ಕಲಾವಿದನ ಕುಂಚದಲ್ಲಿ ಮಹಾಮಾರಿ “ಕೊರೊನಾ” ಕಲ್ಪನೆ

0
ಕಲಾವಿದ ಡಾ.ಜಗದೀಶ್
ಕಲಾವಿದ ಡಾ.ಜಗದೀಶ್

ಬೆಂಗಳೂರು:ಕಲಾವಿದನ ಕುಂಚದಲ್ಲಿ ಅರಳಿದ ಕೊರೊನಾ ಮಹಾಮಾರಿಯ ವಿದ್ವಂಸಕತೆಯ ಪರಿಕಲ್ಪನೆ ಇದು.ಒಮ್ಮೆ ಇದನ್ನು ದಿಟ್ಟಿಸಿ ನೋಡಿ ಎಂಥಾ ಅತ್ಯದ್ಭುತ ಕಲ್ಪನಾಶಕ್ತಿ ಇದರಲ್ಲಿ ಅಡಗಿದೆ ಹಾಗೆಯೇ ಅದರ ವಿದ್ವಂಸಕತೆ ಹಾಗೂ ಭೀಕರತೆಯನ್ನು ಪರಿಣಾಮಕಾರಿಯಾಗಿ ಚಿತ್ರಿಸುವ ಮೂಲಕ ಮುಂದೆ ಎದುರಾಗುವ ಆಪತ್ತನ್ನು ಮುನ್ಸೂಚಿಸುವ ಕಾಳಜಿಯೂ ಈ ಕಲಾಕೃತಿಯಲ್ಲಿದೆ.

ಅಂದ್ಹಾಗೆ ಇಂತದ್ದೊಂದು ಕಲಾಕೃತಿಯನ್ನು ರಚಿಸಿದವ್ರು  ಮಲೆನಾಡ ಜಿಲ್ಲೆ ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಪ್ರಸಿದ್ಧ ಕಲಾವಿದ ಡಾ.ಜಗದೀಶ್.ವಿಪತ್ತುಗಳು ಎದುರಾದಾಗಲೆಲ್ಲಾ ಇವರು ತಮ್ಮ ಬುದ್ಧಿ ಹಾಗೂ ಕೈಗೆ ಕೆಲಸ ಕೊಟ್ಟಿ ದ್ದಾರೆ.ಅತ್ಯದ್ಭುತವಾದ ಕಲಾಕೃತಿಗಳನ್ನು ರಚಿಸಿ ವಿಶ್ವ ಆರೋಗ್ಯ ಸಂಸ್ಥೆಗೆ ರವಾನಿಸಿದ್ದಾರೆ.ಅದರ ಭಾಗವಾಗೇ ಈಗ ಕೊರೊನಾ ಭೀತಿ ಎದುರಾಗಿರುವ ಸಂದರ್ಭದಲ್ಲೂ ಕಲಾಕೃತಿ ರಚಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಕಲಾವಿದ ಜಗದೀಶ್ ತಮ್ಮ ತಲೆ ಹಾಗೂ ಮನಸಿಗೆ ಕೆಲಸಕೊಟ್ಟು ಒಂದು ವಾರದ ಪ್ರಯೋಗದ ಮೂಲಕ ಸಿದ್ಧಪಡಿಸಿದ ಅದ್ಭುತ ಕಲಾಕೃತಿಯಿದು,ನಮ್ಮ ಹೆಮ್ಮೆಯ ಕಲಾವಿದ ಜಗದೀಶ್ ಅವರ ಹೆಗ್ಗಳಿಕೆ ಏನಂದ್ರೆ ಈ ಅದ್ಭುತ ಕಲಾಕೃತಿ ಯನ್ನು ಅವರು ವಿಶ್ವ ಆರೋಗ್ಯ ಸಂಸ್ಥೆಗೆ ಮೇಲ್ ನಲ್ಲಿ ರವಾನೆ ಮಾಡಿದ್ದಾರೆ.

ಕೊರೊನಾ ವಿಶ್ವವನ್ನು ತಲ್ಲಣಿಸುತ್ತಿರುವ ರೀತಿಯನ್ನು ತಮ್ಮ ಕಲಾಕುಸುರಿಯಲ್ಲಿ ಬಿಂಬಿಸಿರುವ ಜಗದೀಶ್,ಕೊರೊನಾದಂತೆ ಮುಂದೆ ಭವಿಷ್ಯದಲ್ಲಿ ಕಾದಿರುವ ವಿಪತ್ತುಗಳಿಂದ ಜಗತ್ತು ಹೇಗೆ ತನ್ನನ್ನು ರಕ್ಷಿಸಿಕೊಳ್ಳಬೇಕೆನ್ನುವ ಜಾಗೃತಿಯನ್ನು ಕೂಡ ಮೂಡಿಸುವ ಪ್ರಯತ್ನವನ್ನು ಜಗದೀಶ್ ಮಾಡಿದ್ದಾರೆ.ಅವರ ಕಲಾಕೃತಿಗೆ ಅಪಾರ ಮೆಚ್ಚುವೆ ವ್ಯಕ್ತವಾಗಿದೆ.

Spread the love
Leave A Reply

Your email address will not be published.

Flash News