತಡೆದುಕೊಳ್ಳಲಾರದೆ ದಿನಂಪ್ರತಿ ಆತನನ್ನು ತಬ್ಬಿಕೊಂಡು ಕಣ್ಣೀರಾಗುತ್ತಾನೆ.ನೋಡುಗರ ಕಣ್ಣಾಲಿಗಳನ್ನೂ ತೇಲಿಸುತ್ತಿದ್ದಾನೆ.ಕಂದಮ್ಮ ತನ್ನ ಅಮ್ಮನಿಗಾಗಿ ಆಕಾಶ ನೋಡುತ್ತಾ ಕನವರಿಸುವ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆದಾಗಿನಿಂದ್ಲೂ ಸಿಕ್ಕಾಪಟ್ಟೆ ವ್ಯೂಸ್ ಪಡೆದುಕೊಳ್ಳುತ್ತಿದೆ.ಈ ದೃಶ್ಯಗಳನ್ನು ನೋಡಿದ ಪ್ರತಿಯೊಬ್ಬರ ಕಣ್ಣುಗಳು ಒದ್ದೆಯಾಗುತ್ತಿವೆ.ಮಾತು ಗದ್ಗಿತವಾಗುತ್ತದೆ.ಉಸಿರು ಗಂಟಲಲ್ಲೇ ಬಿಗಿಯಾಗುತ್ತೆ.ಒಂದು ಕ್ಷಣ ದಟ್ಟ ಮೌನ..ಅ ಮಗುವಿನ ನೋವನ್ನು ಭರಿಸುವ ಶಕ್ತಿ ಕೊಡು ತಂದೆ ಎಂದು ದೇವರಲ್ಲಿ ಪ್ರಾರ್ಥಿಸಿದವರಿಲ್ಲ..

ಆದ್ರೆ ಈ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ ಪುಣ್ಯಾತ್ಮರ ಉದ್ದೇಶ ಮಗುವನ್ನು ಮುಂದಿಟ್ಟುಕೊಂಡು ಎಮೊಷನಲಿ ಸಹಾನುಭೂತಿ ಗಿಟ್ಟಿಸುವುದಂತೂ ಅಲ್ವೇ ಅಲ್ಲ.ಕೊರೊನಾ ಬಗ್ಗೆ ಭಯ ಇಲ್ಲದೆ  ಕೆಲವು ಎಚ್ಚರಿಕೆ ಪಾಲಿಸದೆ ಆರಾಮಾಗಿ ಅಡ್ಡಾಡಿಕೊಂಡವರನ್ನು ಎಚ್ಚರಿಸುವುದೇ ಇದರ ಹಿಂದಿರುವ ಕಾಳಜಿ,ಏಕೆಂದ್ರೆ ಇದನ್ನು ಪೋಸ್ಟ್ ಮಾಡಿದವ್ರು,  ನಮ್ಮ ಮಕ್ಕಳಿಗೂ  ಹೀಗೆ ಬೀದಿಗೆ ಬಂದು  ಆಕಾಶ ದಿಟ್ಟಿಸಿನೋಡುವಂತೆ ಮಾಡುವ ಸನ್ನಿವೇಶ ಎದುರಾಗದಿರಲಿ  ಎನ್ನುವ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ..

ಕರುಳು ಹಿಂಡುತ್ತೆ ಬಾರದ ಅಮ್ಮನಿಗಾಗಿ ಕನವರಿಸೋ ಕಂದಮ್ಮನ ಕಣ್ಣೀರು

 

Spread the love
Leave A Reply

Your email address will not be published.

Flash News